ವಾಟ್ಸ್ಆಪ್ ಟೂ ಸ್ಟೆಪ್ ವರೀಫಿಕೇಷನ್ ಬಳಕೆಗೆ ಮುಕ್ತ..!

Written By:

ವಾಟ್ಸ್‌ಆಪ್ ಭದ್ರತೆಗೆ ಸಾಕಷ್ಟು ತಲೆ ಕೆಡಿಸಿಕೊಂಡಿದ್ದು, ಫೇಸ್‌ಬುಕ್ ತನ್ನ ಮಾಲೀಕತ್ವದಲ್ಲಿ ವಾಟ್ಸ್‌ಆಪ್ ಗೂಡಲಿಪೀಕರಣವನ್ನು ಮೊದಲ ಭಾರಿಗೆ ಭಾರತದಲ್ಲಿ ಪರಿಚಯ ಮಾಡಿತು. ನಂತರ ಈಗ ವಾಟ್ಸ್ಆಪ್‌ಅನ್ನು ಮತ್ತಷ್ಟು ಭದ್ರಗೊಳಿಸುವ ಸಲುವಾಗಿ ಎರಡು ಹಂತದ ಪರೀಶಿಲನೆಯನ್ನು (ಟೂ ಸ್ಟೆಪ್ ವರೀಫಿಕೇಷನ್) ಪರಿಚಯಿಸಿದ್ದು, ತನ್ನ ಬಳಕೆದಾರಿಗೆ ಮತ್ತಷ್ಟು ಸೌಲಭ್ಯವನ್ನು ನೀಡಲು ಮುಂದಾಗಿದೆ.

ವಾಟ್ಸ್ಆಪ್ ಟೂ ಸ್ಟೆಪ್ ವರೀಫಿಕೇಷನ್ ಬಳಕೆಗೆ ಮುಕ್ತ..!

ಓದಿರಿ: ವಿಶ್ವದ ಮೊದಲ ಗೂಗಲ್ ಸ್ಟೇಷನ್ ವೈ-ಫೈ ಹಾಟ್‌ಸ್ಪಾಟ್ ಪುಣೆಯಲ್ಲಿ.!

ಸುಮಾರು ತಿಂಗಳ ಕಾಲ ಬೀಟಾ ವರ್ಷನ್ ನಲ್ಲಿ ಪರೀಕ್ಷೆಯನ್ನು ನಡೆಸಿದ ವಾಟ್ಸ್‌ಆಪ್ ಸದ್ಯ ಈಗ ತನ್ನ ಎಲ್ಲ ಬಳಕೆದಾರಿಗೆ ಟೂ ಸ್ಟೆಪ್ ವರೀಫಿಕೇಷನ್ ಅನ್ನು ಮುಕ್ತಗೊಳಿಸಿದೆ. ಆಂಡ್ರಾಯ್ಡ್, ಐಎಸ್ಓ ಮತ್ತು ವಿಂಡೋಸ್ ಬಳಕೆದಾರಿಗೂ ಈ ಆಯ್ಕೆ ಮುಕ್ತವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟೂ ಸ್ಟೆಪ್ ವರೀಫಿಕೇಷನ್:

ಟೂ ಸ್ಟೆಪ್ ವರೀಫಿಕೇಷನ್:

ಸ್ಮಾರ್ಟ್‌ಪೋನ್‌ಗಳಲ್ಲಿ ವಾಟ್ಸ್ಆಪ್ ಇನ್‌ಸ್ಟಾಲ್ ಮಾಡಿಕೊಂಡ ನಂತರ ಮೊಬೈಲ್ ನಂಬರ್ ನೀಡಿ ರಿಜಿಸ್ಟ್ರೇಷನ್ ಮಾಡಿಕೊಳ್ಳಲು ಎರಡು ಹಂತದಲ್ಲಿ ಪರೀಶೀಲನೆ ನಡೆಸಬೇಕಾಗುತ್ತದೆ. ಇದಲ್ಲದೇ ಆರು ಅಂಕಿಗಳ ಪಾಸ್‌ವರ್ಡ್‌ವೊಂದನ್ನು ನೀಡಬೇಕಾಗುತ್ತದೆ. ಇದಲ್ಲದೇ ಒಮ್ಮೆ ಈ ಪಾಸ್‌ವರ್ಡ್ ಮರೆತರೆ ಇ-ಮೇಲ್ ವಿಳಾಸಕ್ಕೆ ಪಾಸ್‌ವರ್ಡ್‌ ಬರುವಂತೆ ಮಾಡಿಕೊಳ್ಳಬಹುದಾಗಿದೆ.

ಟೂ ಸ್ಟೆಪ್ ವರೀಫಿಕೇಷನ್ ಬಳಸುವುದು ಹೇಗೆ..?

ಟೂ ಸ್ಟೆಪ್ ವರೀಫಿಕೇಷನ್ ಬಳಸುವುದು ಹೇಗೆ..?

ವಾಟ್ಸ್‌ಆಪ್ ಸ್ಮಾರ್ಟ್‌ಪೋನುಗಳಿಗೆ ಬಂದ ಮೇಲೆ ಚಾಟಿಂಗ್ ನಡೆಸುವವರ ಸಂಖ್ಯೆ ಹೆಚ್ಚಾದ ಹಿನ್ನಲೆಯಲ್ಲಿ ಚಾಂಟಿಗ್ ಅನ್ನು ಅದಷ್ಟು ಭದ್ರಗೊಳಿಸುಲು ಸಾಕಷ್ಟು ಪ್ರಯತ್ನಿಸುತ್ತಿದೆ. ಈ ಹಿನ್ನಲೆಯಲ್ಲಿ ಟೂ ಸ್ಟೆಪ್ ವರೀಫಿಕೇಷನ್ ಅನ್ನು ಪರಿಚಯಿಸಿದೆ. ಇದಕ್ಕಾಗಿ ವಾಟ್ಸ್‌ಆಪ್ ನಲ್ಲಿ ಸೆಟಿಂಗ್ಸ್ ಗೆ ಹೋಗಿ ಅಲ್ಲಿ ಆಕೌಂಟ್‌ನಲ್ಲಿ ಟೂ ಸ್ಟೆಪ್ ವರೀಫಿಕೇಷನ್ ಆಯ್ಕೆಯನ್ನು ಎನೆಬಲ್ ಮಾಡಿಕೊಳ್ಳುವ ಮೂಲಕ ಈ ಸೇವೆಯನ್ನು ಪಡೆಯಬಹುದಾಗಿದೆ.

ಪಾಸ್‌ವರ್ಡ್‌ ಮರೆತರೆ ಏನು ಮಾಡುವುದು..?

ಪಾಸ್‌ವರ್ಡ್‌ ಮರೆತರೆ ಏನು ಮಾಡುವುದು..?

ಟೂ ಸ್ಟೆಪ್ ವರೀಫಿಕೇಷನ್ ನಲ್ಲಿ ಆರು ಅಂಕಿಗಳ ಪಾಸ್‌ವರ್ಡ್‌ವೊಂದನ್ನು ನೀಡಬೇಕಾಗಿದ್ದು, ಪ್ರತಿ ಬಾರಿ ನೀವು ಲಾಗ್ ಇನ್ ಆಗುವ ಸಂದರ್ಭದಲ್ಲಿ ಈ ಪಾಸ್‌ವರ್ಡ್‌ ನೀಡಬೇಕಾಗಿದೆ. ಒಮ್ಮೆ ನೀವು ಈ ಪಾಸ್‌ವರ್ಡ್‌ ಮರೆತರು ಅದನ್ನು ರಿಕವರಿ ಮಾಡಲು ನೀಡಲು ಇ-ಮೇಲ್ ಐಡಿಗೆ ಪಾಸ್‌ವರ್ಡ್‌ ಬರುವಂತೆ ಮಾಡಿಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
WhatsApp has finally announced that it is rolling out the feature to all its users across Android, iPhone, and Windows platforms. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot