ಭಾರತದಲ್ಲಿ ನೆಟ್ ಬ್ಯಾಂಕಿಂಗ್ ಉಪಯೋಗಿಸಿ ಗೂಗಲ್ ಪ್ಲೇ ಸ್ಟೋರ್ ನಿಂದ ತಂತ್ರಾಂಶ ಅಥವಾ ಆಟವೊಂದನ್ನು ಖರೀದಿಸುವುದು ಹೇಗೆ?

ಕೊನೆಗೂ, ಆ್ಯಂಡ್ರಾಯ್ಡ್ ಬಳಕೆದಾರರಿಗೊಂದು ಸಂತಸದ ಸುದ್ದಿ. ಗೂಗಲ್ ಪ್ಲೇ ಸ್ಟೋರ್ ಕೊನೆಗೂ ಭಾರತದಲ್ಲಿ ನೆಟ್ ಬ್ಯಾಂಕಿಂಗ್ ಮೂಲಕ ಖರೀದಿ ಮಾಡುವ ಅವಕಾಶವನ್ನು ಕೊಟ್ಟಿದೆ.

|

ಸದ್ಯಕ್ಕೆ ಇಡೀ ಪ್ರಪಂಚದಾದ್ಯಂತ ಆ್ಯಪಲ್ ಮತ್ತು ಗೂಗಲ್ ಮೊಬೈಲ್ ಮಾರುಕಟ್ಟೆಯನ್ನು ಆಕ್ರಮಿಸಿಬಿಟ್ಟಿವೆ. ಎರಡೂ ಕಂಪನಿಗಳ ಆ್ಯಪ್ ಸ್ಟೋರ್ ಗಳಲ್ಲಿ (ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಆ್ಯಪ್ ಸ್ಟೋರ್) ಅನೇಕ ವಿಧದ ತಂತ್ರಾಂಶಗಳು ಲಭ್ಯವಿದೆ.

ಭಾರತದಲ್ಲಿ ನೆಟ್ ಬ್ಯಾಂಕಿಂಗ್ ಉಪಯೋಗಿಸಿ ಗೂಗಲ್ ಪ್ಲೇ ಸ್ಟೋರ್ ನಿಂದ ತಂತ್ರಾಂಶ

ಇದರಲ್ಲಿ ಕೆಲವೊಂದು ಹಣ ಪಾವತಿ ಮಾಡಿ ಖರೀದಿಸಬೇಕಾದ ತಂತ್ರಾಂಶಗಳು. ಭಾರತೀಯ ಗ್ರಾಹಕರಿಗೆ ಈ ಆ್ಯಪ್ ಸ್ಟೋರ್ ಗಳಲ್ಲಿ ಖರೀದಿ ಮಾಡುವುದು ಕಷ್ಟದ ಕೆಲಸವಾಗಿಬಿಟ್ಟಿತ್ತು. ಕ್ರೆಡಿಟ್ ಕಾರ್ಡುಗಳನ್ನು ಬಹಳ ಕಾಲದಿಂದ ಉಪಯೋಗಿಸಬಹುದಿತ್ತಾದರೂ, ಬಹುತೇಕ ಭಾರತೀಯ ಗ್ರಾಹಕರ ಬಳಿ ಕ್ರೆಡಿಟ್ ಕಾರ್ಡ್ ಇಲ್ಲ.

ಓದಿರಿ: 500, 1000 ನೋಟು ಬ್ಯಾನ್: ಟೆಲಿಕಾಂ'ಗಳ ಬಿಲ್‌ ಪಾವತಿ ಬಗ್ಗೆ ತಲೆಕೆಡಿಸಿಕೊಳ್ಳದಿರಿ!

ಕೆಲವು ದಿನಗಳ ಹಿಂದೆ, ಗೂಗಲ್ ತನ್ನ ಪ್ಲೇ ಸ್ಟೋರ್ ನಲ್ಲಿ ಹೊಸತೊಂದು ಪೇಮೆಂಟ್ ವಿಧಾನವನ್ನು ಅಳವಡಿಸಿದೆ, ಈಗ ಭಾರತದ ಬಳಕೆದಾರರು ಆ್ಯಪ್ ಅಥವಾ ಆಟಗಳನ್ನು ನೆಟ್ ಬ್ಯಾಂಕಿಂಗ್ ಮೂಲಕ ಖರೀದಿಸಬಹುದು. ಇದು ಅನೇಕರಿಗೆ ನೆಮ್ಮದಿ ನೀಡುವ ವಿಚಾರವಂತೂ ಹೌದು. ಗೂಗಲ್ ಪ್ಲೇ ಸ್ಟೋರ್ ನಲ್ಲಿ ನೆಟ್ ಬ್ಯಾಂಕಿಂಗ್ ಮೂಲಕ ಖರೀದಿಸುವುದು ಹೇಗೆಂದು ಈ ಲೇಖನದಲ್ಲಿ ವಿವರಿಸಲಾಗಿದೆ.

ಭಾರತದಲ್ಲಿ ನೆಟ್ ಬ್ಯಾಂಕಿಂಗ್ ಉಪಯೋಗಿಸಿ ಗೂಗಲ್ ಪ್ಲೇ ಸ್ಟೋರ್ ನಿಂದ ತಂತ್ರಾಂಶ

ಹಂತ 1: ನೀವು ಖರೀದಿಸಬೇಕೆಂದಿರುವ ಆ್ಯಪ್ ಅನ್ನು ಆಯ್ಕೆ ಮಾಡಿಕೊಳ್ಳಿ.

ಗೂಗಲ್ ಪ್ಲೇ ಸ್ಟೋರ್ ಅನ್ನು ತೆರೆಯಿರಿ, ನೀವು ಖರೀದಿಸಬೇಕೆಂದಿರುವ ಆ್ಯಪ್ ಅನ್ನು ಆಯ್ಕೆ ಮಾಡಿಕೊಳ್ಳಿ, ಮುಂದುವರೆಯಿರಿ.

ಹಂತ 2: ನೆಟ್ ಬ್ಯಾಂಕಿಂಗ್ ಅನ್ನು ಆಯ್ಕೆ ಮಾಡಿ.

ಈಗ, ನೀವು ನೆಟ್ ಬ್ಯಾಂಕಿಂಗ್ ಅನ್ನು ಆಯ್ಕೆ ಮಾಡಿಕೊಳ್ಳಿ. ಖುಷಿಯ ಸಂಗತಿಯೆಂದರೆ ಹೆಚ್ಚು ಕಡಿಮೆ ಎಲ್ಲಾ ಬ್ಯಾಂಕುಗಳೂ ಈ ಪಟ್ಟಿಯಲ್ಲಿದೆ.

ಹಂತ 3: ಖರೀದಿಯನ್ನು ಪೂರ್ಣಗೊಳಿಸಿ.

ನಿಮ್ಮ ಬ್ಯಾಂಕ್ ಅನ್ನು ಆಯ್ದುಕೊಂಡು, ಹಣವನ್ನು ಪಾವತಿಸಿದರೆ ನಿಮ್ಮ ಆಯ್ಕೆಯ ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Google Play Store has been with us for almost a decade now, however, we Indians haven't enjoyed much when it comes to purchasing items. Read on.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X