ನಿಮ್ಮ ಫೋನ್-ಆಪ್ ಸುರಕ್ಷತೆಗೆ ಗೂಗಲ್ ಪ್ಲೇ ಪ್ರೋಟೆಕ್ಷನ್: ಏನೀದು..?
ಡೇಟಾ ಮಾಲ್ವೇರ್ ಮತ್ತು ಆಡ್ ವೇರ್ ದಾಳಿಗೆ ತುತ್ತಾಗಿತ್ತು. ಈ ಹಿನ್ನಲೆಯಲ್ಲಿ ಗೂಗಲ್ ಹೊಸದೊಂದು ಕಾರ್ಯಕ್ಕೆ ಮಾಡಿದೆ, ಇದು ನಿಮ್ಮ ಸ್ಮಾರ್ಟ್‌ಫೋನ್ ಸೇರಿದಂತೆ ಆಪ್ ಗಳನ್ನು ರಕ್ಷಿಸುವ ಕಾರ್ಯವನ್ನು ಮಾಡಲಿದೆ.
ಈ ಹಿಂದೆ ಕೆಲವು ದಿನಗಳ ಹಿಂದೆ ಗೂಗಲ್ ಪ್ಲೇ ಸ್ಟೋರಿನಲ್ಲಿರುವ ಆಪ್ ಗಳು ಡೇಟಾ ಮಾಲ್ವೇರ್ ಮತ್ತು ಆಡ್ ವೇರ್ ದಾಳಿಗೆ ತುತ್ತಾಗಿತ್ತು. ಈ ಹಿನ್ನಲೆಯಲ್ಲಿ ಗೂಗಲ್ ಹೊಸದೊಂದು ಕಾರ್ಯಕ್ಕೆ ಮಾಡಿದೆ, ಇದು ನಿಮ್ಮ ಸ್ಮಾರ್ಟ್‌ಫೋನ್ ಸೇರಿದಂತೆ ಆಪ್ ಗಳನ್ನು ರಕ್ಷಿಸುವ ಕಾರ್ಯವನ್ನು ಮಾಡಲಿದೆ.

ಓದಿರಿ: ಸೆಪ್ಟೆಂಬರ್ ನಲ್ಲಿ ಐಫೋನ್ 8 ಲಾಂಚ್: ಇಲ್ಲಿದೇ ಅಸಲಿ ಫೋಟೋ

ಗೂಗಲ್ ಪ್ಲೇ ಪ್ರೋಟೆಕ್ಷನ್ ಎಂಬ ಹೊಸದೊಂದು ಸೇವೆಯನ್ನು ನೀಡಲು ಮುಂದಾಗಿದೆ. ಈಗಾಗಲೇ ಪ್ಲೇ ಪ್ರೋಟೆಕ್ಷನ್ ಅನ್ನು ಗೂಗಲ್ I/O ವಿವೆಂಟ್ ನಲ್ಲಿ ಲಾಂಚ್ ಮಾಡಲಾಗಿದೆ. ಸದ್ಯ ಪ್ಲೇ ಪ್ರೋಟೆಕ್ಷನ್ ಬಳಕೆ ಮಾಡಿಕೊಳ್ಳಲು ಮುಕ್ತವಾಗಿದೆ. ಬನ್ನಿ ಈ ಬಗ್ಗೆ ತಿಳಿದುಕೊಳ್ಳುವ.

ಮಾಲ್ವೇರ್ ಸ್ಕ್ಯಾನಿಂಗ್:
ಇದು ನಿಮ್ಮ ಫೋನಿನಲ್ಲಿರುವ ಮಾಲ್ವೇರ್ ಸ್ಕ್ಯಾನಿಂಗ್ ಮಾಡಲಿದ್ದು, ಇದು ವೈರಸ್ ದಾಳಿಯನ್ನು ತಡೆಯಲಿದೆ. ಸದ್ಯ ಮಾರುಕಟ್ಟೆಯಲ್ಲಿ ಹಲವು ಆಪ್ ಗಳು ಲಭ್ಯವಿದ್ದು, ಇದೆಲ್ಲದಕ್ಕಿಂತ ಗೂಗಲ್ ಪ್ರೋಟೆಕ್ಷನ್ ಆಪ್ ಹೆಚ್ಚು ಸೆಕ್ಯೂರ್ ಆಗಿದೆ.

ಮಿಷಿನ್ ಲರ್ನಿಂಗ್:
ಇದು ಗೂಗಲ್ ಮಿಷಿನ್ ಲರ್ನಿಂಗ್ ಪ್ಲಾಟ್ ಫಾರ್ಮ್ ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಪ್‌ಗಳನ್ನು ಮಾನಿಟರ್ ಮಾಡಲಿದೆ. ಯಾವುದೇ ಆಪ್ ಗಳು ಅನುಮಾನಸ್ಪದವಾಗಿ ಕಾರ್ಯನಿರ್ವಹಿಸಿದರೆ ಅದನ್ನು ತೆಗೆದುಹಾಕುವ ಕಾರ್ಯವನ್ನು ಮಾಡಲಿದೆ.

ಕ್ರೋಮ್ ಬ್ರೌಸಿಂಗ್ ಕೂಡ ಸೇಫ್:
ಈ ಪ್ಲೇ ಪ್ರೋಟೆಕ್ಷನ್ ನಿಂದ ನಿಮ್ಮ ಕ್ರೋಮ್ ಬ್ರೌಸಿಂಗ್ ಕೂಡ ಸೇಫ್ ಆಗಿರಲಿದೆ. ಇದರಿಂದಗಿ ನಿಮ್ಮ ಬ್ರೌಸರ್ ನಲ್ಲಿ ಅಪಾಯ ತರುವಂತಹ ಯಾವುದೇ ವೆಬ್ ಗಳನ್ನು ತೆರೆಯಲು ಬಿಡುವುದಿಲ್ಲ ಎನ್ನಲಾಗಿದೆ.

ಡಿವೈಸ್, ಡೇಟಾ ಮತ್ತು ಆಪ್ ಗಳು ಸೇಫ್:
ಗೂಗಲ್ ಪ್ಲೇ ಪ್ರೋಟೆಕ್ಷನ್ ನಿಂದ ನಿಮ್ಮ ಫೋನ್, ಡೇಟಾ ಮತ್ತು ಆಪ್ ಗಳು ಸೇಪ್ ಆಗಿರಲಿದೆ. ಇದು ನಿಮ್ಮ ಮೊಬೈಲ್ ಸೆಕ್ಯೂರಿಟಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಿದೆ.

ನಿಮ್ಮ ಪೋನ್ ಹುಡುಕಲು ಸಹಾಯಕಾರಿ:
ನೀವು ನಿಮ್ಮ ಫೋನ್ ಅನ್ನು ಎಲ್ಲಾದರು ಮೆರೆತು ಬಂದಾಗ ಅದನ್ನು ಹುಡುಕುವ ಸಲುವಾಗಿ ಫೈಂಡ್ ಮೈ ಡಿಸೈಸ್ ಎನ್ನುವ ಆಯ್ಕೆಯನ್ನು ನೀಡಲಾಗಿದೆ. ಇದರಿಂದ ನಿಮ್ಮ ಪೋನ್ ಹುಡುಕಲು ಸಹಾಯಕಾರಿಯಾಗಿದೆ.

50 ಬಿಲಿಯನ್ ಆಪ್ ಗಳು ಸ್ಕ್ಯಾನ್:
ಪ್ಲೇ ಪ್ರೋಟೆಕ್ಷನ್ ನಲ್ಲಿ 50 ಬಿಲಿಯನ್ ಆಪ್ ಗಳನ್ನು ಪ್ರತಿ ನಿತ್ಯ ಸ್ಕ್ಯಾನ್ ಮಾಡುತ್ತದೆ. ಇದರಿಂದ ನಿಮ್ಮ ಪ್ಲೇ ಸ್ಟೋರಿನಲ್ಲಿರುವ ಆಪ್ ಗಳು ಹೆಚ್ಚು ಸೆಕ್ಯೂರ್ ಆಗಿರುತ್ತದೆ.


Click it and Unblock the Notifications








