Subscribe to Gizbot

ಡೌನ್‌ಲೋಡ್‌ ಮಾಡದೇ ಆನ್‌ಲೈನಿನಲ್ಲಿ ಹೊಚ್ಚ ಹೊಸ ಹಾಡುಗಳನ್ನು ಕೇಳುವುದು ಹೇಗೆ..?

Written By:

ಸ್ಮಾರ್ಟ್‌ಫೋನ್‌ಗಳು 4Gಯನ್ನು ಪಡೆದುಕೊಂಡ ಮೇಲೆ ವಿಡಿಯೋಗಳನ್ನು ಡೌನ್‌ಲೋಡ್ ಮಾಡಿಕೊಂಡು ನೋಡುವ ದಿನಗಳು ಮುಗಿದು ಹೋಯಿತು. ಯೂಟ್ಯೂಬ್‌, ಹಾಟ್ ಸ್ಟಾರ್, ಅಮೆಜಾನ್ ಪ್ರೈಮ್‌ ವಿಡಿಯೋಗಳನ್ನು ಆನ್‌ಲೈನಿನಲ್ಲಿ ನೋಡುವ ಮಂದಿ ಹೆಚ್ಚಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಆನ್‌ಲೈನಿನಲ್ಲಿಯೇ ಮ್ಯೂಸಿಕ್ ಕೇಳಲು ಹಲವು ಆಪ್‌ಗಳು ಲಭ್ಯವಿದ್ದು, ಅವುಗಳನ್ನು ನಿಮ್ಮ ಫೋನಿನಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಅವುಗಳ ಕುರಿತ ಮಾಹಿತಿ ಇಲ್ಲಿದೆ.

ಡೌನ್‌ಲೋಡ್‌ ಮಾಡದೇ ಆನ್‌ಲೈನಿನಲ್ಲಿ ಹೊಚ್ಚ ಹೊಸ ಹಾಡುಗಳನ್ನು ಕೇಳುವುದು ಹೇಗೆ..?

ಇಂದು ಆಪ್‌ ಮಾರುಕಟ್ಟೆಯಲ್ಲಿ ಮ್ಯೂಸಿಕ್‌ ಗಾಗಿಯೇ ಹಲವು ಆಪ್‌ಗಳು ಲಭ್ಯವಿದೆ. ನೀವು ಡೌನ್‌ಲೋಡ್ ಮಾಡಿಕೊಳ್ಳದೆ ಹೊಸ ಹೊಸ ಹಾಡುಗಳನ್ನು ನೀವು ಕೇಳಬಹುದಾಗಿದೆ. ವಿವಿಧ ಮಾದರಿಯ ನಿಮಗೆ ಇಷ್ಟವಾಗುವ ಸಂಗೀತದ ಹಾಡುಗಳು ದೊರೆಯುವ ಹಲವು ಆಪ್‌ಗಳ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುವ ಪ್ರಯತ್ನವು ಇದಾಗಿದೆ.

ಓದಿರಿ: ತಿಂಗಳ ಸಂಬಳ ಪಡೆಯುತ್ತಿದ್ದ ಪೇಟಿಎಂ ನೌಕರರು ಈಗ ಕೋಟ್ಯಾಧಿಪತಿಗಳು..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೂಗಲ್ ಪ್ಲೇ ಮ್ಯೂಸಿಕ್:

ಗೂಗಲ್ ಪ್ಲೇ ಮ್ಯೂಸಿಕ್:

ನಿಮಗೆ ಸಂಗೀತ ಕೇಳುವ ಆಸಕ್ತಿ ಇದ್ದರೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಪ್ಲೇ ಮ್ಯೂಸಿಕ್ ಆಪ್ ಇದ್ದರೆ ಚೆನ್ನ. ನಿಮ್ಮ ಸಂಗೀತ ಎಲ್ಲ ಬೇಡಿಕೆಗಳನ್ನು ಈ ಆಪ್ ಇಡೇರಿಸುತ್ತದೆ. ಇಲ್ಲಿ ನಿಮಗೆ ಮೊದಲಿಗೆ ಫ್ರಿ ಟ್ರಯಲ್ ದೊರೆಯಲಿದ್ದು, ಇದಾದ ನಂತರದಲ್ಲಿ ಹಣವನ್ನು ಪಾವತಿ ಮಾಡಬೇಕಾಗಿದೆ.

ಸೌಂಡ್ ಕ್ಲೌಡ್ಸ್:

ಸೌಂಡ್ ಕ್ಲೌಡ್ಸ್:

ಯೂಟ್ಯೂಬ್ ಮಾದರಿಯಲ್ಲಿ ಇಲ್ಲಿ ಬಳಕೆದಾರರು ತಮ್ಮ ಆಡಿಯೋವನ್ನು ಆಪ್‌ಲೋಡ್ ಮಾಡುವ ಅವಕಾಶವನ್ನು ಇದರಲ್ಲಿ ಪಡೆದುಕೊಂಡಿದ್ದಾರೆ. ಇಲ್ಲಿಯೂ ಸಹ ಹಲವು ಆಡಿಯೋಗಳು ಕೇಳಲು ಸಿಗಲಿದೆ. ಹೆಚ್ಚಿನ ಆಯ್ಕೆಯ ಸ್ವಾತಂತ್ರ ಇದರಲ್ಲಿದೆ.

ಸಾವನ್:

ಸಾವನ್:

ಇದು ಹೆಚ್ಚಾಗಿ ಸಿನಿಮಾಗೆ ಸಂಬಂಧಿಸಿದ ಹಾಡುಗಳನ್ನು ಪ್ರಸಾರ ಮಾಡಲಿದೆ. ಹೊಸದಾಗಿ ಬಿಡುಗಡೆಯಾದ ಎಲ್ಲಾ ಭಾಷೆಗಳ ಹಾಡುಗಳು ಇಲ್ಲಿ ದೊರೆಯಲಿದೆ. ಇದು ಸಹ ಬಳಕೆಗೆ ಉಚಿತವಾಗಿ ದೊರೆಯಲಿದೆ. ಇದರಲ್ಲಿಯೂ ಹೆಚ್ಚಿನ ಸಂಖ್ಯೆಯ ಹಾಡುಗಳನ್ನು ಕೇಳಬಹುದಾಗಿದೆ.

How to Download e-Aadhaar Card! ಸ್ಮಾರ್ಟ್‌ಫೋನ್‌ನಲ್ಲಿ ಇ-ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ..?
ಗಾನಾ:

ಗಾನಾ:

ಇಲ್ಲಿ ಸಹ ಬಳಕೆದಾರರು ಎಲ್ಲಾ ‍ಭಾಷೆಯ ಹಾಡುಗಳನ್ನು ಆಲಿಸಬಹುದಾಗಿದೆ. ಅಲ್ಲದೇ ಹೊಸದಾಗಿ ಬಿಡುಗಡೆಗೊಂಡ ಎಲ್ಲಾ ಭಾಷೆಗಳ ಹಾಡುಗಳು ಇಲ್ಲಿ ದೊರೆಯಲಿದೆ. ಅಲ್ಲದೇ ಮಿರ್ಚಿ ರೇಡಿಯೋದಲ್ಲಿ ಪ್ರಸಾರವಾಗುವ ಹಾಡುಗಳನ್ನು ಇಲ್ಲಿ ಕೇಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
online music app for android. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot