2020 ರ ಪ್ರಸಿದ್ಧ ನೆಟ್ ಫ್ಲಿಕ್ಸ್ ಟಿವಿ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳು

By Gizbot Bureau
|

ವಿಶ್ವದಲ್ಲೇ ಅತ್ಯಂತ ಪ್ರಸಿದ್ಧಿಯಲ್ಲಿ ಪ್ರಮುಖ ಒಟಿಟಿ ಪ್ಲೇಯರ್ ಗಳಲ್ಲಿ ನೆಟ್ ಫ್ಲಿಕ್ಸ್ ಅಗ್ರಗಣ್ಯವಾಗಿದೆ. ಭಾರತದಲ್ಲೂ ಕೂಡ ಅತೀ ದೊಡ್ಡ ಗ್ರಾಹಕ ಬಳಗವನ್ನು ಈ ಆನ್ ಲೈನ್ ಸ್ಟ್ರೀಮಿಂಗ್ ಫ್ಲ್ಯಾಟ್ ಫಾರ್ಮ್ ಹೊಂದಿದೆ. ನಿಮ್ಮ ನೆಚ್ಚಿನ ಶೋಗಳನ್ನು ಮತ್ತು ಚಲನಚಿತ್ರಗಳನ್ನು ಇದರಲ್ಲಿ ನೋಡುವುದಕ್ಕೆ ಅವಕಾಶವಿದೆ ಮತ್ತು ಹೊಸ ಶೋಗಳು, ಹೊಸ ಹೊಸ ಚಲನಚಿತ್ರಗಳು ಇದರಲ್ಲಿ ಬಿಡುಗಡೆಗೊಳ್ಳುತ್ತದೆ ಅಷ್ಟೇ ಅಲ್ಲ ಡಬ್ಬಿಂಗ್ ಆಗಿರುವ ಮೂವಿಗಳನ್ನು ಕೂಡ ಈ ಫ್ಲ್ಯಾಟ್ ಫಾರ್ಮ್ ನಲ್ಲಿ ನೋಡುವುದಕ್ಕೆ ಅವಕಾಶವಿರುತ್ತದೆ.

ಅಂತರಾಷ್ಟ್ರೀಯ

ನೀವು ಯಾವುದನ್ನು ನೋಡಬೇಕು ಎಂಬುದನ್ನು ಇದರ ಕಟೆಂಟ್ ಲೈಬ್ರರಿಯ ಮೂಲಕ ಆಯ್ಕೆ ಮಾಡಿಕೊಳ್ಳಬಹುದು. ಕೆಲವೊಮ್ಮೆ ಯಾವುದನ್ನು ನೋಡುವುದು ಯಾವುದನ್ನು ಬಿಡುವುದು ಎಂಬ ಗೊಂದಲಕ್ಕೂ ಬೀಳಬಹುದು. ಅಷ್ಟೊಂದು ವಿಶೇಷ ಕಾರ್ಯಕ್ರಮಗಳು ಇದರಲ್ಲಿ ಇದೆ. ಭಾರತೀಯ ನೋಡುಗರಿಗಾಗಿ ಈ ಕಂಪೆನುಯು ಹಲವು ಕಾರ್ಯಕ್ರಮಗಳನ್ನು/ಚಲನಚಿತ್ರಗಳನ್ನು ಬಿಡುಗಡೆಗೊಳಿಸಿದೆ. ಕೇವಲ ಪ್ರಾದೇಶಿಕ ಮಾತ್ರವಲ್ಲ ಬದಲಾಗಿ ಅಂತರಾಷ್ಟ್ರೀಯ ಕಾರ್ಯಕ್ರಮಗಳನ್ನು ಕೂಡ ನೀವು ಇದರಲ್ಲಿ ನೋಡಬಹುದು.

2020 ರಲ್ಲಿ ನೆಟ್ ಫ್ಲಿಕ್ಸ್ ನಲ್ಲಿರುವ ಪ್ರಸಿದ್ಧ ಶೋಗಳು ಮತ್ತು ಚಲನಚಿತ್ರಗಳು

ಮೈಟಿ ಲಿಟಲ್ ಚೋಟಾ ಭೀಮ್ ಸೀಸನ್ 3

ಮೈಟಿ ಲಿಟಲ್ ಚೋಟಾ ಭೀಮ್ ಸೀಸನ್ 3

2020 ರಲ್ಲಿ ನೆಟ್ ಫ್ಲಿಕ್ಸ್ ನಲ್ಲಿ ಅತೀ ಹೆಚ್ಚು ಭಾರತೀಯರು ನೋಡಿರುವ ಸರಣಿ ಕಾರ್ಯಕ್ರಮವೆಂದರೆ ಅದು ಚೋಟಾ ಭೀಮ್. ಹೌದು ಭೀಮನ ಸ್ಟೋರಿ ಆಧಾರಿತ ಕಾರ್ಯಕ್ರಮವಾಗಿರುವ ಇದು ಎನಿಮೇಷನ್ ಧಾರಾವಾಹಿಯಾಗಿದೆ. ಮಕ್ಕಳಿಗೆ ಹೆಚ್ಚು ಇಷ್ಟವಾಗುವ ಇದು ದೊಡ್ಡವರನ್ನೂ ಸೆಳೆದಿರುವುದರಲ್ಲಿ ಆಶ್ಚರ್ಯವಿಲ್ಲ. ಆನ್ ಲೈನ್ ವರದಿಯ ಪ್ರಕಾರ ಅತೀ ಹೆಚ್ಚು ನೋಡುಗರನ್ನು ನೆಟ್ ಫ್ಲಿಕ್ಸ್ ನಲ್ಲಿ ಹೊಂದಿರುವ ಕಾರ್ಯಕ್ರಮ ಇದಾಗಿದೆ.

ಎಕ್ಸ್ಟ್ರಾಕ್ಷನ್

ಎಕ್ಸ್ಟ್ರಾಕ್ಷನ್

ಅಮೇರಿಕಾದ ಆಕ್ಷನ್ ಥ್ರಿಲ್ಲರ್ ಮೂವಿ ಡಬ್ ಆಗಿದ್ದು ಅತೀ ಹೆಚ್ಚು ಮಂದಿ ನೆಟ್ ಫ್ಲಿಕ್ಸ್ ನಲ್ಲಿ ಇದನ್ನು ನೋಡಿದ್ದಾರೆ.. ಕ್ರಿಸ್ ಹೆಮ್ಸ್ ವರ್ತ್ ಮತ್ತು ರಣ್ ದೀಪಾ ಹೂಡಾ ನಟಿಸಿರುವ ಈ ಮೂವಿ ಅನೇಕರಿಗೆ ನೆಟ್ ಫ್ಲಿಕ್ಸ್ ನಲ್ಲಿ ಇಷ್ಟವಾಗಿದೆ. ಆಕ್ಷನ್ ಪ್ಯಾಕ್ ಆಗಿರುವ ಮೂವಿ ಇದಾಗಿದ್ದು ಭಾರತೀಯ ನೋಡುಗರನ್ನು ಇದು ಬಹಳವಾಗಿ ಸೆಳೆದಿದೆ.

ಬುಲ್ ಬುಲ್

ಬುಲ್ ಬುಲ್

ಹಿಂದಿ ಭಾಷೆಯ ಮೂವಿಯಾಗಿರುವ ಇದು ನೆಟ್ ಫ್ಲಿಕ್ಸ್ ನಲ್ಲಿ ರಿಲೀಸ್ ಆಗಿರುವ ದಿನದಿಂದ ಬಹಳ ಪ್ರಸಿದ್ಧಿಯಾಗಿದೆ.ಅನ್ವಿತಾ ದತ್ ಆಕ್ಷನ್ ಕಟ್ ಹೇಳಿರುವ ಈ ಚಲನಚಿತ್ರ ಹಾಸ್ಯಸ್ಪದವಾಗಿದೆ.94 ನಿಮಿಷದ ಈ ಮೂವಿ ಜೂನ್ 2020 ರಂದು ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಿದೆ. ತೃಪ್ತಿ ಢಿಮ್ರಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಲನಚಿತ್ರವು ಅನೇಕ ವಿಶೇಷ ಕಾನ್ಸೆಪ್ಟ್ ನ್ನು ಹೊಂದಿದೆ.

ಲುಡೋ

ಲುಡೋ

ಈ ಪಟ್ಟಿಯಲ್ಲಿರುವ ಮತ್ತು 2020 ರಲ್ಲಿ ಅತೀ ಹೆಚ್ಚು ವೀಕ್ಷಣೆ ಹೊಂದಿರುವ ಭಾರತೀಯ ಮೂವಿಯೆಂದರೆ ಅದು ಲುಡೋ. ಅನುರಾಗ್ ಬಸು ನಿರ್ದೇಶಿಸಿರುವ ಭಾರತೀಯ ಮೂವಿ ಇದಾಗಿದ್ದು ಭಾರತೀಯ ಕಾಮಿಡಿ ಚಲನಚಿತ್ರ ಇದಾಗಿದೆ. ಇದರಲ್ಲಿ ಅಭಿಷೇಕ್ ಬಚ್ಚನ್, ಆದಿತ್ಯ ರಾಯ್ ಕಪೂರ್, ರಾಜ್ ಕುಮಾರ್ ರಾವ್, ಪಂಕಜ್ ತ್ರಿಪಾಠಿ ನಟಿಸಿದ್ದಾರೆ. ಬಾಲಿವುಡ್ ಇಂಡಸ್ಟ್ರಿಯಲ್ಲಿ ಈ ಎಲ್ಲರೂ ಕೂಡ ಬಹಳ ಗುರುತಿಸಿಕೊಂಡಿರುವ ನಟರುಗಳಾಗಿದ್ದಾರೆ.

Most Read Articles
Best Mobiles in India

Read more about:
English summary
Netflix is amongst the top OTT players across the globe. The online streaming platform has gained a huge user base in India as well. Thanks to the plethora of content available on this platform, you can binge-watch your favorite shows and movies on-the-go.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X