ಸ್ಮಾರ್ಟ್‌ಫೋನ್‌ ಬಳಸಿ ಡಯಾಬಿಟೀಸ್‌ ಚೆಕ್‌ ಮಾಡಿಕೊಳ್ಳುವುದು ಹೇಗೆ?

By Suneel
|

ಭಾರತದಲ್ಲಿ ಇತ್ತೀಚೆಗೆ ಮಧುಮೇಹ(ಡಯಾಬಿಟೀಸ್‌)ಕ್ಕೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದ್ರೆ ಈಗ ಸ್ಮಾರ್ಟ್‌ಫೋನ್‌ಗೆ(Smartphone) ಪ್ರತಿಯೊಬ್ಬರು ಸಹ ಥ್ಯಾಂಕ್ಸ್ ಹೇಳಲೇಬೇಕು. ಯಾಕಂದ್ರೆ ಕೆಲವು ಸ್ಮಾರ್ಟ್‌ಫೋನ್‌ ಆಪ್‌ಗಳು ರೋಗಿಗಳಿಗೆ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಖರವಾಗಿ ಅಳತೆ ಮಾಡಿ, ಮಧುಮೇಹವನ್ನು ನಿಯಂತ್ರಿಸಿಕೊಳ್ಳಲು ಸಹಾಯಕಾರಿಯಾಗಿವೆ.

ಅಂದಹಾಗೆ ಭಾರತದಲ್ಲಿ ಮಧುಮೇಹದಿಂದ ಮರಣ ಪ್ರಮಾಣ ಹೆಚ್ಚಾಗಲು, ರೋಗವನ್ನು ಬಹುಬೇಗ ಪತ್ತೆಹಚ್ಚಲು ಅಸಮರ್ಥರಾಗಿರುವುದು ಕಾರಣವಾಗಿದೆ.

Read also: 24 ಗಂಟೆಗಳಲ್ಲಿ ನಿಮ್ಮ ವಾಟ್ಸಾಪ್ ಪ್ರೊಫೈಲ್ ಯಾರು ನೋಡಿದ್ದಾರೆ ಚೆಕ್‌ ಮಾಡುವುದು ಹೇಗೆ?

ಅಂದಹಾಗೆ ಇಂದಿನ ದಿನಗಳಲ್ಲಿ ಟೆಕ್ನಾಲಜಿ ಮೇಡ್ ಈಜೀ ಎಂಬಂತೆ, ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ವಿಶಾಲವಾದ ಆಪ್‌ಗಳನ್ನು ಪ್ರತಿದಿನವೂ ಆಡ್‌ ಮಾಡಲಾಗುತ್ತಿದ್ದು, ಅವುಗಳಲ್ಲಿ ಕೆಲವು ಆಪ್‌ಗಳು ದಿನನಿತ್ಯ ರಕ್ತದಲ್ಲಿನ ಸಕ್ಕರೆ ಅಂಶವನ್ನು ಚೆಕ್‌ ಮಾಡಲು ಸಹಾಯಕವಾಗಿವೆ. ಆಪ್‌ಗಳು ಯಾವುವು ಮತ್ತು ಬಳಸುವುದು ಹೇಗೆ ಎಂದು ಕೆಳಗಿನ ಸ್ಲೈಡರ್‌ನಲ್ಲಿ ಓದಿ ತಿಳಿಯಿರಿ.

 Glucose Buddy

Glucose Buddy

Glucose Buddy ಡಯಾಬಿಟೀಸ್‌ ನಿಯಂತ್ರಿಸುವ ಆಪ್‌ ಆಗಿದ್ದು, ಆಂಡ್ರಾಯ್ಡ್ ಮತ್ತು ಐಓಎಸ್‌ ಎರಡಕ್ಕೂ ಲಭ್ಯವಿದೆ. ಡಯಾಬಿಟೀಸ್‌ಗೆ ತುತ್ತಾದ ರೋಗಿಗಳು ತಮ್ಮ ಆರೋಗ್ಯದ ಬಗ್ಗೆ ಡಾಟಾವನ್ನು ಸಂಗ್ರಹಿಸಬಹುದು.

Glucose Buddy ಆಪ್‌ ರೋಗಿಗಳ ಆಹಾರ ಕ್ರಮ, ಸಮಯಕ್ಕೆ ಸರಿಯಾಗಿ ಔಷಧ, ರಕ್ತದ ಒತ್ತಡ ಮತ್ತು ತೂಕದ ಬಗ್ಗೆ ಕಾಳಜಿ ವಹಿಸುತ್ತದೆ. ಯಾವುದೇ ಸಮಸ್ಯೆ ಇದ್ದಲ್ಲಿ ಆಪ್ ಪ್ರಾಥಮಿಕ ಅಪ್‌ಡೇಟ್‌ ಅನ್ನು ನೀಡುತ್ತದೆ.

MyNetDiary

MyNetDiary

MyNetDiary ಆಪ್‌ ಆಂಡ್ರಾಯ್ಡ್ ಮತ್ತು ಐಓಎಸ್‌ಗಳಿಗೆ ಮತ್ತು ವಿಂಡೋಸ್‌ ಡಿವೈಸ್‌ಗಳಿಗೆ ಲಭ್ಯವಿದೆ. ಆನ್‌ ಗೋಯಿಂಗ್‌ ಟ್ರ್ಯಾಕ್‌ ಮಾಡುವ ಫೀಚರ್‌ಗಳನ್ನು ಹೊಂದಿದೆ. ರೆಸ್ಟೋರೆಂಟ್‌ಗಳಿಗೆ ಊಟಕ್ಕೆ ಹೋದಲ್ಲಿ ಮಧುಮೇಹಿಗಳು ತಮ್ಮ ಆಹಾರದ ಪ್ಲಾನ್ ಅನ್ನು ಈ ಆಪ್‌ನಿಂದ ತಿಳಿಯಬಹುದು.

MyNetDiary ಆಪ್‌ ಆಫ್‌ಲೈನ್‌ ಮತ್ತು ಆನ್‌ಲೈನ್‌ಗಳಲ್ಲೂ ವರ್ಕ್‌ ಆಗುತ್ತದೆ. ಮಾಹಿತಿ, ವರದಿಗಳು, ವಿಶ್ಲೇಷಣೆ, ಮತ್ತು ಆಹಾರ ಯೋಜನೆ ಮಾಹಿತಿಗಳನ್ನು ಬ್ಯಾಕಪ್‌ ಮಾಡುತ್ತದೆ.

ಡಯಾಬಿಟೀಸ್ ಟ್ರ್ಯಾಕರ್

ಡಯಾಬಿಟೀಸ್ ಟ್ರ್ಯಾಕರ್

'ಡಯಾಬಿಟೀಸ್ ಟ್ರ್ಯಾಕರ್' ಆಪ್‌ನಿಂದ ಮಧುಮೇಹಿಗಳು ಸುಲಭವಾಗಿ ಹಲವು ವರದಿಗಳನ್ನು ಪಡೆಯಬಹುದು. ರಕ್ತದಲ್ಲಿನ ಸಕ್ಕರೆ ಅಂಶದ ಮಟ್ಟ, ಇನ್ಸುಲಿನ್ ಸೇವನೆ, ಮತ್ತು ಇತರ ಪ್ರಮುಖ ಅಂಶಗಳ ಬಗ್ಗೆ ಟ್ರ್ಯಾಕ್‌ ಮಾಡಬಹುದು.

ಡಯಾಬಿಟೀಸ್‌ ಪೈಲಟ್ ಪ್ರೊ

ಡಯಾಬಿಟೀಸ್‌ ಪೈಲಟ್ ಪ್ರೊ

'ಡಯಾಬಿಟೀಸ್‌ ಪೈಲಟ್ ಪ್ರೊ' ಆಪ್‌ನಿಂದ ಅತ್ಯಾಧುನಿಕವಾಗಿ ಡಯಾಬಿಟೀಸ್‌ ಮಟ್ಟವನ್ನು ನಿರ್ವಹಣೆ ಮಾಡಬಹುದು. ಈ ಆಪ್‌ ಹಲವಾರು ಕಸ್ಟಮೈಜ್ ವರದಿಗಳನ್ನು ನೀಡುತ್ತದೆ.

ಆಪ್‌ ನಿರಂತರವಾಗಿ ರೋಗಿಯ ಆಹಾರ ಕ್ರಮವನ್ನು ಅಪ್‌ಡೇಟ್‌ ಮಾಡುವ ಸಾಮಾರ್ಥ್ಯ ಹೊಂದಿದೆ. ಕಾರ್ಬೋಹೈಡ್ರೇಟ್ಗಳು, ಕ್ಯಾಲೊರಿ, ಕೊಬ್ಬು, ಪ್ರೋಟೀನ್, ಫೈಬರ್, ಸೋಡಿಯಂ, ಕೊಲೆಸ್ಟರಾಲ್ ಮತ್ತು ಇತರ ಪೋಷಕಾಂಶಗಳನ್ನು ಟ್ರ್ಯಾಕ್‌ ಮಾಡುತ್ತದೆ.

ಮೈಸುಗರ್ ಲಾಗ್‌ಬುಕ್‌

ಮೈಸುಗರ್ ಲಾಗ್‌ಬುಕ್‌

'ಮೈಸುಗರ್ ಲಾಗ್‌ಬುಕ್‌ ' ಆಪ್‌ ಡಯಾಬಿಟೀಸ್‌ ಒಡನಾಡಿ ಆಪ್‌ ಎಂದೇ ಪ್ರಖ್ಯಾತವಾಗಿದೆ. ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ಇತರೆ ಹಲವು ಹವ್ಯಾಸಗಳನ್ನು ಟ್ರ್ಯಾಕ್‌ ಮಾಡುತ್ತದೆ. ರೋಗಿಗಳು ದಿನನಿತ್ಯ ತಮ್ಮ ಡಯಾಬಿಟೀಸ್‌ ಮಟ್ಟವನ್ನು ಚೆಕ್‌ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

Best Mobiles in India

Read more about:
English summary
How to Use a Smartphone as a Diabetes Checker. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X