ಇಂಟರ್ನೆಟ್ ಇಲ್ಲದೆಯೇ ಫೇಸ್‌ಬುಕ್ ಬಳಸುವುದು ಹೇಗೆ?

By Shwetha
|

ಸಾಮಾಜಿಕ ಜಾಲತಾಣವಾಗಿ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಫೇಸ್‌ಬುಕ್ ಇಂದು ಅಪಾರ ಸಂಖ್ಯೆಯಲ್ಲಿ ಬಳಕೆದಾರರನ್ನು ಪಡೆದುಕೊಂಡಿದೆ. ಇದಕ್ಕೆ ತಕ್ಕಂತೆ ಫೇಸ್‌ಬುಕ್ ಕೂಡ ಒಂದಿಲ್ಲೊಂದು ಹೊಸ ಫೀಚರ್‌ಗಳನ್ನು ಅಪ್‌ಡೇಟ್ ಮಾಡುತ್ತಾ ಬಳಕೆದಾರರಿಗೆ ಇನ್ನಷ್ಟು ಸನಿಹವಾಗುತ್ತಿದೆ. ಆದರೆ ಫೇಸ್‌ಬುಕ್‌ನಲ್ಲಿ ಇರುವ ಮುಖ್ಯ ಸಮಸ್ಯೆ ಎಂದರೆ ನೋಟಿಫಿಕೇಶನ್‌ನದ್ದಾಗಿದೆ.

ಓದಿರಿ: ಉಚಿತ ಕರೆ, ಡೇಟಾ ಹೊಂದಿರುವ ಬಿಎಸ್‌ಎನ್‌ಎಲ್ ಟಾಪ್ ಪ್ಲಾನ್ಸ್

ನಮ್ಮ ಸ್ನೇಹಿತರ ಪಟ್ಟಿಯಲ್ಲಿರುವ ಹುಟ್ಟುಹಬ್ಬ ಸೂಚನೆಗಳನ್ನು ಪಡೆದುಕೊಳ್ಳಲು ನಾವು ಫೇಸ್‌ಬುಕ್ ಅನ್ನೇ ಬಳಸಿಕೊಳ್ಳುತ್ತಿದ್ದು ಆಗಾಗ್ಗೆ ಇದಕ್ಕಾಗಿ ಇಂಟರ್ನೆಟ್ ಅನ್ನು ಬಳಸಿಕೊಳ್ಳುವುದು ಕೊಂಚ ರಗಳೆ ಎಂದೆನಿಸುತ್ತಿದೆ. ಹಾಗಿದ್ದರೆ ನಿಮ್ಮ ಫೋನ್‌ನಲ್ಲಿ ಫೇಸ್‌ಬುಕ್ ತೆರೆಯದೆಯೇ ಈ ಮಾಹಿತಿಗಳನ್ನು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಇಂಟರ್ನೆಟ್ ಇಲ್ಲದೆ ಫೇಸ್‌ಬುಕ್ ಬಳಕೆ

ಇಂಟರ್ನೆಟ್ ಇಲ್ಲದೆ ಫೇಸ್‌ಬುಕ್ ಬಳಕೆ

ನಿಮ್ಮ ಮೊಬೈಲ್ ಫೋನ್‌ನಲ್ಲಿ *325# ಎಂಬುದಾಗಿ ನಮೂದಿಸಿ ಹಾಗೂ ಫೇಸ್‌ಬುಕ್ ದಾಖಲೆಗಳನ್ನು ಎಂಟರ್ ಮಾಡಿ. ನೀವು ಲಾಗಿನ್ ಆಗುತ್ತಿದ್ದಂತೆಯೇ, ನ್ಯೂಸ್ ಫೀಡ್, ಅಪ್‌ಡೇಟ್ಸ್, ಪೋಸ್ಟ್ ಮತ್ತು ಹೆಚ್ಚಿನ ಇನ್ನಷ್ಟು ವಿಷಯಗಳಿಗೆ ನಿಮಗೆ ಸೈನ್ ಇನ್ ಮಾಡಲಾಗುತ್ತದೆ. ಇದಕ್ಕೆ ಯಾವುದೇ ಡೇಟಾ ಯೋಜನೆಯ ಅಗತ್ಯವಿಲ್ಲ ಮತ್ತು ನಿಮ್ಮ ಯಾವುದೇ ಸ್ಮಾರ್ಟ್‌ಫೋನ್‌ನಲ್ಲಿ ಇದನ್ನು ಮಾಡಬಹುದಾಗಿದೆ.

ಫೇಸ್‌ಬುಕ್ ಹುಟ್ಟುಹಬ್ಬ

ಫೇಸ್‌ಬುಕ್ ಹುಟ್ಟುಹಬ್ಬ

ನಿಮ್ಮ ಕ್ಯಾಲೆಂಡರ್‌ಗೆ ಫೇಸ್‌ಬುಕ್ ಹುಟ್ಟುಹಬ್ಬಗಳನ್ನು ಇಂಪೋರ್ಟ್ ಮಾಡಲು ಹಲವಾರು ಅಪ್ಲಿಕೇಶನ್‌ಗಳಿವೆ. ಫೇಸ್‌ಬುಕ್ ಬರ್ತ್‌ಡೇ ಯುಆರ್‌ಎಲ್ ಅನ್ನು ನಕಲಿಸಿ, ನಂತರ ಗೂಗಲ್ ಕ್ಯಾಲೆಂಡರ್ ತೆರೆಯಿರಿ ಕ್ಯಾಲೆಂಡರ್‌ನ ಡ್ರಾಪ್ ಡೌನ್ ಮೆನುವಿನಲ್ಲಿ ಯುಆರ್‌ಎಲ್ ಆಯ್ಕೆಮಾಡಿ ನಂತರ ಪೇಸ್ಟ್ ಮಾಡಿ

ಈವೆಂಟ್ ಆಮಂತ್ರಣಗಳನ್ನು ಬಳಸಿ

ಈವೆಂಟ್ ಆಮಂತ್ರಣಗಳನ್ನು ಬಳಸಿ

ನೀವು ಭಾಗವಹಿಸಬೇಕೆಂದಿರುವ ಈವೆಂಟ್ ಅನ್ನು ಮರೆತು ಬಿಟ್ಟಿದ್ದೀರಿ ಎಂದಾದಲ್ಲಿ, ಫೇಸ್‌ಬುಕ್‌ನಲ್ಲಿ ಎಕ್ಸ್‌ಪೋರ್ಟ್ ಈವೆಂಟ್ಸ್ ಆಪ್ಶನ್ ಅನ್ನು ಬಳಸಬಹುದಾಗಿದೆ. ಇದನ್ನು ಮಾಡಲು, ನಿಮ್ಮ ಫೇಸ್‌ಬುಕ್ ಪುಟದ ಎಡಭಾಗಕ್ಕೆ ಹೋಗಿ, ನೀವು ಎಕ್ಸ್‌ಪೋರ್ಟ್ ಮಾಡಬೇಕೆಂದಿರುವ ಈವೆಂಟ್ ಆಯ್ಕೆಮಾಡಿ ಮತ್ತು ಎಕ್ಸ್‌ಪೋರ್ಟ್ ಈವೆಂಟ್ ಕ್ಲಿಕ್ ಮಾಡಿ.

ಸಂಪರ್ಕಗಳನ್ನು ಇಂಪೋರ್ಟ್ ಮಾಡುವುದು

ಸಂಪರ್ಕಗಳನ್ನು ಇಂಪೋರ್ಟ್ ಮಾಡುವುದು

ನಿಮ್ಮ ಫೋನ್‌ಗೆ ಫೇಸ್‌ಬುಕ್ ಸಂಪರ್ಕಗಳನ್ನು ಇಂಪೋರ್ಟ್ ಮಾಡಲು ಮೂರನೇ ಅಪ್ಲಿಕೇಶನ್‌ಗಳು ಸಾಕಷ್ಟಿವೆ. ಫೇಸ್‌ಬುಕ್ ಅಪ್ಲಿಕೇಶನ್ ಅನ್ನು ಹಾಗೆಯೇ ಬಳಸಿಕೊಂಡು, ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಸೆಟ್ಟಿಂಗ್ಸ್, ಅಕೌಂಟ್ಸ್ ಮತ್ತು ಸಿಂಕ್, ಖಾತೆ ಸೇರಿಸಿ, ನಿಮ್ಮ ದಾಖಲೆಗಳನ್ನು ಒದಗಿಸಿ, ತದನಂತರ ಸಿಂಕ್ ಆಪ್ಶನ್ ಪರಿಶೀಲಿಸಿ.

ಫೇಸ್‌ಬುಕ್ ಮಾಹಿತಿ ಬ್ಯಾಕಪ್ ಮಾಡಿ

ಫೇಸ್‌ಬುಕ್ ಮಾಹಿತಿ ಬ್ಯಾಕಪ್ ಮಾಡಿ

ನಿಮ್ಮ ಫೇಸ್‌ಬುಕ್ ಮಾಹಿತಿಯನ್ನು ಬ್ಯಾಕಪ್ ಮಾಡಲು, ಆರ್ಕೈವ್ ಫೇಸ್‌ಬುಕ್ ಇದು ಫೈರ್‌ಫಾಕ್ಸ್‌ನಲ್ಲಿ ಲಭ್ಯವಿದೆ ಇದನ್ನು ಬಳಸಿಕೊಳ್ಳಬಹುದಾಗಿದೆ.

ಫೇಸ್‌ಬುಕ್ ಚಾಟ್ ಸಂಪರ್ಕಗಳನ್ನು ಪಡೆದುಕೊಳ್ಳಿ

ಫೇಸ್‌ಬುಕ್ ಚಾಟ್ ಸಂಪರ್ಕಗಳನ್ನು ಪಡೆದುಕೊಳ್ಳಿ

ನಿಮ್ಮ ಫೇಸ್‌ಬುಕ್ ಚಾಟ್ ಸಂಪರ್ಕಗಳನ್ನು ಬೇರೆಲ್ಲಿಯಾದರೂ ಬಳಸಿಕೊಳ್ಳಬೇಕು ಎಂದಾದಲ್ಲಿ, ಸಾಕಷ್ಟು ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳು ಲಭ್ಯವಿದೆ.

ಚಾಟ್ ಹಿಸ್ಟ್ರಿ ಉಳಿಸುವುದು

ಚಾಟ್ ಹಿಸ್ಟ್ರಿ ಉಳಿಸುವುದು

ಭವಿಷ್ಯದಲ್ಲಿ ಚಾಟ್ ಹಿಸ್ಟ್ರಿಯನ್ನು ಉಳಿಸಿಕೊಳ್ಳಬೇಕು ಎಂಬ ಇರಾದೆ ನಿಮ್ಮದಾಗಿದೆ ಎಂದಾದಲ್ಲಿ, ಬ್ರೌಸರ್ ಎಕ್ಸ್‌ಟೆನ್ಶನ್‌ಗಳನ್ನು ಬಳಸಿಕೊಂಡು ಸಂಪೂರ್ಣ ಚಾಟ್ ಹಿಸ್ಟ್ರಿಯನ್ನು ಉಳಿಸಿಕೊಳ್ಳಬಹುದಾಗಿದೆ. ಫೇಸ್‌ಬುಕ್ ಚಾಟ್ ಹಿಸ್ಟ್ರಿ ಮ್ಯಾನೇಜರ್ ಎಕ್ಸ್‌ಟೆನ್ಶನ್ ಅಥವಾ ನಿಮ್ಮ ಇಷ್ಟದ ಇತರವುಗಳನ್ನು ಬಳಸಿಕೊಂಡು ಇದನ್ನು ಮಾಡಬಹುದಾಗಿದೆ. ಇಂಟರ್ನೆಟ್‌ನಲ್ಲಿ ಸಾಕಷ್ಟು ಆಡ್ ಆನ್‌ಗಳು ಲಭ್ಯವಿದೆ.

ಇಮೇಲ್‌ಗಳಿಂದ ಸೂಚನೆ ಪಡೆದುಕೊಳ್ಳಿ

ಇಮೇಲ್‌ಗಳಿಂದ ಸೂಚನೆ ಪಡೆದುಕೊಳ್ಳಿ

ಇಮೇಲ್‌ಗಳಿಂದ ಕೂಡ ಫೇಸ್‌ಬುಕ್ ಸೂಚನೆಗಳನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ಇದನ್ನು ಹೊಂದಿಸಲು, ನಿಮ್ಮ ಫೇಸ್‌ಬುಕ್ ಮುಖ್ಯ ಪುಟದಲ್ಲಿ ಸೆಟ್ಟಿಂಗ್ಸ್‌ಗೆ ಹೋಗಿ, ನೋಟಿಫಿಕೇಶನ್ ಕ್ಲಿಕ್ ಮಾಡಿ, ಇಮೇಲ್ ಆಯ್ಕೆಮಾಡಿ ಮತ್ತು ನೋಟಿಫಿಕೇಶನ್ ಸೆಟ್ಟಿಂಗ್ಸ್ ಎಡಿಟ್ ಮಾಡಿ.

ಎಸ್‌ಎಮ್‌ಎಸ್ ಮೂಲಕ ಅಧಿಸೂಚನೆಗಳು

ಎಸ್‌ಎಮ್‌ಎಸ್ ಮೂಲಕ ಅಧಿಸೂಚನೆಗಳು

ಇಮೇಲ್ ಬದಲಿಗೆ ಎಸ್‌ಎಮ್‌ಎಸ್ ಮೂಲಕ ಅಧಿಸೂಚನೆಗಳನ್ನು ಪಡೆದುಕೊಳ್ಳಲು, ಸೆಟ್ಟಿಂಗ್ಸ್ ಕ್ಲಿಕ್ ಮಾಡಿ, ನಂತರ ನೋಟಿಫಿಕೇಶನ್, ಮತ್ತು ನೋಟಿಫಿಕೇಶನ್ ಸೆಟ್ಟಿಂಗ್ಸ್‌ನಲ್ಲಿ ಟೆಕ್ಸ್ಟ್ ಸಂದೇಶಗಳನ್ನು ಎಡಿಟ್ ಮಾಡಿ.

ಫೇಸ್‌ಬುಕ್ ಅನ್‌ಬ್ಲಾಕ್ ಮಾಡಲು ಟ್ರಿಕ್ಸ್

ಫೇಸ್‌ಬುಕ್ ಅನ್‌ಬ್ಲಾಕ್ ಮಾಡಲು ಟ್ರಿಕ್ಸ್

ನಿಮ್ಮ ಕಚೇರಿ ಅಥವಾ ಶಾಲೆಗಳಲ್ಲಿ ನಿಮಗೆ ಫೇಸ್‌ಬುಕ್ ಮತ್ತು ಇತರ ವೆಬ್‌ಸೈಟ್‌ಗಳನ್ನು ಬ್ಲಾಕ್ ಮಾಡಿರಬಹುದು. ಈ ಸಂದರ್ಭದಲ್ಲಿ ಈ ಟ್ರಿಕ್ಸ್‌ಗಳನ್ನು ಬಳಸಿಕೊಂಡು ಅನ್‌ಬ್ಲಾಕ್ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
There are a few ways through which you can get access to all the information on your Facebook account. Read more to find out how.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X