ಜಿಯೋದಿಂದ ಮತ್ತೊಂದು ದಾಖಲೆ: ಮೈಲಿಗಲ್ಲು ನಿರ್ಮಿಸಿದ 'ಮೈಜಿಯೋ ಆಪ್'

ಗೂಗಲ್ ಪ್ಲೇ ಸ್ಟೋರಿನಲ್ಲಿ ಟಾಪ್ 10 ಆಪ್ ಗಳಲ್ಲಿ ಸ್ಥಾನ ಪಡೆದಿದ್ದ ಮೈ ಜಿಯೋ ಆಪ್ ಸದ್ಯ ನೂರು ಮಿಲಿಯನ್ ಡೌನ್‌ಲೋಡ್ ಗಡಿಯನ್ನು ದಾಟಿದೆ.

|

ರಿಲಯನ್ಸ್ ಮಾಲೀಕತ್ವದ ಜಿಯೋ ಸೇವೆಯನ್ನು ಆರಂಭಿಸಿದ ನಂತರದಲ್ಲಿ ಹಲವರು ಹೊಸ ದಾಖಲೆಗಳನನ್ನು ನಿರ್ಮಾಣ ಮಾಡುತ್ತಲೆ ಸಾಗಿದೆ. ಈಗ ಆಪ್ ವಿಭಾಗದಲ್ಲಿಯೂ ಹೊಸ ಮೈಲಿಗಲ್ಲು ನಿರ್ಮಿಸಿದೆ. ಗೂಗಲ್ ಪ್ಲೇ ಸ್ಟೋರಿನಲ್ಲಿ ಛಾಪು ಮೂಡಿಸಿದೆ.

ಜಿಯೋದಿಂದ ಮತ್ತೊಂದು ದಾಖಲೆ: ಮೈಲಿಗಲ್ಲು ನಿರ್ಮಿಸಿದ 'ಮೈಜಿಯೋ ಆಪ್'

ಓದರಿ: ಫೇಸ್‌ಬುಕ್ ನಲ್ಲಿ ವೈರಲ್ ಆಗಿರುವ ಸರಹಾ ಆಪ್ ಬಗ್ಗೆ ನಿಮಗೆಷ್ಟು ಗೊತ್ತು? ಬಳಸುವುದು ಹೇಗೆ?

ಈ ಹಿಂದೆ ಗೂಗಲ್ ಪ್ಲೇ ಸ್ಟೋರಿನಲ್ಲಿ ಟಾಪ್ 10 ಆಪ್ ಗಳಲ್ಲಿ ಸ್ಥಾನ ಪಡೆದಿದ್ದ ಮೈ ಜಿಯೋ ಆಪ್ ಸದ್ಯ ನೂರು ಮಿಲಿಯನ್ ಡೌನ್‌ಲೋಡ್ ಗಡಿಯನ್ನು ದಾಟಿದೆ. ಈ ಮೂಲಕ ಜಯೋ ತನ್ನ ಮಡಿಗೆ ಮತ್ತೊಂದು ಗರಿಯನ್ನು ಸೇರಿಸಿಕೊಂಡಿದೆ.

ಟಾಪ್ 10 ನಲ್ಲಿ ಜಿಯೋ:

ಟಾಪ್ 10 ನಲ್ಲಿ ಜಿಯೋ:

ಮೈ ಜಿಯೋ ಆಪ್ ಟಾಪ್ 10ನಲ್ಲಿ ಕಾಣಿಸಿಕೊಂಡಿದ್ದು, ಪ್ಲೇ ಸ್ಟೋರಿನಲ್ಲಿ ಅತೀ ಹೆಚ್ಚು ಡೌನ್‌ಲೋಡ್ ಆದ ಆಪ್‌ಗಳಲ್ಲಿ ತನ್ನ ಛಾಪು ಮೂಡಿಸಿದೆ. ಈ ಪಟ್ಟಿಯಲ್ಲಿ ವಾಟ್ಸ್‌ಆಪ್, ಶೇರ್‌ಇಟ್, ಫೇಸ್‌ಬುಕ್, ಟ್ರೂಕಲರ್, ಹಾಟ್ ಸ್ಟಾರ್, ನೆಟ್‌ಫ್ಲಿಕ್ಸ್ ಕಾಣಿಸಿಕೊಂಡಿವೆ.

100 ಮಿಲಿಯನ್ ಡೌನ್‌ಲೋಡ್:

100 ಮಿಲಿಯನ್ ಡೌನ್‌ಲೋಡ್:

ಈಗಾಗಲೇ ಗೂಗಲ್ ಪ್ಲೇ ಸ್ಟೋರಿನಲ್ಲಿ ಮೈ ಜಿಯೋ ಆಪ್ ಅನ್ನು 100 ಮಿಲಿಯನ್ ಬಾರಿ ಡೌನ್‌ಲೋಡ್ ಮಾಡಲಾಗಿದೆ. ಸಾಮಾನ್ಯ ಆಪ್ ಗಳಲ್ಲಿ ಇಷ್ಟು ಸಂಖ್ಯೆಯಲ್ಲಿ ಡೌನ್‌ಲೋಡ್ ಆಗಿರುವ ಮೊದಲ ಆಪ್ ಇದಾಗಿದೆ. ಇದರೊಂದಿಗೆ ಹಾಟ್ ಸ್ಟಾರ್ ಮತ್ತು ನೆಟ್‌ಫ್ಲಿಕ್ಸ್ ಸಹ 100 ಮಿಲಿಯನ್ ಬಾರಿ ಡೌನ್‌ಲೋಡ್ ಆಗಿದೆ ಎನ್ನಲಾಗಿದೆ.

ಬೇರೆ ಟೆಲಿಕಾಂ ಕಂಪನಿಗಳ ಆಪ್ ಗತಿ:

ಬೇರೆ ಟೆಲಿಕಾಂ ಕಂಪನಿಗಳ ಆಪ್ ಗತಿ:

ಜಿಯೋ ಆಪ್ ಮುಂದೆ ಇತರೆ ಟೆಲಿಕಾಂ ಕಂಪನಿಗಳ ಆಪ್ ಗಳು ಅತೀ ಕಡಿಮೆ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದೆ. ಏರ್‌ಟೆಲ್, ವೊಡಾಪೋನ್ ಮತ್ತು ಐಡಿಯಾ ಕಂಪನಿಗಳ ಆಪ್ ಗಳು ಕೇವಲ 10 ಮಿಲಿಯನ್ ಬಾರಿ ಡೌನ್‌ಲೋಡ್ ಆಗಿವೆ ಎನ್ನಲಾಗಿದೆ.

ಇತರೆ ಜಿಯೋ ಆಪ್ ಗಳು ಸದ್ದು ಮಾಡಿವೆ:

ಇತರೆ ಜಿಯೋ ಆಪ್ ಗಳು ಸದ್ದು ಮಾಡಿವೆ:

ಇದಲ್ಲದೇ ಜಿಯೋ ಬಿಡುಗಡೆ ಮಾಡಿರುವ ಆಪ್ ಗಳಲ್ಲಿ ಜಿಯೋ TV ಆಪ್ 50 ಮಿಲಿಯನ್ ಬಾರಿ ಡೌನ್‌ಲೋಡ್ ಆಗಿದ್ದು, ಇದು ಅಮೆಜಾನ್-ಫ್ಲಿಪ್ ಕಾರ್ಟ್‌ಗೆ ಸಮನಾಗಿದೆ. ಅಲ್ಲದೇ ಜಿಯೋ ಸಿನಿಮಾ, ಜಿಯೋ ಮ್ಯೂಸಿಕ್ ಆಪ್ ಗಳು 10 ಮಿಲಿಯನ್ ಬಾರಿ ಡೌನ್‌ಲೋಡ್ ಆಗಿದೆ. ಇತರೆ ಟೆಲಿಕಾಂ ಕಂಪನಿಗೆ ಹೋಲಿಸಿಕೊಂಡರೆ ಇದು ಹೆಚ್ಚು.

Best Mobiles in India

Read more about:
English summary
Reliance Jio's MyJio app has crossed the 100-million mark on Google's Play store and is among the top 10 trending apps on Google Play. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X