'ಗೂಗಲ್ ಮ್ಯಾಪ್‌'ನ ಈ ಫೀಚರ್ಸ್‌ಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು!

|

ಗೂಗಲ್ ಮ್ಯಾಪ್‌ ಒಂದಿದ್ದರೇ ಸಾಕು ಪ್ರಪಂಚದ ಯಾವುದೇ ಸ್ಥಳಕ್ಕೆ ಹೋಗಿ ಬರಬಹುದು ಎನ್ನುವುದನ್ನು ಮಾತುಗಳನ್ನು ಸಾಮಾನ್ಯವಾಗಿ ಕೇಳಿದ್ದೆವೆ. ಏಕೆಂದರೆ ಪ್ರಸ್ತುತ ಗೂಗಲ್ ಮ್ಯಾಪ್ ಪ್ರತಿಯೊಬ್ಬರಿಗೂ ಉತ್ತಮ ಮಾರ್ಗದರ್ಶಿಯಂತೆ ಇದ್ದು, ಬಳಕೆದಾರರಿಗೆ ಅತೀ ಅಗತ್ಯ ಮತ್ತು ಉಪಯುಕ್ತ ಸೇವೆ ಎನಿಸಿಕೊಂಡಿದೆ. ಗೂಗಲ್ ಮ್ಯಾಪ್‌ ಕೇವಲ ದಾರಿ ತೋರಿಸುವ ಆಯ್ಕೆಯನ್ನು ಹೊಂದಿಲ್ಲ, ಬದಲಿಗೆ ಹಲವು ಅಸಾಧಾರಣ ಫೀಚರ್ಸ್‌ಗಳನ್ನು ಒಳಗೊಂಡಿದೆ.

'ಗೂಗಲ್ ಮ್ಯಾಪ್‌'ನ ಈ ಫೀಚರ್ಸ್‌ಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು!

ಹೌದು, ಗೂಗಲ್ ಮ್ಯಾಪ್ ಬಹುಉಪಯೋಗಿ ಆಗಿದ್ದು, ದಾರಿ ತೋರಿಸುವ ಫೀಚರ್‌ನೊಂದಿಗೆ ಮತ್ತಷ್ಟು ವಿಶೇಷ ಫೀಚರ್ಸ್‌ಗಳನ್ನು ಸಹ ಒಳಗೊಂಡಿದೆ. ಆ ಫೀಚರ್ಸ್‌ಗಳು ಬಳಕೆದಾರರಿಗೆ ಹೆಚ್ಚಿನ ಸೇವೆಗಳನ್ನು ಒದಗಿಸಲಿವೆ. ಅವುಗಳಲ್ಲಿ ಎಲ್ಲವೂ ಲೊಕೇಶನ್ ಆಧಾರಿತ ಸೇವೆಗಳಾಗಿವೆ. ಹಾಗಾದರೇ ಗೂಗಲ್ ಮ್ಯಾಪ್ ಒಳಗೊಂಡಿರುವ ಮಹತ್ತರ ಫೀಚರ್ಸ್‌ಗಳ ಕುರಿತಾಗಿ ತಿಳಿಯಲು ಮುಂದೆ ಓದಿರಿ.

ಓದಿರಿ : 'ಒನ್‌ಪ್ಲಸ್‌ 7 ಪ್ರೊ' ಖರೀದಿಸ ಬೇಕೇ ಅಥವಾ ಬೇಡವೇ ನೀವೇ ನಿರ್ಧರಿಸಿ!ಓದಿರಿ : 'ಒನ್‌ಪ್ಲಸ್‌ 7 ಪ್ರೊ' ಖರೀದಿಸ ಬೇಕೇ ಅಥವಾ ಬೇಡವೇ ನೀವೇ ನಿರ್ಧರಿಸಿ!

ಜರ್ನಿಯಲ್ಲಿ ಸ್ಟಾಪ್‌ ಪಾಯಿಂಟ್

ಜರ್ನಿಯಲ್ಲಿ ಸ್ಟಾಪ್‌ ಪಾಯಿಂಟ್

ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣ ಮಾಡಬೇಕಾದರೇ ಮಧ್ಯದಲ್ಲಿ ಅನೇಕ ಕಾರಣಗಳಿಗಾಗಿ ವಾಹನ ನಿಲ್ಲಿಸುತ್ತವೆ. ಹೋಟೆಲ್, ಪೆಟ್ರೊಲ್, ಗ್ಯಾಸ್, ಇಲ್ಲವೇ ಸ್ನೇಹಿತರನ್ನು ಪಿಕ್‌ಅಪ್‌ ಮಾಡಿಕೊಳ್ಳವ ಸಲುವಾಗಿ ಬ್ರೇಕ್‌ ತೆಗೆದುಕೊಳ್ಳುತ್ತವೆ. ಅದನ್ನು ಟ್ರಿಪ್‌ ರೂಟ್‌ನಲ್ಲಿ ಸೇರಿಸಬಹುದಾದ ಆಯ್ಕೆ ಇದೆ. ಎಸ್ಟಿಮೇಟೆಡ್ ಟೈಮ್‌ ಅರೈವಲ್‌ ಡಿಸ್‌ಪ್ಲೇ ಟ್ಯಾಪ್‌ ಮಾಡಿ ಸರ್ಚ್ ಅಲಾಂಗ್ ರೂಟ್‌ ಆಯ್ಕೆ ಸೆಲೆಕ್ಟ್‌ ಮಾಡಿ ನಿಮ್ಮ ನಿಲುಗಡೆ ಸೇರಿಸಬಹುದು.

ಕ್ಯಾಬ್‌ ಬುಕ್ಕ್

ಕ್ಯಾಬ್‌ ಬುಕ್ಕ್

ಒಂದು ಸ್ಥಳದಿಂದ ಮತ್ತೊಂದು ನಿಗದಿತ ಸ್ಥಳದ ಡಿಸ್ಟ್‌ನ್ಸ್‌ ಎಸ್ಟಿಮೇಟ್‌ ಮಾಡಿದಾಗ ಟ್ರೈನ್‌, ಬಸ್‌, ವಾಕ್, ಬೈಕ್ ಪ್ರಯಾಣದ ಆಯ್ಕೆಗಳು ಕಾಣಿಸುತ್ತವೆ. ಕೊನೆಯಲ್ಲಿ ಮನುಷ್ಯನ ಐಕೋನ್ ಆಯ್ಕೆ ಕಾಣಿಸುತ್ತದೆ ಅದು ಕ್ಯಾಬ್‌ ಬುಕ್ಕ್‌ ಮಾಡುವ ಆಯ್ಕೆ ಆಗಿದೆ. ಗೂಗಲ್ ಮ್ಯಾಪ್‌ನಿಂದ ನೇರವಾಗಿ ಉಬರ್ ಅಥವಾ ಓಲಾ ಕ್ಯಾಬ್ ಆಪ್‌ ತೆರೆಯಬಹುದು.

ಲೊಕೇಶನ್ ಶೇರ್‌

ಲೊಕೇಶನ್ ಶೇರ್‌

ನಿಗದಿತ ಸ್ಥಳ ತಲುವಲು ಇನ್ನು ಎಷ್ಟು ಸಮಯ ಆಗುತ್ತದೆ ಎಂಬುದನ್ನು ಮನೆಯವರಿಗೆ ಅಥವಾ ಗೆಳೆಯರಿಗೆ ತಿಳಿಸಲು ಆ ಆಯ್ಕೆ ನೆರವಾಗಿದೆ. ಅದಕ್ಕಾಗಿ ಶೇರ್‌ ಟ್ರಿಪ್ ಪ್ರೊಗ್ರೆಸ್‌ ಆಯ್ಕೆ ಇದ್ದು, ಈ ಮೂಲಕ ನಿಗದಿತ ಸ್ಥಳ ತಲುಪಲು ಎಷ್ಟು ಸಮಯ ಆಗುತ್ತದೆ ಎನ್ನುವ ಮಾಹಿತಿಯನ್ನು ಇಮೇಲ್, ಮೆಸೆಜ್ ಗಳ ಮೂಲಕ ಶೇರ್‌ ಮಾಡಬಹುದು.

ಹೊಟೇಲ್ ಮಾಹಿತಿ

ಹೊಟೇಲ್ ಮಾಹಿತಿ

ನಿಮ್ಮ ನೆಚ್ಚಿನ ಹೊಟೇಲ್‌ ಹೋಗುವ ಪ್ಲ್ಯಾನ್‌ ಇದ್ದಾಗ ಆ ಹೊಟೇಲ್‌ ರಶ್‌ ಇದೆಯೇ ಅಥವಾ ಯಾವ ಸಮಯದಲ್ಲಿ ಖಾಲಿ ಇರಲಿದೆ ಎಂಬು ಮಾಹಿತಿಯನ್ನು ಗೂಗಲ್ ಮ್ಯಾಪ್‌ನಲ್ಲಿಯೇ ತಿಳಿಯಬಹುದಾಗಿದೆ. ಹೊಟೇಲ್ ಹೆಸರನ್ನು ಸರ್ಚ್‌ ಮಾಡಿ ಆ ಹೊಟೇಲ್‌ನ ಅಗತ್ಯ ಮಾಹಿತಿಯನ್ನು ಪಡೆಯಬಹುದಾಗಿದೆ.

ಓದಿರಿ : ರೆಡ್ಮಿ ನೋಟ್‌ 7ಎಸ್‌ ಲಾಂಚ್!..48ಎಂಪಿ ಕ್ಯಾಮೆರಾ ಫೀಚರ್ ಸ್ಪೆಷಲ್!ಓದಿರಿ : ರೆಡ್ಮಿ ನೋಟ್‌ 7ಎಸ್‌ ಲಾಂಚ್!..48ಎಂಪಿ ಕ್ಯಾಮೆರಾ ಫೀಚರ್ ಸ್ಪೆಷಲ್!

ಡ್ರಾಪ್‌ಡ್ ಪಿನ್

ಡ್ರಾಪ್‌ಡ್ ಪಿನ್

ಕೇಲವೊಮ್ಮೆ ಗದ್ದಲದ ಸ್ಥಳಗಳಲ್ಲಿ ಅಕ್ಕಪಕ್ಕದಲ್ಲಿಯೇ ಇದ್ದರೂ ಎಲ್ಲಿದ್ದಿವಿ ಎನ್ನುವುದನ್ನು ನಿಖರವಾಗಿ ತಿಳಿಸಲು ಆಗುವುದಿಲ್ಲ. ಅಂಥ ಸಮಯದಲ್ಲಿ ಗೂಗಲ್ ಮ್ಯಾಪ್‌ನ ಡ್ರಾಪ್‌ಡ್ ಪಿನ್‌ ಪೀಚರ್ಸ್‌ ಬಳಸಿ ನಿಖರವಾಗಿ ಎಲ್ಲಿದಿವಿ ಎನ್ನುವುದನ್ನು ಪಿನ್‌ ಮಾಡಬಹುದು. ಮ್ಯಾಪ್‌ನಲ್ಲಿ ಪ್ರೆಸ್‌ ಮಾಡಿ ಹಿಡಿಯಬೇಕು ಸ್ಥಳ ಪಿನ್‌ ಆಗುತ್ತದೆ ನಂತರ ಲೆಬಲ್ ಮಾಡಿ ಶೇರ್‌ ಮಾಡಬಹುದು.

ಆಫ್‌ಲೈನ್ ಮೋಡ್‌

ಆಫ್‌ಲೈನ್ ಮೋಡ್‌

ಜರ್ನಿ ಮಾಡಬೇಕಾದರೇ ಎಷ್ಟೋ ಸಲ ನೆಟವರ್ಕ್‌ ಕೈ ಕೊಡುತ್ತದೆ, ಇಲ್ಲವೇ ಕೇಲವೊಂದು ರಿಮೋಟ್‌ ಸ್ಥಳಗಳಲ್ಲಿ ಸರಿಯಾಗಿ ನೆಟ್‌ವರ್ಕ್‌ ಇರುವುದಿಲ್ಲ. ಆಗ ಆಫ್‌ಲೈನ್‌ ಮೋಡ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಮೆನು ಆಯ್ಕೆಯಲ್ಲಿ ಆಫ್‌ಲೈನ್‌ ಮ್ಯಾಪ್‌ ಆಯ್ಕೆಯನ್ನು ಸೆಲೆಕ್ಟ್‌ ಮಾಡಿ ನೆಟ್‌ವರ್ಕ್‌ ಇಲ್ಲದೇಯೂ ಮ್ಯಾಪ್ ಬಳಕೆಮಾಡಬಹುದು.

ಮಾರ್ಗಮಧ್ಯ ಲಭ್ಯತೆಗಳು

ಮಾರ್ಗಮಧ್ಯ ಲಭ್ಯತೆಗಳು

ಪ್ರಯಾಣಿಸುವಾಗ ಮಾರ್ಗಮಧ್ಯದಲ್ಲಿ ಲಭ್ಯವಿರುವ ಹೊಟೇಲ್, ಪೆಟ್ರೊಲ್ ಬಂಕ್, ಆಸ್ಪತ್ರೆ, ಪೋಲಿಸ್‌ ಸ್ಟೆಷನ್, ಮಾರುಕಟ್ಟೆ, ಎಟಿಎಮ್‌ ಸೇರಿದಂತೆ ಅಗತ್ಯವಿರುವ ಪ್ರತಿಯೊಂದರ ಮಾಹಿತಿಗಳು ಸಹ ಗೂಗಲ್‌ ಮ್ಯಾಪ್‌ನಲ್ಲಿ ಕಾಣಿಸಿಕೊಳ್ಳಲಿವೆ. ಈ ಆಯ್ಕೆಯು ಪ್ರಯಾಣಿಕರಿಗೆ ಉಪಯುಕ್ತ ಎನಿಸಿವೆ.

Best Mobiles in India

English summary
incredibly useful Google Maps features everyone should know about.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X