ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನಿನಿಂದ ಡಿ.ಎಸ್.ಎಲ್.ಆರ್ ನಿಯಂತ್ರಿಸುವುದು ಹೇಗೆ?

|

ಬಹುತೇಕ ಕ್ಯಾಮೆರಾಗಳಲ್ಲಿ ರಿಮೋಟ್ ಕಂಟ್ರೋಲ್ ಆಯ್ಕೆಗಳಿರುತ್ತವೆ, ಆದರೆ ನಮ್ಮಲ್ಲನೇಕರಿಗೆ ಅದರ ಬಗ್ಗೆ ಅರಿವಿರುವುದಿಲ್ಲ. ಟೈಮ್ ಲ್ಯಾಪ್ಸ್ ವೀಡಿಯೋ, ದೀರ್ಘ ಎಕ್ಸ್ಪೋಷರ್ ಚಿತ್ರಗಳು ಅಥವಾ ನಿಮ್ಮ ಚಿತ್ರಕ್ಕೊಂದು ವಿಭಿನ್ನ ಆಯಾಮ ನೀಡಬೇಕಾದ ಸಂದರ್ಭದಲ್ಲಿ ರಿಮೋಟ್ ಕಂಟ್ರೋಲ್ ಆಯ್ಕೆ ಉಪಯೋಗಕ್ಕೆ ಬರುತ್ತದೆ.

ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನಿನಿಂದ ಡಿ.ಎಸ್.ಎಲ್.ಆರ್ ನಿಯಂತ್ರಿಸುವುದು ಹೇಗೆ?

ಈ ರೀತಿಯ ಒಂದು ರಿಮೋಟ್ ಕಂಟ್ರೋಲ್ ಸಾಧನವೆಂದರೆ ನಿಮ್ಮ ಸ್ಮಾರ್ಟ್ ಫೋನ್, ಅದು ಆ್ಯಂಡ್ರಾಯ್ಡ್ ಇರಬಹುದು, ಐಫೋನ್ ಇರಬಹುದು. ಗೂಗಲ್ ಪ್ಲೇ ಮತ್ತು ಆ್ಯಪ್ ಸ್ಟೋರ್ ನಲ್ಲಿ ಹಲವಾರು ತಂತ್ರಾಂಶಗಳು ಲಭ್ಯವಿದೆ. ಈ ತಂತ್ರಾಂಶಗಳ ಮೂಲಕ ನೀವು ನಿಮ್ಮ ಕ್ಯಾಮೆರಾದ ಅಪರ್ಚರ್, ಐ.ಎಸ್.ಒ, ವೈಟ್ ಬ್ಯಾಲೆನ್ಸ್ ಮತ್ತು ಇನ್ನೂ ಅನೇಕ ಸಂಗತಿಗಳನ್ನು ನಿಯಂತ್ರಿಸಬಹುದು.

ಓದಿರಿ: ಇಂಟರ್ನೆಟ್ ಇಲ್ಲದೆಯೇ ಫೇಸ್‌ಬುಕ್ ಬಳಸುವುದು ಹೇಗೆ?

ಈ ಲೇಖನದಲ್ಲಿ, ನಾವು ನಿಮಗೆ ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನಿನಿಂದ ಡಿ.ಎಸ್.ಎಲ್.ಆರ್ ಅನ್ನು ನಿಯಂತ್ರಿಸುವುದರ ಬಗ್ಗೆ ತಿಳಿಸುತ್ತೇವೆ. ಕೆನಾನ್ ಮತ್ತು ನಿಕಾನ್ ಡಿ.ಎಸ್.ಎಲ್.ಆರ್ ಗಳಿಗೆ ಪ್ರತ್ಯೇಕ ಆ್ಯಪ್ ಗಳು ಲಭ್ಯವಿದೆ. ಜೊತೆಗೆ ಡಿ.ಎಸ್.ಎಲ್.ಆರ್ ಕಂಟ್ರೋಲರ್ (ಬೀಟಾ) ದಂತಹ ಥರ್ಡ್ ಪಾರ್ಟಿ ಆ್ಯಪ್ ಗಳೂ ಲಭ್ಯವಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ 1: ಡಿ.ಎಸ್.ಎಲ್.ಆರ್ ಕಂಟ್ರೋಲರ್ (ಬೀಟಾ)ಅನ್ನು ಇನ್ಸ್ಟಾಲ್ ಮಾಡಿ.

ಹಂತ 1: ಡಿ.ಎಸ್.ಎಲ್.ಆರ್ ಕಂಟ್ರೋಲರ್ (ಬೀಟಾ)ಅನ್ನು ಇನ್ಸ್ಟಾಲ್ ಮಾಡಿ.

ಗೂಗಲ್ ಪ್ಲೇ ಸ್ಟೋರಿಗೆ ಹೋಗಿ ಡಿ.ಎಸ್.ಎಲ್.ಆರ್ ಕಂಟ್ರೋಲರ್ (ಬೀಟಾ) ಅನ್ನು ಡೌನ್ ಲೋಡ್ ಮಾಡಿಕೊಳ್ಳಿ. ಇದು ಬೀಟಾ ಆವೃತ್ತಿಯಾದರೂ ಎಲ್ಲಾ ಸೌಲಭ್ಯಗಳೂ ಇದರಲ್ಲಿದೆ.

ಹಂತ 2: ಡಿ.ಎಸ್.ಎಲ್.ಆರ್ ಜೊತೆಗೆ ಫೋನನ್ನು ಸಂಪರ್ಕಿಸಿ.

ಹಂತ 2: ಡಿ.ಎಸ್.ಎಲ್.ಆರ್ ಜೊತೆಗೆ ಫೋನನ್ನು ಸಂಪರ್ಕಿಸಿ.

ಡಿ.ಎಸ್.ಎಲ್.ಆರ್ ಕಂಟ್ರೋಲರ್ ತಂತ್ರಾಂಶ ಬಹುತೇಕ ಕೆನಾನ್ ಡಿ.ಎಸ್.ಎಲ್.ಆರ್ ಜೊತೆಗೆ ಸಲೀಸಾಗಿ ಕಾರ್ಯನಿರ್ವಹಿಸುತ್ತದೆ. ಕ್ಯಾಮೆರಾದ ಜೊತೆಗೆ ಬಂದಿರುವ ಯು.ಎಸ್.ಬಿ ಕೇಬಲ್ ಅನ್ನು ಯು.ಎಸ್.ಬಿ ಒಟಿಜಿ ಅಡಾಪ್ಟರ್ ಬಳಸಿ ಫೋನಿಗೆ ಸಂಪರ್ಕಿಸಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ 3: ನಿಯಂತ್ರಣಗಳನ್ನು ಉಪಯೋಗಿಸಿ

ಹಂತ 3: ನಿಯಂತ್ರಣಗಳನ್ನು ಉಪಯೋಗಿಸಿ

ಈ ತಂತ್ರಾಂಶ ಉಪಯೋಗಿಸಲು ಬಹು ಸುಲಭ. ಪರದೆಯ ಮೇಲೆ ಕ್ಲಿಕ್ಕಿಸಿ ಫೋಕಸ್ ಮಾಡಿ, ಶಟರ್ ಬಟನ್ ಮೇಲೆ ಕ್ಲಿಕ್ಕಿಸಿ ಫೋಟೋ ತೆಗೆಯಿರಿ. ನಿಮ್ಮ ಸ್ಮಾರ್ಟ್ ಫೋನ್ ಪರದೆಯ ಮೇಲೆ ಕ್ಯಾಮೆರಾದ ಎಲ್ಲಾ ಬೇಸಿಕ್ ಕಾರ್ಯಗಳೂ ಕಾಣಿಸುತ್ತವೆ.

ಹಂತ 4: ಮತ್ತಷ್ಟು ವಿಶಿಷ್ಟತೆಗಳು.

ಹಂತ 4: ಮತ್ತಷ್ಟು ವಿಶಿಷ್ಟತೆಗಳು.

ಟೈಮ್ ಲ್ಯಾಪ್ಸ್ ಮತ್ತು ಹೆಚ್.ಡಿ.ಆರ್/ಆಟೋ ಎಕ್ಸ್ಪೋಷರ್ ಬ್ರಾಕೆಟಿಂಗ್ ನಂತಹ ವಿಶಿಷ್ಟತೆಗಳನ್ನು ಉಪಯೋಗಿಸಲು ಸ್ಮಾರ್ಟ್ ಫೋನ್ ಪರದೆಯ ಬಲ ಕೆಳ ತುದಿಯಲ್ಲಿರುವ ಸೆಟ್ಟಿಂಗ್ಸ್ ಬಟನ್ ಅನ್ನು ಕ್ಲಿಕ್ಕಿಸಿ.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ 5: ಈಗ ರಿಮೋಟ್ ಕಂಟ್ರೋಲ್ ಉಪಯೋಗಿಸಿ.

ಹಂತ 5: ಈಗ ರಿಮೋಟ್ ಕಂಟ್ರೋಲ್ ಉಪಯೋಗಿಸಿ.

ಅಷ್ಟೇ! ಈಗ ನಿಮ್ಮ ಸ್ಮಾರ್ಟ್ ಫೋನನ್ನು ರಿಮೋಟ್ ಕಂಟ್ರೋಲ್ ಆಗಿ ಉಪಯೋಗಿಸಿಕೊಂಡು ಉಸಿರು ಬಿಗಿಹಿಡಿಸುವ ಚಿತ್ರಗಳನ್ನು ಮತ್ತು ಟೈಮ್ ಲ್ಯಾಪ್ಸ್ ವೀಡಿಯೋಗಳನ್ನು ತೆಗೆಯಿರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
While most of the cameras have remote control capabilities, not many of us are aware of them. These remotely controllable tools can come in very handy especially when you intend to shoot a time-lapse video, long exposure shots, or when you want to give your image a different perspective.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X