Subscribe to Gizbot

ಡಾಟಾ ಪ್ಲಾನ್ ರೀಚಾರ್ಜ್‌ ಪಡೆಯದೇ, ಉಚಿತ ಇಂಟರ್ನೆಟ್ ಆಕ್ಸೆಸ್ ಹೇಗೆ?

Written By:

ದೇಶ ಯಾವುದೇ ಆಗಲಿ, ರಾಜ್ಯ ಯಾವುದೇ ಆಗಲಿ. ಇಂದು ಎಲ್ಲೆಲ್ಲೂ ಟೆಲಿಕಾಂ ಟ್ಯಾರಿಫ್ ಪ್ಲಾನ್‌ಗಳ ಯುದ್ಧ ನಡೆಯುತ್ತಿದೆ. ಎಷ್ಟೇ ಟ್ಯಾರಿಫ್‌ ಪ್ಲಾನ್‌ ಯುದ್ಧ ಟೆಲಿಕಾಂಗಳ ನಡುವೆ ನಡೆದರೂ ಸಹ ಗ್ರಾಹಕರಿಗೆ ಮಾತ್ರ ಉಚಿತ ಡಾಟಾ ಪ್ಲಾನ್‌ ಮಾತ್ರ ಸಿಗುವುದಿಲ್ಲ. ಡಾಟಾ ಪ್ಲಾನ್‌ಗಾಗಿ ರೀಚಾರ್ಜ್‌ ಪಡೆಯಲೇಬೇಕು.

ಡಾಟಾ ಪ್ಲಾನ್‌ಗಾಗಿ ಹಣ ವೆಚ್ಚ ಮಾಡುವ ಬದಲಾಗಿ, ಉಚಿತವಾಗಿ ಇಂಟರ್ನೆಟ್‌ ಸಂಪರ್ಕ ಹೊಂದುವ ಬಗ್ಗೆ ಎಂದಾದರೂ ಆಲೋಚನೆ ಮಾಡಿದ್ದೀರಾ? ಖಂಡಿತಾ ಇಲ್ಲ ಅನಿಸುತ್ತೆ. ಅಂದಹಾಗೆ ಇಂಟರ್ನೆಟ್ ಡಾಟಾ ಪ್ಲಾನ್‌ ಇಲ್ಲದೇ ಇಂಟರ್ನೆಟ್ ಸಂಪರ್ಕ ಹೊಂದುವ ಕೆಲವು ಮಾರ್ಗಗಳಿವೆ. ಅವುಗಳನ್ನು ನಾವು ಇಂದು ನಿಮಗೆ ತಿಳಿಸುತ್ತೇವೆ.

4 ಆತ್ಯಾಕರ್ಷಕ ಆಪ್‌ಗಳು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್(Internet) ಸರ್ವೀಸ್‌ ಅನ್ನು ಉಚಿತವಾಗಿ ನೀಡಲು ಸಹಾಯ ಮಾಡುತ್ತವೆ. ಯಾವುದೇ ಡಾಟಾ ಪ್ಲಾನ್‌ ರೀಚಾರ್ಜ್ ಮಾಡಿಸುವ ಅಗತ್ಯವಿಲ್ಲ.

ವೊಡಾಫೋನ್ 4G, ಜಿಯೋ 4G ಗಿಂತ ವೇಗ: 'ವೊಡಾಫೋನ್ 4G'ಗೆ ಅಪ್‌ಗ್ರೇಡ್ ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಎಸ್‌ಎಂಎಸ್‌ಮಾರ್ಟ್ (SMSmart)

ಎಸ್‌ಎಂಎಸ್‌ಮಾರ್ಟ್ (SMSmart)

'ಎಸ್‌ಎಂಎಸ್‌ಮಾರ್ಟ್ (SMSmart)' ಆಂಡ್ರಾಯ್ಡ್ ಅಪ್ಲಿಕೇಶನ್‌ ಆಗಿದ್ದು, ನಿಮಗೆ ಇಂಟರ್ನೆಟ್‌ನಿಂದ ಮಾಹಿತಿ ನೀಡಲು ಎಸ್‌ಎಂಎಸ್‌ ಸರ್ವೀಸ್ ಬಳಸುತ್ತದೆ. ಆಪ್‌ ಸೇವೆ ಬಗ್ಗೆ ಯಾವುದೇ ಸಂಶಯ ಬೇಡ. ಉತ್ತಮವಾಗಿ ವಿನ್ಯಾಸಗೊಂಡಿರುವ ಈ ಆಪ್‌ ಎಸ್‌ಎಂಎಸ್‌ ರೀತಿ ಫೀಲ್‌ ನೀಡದೆ, ವಿವಿಧ ಮಾಹಿತಿಗಳನ್ನು ಪಡೆಯಲು ಶೀಘ್ರ ಆಕ್ಸೆಸ್, ವಿಕಿಪೀಡಿಯ ಎಕ್ಸ್‌ಪರ್ಟ್, ಎಲ್ಪ್‌ ಮತ್ತು ಟ್ವಿಟರ್‌ಗಳಿಗೂ ಆಕ್ಸೆಸ್ ನೀಡುತ್ತದೆ.

 ಟೆಕ್ಸ್ಟ್ ಇಂಜಿನ್ (TextEngine)

ಟೆಕ್ಸ್ಟ್ ಇಂಜಿನ್ (TextEngine)

'ಟೆಕ್ಸ್ಟ್ ಇಂಜಿನ್ (TextEngine)' ಗೂಗಲ್‌ ಎಸ್‌ಎಂಎಸ್ ಸರ್ಚ್ ಆಗಿದ್ದು, ಡಾಟಾ ಪ್ಲಾನ್‌ಗಾಗಿ ಹಣ ವೆಚ್ಚ ಮಾಡಲು ಸಾಧ್ಯವಾಗದವರೂ ಸುಲಭವಾಗಿ ಮಾಹಿತಿ ಪಡೆಯಲು ಈ ಆಪ್ ಬಳಸಬಹುದು.

ಈ ಆಪ್‌ಗೆ ಉಚಿತವಾಗಿ ಸೈನಪ್‌ ಆಗಿ, ಟೆಕ್ಸ್ಟ್ ಇಂಜಿನ್ (TextEngine) ಉಚಿತವಾಗಿ ವಾತಾವರಣ ಅಪ್‌ಡೇಟ್ ಸರ್ವೀಸ್, ಕ್ರೀಡೆ ಸ್ಕೋರ್‌, ವಿಕಿಪೀಡಿಯ ಮತ್ತು ಇತರೆ ರಿಸಲ್ಟ್ ನೀಡುತ್ತದೆ.

ಎಸ್‌ಎಂಎಸ್ ಹಂಟ್(SMS Hunt)

ಎಸ್‌ಎಂಎಸ್ ಹಂಟ್(SMS Hunt)

'ಎಸ್‌ಎಂಎಸ್ ಹಂಟ್(SMS Hunt) ' ಸರಳ ರೀತಿಯಲ್ಲಿ ಒಂದು ಸೇವೆಯನ್ನು ನೀಡುತ್ತದೆ. ಆಪ್‌ ಟಾಪ್‌ ರೇಟೆಡ್ ಸೈಟ್ ಅಥವಾ ಆಪ್‌ ಲಿಂಕ್‌ ಅನ್ನು ಪ್ರಾಡಕ್ಟ್‌ಗೆ ಸೇರಿದಂತೆ ನೀಡುತ್ತದೆ. ಪ್ರಾಡಕ್ಟ್ ಖರೀದಿಯಲ್ಲಿ ನಿಮಗೆ ಹೆಚ್ಚಿನ ಪರಿಚಯ ಇಲ್ಲದಿದ್ದಲ್ಲಿ, ಈ ಲಿಂಕ್‌ಗಳು ಹೊಸ ಪ್ರಾಡಕ್ಟ್‌ಗಳನ್ನು ಪತ್ತೆಗಾಗಿ ಸಹಾಯಕಾರಿ ಆಗಿವೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

QKSMS

QKSMS

'QKSMS' ಆಪ್‌ ಹೆಚ್ಚು ಅಗತ್ಯವಾದ ಎಸ್‌ಎಂಎಸ್ ಸರ್ಚ್‌ ಇಂಜಿನ್ ಅಲ್ಲ. ಆದರೆ ಇಂಟರ್ನೆಟ್ ಮತ್ತು ಎಸ್‌ಎಂಎಸ್‌ಗಳ ಉತ್ತಮ ಅನುಭವ ನೀಡುತ್ತದೆ. ಉತ್ತಮ ಥೀಮ್‌ಗಳೊಂದಿಗೆ ಮೆಸೇಜಿಂಗ್ ಅನುಭವವನ್ನು ವೃದ್ಧಿಸುತ್ತದೆ. ಪ್ರಸ್ತುತ ಆಪ್ ಅನ್ನು ಅಂತ್ಯಗೊಳಿಸದೇ ಕ್ವಿಕ್ ರೀಪ್ಲೇಗಾಗಿ ಸಹಯಕಾರಿಯಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
How to Access the Internet without Any Data Plan. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot