ಸ್ಕೈಪಿ ಆಪ್‌ ಇನ್ನು ಮುಂದೆ ಫೋನ್‌ನಲ್ಲಿ ಸಪೋರ್ಟ್ ಮಾಡುವುದಿಲ್ಲವಂತೆ!

By Suneel
|

ಹೌದು, ಮೈಕ್ರೋಸಾಫ್ಟ್‌ ಇತ್ತೀಚೆಗೆ ತಾನೆ ವಿಂಡೋಸ್‌ ಫೋನ್ 8 ಮತ್ತು ವಿಂಡೋಸ್ 8.1 ಫೋನ್‌ಗೆ ಸ್ಕೈಪಿ ಆಪ್‌ ಸಪೋರ್ಟ್ ಮಾಡುವುದನ್ನು ಅಕ್ಟೋಬರ್‌ನಲ್ಲಿ ಸಂಪೂರ್ಣವಾಗಿ ನಿಲ್ಲಿಸುವುದಾಗಿ ಖಚಿತಪಡಿಸಿತ್ತು. ಆದರೆ ಈಗ ರೆಡ್ಮಂಡ್‌ ಮೂಲದ ಟೆಕ್‌ ದೈತ್ಯ ಆಪ್‌ ಅನ್ನು ಪೂರ್ಣವಾಗಿ ಕಿಲ್‌ ಮಾಡುವ ಮುಖಾಂತರ ವಿಂಡೋಸ್‌ ಫೋನ್‌ 8 ಮತ್ತು 8.1 ನಲ್ಲಿ 2017 ವೇಳೆಗೆ ಸಂಪೂರ್ಣ ನಾಶಪಡಿಸುವ ಬಗ್ಗೆ ಹೇಳಿದೆ.

ಸ್ಕೈಪಿ ಆಪ್‌ ಇನ್ನು ಮುಂದೆ ಫೋನ್‌ನಲ್ಲಿ ಸಪೋರ್ಟ್ ಮಾಡುವುದಿಲ್ಲವಂತೆ!

ಕಂಪನಿಯು ಸ್ಕೈಪಿ ಆಪ್‌ ಅನ್ನು 2017 ರಲ್ಲಿ ಹೊಸ ರೀತಿಯಲ್ಲಿ ಅಭಿವೃದ್ದಿ ಪಡಿಸುವುದಾಗಿ ಹೇಳಿತ್ತು, ಆದರೂ ಸಹ ಆಪ್‌ ಅನ್ನು ಅಕ್ಟೋಬರ್‌ ವೇಳೆಗೆ ಸಪೋರ್ಟ್ ಮಾಡುವುದನ್ನು ನಿಲ್ಲಿಸುವುದಾಗಿ ಹೇಳಿದ್ದು, ವಿಂಡೋಸ್‌ ಫೋನ್‌ 8 ಮತ್ತು ವಿಂಡೋಸ್ 8.1 ನಲ್ಲಿ ಬಳಕೆದಾರರು ಸ್ಕೈಪಿಯನ್ನು 2017 ರ ವರೆಗೆ ಬಳಸಬಹುದು ಎಂದು ಹೇಳಿದೆ. ಆದರೆ ಕೆಲವು ಪರಿಮಿತ ಚಟುವಟಿಕೆಗಳು ಮಾತ್ರ ಸಪೋರ್ಟ್ ಆಗಲಿವೆಯಂತೆ.

ಆಪ್‌ ಸಪೋರ್ಟ್ ಸ್ಥಗಿತವು ಕೇವಲ ವಿಂಡೋಸ್‌ ಪೋನ್‌ಗಳಲ್ಲಿ ಮಾತ್ರವಲ್ಲದೇ ಪರಿಣಾಮವು ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್ 4.0.3 ಓಎಸ್‌ ನಲ್ಲೂ ಬೀರಲಿದೆ. ಈ ಬಗ್ಗೆ ಮೈಕ್ರೋಸಾಫ್ಟ್‌ ಸ್ಕೈಪಿ ಸಪೋರ್ಟ್ಗ್ ಪೇಜ್‌ನಲ್ಲಿ ಮಾಹಿತಿ ತಿಳಿಯಬಹುದಾಗಿದೆ.

ಸ್ಕೈಪಿ ಆಪ್‌ ಇನ್ನು ಮುಂದೆ ಫೋನ್‌ನಲ್ಲಿ ಸಪೋರ್ಟ್ ಮಾಡುವುದಿಲ್ಲವಂತೆ!

ಮೈಕ್ರೋಸಾಫ್ಟ್‌ ಈ ಹಿಂದೆ ಸ್ಕೈಪಿ ಆಪ್‌ ವಿಂಡೋಸ್‌ 7,8, XP ಮತ್ತು ವಿಸ್ಟಾ, ಮ್ಯಾಕ್‌ನ ಯೊಸೆಮೈಟ್‌ ಮತ್ತು ಐಓಏಸ್‌ 8 ಆಪರೇಟಿಂಗ್‌ ಸಿಸ್ಟಮ್‌ಗಳಲ್ಲಿ ಸಪೋರ್ಟ್‌ ಮಾಡುವ ಬಗ್ಗೆ ಮಾಹಿತಿ ಪ್ರಕಟಿಸಿತ್ತು.

ಫೇಸ್‌ ಟೈಮ್‌, ಸ್ಕೈಪಿಗೆ ಸ್ಪರ್ಧಿಯಾಗಿ 'ಗೂಗಲ್‌ ಡ್ಯುಯೊ' ವೀಡಿಯೊ ಕರೆ ಆಪ್‌!

Best Mobiles in India

English summary
Microsoft to ‘kill’ the Skype app on Windows Phone 8, 8.1 by 2017. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X