Subscribe to Gizbot

ಹೈಕ್ ನೀಡುವ ಹೊಸ ಆಪ್‌ಡೇಟ್ ವಾಟ್ಸ್ಆಪ್‌ಗೆ ಮಾರಕ..!!!

Written By:

ಸದ್ಯ ಭಾರತದಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಇದೇ ಮಾದರಿಯಲ್ಲಿ ಸೋಶಿಯಲ್ ಮೆಸೆಜಿಂಗ್ ಆಪ್ ಬಳಕೆದಾರರ ಸಂಖ್ಯೆಯೂ ಏರುಗತಿಯಲ್ಲಿ ಸಾಗಿದೆ. ಅದರಲ್ಲೂ ಫೇಸ್‌ಬುಕ್ ಮಾಲೀಕತ್ವದ ವಾಟ್ಸ್ಆಪ್ ಬಳಕೆದಾರರು ಹೆಚ್ಚಾಗಿದ್ದಾರೆ, ಅವರನ್ನು ತನ್ನತ್ತ ಸೆಳೆಯುವ ಸಲುವಾಗಿ ಹೈಕ್ ಹೊಸದೊಂದು ಆಪ್‌ಡೇಟ್ ಬಿಡುಗಡೆ ಮಾಡಿದೆ.

ಹೈಕ್ ನೀಡುವ ಹೊಸ ಆಪ್‌ಡೇಟ್ ವಾಟ್ಸ್ಆಪ್‌ಗೆ ಮಾರಕ..!!!

ಓದಿರಿ: ಟೆಲಿಕಾಂ ವಲಯದಲ್ಲೇ ಹವಾ ಎಬ್ಬಿಸಿದ BSNL ನೀಡಿರುವ 'ದಿ ಬೆಸ್ಟ್' ಆಫರ್ ...!!!!

ಈ ಆಪ್‌ಡೇಟ್ ನಲ್ಲಿ ಹೈಕ್ ವಾಟ್ಸ್‌ಆಪ್ ನಲ್ಲಿ ಇಲ್ಲದಿರುವ ಆಯ್ಕೆಯೊಂದನ್ನು ನೀಡಲು ಮುಂದಾಗಿದೆ. ಇದು ಹೈಕ್ ಬಳಕೆ ಮಾಡಲು ಶುರು ಮಾಡಲು ಇರುವ ಪ್ರಮುಖ ಅಂಶಗಳಲ್ಲಿ ಒಂದಾಗಲಿದೆ ಎಂದರೆ ತಪ್ಪಾಗುವುದಿಲ್ಲ. ದೇಶದಲ್ಲಿ ಡಿಜಿಟಲ್ ಇಂಡಿಯಾ ಕಾರ್ಯ ಪ್ರಗತಿಯಲ್ಲಿರುವುದರಿಂದ ಈ ಆಯ್ಕೆ ಹೆಚ್ಚು ಪ್ರಚಲಿತದಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೈಕ್ ನಲ್ಲೇ ಪೇಮೆಂಟ್ ಮಾಡಿ:

ಹೈಕ್ ನಲ್ಲೇ ಪೇಮೆಂಟ್ ಮಾಡಿ:

ಹೊಸ ಆಪ್ಡೇಟ್ ಹೈಕ್ 5.0ದಲ್ಲಿ ತನ್ನದೇ ಆದ ವ್ಯಾಲೆಟ್ ಅನ್ನು ಹೈಕ್ ಬಿಡುಗಡೆ ಮಾಡಿದೆ. ಇದರಲ್ಲಿ ಯುನಿಫೈಡ್ ಪೇಮೆಂಟ್ ಇನ್ಟರ್ ಪೇಸ್ (ಯುಪಿಐ) ನೀಡಲಾಗಿದ್ದು, ಇದರ ಮೂಲಕ ನೀವು ಪೇಮೆಂಟ್ ಮಾಡುವುದು ಸುಲಭವಾಗಲಿದೆ.

ಫೋನ್ ಬಿಲ್ ಕಟ್ಟಬಹುದು:

ಫೋನ್ ಬಿಲ್ ಕಟ್ಟಬಹುದು:

ಇದೇ ಮಾದರಿಯಲ್ಲಿ ಹೈಕ್ ನಲ್ಲಿ ನೀವು ರಿಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಪೋಸ್ಟ್ ಪೇಯ್ಡ್ ಬಿಲ್ ಗಳನ್ನು ಪಾವತಿ ಮಾಡಬೇಕಾಗಿದೆ. ಇದರಿಂದ ನೀವು ಬೇರೆ ಬೇರೆ ಮೊಬೈಲ್ ವ್ಯಾಲೆಟ್ ಗಳನ್ನು ಬಳಸುವ ಅಗತ್ಯತೆ ಇರುವುದಿಲ್ಲ. ಒಂದೇ ಆಪ್‌ ನಲ್ಲಿ ಚಾಟಿಂಗ್ ಮಜಾವು ಸಿಗಲಿದ್ದು, ವ್ಯಾಲೆಟ್ ಸಹ ಅಲ್ಲಿಯೇ ಇರಲಿದೆ.

ಸ್ನೇಹಿತರಿಗೆ ಹಣ ಕಳುಹಿಸಬಹುದು:

ಸ್ನೇಹಿತರಿಗೆ ಹಣ ಕಳುಹಿಸಬಹುದು:

ಇದಲ್ಲದೇ ಹೈಕ್ ನೀಡಿರುವ ಹೊಸ ಆಪ್ಡೇಟ್ ನಲ್ಲಿ ಬ್ಲೂ ಪ್ಯಾಕೆಟ್ ಎನ್ನುವ ಹೊಸದೊಂದು ಆಯ್ಕೆಯನ್ನು ನೀಡಲಾಗಿದೆ. ಇದರ ಮೂಲಕ ನೀವು ನಿಮ್ಮ ಸ್ನೇಹಿತರಿಗೆ ಹಣವನ್ನು ಕಳುಹಿಸಬಹುದಾಗಿದೆ.

ಹೈಕ್ ಇತಿಹಾಸದಲ್ಲೇ ಅತೀ ದೊಡ್ಡ ಆಪ್ಢೇಟ್:

ಹೈಕ್ ಇತಿಹಾಸದಲ್ಲೇ ಅತೀ ದೊಡ್ಡ ಆಪ್ಢೇಟ್:

ಸದ್ಯ ಹೈಕ್ ನೀಡಿರುವ ಈ ಆಪ್‌ಡೇಟ್ ಹೈಕ್ ಇತಿಹಾಸದಲ್ಲಿ ಅತ್ಯಂತ ದೊಡ್ಡದು ಮತ್ತು ಮಹತ್ವವಾದದ್ದು, ಇದು ಭಾರತೀಯ ಮಾರುಕಟ್ಟೆಯಲ್ಲಿ ಹೈಕ್ ಬೆಳವಣಿಗೆಯ ಗತಿಯನ್ನೇ ಬದಲಾವಣೆ ಮಾಡಲಿದೆ ಎನ್ನುವ ಮಾತು ಕೇಳಿಬಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Hike Messenger on Tuesday updated its app to Hike 5.0 that comes with a wallet, supporting fund transfers through Unified Payments Interface (UPI). to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot