ರಿಲಯನ್ಸ್ ಜಿಯೋದಿಂದ ಮತ್ತೊಂದು ಆಫರ್...!

Written By:

ರಿಲಯನ್ಸ್ ಮಾಲೀಕತ್ವದ ಜಿಯೋ ಮಾರುಕಟ್ಟೆಗೆ ಬಂದ ಮೇಲೆ ತನ್ನದೇ ಆದ ಹಲವು ಆಪ್‌ಗಳನ್ನು ಬಿಡುಗಡೆ ಮಾಡಿತ್ತು. ಕಾಲ್ ಮಾಡುವ ಸಲುವಾಗಿ ಜಿಯೋ 4G ವಾಯ್ಸ್ ಎಂಬ ಆಪ್, ಸಿನಿಮಾ ವೀಕ್ಷಣೆಗಾಗಿ ಜಿಯೋ ಸಿನಿಮಾ ಎಂಬ ಆಪ್‌ಅನ್ನು ಪರಿಚಯಿಸಿತ್ತು. ಇದರೊಂದಿಗೆ ಹಲವು ಆಪ್‌ಗಳನ್ನು ತನ್ನ ಬಳಕೆದಾರರಿಗೆ ಮುಕ್ತಗೊಳಿಸಿತ್ತು, ಈಗ ಮತ್ತೊಂದು ಆಫರ್‌ಅನ್ನು ತನ್ನ ಗ್ರಾಹಕರಿಗೆ ನೀಡಲು ಮುಂದಾಗಿದೆ.

ಓದಿರಿ: ವಿಶ್ವದ ಮೊದಲ ಗೂಗಲ್ ಸ್ಟೇಷನ್ ವೈ-ಫೈ ಹಾಟ್‌ಸ್ಪಾಟ್ ಪುಣೆಯಲ್ಲಿ.!

ತನ್ನ ಬಳಕೆದಾರಿಗೆ ಜಿಯೋ ಸಿನಿಮಾ ಎಂಬ ಆಪ್ ಬಿಡುಗಡೆ ಮಾಡಿ, ಬಾಲಿವುಡ್, ಹಾಲಿವುಡ್ ಸಿನಿಮಾಗಳು ಸೇರಿದಂತೆ ತಮ್ಮ ನೆಚ್ಚಿನ ಸಿನಿಮಾಗಳನ್ನು ನೋಡಲು ಅವಕಾಶ ಮಾಡಿಕೊಟ್ಟಿದ್ದ ರಿಲಯನ್ಸ್ ಮಾಲೀಕತ್ವದ ಜಿಯೋ ಈಗ ಸಿನಿಮಾಗಳನ್ನು ನೋಡುವುದಷ್ಟೆ ಅಲ್ಲದೇ ಸಿನಿಮಾಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶ ಹಾಗೂ ಆಫ್‌ಲೈನ್ ಮೊಡಿಗೆ ಹಾಕಿ ನಂತರ ಬೇಕಾದರು ಈ ಸಿನಿಮಾವನ್ನು ನೋಡುವ ಅವಕಾಶವನ್ನು ಮಾಡಿಕೊಡಲು ಮುಂದಾಗಿದೆ.

ರಿಲಯನ್ಸ್ ಜಿಯೋದಿಂದ ಮತ್ತೊಂದು ಆಫರ್...!

ಓದಿರಿ: ವಾಟ್ಸ್ಆಪ್ ಟೂ ಸ್ಟೆಪ್ ವರೀಫಿಕೇಷನ್ ಬಳಕೆಗೆ ಮುಕ್ತ..!

ಇದಕ್ಕಾಗಿ ಬಳಕೆದಾರರು ಜಿಯೋ ಸಿನಿಮಾ ಆಪ್‌ ಅನ್ನು ಆಪ್‌ಡೇಟ್ ಮಾಡಬೇಕಿದ್ದು, ಜಿಯೋ ಸಿನಿಮಾ 1.3.3 ವರ್ಷನ್‌ನಲ್ಲಿ ಡೌನ್‌ಲೋಡ್ ಆಯ್ಕೆಯೂ ಲಭ್ಯವಿದೆ. ಹೊಸ ಆಪ್‌ಡೇಟ್‌ನಲ್ಲಿ ಸ್ಮಾರ್ಟ್‌ ಡೌನ್‌ಲೋಡ್ ಆಯ್ಕೆಯನ್ನು ನೀಡಲಾಗಿದೆ. ಇದರ ಮೂಲಕ ಡೌನ್‌ಲೋಡ್‌ ಅನ್ನು ಶಡ್ಯೂಲ್ಡ್ ಮಾಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡೌನ್‌ಲೋಡ್‌ ಶಡ್ಯೂಲ್ಡ್ ಮಾಡುವ ಅವಕಾಶ

ಡೌನ್‌ಲೋಡ್‌ ಶಡ್ಯೂಲ್ಡ್ ಮಾಡುವ ಅವಕಾಶ

ಹ್ಯಾಪಿ ನ್ಯೂಯಿರ್ ಆಫರ್‌ನಲ್ಲಿ ಉಚಿತ ಡೇಟಾ ಇರುವ ಸಂದರ್ಭದಲ್ಲೇ ಡೌನ್‌ಲೋಡ್‌ ಆಗುವಂತೆ ಶಡ್ಯೂಲ್ಡ್ ಮಾಡುವ ಅವಕಾಶವನ್ನು ನೀಡಲಾಗಿದೆ. ಇದರಲ್ಲಿ ಹ್ಯಾಪಿ ಅವರ್ ಅನ್ನುವ ಆಯ್ಕೆಯೊಂದನ್ನು ನೀಡಲಾಗಿದ್ದು, ಪ್ರತಿ ದಿನ ಬೆಳಿಗ್ಗೆ 2 ಗಂಟೆಯಿಂದ 5 ಗಂಟೆಯ ವರೆಗೆ ಆನ್‌ಲಿಮಿಟೆಡ್ ಡೌನ್‌ಲೋಡ್ ಮಾಡಬಹುದಾಗಿದ್ದು, ಈ ಸಮಯದಲ್ಲಿ ಡೌನ್‌ಲೋಡ್ ಆಗುವಂತೆ ಮಾಡಬಹುದಾಗಿದೆ.

ಹ್ಯಾಪಿ ಅವರ್ ನಲ್ಲಿ ಡೌನ್‌ಲೋಡ್ ಮಾಡಿ

ಹ್ಯಾಪಿ ಅವರ್ ನಲ್ಲಿ ಡೌನ್‌ಲೋಡ್ ಮಾಡಿ

ಹ್ಯಾಪಿ ಅವರ್ ನಲ್ಲಿ ಡೌನ್‌ಲೋಡ್ ಮಾಡಿದ ಸಿನಿಮಾಗಳು ಆಪ್‌ನಲ್ಲಿ ಮೈ ಡೌನ್‌ಲೋಡ್ ಅನ್ನುವಲ್ಲಿ ಸೇವ್ ಆಗಲಿದ್ದು, ನೀವು ಫ್ರೀ ಇದ್ದ ಸಂದರ್ಭದಲ್ಲಿ ಸಿನಿಮಾವನ್ನು ನೋಡಬಹುದಾಗಿದೆ. ಅಲ್ಲದೇ ನೀವು ಬಯಸುವ ಗುಣಮಟ್ಟದಲ್ಲಿ ಸಿನಿಮಾ ಡೌನ್‌ಲೋಡ್ ಮಾಡುವ ಅವಕಾಶವನ್ನು ಜಿಯೋ ಮಾಡಿಕೊಟ್ಟಿದೆ.

ಎಲ್ಲಾ ಸಿನಿಮಾಗಳು ಆಗಲ್ಲ:

ಎಲ್ಲಾ ಸಿನಿಮಾಗಳು ಆಗಲ್ಲ:

ಆದರೆ ಜಿಯೋ ಸಿನಿಮಾದಲ್ಲಿ ದೊರೆಯುವ ಎಲ್ಲಾ ಸಿನಿಮಾಗಳನ್ನು ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ ಎನ್ನಲಾಗಿದೆ. ಕೇಲವು ಸಿನಿಮಾಗಳು ಮಾತ್ರ ಡೌನ್‌ಲೋಡ್ ಆಯ್ಕೆಯನ್ನು ಹೊಂದಿದ್ದು, ಅವುಗಳನ್ನು ನಿಮ್ಮ ಪೋನಿನಲ್ಲಿ ಸೇವ್ ಮಾಡಿಕೊಳ್ಬಬಹುದಾಗಿದೆ.

4GB ಮಾತ್ರ ಡೌನ್‌ಲೋಡ್ ಗೆ ಅವಕಾಶ

4GB ಮಾತ್ರ ಡೌನ್‌ಲೋಡ್ ಗೆ ಅವಕಾಶ

ಮೈ ಡೌನ್‌ಲೋಡ್ ನಲ್ಲಿ ಕೇಲವ 4GB ಸ್ಟೋರೆಜ್ ಅವಕಾಶವನ್ನು ನೀಡಲಾಗಿದ್ದು, ಅದಕ್ಕಿಂತ ಹೆಚ್ಚಿನ ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ. ಒಮ್ಮೆ ನೋಡಿದ ವಿಡಿಯೋವನ್ನು ಕ್ಲಿಯರ್ ಮಾಡಿದರೆ ಮಾತ್ರ ಮತ್ತೊಂದು ಸಿನಿಮಾವನ್ನು ಡೌನ್‌ಲೋಲ್ ಮಾಡಿ ನೋಡುವ ಅವಕಾಶವನ್ನು ಮಾಡಿಕೊಟ್ಟಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Reliance Jio has updated its JioCinema app that now allows users to save their favorite shows or movies offline to watch later. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot