Subscribe to Gizbot

1 ಮೊಬೈಲ್‌ ಆಪ್‌ನಲ್ಲಿ 1000 ಸರ್ಕಾರಿ ಸೇವೆಗಳು ಲಭ್ಯ

Written By:

ಸರ್ಕಾರವು ಮೊಬೈಲ್‌ ಅಪ್ಲಿಕೇಶನ್‌ ಒಂದನ್ನು ಅಭಿವೃದ್ದಿಪಡಿಸುತ್ತಿದ್ದು, ಅಪ್ಲಿಕೇಶನ್‌ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ 100೦ ಸೇವೆಗಳನ್ನು ಪಡೆಯಲು ಪ್ರವೇಶ ನೀಡುತ್ತದೆ ಎಂದು ಕೇಂದ್ರ ಟೆಲಿಕಾಂ ಸಚಿವರಾದ 'ರವಿ ಶಂಕರ್‌ ಪ್ರಸಾದ್‌" ಹೇಳಿದ್ದಾರೆ.


ಗ್ರಾಮೀಣ, ನಗರ ಪ್ರದೇಶಗಳು ಸೇರಿದಂತೆ ಬಹುಸಂಖ್ಯಾತ ಜನರಿಗೆ ತಮ್ಮ ಕೆಲಸದ ಒತ್ತಡದಲ್ಲಿ ವಿದ್ಯುತ್‌ ಬಿಲ್‌, ನೀರಿನ ಬಿಲ್‌ ಅನ್ನೇ ಕಟ್ಟಲಾಗದಂತಹ ಪ್ರಸ್ತುತ ವಿದ್ಯಾಮಾನಕ್ಕೆ ಕೇವಲ ಒಂದೇ ಅಪ್ಲಿಕೇಶನ್‌ 1000 ಸೇವೆಗಳನ್ನು ಪಡೆಯುವ ಅವಕಾಶ ನೀಡುತ್ತದೆ ಎಂದರೆ ತಂತ್ರಜ್ಞಾನ ಕ್ಷೇತ್ರದ ಶ್ಲಾಘನೀಯ ವಿಷಯ ಇದು ಎಂದರೆ ತಪ್ಪಾಗಲಾರದು. ಅಂದಹಾಗೆ ಈ ಅಪ್ಲಿಕೇಶನ್‌ ಯಾವುದು, ಅಪ್ಲಿಕೇಶನ್‌ ಲಾಂಚ್‌ ಯಾವಾಗ ಎಂಬಿತ್ಯಾದಿ ವಿಶೇಷ ಮಾಹಿತಿಗಳನ್ನು ಲೇಖನದ ಸ್ಲೈಡರ್‌ನಲ್ಲಿ ತಿಳಿಯಿರಿ.

ವಾಟ್ಸಾಪ್‌ನಲ್ಲಿ ಹಣ ಕಳುಹಿಸುವುದು ಮತ್ತು ಸ್ವೀಕರಿಸುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸೆಂಬರ್‌ 2016

1

ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ 1000 ಸೇವೆಗಳಿಗೆ ಪ್ರವೇಶವಿರುವ ಅಪ್ಲಿಕೇಶನ್‌ ಅನ್ನು 2016 ಡಿಸೆಂಬರ್‌ನಲ್ಲಿ ಲಾಂಚ್‌ ಮಾಡಲಾಗುವುದು ಎಂದು ಟೆಲಿಕಾಂ ಸಚಿವರಾದ 'ರವಿ ಶಂಕರ್ ಪ್ರಸಾದ್‌'ರವರು ಹೇಳಿದ್ದಾರೆ.

ಸಾಮಾನ್ಯ ಮೊಬೈಲ್‌ಗಳಿಗೂ ಅಪ್ಲಿಕೇಶನ್‌

2

ಅಪ್ಲಿಕೇಶನ್‌ ಅನ್ನು ಸಾಮಾನ್ಯ ಮೊಬೈಲ್‌ಗಳಿಗಾಗಿ ಲಾಂಚ್‌ ಮಾಡುತ್ತಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರ ಮಾತ್ರವಲ್ಲದೇ ಸ್ಥಳೀಯ ಸರ್ಕಾರಿ ಸೇವೆಗಳನ್ನು ಸಹ ಪಡೆಯಬಹುದಾಗಿದೆ.

 ಅಪ್ಲಿಕೇಶನ್

3

"ಕೇವಲ ಒಂದು ಬಟನ್‌ ಕ್ಲಿಕ್‌ ಮಾಡುವ ಮುಖಾಂತರ ಜನರು 1000 ಸೇವೆಗಳನ್ನು ಸ್ಕ್ಯಾನ್‌ ಮಾಡಬಹುದಾಗಿದೆ. ಡಿಸೆಂಬರ್ನಲ್ಲಿ ರಾಷ್ಟೀಯ ವಿದ್ಯಾರ್ಥಿ ವೇತನ, ಮಹಿಳಾ ಸುರಕ್ಷತೆ ಮತ್ತು ಆರೋಗ್ಯ ಕಾರ್ಯಕ್ರಮದ ಜೊತೆ ಅಪ್ಲಿಕೇಶನ್‌ ಅನ್ನು ಪ್ರಾರಂಭ ಮಾಡಲಾಗುತ್ತದೆ" ಎಂದು ರವಿ ಶಂಕರ್‌ ಪ್ರಸಾದ್‌'ರವರು ಹೇಳಿದ್ದಾರೆ.

12 ಭಾಷೆಗಳಲ್ಲಿ ಆಪ್‌ ಲಭ್ಯ

4

Umang ((Unified Mobile App for New Age Governance) ಅಪ್ಲಿಕೇಶನ್‌ ಇಂಗ್ಲೀಷ್‌ ಜೊತೆಗೆ 12 ಭಾಷೆಗಳಲ್ಲಿ ಲಭ್ಯವಿರುತ್ತದೆ. ತಂತ್ರಜ್ಞಾನದೊಂದಿಗೆ ದೇಶದಲ್ಲಿ ಸರ್ಕಾರದ ಆಡಳಿತವನ್ನು ಅಭಿವೃದ್ದಿಪಡಿಸುತ್ತೇವೆ ಎಂದು 'ರವಿ ಶಂಕರ್‌ ಪ್ರಸಾದ್‌' ಹೇಳಿದ್ದಾರೆ.

ರೂ. 100 ಸಹ ತಲುಪುತ್ತದೆ

5

" ಭಾರತದ ಮಾಜಿ ಪ್ರಧಾನಿ ದೆಹಲಿಯಿಂದ ರೂ. 100 ಕಳುಹಿಸಿದರೆ, ಜನರಿಗೆ ಕೇವಲ ರೂ. 1 ಮಾತ್ರ ತಲುಪುತ್ತದೆ ಎಂದಿದ್ದರು. ಆದರೆ ನಾವು ಖಚಿತವಾಗಿ ತೃಪ್ತಿಯಿಂದ ಹೇಳುತ್ತೇವೆ ದೆಹಲಿಯಿಂದ ರೂ. 100 ಕಳುಹಿಸಿದರೆ ಜನರ ಬ್ಯಾಂಕ್‌ ಖಾತೆಗೆ ರೂ. 100 ಸಹ ತಲುಪುತ್ತದೆ. ಇದು ಟೆಕ್ನಾಲಜಿ ಬಳಕೆಯಿಂದ ಸಾಧ್ಯ. ನಾವು ಭಾರತದ ಮಾಜಿ ಪ್ರಧಾನಿಯ ಸಂಕಟವನ್ನು ಸಹ ಇಲ್ಲಿ ಹೇಳುತ್ತಿದ್ದೇವೆ' ಎಂದು ರವಿ ಶಂಕರ್‌ ಪ್ರಸಾದ್‌'ರವರು ಹೇಳಿದ್ದಾರೆ.

ಆಧಾರ್‌ ಕಾರ್ಡ್‌

6

"ಆಧಾರ್ ತಂತ್ರಜ್ಞಾನದ ಮೂಲಕ ಆಡಳಿತ ಅಭಿವೃದ್ದಿಹೊಂದಬಲ್ಲದು ಎಂದು ಹೇಳುತ್ತದೆ. 2015-16 ರ ಅವಧಿಯಲ್ಲಿ ಸರ್ಕಾರ ರೂ. 61,000 ಕೋಟಿ ಹಣವನ್ನು 30 ಕೋಟಿ ಫಲಾನುಭವಿಗಳಿಗೆ ವರ್ಗಾವಣೆ ಮಾಡಿದೆ" ಎಂದು ಅಪ್ಲಿಕೇಶನ್‌ ಕುರಿತು ಹೇಳುವ ಸಂದರ್ಭದಲ್ಲಿ ಟೆಲಿಕಾಂ ಸಚಿವರು ಹೇಳಿದರು.

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಸ್ಮಾರ್ಟ್‌ಫೋನ್ ಸ್ಫೋಟಗೊಳ್ಳಲು ಕಾರಣಗಳೇನು?

ವಾಟ್ಸಾಪ್‌ನಲ್ಲಿ ಹಣ ಕಳುಹಿಸುವುದು ಮತ್ತು ಸ್ವೀಕರಿಸುವುದು ಹೇಗೆ?

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
New Mobile App Give Access To Over 1,000 Government Services. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot