Subscribe to Gizbot

ಜಿಯೋ ಫುಟ್ ಬಾಲ್ ಆಫರ್: ರೂ.699ಕ್ಕೆ ಸ್ಮಾರ್ಟ್ ಫೋನ್

Posted By: lekahaka

ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ತನ್ನದೆ ಹವಾ ಎಬ್ಬಿಸಿರುವ ರಿಲಯನ್ಸ್ ಮಾಲೀಕತ್ವದ ಜಿಯೋ, ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ ಎನ್ನಲಾಗಿದೆ. ಫಿಚರ್ ಫೋನ್ ಮತ್ತು ಸ್ಮಾರ್ಟ್ ಫೋನ್ ತಯಾರಿಕೆಯಲ್ಲಿ ಮುಂಚುಣಿಯಲ್ಲಿರುವ ಜಿವಿ ಮೊಬೈಲ್ ತಯಾರಿಕ ಕಂಪನಿಯೊಂದಿಗೆ ಕೈಜೋಡಿಸಿದ್ದು, ಅತೀ ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್ ಗಳನ್ನು ಮಾರಾಟ ಮಾಡಲು ಮುಂದಾಗಿದೆ.

ಜಿಯೋ ಫುಟ್ ಬಾಲ್ ಆಫರ್: ರೂ.699ಕ್ಕೆ ಸ್ಮಾರ್ಟ್ ಫೋನ್

ಜಿವಿ ಫೋನ್ ಕೊಳ್ಳುವವರಿಗೆ ಜಿಯೋ ರೂ.2200 ಕ್ಯಾಷ್ ಬ್ಯಾಕ್ ನೀಡಲಿದ್ದು, ಇದಕ್ಕಾಗಿ ಜಿಯೋ ಫುಟ್ ಬಾಲ್ ಆಫರ್ ಅನ್ನು ಘೋಷಣೆ ಮಾಡಿದೆ. 4G VoLET ಸ್ಮಾರ್ಟ್ ಫೋನ್ ಖರೀದಿ ಮಾಡುವವರಿಗೆ ಜಿಯೋ ಈ ಆಫರ್ ನೀಡುತ್ತಿದೆ. ಅದರಲ್ಲಿಯೂ ಜಿವಿ ಸ್ಮಾರ್ಟ್ ಫೋನ್ ಗಳ ಮೇಲೆ ಅತೀ ಹೆಚ್ಚಿನ ಲಾಭವನ್ನು ಬಳಕೆದಾರರಿಗೆ ನೀಡಲಿದೆ.

Jio Fi ಬಳಸಿ 2G ಮತ್ತು 3G ಗ್ರಾಹಕರು ಕಾಲ್ ಮಾಡುವುದು ಹೇಗೆ?
ಇದು ಸ್ಮಾರ್ಟ್ ಫೋನ್ ಲೋಕದಲ್ಲಿಯೇ ಹೊಸ ಆಚ್ಚರಿಗೆ ಕಾರಣವಾಗಲಿದ್ದು, ಗ್ರಾಹಕರು ರೂ.1000 ಒಳಗೆಯೇ ಉತ್ತಮ ಸ್ಮಾರ್ಟ್ ಫೋನ್ ಅನ್ನು ಖರೀದಿಸಲು ಈ ಪ್ಲಾನ್ ಸಹಾಯ ಮಾಡಲಿದೆ. ಇದರಿಂದಾಗಿ ಸಣ್ಣ ಪೋನ್ ಬಳಕೆ ಮಾಡುತ್ತಿರುವವರು ಸಹ ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್ ಹೊಂದಬಹುದಾಗಿದೆ.
ಜಿಯೋ ಫುಟ್ ಬಾಲ್ ಆಫರ್: ರೂ.699ಕ್ಕೆ ಸ್ಮಾರ್ಟ್ ಫೋನ್

ಈ ಪ್ಲಾನ್ ನಲ್ಲಿ ಜಿವಿ ಸ್ಮಾರ್ಟ್ ಫೋನ್ ರೂ.699ಕ್ಕೆ ದೊರೆಯತ್ತಿದ್ದು, ಮಾರುಕಟ್ಟೆಯಲ್ಲಿ ಅತೀ ಕಡಿಮೆ ಬೆಲೆಗೆ ದೊರೆಯುತ್ತಿರುವ ಸ್ಮಾರ್ಟ್ ಫೋನ್ ಇದಾಗಲಿದೆ. ಇದಲ್ಲದೇ ಜಿವಿ ಬಿಡುಗಡೆ ಮಾಡಿರುವ ಎಲ್ಲಾ ಸ್ಮಾರ್ಟ್ ಫೋನ್ ಗಳ ಮೇಲೆಯೂ ಕ್ಯಾಷ್ ಬ್ಯಾಕ್ ಆಫರ್ ಕಾಣಬಹುದಾಗಿದೆ

ಈ ಕ್ಯಾಷ್ ಬ್ಯಾಕ್ ಆಫರ್ ನಲ್ಲಿ ಬಳಕೆದಾರರಿಗೆ ಒಟ್ಟು 44 ವೋಚರ್ ಗಳು ದೊರೆಯಲಿದ್ದು, ಪ್ರತಿಯೊಂದು ರೂ.50ರದಾಗಲಿದೆ. ಮೈ ಜಿಯೋ ಆಪ್ ಮೂಲಕ ರೀಚಾರ್ಜ್ ಮಾಡಿಕೊಳ್ಳುವ ಸಂದರ್ಭದಲ್ಲಿ ಈ ವೋಚರ್ ಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದು 2022ರ ವರ್ಎ ಚಾಲ್ತಿಯಲ್ಲಿ ಇರಲಿದೆ.

English summary
Jivi Mobiles partners Reliance Jio for Energy E3 . to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot