ಡಿಜಿಟಲ್ ಪೇಮೆಂಟ್ ವ್ಯವಸ್ಥೆಗೆ ಲಗ್ಗೆ ಇಟ್ಟಿತು ಮೈಕ್ರೋಸಾಫ್ಟ್!..ಗೂಗಲ್, ವಾಟ್ಸ್ಆಪ್‌ಗಿಂತ ಭಿನ್ನ!!

ಭಾರತದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯ ಅಗಾದವಾದ ಬೆಳವಣಿಗೆಯನ್ನು ಮನಗಂಡಿರುವ ವಿಶ್ವ ಟೆಕ್ ದೈತ್ಯ ಕಂಪೆನಿಗಳೆಲ್ಲವೂ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ತರಲು ಮುಂದಾಗುತ್ತಿವೆ.

|

ಭಾರತದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯ ಅಗಾದವಾದ ಬೆಳವಣಿಗೆಯನ್ನು ಮನಗಂಡಿರುವ ವಿಶ್ವ ಟೆಕ್ ದೈತ್ಯ ಕಂಪೆನಿಗಳೆಲ್ಲವೂ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ತರಲು ಮುಂದಾಗುತ್ತಿವೆ.ಗೂಗಲ್ (ತೇಜ್) ಮತ್ತು ಫೇಸ್‌ಬುಕ್ (ವಾಟ್ಸ್ಆಪ್) ಕಂಪೆನಿಗಳ ನಂತರ ಇದೀಗ ಮತ್ತೊಂದು ಟೆಕ್ ದೈತ್ಯ ಕಂಪೆನಿ ಡಿಜಿಟಲ್ ಪಾವತಿ ವ್ಯವಸ್ಥೆ ತರುವುದಾಗಿ ತಿಳಿಸಿದೆ.

ಕೇವಲ ಆರು ತಿಂಗಳಿನಲ್ಲಿಯೇ 5 ಕ್ಕೂ ಹೆಚ್ಚು ಬಹುದೊಡ್ಡ ಟೆಕ್ ಕಂಪೆನಿಗಳು ಭಾರತದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆ ತಂದಿದ್ದು, ಇದೀಗ ಸಾಫ್ಟ್‌ವೇರ್ ದಿಗ್ಗಜ ಮೈಕ್ರೋಸಾಫ್ಟ್ ಕೂಡ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುತ್ತಿದೆ. ಗುರುವಾರದಂದು ಈ ಬಗ್ಗೆ ಮಾಹಿತಿ ನೀಡಿರುವ ಮೈಕ್ರೋಸಾಫ್ಟ್ ಶೀಘ್ರವೇ ತನ್ನ ಪಾವತಿ ವ್ಯವಸ್ಥೆ ಆಪ್ ತರುವುದಾಗಿ ಹೇಳಿದೆ.

ಡಿಜಿಟಲ್ ಪೇಮೆಂಟ್ ವ್ಯವಸ್ಥೆಗೆ ಲಗ್ಗೆ ಇಟ್ಟಿತು ಮೈಕ್ರೋಸಾಫ್ಟ್!!

ಮೈಕ್ರೋಸಾಫ್ಟ್ ನೂತನವಾಗಿ ಹೊರತರುತ್ತಿರುವ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಈ ಮೊದಲು ಇದ್ದ "ಮೈಕ್ರೋಸಾಫ್ಟ್ ಕೈಜಾಲಾ"ದಲ್ಲಿಯೇ ತರಲು ಮೈಕ್ರೋಸಾಫ್ಟ್ ಮುಂದಾಗಿದೆ. ವಾಲೆಟ್ ಮತ್ತು ಯುಪಿಐ ಆಧಾರಿತ ಈ ಮೈಕ್ರೋಸಾಫ್ಟ್ ಕೈಜಾಲಾ ಡಿಜಿಟಲ್ ಪೇಮೆಂಟ್ ಇತರೆ ಪೇಮೆಂಟ್ ವ್ಯವಸ್ಥೆಗಳಿಗಿಂತ ಭಿನ್ನವಾಗಿರಲಿದೆ ಎಂದು ಮೈಕ್ರೋಸಾಫ್ಟ್ ತಿಳಿಸಿದೆ.

ಮೈಕ್ರೋಸಾಫ್ಟ್ ಕೈಜಾಲಾದ ಜೊತೆ ಯುಪಿಐ ವ್ಯವಸ್ಥೆ ಆಧಾರಿತ ಪೇಮೆಂಟ್‌ಗೆ ಈಗಾಗಲೇ 86 ಬ್ಯಾಂಕ್‌ಗಳು ಕೈ ಜೋಡಿಸಿವೆ. ಡೆಸ್ಕ್‌ಟಾಪ್ ಮತ್ತು ಮೊಬೈಲ್ ಎರಡರಲ್ಲೂ ಕಾರ್ಯನಿರ್ವಹಿಸುವಂತೆ ಮೈಕ್ರೋಸಾಫ್ಟ್ ಕೈಜಾಲಾ ಸಾಫ್ಟ್‌ವೇರ್‌ ಅಭಿವೃದ್ಧಿವೃದದ್ದಿಯಾಗಿರುವುದರಿಂದ ಬಹಳ ಸುಲಭವಾಗಿ ಡಿಜಿಟಲ್ ಪಾವತಿ ಮಾಡಲು ಸಾಧ್ಯ ಎಂದು ತಿಳಿಸಿದೆ.

ಡಿಜಿಟಲ್ ಪೇಮೆಂಟ್ ವ್ಯವಸ್ಥೆಗೆ ಲಗ್ಗೆ ಇಟ್ಟಿತು ಮೈಕ್ರೋಸಾಫ್ಟ್!!

ಈ ಮೊದಲು ಬಂದಿದ್ದ ಕೈಜಾಲಾ ಸಲ್ಯೂಶನ್ ಉದ್ಯೋಗಿಗಳನ್ನು ಚತುರ ಮತ್ತು ಕ್ರಿಯಾತ್ಮಕರನ್ನಾಗಿಸಲಿದ್ದು ಡಿಜಿಟಲ್ ಸಂವಹನಗಳ ಮೂಲಕ ಗ್ರಾಹಕರನ್ನು ತಾಂತ್ರಿಕವಾಗಿ ನಿಪುಣರನ್ನಾಗಿಸುವತ್ತ ದೃಷ್ಟಿ ಬೀರುತ್ತಿತ್ತು. ದೊಡ್ಡ ಗುಂಪುಗಳಿಗಾಗಿ ಸಿದ್ಧಪಡಿಸಲಾಗಿದ್ದ ಮೈಕ್ರೋಸಾಫ್ಟ್ ಕೈಜಾಲಾ ಚಾಟ್ ಇಂಟರ್ಫೇಸ್ ಮತ್ತು ಕಾರ್ಯನಿರ್ವಹಣೆಯನ್ನು ಲೀಲಾಜಾಲವನ್ನಾಗಿಸಿತ್ತು.

ಓದಿರಿ: ಒಪ್ಪೊ, ವಿವೊ ಮತ್ತು ಶಿಯೋಮಿಗೆ ಟಾಂಗ್ ನೀಡಿದೆ 'ನೋಕಿಯಾ 7 ಪ್ಲಸ್' ಸ್ಮಾರ್ಟ್‌ಫೋನ್!!

Best Mobiles in India

English summary
After Google and WhatsApp, now Microsoft enables digital payments on its platform. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X