Subscribe to Gizbot

ಶೀಘ್ರವೇ ಕಾರ್ಯಾರಂಭಿಸಲಿದೆ HDK ಕ್ಯಾಬ್ಸ್: ಇಲ್ಲಿದೇ ನಿಮಗೆ ಗೊತ್ತಿಲ್ಲದ ಮಾಹಿತಿ..!!!

Written By:

ಬೆಂಗಳೂರು ನಗರದಲ್ಲಿ ಕ್ಯಾಬ್ ಆಧಾರಿತ ಟಾಕ್ಸಿ ಸೇವೆಯೂ ಹೆಚ್ಚು ಜನಪ್ರಿಯತೆಯನ್ನು ಗಳಿಸುತ್ತಿದೆ. ಇದೇ ಸಂದರ್ಭದಲ್ಲಿ ಆಪ್ ಆಧಾರಿತ ಟ್ಯಾಕ್ಸಿ ಸೇವೆ ನೀಡುತ್ತಿರುವ ಉಬರ್ - ಓಲಾ ಕಂಪನಿಗಳು ಗ್ರಾಹಕರನ್ನು ಸುಲಿಗೆ ಮಾಡುತ್ತಿವೆ ಮತ್ತು ಚಾಲಕರಿಗೆ ಕಿರುಕುಳವನ್ನು ನೀಡುತ್ತಿವೆ ಎನ್ನುವ ಕಾರಣಕ್ಕಾಗಿಯೇ ಇವುಗಳಿಗೆ ಪರ್ಯಾಯವಾಗಿ ಶುರು ಮಾಡಲಾಗಿದ್ದ HDK ಕ್ಯಾಬ್ಸ್ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕಾರ್ಯರಂಭ ಮಾಡಲಿದೆ.

ಶೀಘ್ರವೇ ಕಾರ್ಯಾರಂಭಿಸಲಿದೆ HDK ಕ್ಯಾಬ್ಸ್: ಇಲ್ಲಿದೇ ನಿಮಗೆ ಗೊತ್ತಿಲ್ಲದ ಮಾಹಿತಿ.

ಓದಿರಿ: ಜಿಯೋ ಆಧಾರ್ ಲೀಕ್ ಆಗಿದ್ದು ನಿಜ: ಬಂಧಿತನಿಂದ ಹೊರ ಬಿತ್ತು ಭಾರಿ ಸತ್ಯ..!!

ಈಗಾಗಲೇ ಸುಮಾರು ಇಪ್ಪತ್ತು ಸಾವಿರ ಮಂದಿ ಚಾಲಕರು HDK ಕ್ಯಾಬ್ಸ್ ನಲ್ಲಿ ನೋಂದಣಿ ಮಾಡಿಕೊಂಡಿದ್ದು, ಹುಲಿ ಟೆಕ್ನಾಲಜೀಸ್ ಹೆಸರಲ್ಲಿ ನೋಂದಣಿ ಪ್ರಕ್ರಿಯೆಗೆ ಆರಂಭವಾಗಿದೆ. ಮೊದಲಿಗೆ ಬೆಂಗಳೂರು ಮಹಾನಗರದಲ್ಲಿ ಸೇವೆಯೂ ಪರೀಕ್ಷಾರ್ಥ ಶುರುವಾಗಲಿದ್ದು, ನಂತರ ಮೈಸೂರು, ಮಂಗಳೂರು ಮತ್ತು ಬೆಳಗಾವಿಯಲ್ಲಿ ಸೇವೆ ವಿಸ್ತರಣೆ ಮಾಡುವ ಸಾಧ್ಯತೆ ಇದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೆಸರು ಬದಲಾಗುವ ಸಾಧ್ಯತೆ:

ಹೆಸರು ಬದಲಾಗುವ ಸಾಧ್ಯತೆ:

ಈ HDK ಕ್ಯಾಬ್ಸ್ ನಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ 50 ಕೋಟಿ ಹೂಡಿಕೆ ಮಾಡಿದ್ದು, ಹೀಗಾಗಿ ಅವರ ಹೆಸರನ್ನೇ ಇಡಲಾಗಿದೆ. ಆದರೆ ಕೊನೆ ಕ್ಷಣದಲ್ಲಿ ಹೆಸರು ಬದಲಾಗುವ ಸಾಧ್ಯತೆ ಇದೆ. ಚಾಲಕರ ಯೋಗಕ್ಷೇಮಕ್ಕೆ ಹೆಚ್ಚಿನ ಗಮನವನ್ನು ನೀಡಲಾಗಿದ್ದು, ಚಾಲಕರೊಂದಿಗೆ ಅವರ ಕುಟುಂಬಕ್ಕೂ ವಿಮಾ ಸೌಲಭ್ಯವನ್ನು ಕಂಪನಿ ಒದಗಿಸಲಿದೆ.

ಬೆಲೆಗಳು:

ಬೆಲೆಗಳು:

HDK ಕ್ಯಾಬ್ಸ್ ಸದ್ಯ ಮಾರುಕಟ್ಟೆಯಲ್ಲಿರುವ ಕಂಪನಿಗಳಿಗೆ ಸ್ಪರ್ಧೆಯನ್ನು ನೀಡಲಿದ್ದು, ಒಟ್ಟು ನಾಲ್ಕು ವರ್ಗದಲ್ಲಿ ಸೇವೆಯನ್ನು ನೀಡಲಿದೆ.

  • ಮಿನಿ ಪ್ರತಿ ಕಿ.ಮೀ ಗೆ ರೂ.12.50
  • ಸ್ಪೋರ್ಟ್ಸ್ ಸೆಡಾನ್ ಪ್ರತಿ ಕಿ.ಮೀಗೆ ರೂ.14.50
  • ಎಸ್ ಯುವಿ ಹಾಗೂ ಹೊರವಲಯದ ಪ್ರಯಾಣಕ್ಕೆ ಪ್ರತಿ ಕಿ.ಮೀಗೆ ರೂ. 18.50
ಆಪ್ ನಲ್ಲಿ ಏನಿರಲಿದೆ..?

ಆಪ್ ನಲ್ಲಿ ಏನಿರಲಿದೆ..?

ಓಲಾ, ಉಬರ್ ನಲ್ಲಿ ಇಲ್ಲದ ಆಯ್ಕೆಯನ್ನು HDK ಕ್ಯಾಬ್ಸ್ ನಲ್ಲಿ ಕಾಣಬಹುದಾಗಿದೆ. ಮಹಿಳಾ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆಯನ್ನು ನೀಡುವ ನಿಟ್ಟಿನಲ್ಲಿ ತುರ್ತು ಸಂದರ್ಭದಲ್ಲಿ ಸಹಾಯಕ್ಕೆ ಆಪ್ ನಲ್ಲಿ ಬಟನ್ ವೊಂದನ್ನು ನೀಡಲಾಗುತ್ತದೆ. ಅಲ್ಲದೇ ಮೊದಲು ಆಂಡ್ರಾಯ್ಡ್ ಆಪ್ ಹೊರ ಬರಲಿದ್ದು, ನಂತರದಲ್ಲಿ ಐಎಸ್‌ಓ ಆಪ್ ಬಿಡುಗಡೆಯಾಗಲಿದೆ.

ಸ್ಮಾರ್ಟ್‌ಫೋನ್ ಮಾತ್ರವಲ್ಲ:

ಸ್ಮಾರ್ಟ್‌ಫೋನ್ ಮಾತ್ರವಲ್ಲ:

ಓಲಾ, ಉಬರ್ ಬುಕ್ ಮಾಡಲು ನಿಮಗೆ ಸ್ಮಾರ್ಟ್‌ಫೋನ್ ಬೇಕೆ ಬೇಕು ಆದರೆ HDK ಕ್ಯಾಬ್ಸ್ ಅನ್ನು ಆಪ್ ಮಾತ್ರವಲ್ಲದೇ ಆನ್‌ಲೈನಿನಲ್ಲಿಯೂ ಬುಕ್ ಮಾಡಿಕೊಳ್ಳಬಹುದು.

ಪೇಟ್ರೊಲಿಂಗ್ ವೆಹಿಕಲ್:

ಪೇಟ್ರೊಲಿಂಗ್ ವೆಹಿಕಲ್:

ಗ್ರಾಹಕರ ಸುರಕ್ಷತೆಗೆ ಮತ್ತು ಕ್ಯಾಬ್ ಚಾಲಕರ ಮೇಲೆ ಕಣ್ಣಿಡುವ ಸಲುವಾಗಿ ಪೇಟ್ರೊಲಿಂಗ್ ವೆಹಿಕಲ್ (ಪಹರೆ ವಾಹನ) ವನ್ನು ನಿಯೋಜಿಸಲಾಗುವುದು. ಇದರಿಂದ ಗ್ರಾಹಕರು ನಿರ್ಭಿತಿಯಿಂದ ಕ್ಯಾಬ್ ಸೇವೆಯನ್ನು ಪಡೆಯಬಹುದಾಗಿದೆ. ಅಲ್ಲದೇ ತುರ್ತು ಸಮಯದಲ್ಲಿ ಚಾಲಕರ ನೆರವಿಗೂ ಬರಲಿದ್ದಾರೆ.

ಚಾಲಕರಿಗೆ ತರಬೇತಿ:

ಚಾಲಕರಿಗೆ ತರಬೇತಿ:

ಕ್ಯಾಬ್ ನಲ್ಲಿ ಪ್ರಯಾಣಿಸುವ ಗ್ರಾಹಕರೊಂದಿಗೆ ಹೇಗೆ ವರ್ತಿಸಬೇಕು ಹಾಗೂ ಹೆಚ್ಚಿನ ಮಂದಿ ವಿವಿಧ ಭಾಷೆಯ ಜನರು ಬರುವದರಿಂದ ಇಂಗ್ಲಿಷ್ ಭಾಷೆಯ ಕಲಿಕಾ ತರಬೇತಿಯನ್ನು ನೀಡುವ ಯೋಜನೆಯನ್ನು ಹಾಕಿಕೊಂಡಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Now, a new player is going to enter the Karnataka market to take on Ola and Uber, called HDK cabs. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot