Subscribe to Gizbot

100 ದಶಲಕ್ಷ ಡೌನ್‌ಲೋಡ್ ಕಂಡ ಭಾರತದ ಮೊದಲ ಆಪ್ ಪೇಟಿಎಂ!!

Written By:

ಭಾರತದ ಅತ್ಯಂತ ಜನಪ್ರಿಯ ಮೊಬೈಲ್ ಪೇಮೆಂಟ್ ಆಪ್ ಪೇಟಿಎಂ ಭಾರತದಲ್ಲಿಯೇ ಅತಿಹೆಚ್ಚು ಡೌನ್‌ಲೋಡ್ ಕಂಡ ಮೊದಲ ಆಪ್ ಎಂಬ ದಾಖಲೆ ನಿರ್ಮಿಸಿದೆ. ವಿದೇಶಿ ಕಂಪೆನಿಗಳಿಗೆ ಸೆಡ್ಡು ಹೊಡೆದು ಇಂತಹದ್ದೊಂದು ಬಹುದೊಡ್ಡ ಸಾಧನೆ ಮಾಡಿದ ಭಾರತದ ಮೊದಲ ಆಪ್ ಒಂದು ಹೆಗ್ಗಳಿಕೆಗೆ ಪೇಟಿಎಂ ಪಾತ್ರವಾಗಿದೆ.!!

ಪ್ರಸಕ್ತ ವರ್ಷದ ಡಿಸೆಂಬರ್ ಎರಡನೇಯ ವಾರದಲ್ಲಿ ಪೇಟಿಎಂ ಸಂಸ್ಥೆ ಈ ಸಾಧನೆ ಮಾಡಿದ್ದು, ಇದುವರೆಗೂ 100 ದಶಲಕ್ಷಕ್ಕೂ ಹೆಚ್ಚು ಪೇಟಿಎಂ ಆಪ್‌ಗಳೂ ಡೌನ್‌ಲೋಡ್ ಕಂಡಿವೆ.! ಆರ್ಥಿಕ ಸೇವೆ ಕ್ಷೇತ್ರದಲ್ಲಿ ಭಾರತದ ಮೊಬೈಲ್ ಕಿರುತಂತ್ರಾಂಶವೊಂದು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇದೇ ಮೊದಲ ಬಾರಿಗೆ 100 ದಶಲಕ್ಷ ಡೌನ್ಲೋಡ್‌ಗಳನ್ನು ದಾಟಿದೆ.!!

 100 ದಶಲಕ್ಷ ಡೌನ್‌ಲೋಡ್ ಕಂಡ ಭಾರತದ ಮೊದಲ ಆಪ್ ಪೇಟಿಎಂ!!

ಆನ್‌ಲೈನ್ ರಿಚಾರ್ಜ್‌ಗಳನ್ನು ಮಾಡಲು, ಬಿಲ್‌ಗಳನ್ನು ಪಾವತಿ ಮಾಡಲು, ಸಿನಿಮಾ ಟಿಕೆಟ್‌ಗಳನ್ನು ಬುಕ್ ಮಾಡಲು ಹಾಗೂ ತಮ್ಮ ಪ್ರಯಾಣಕ್ಕೆ ಟಿಕೆಟ್‌ಗಳನ್ನು ಬುಕ್ ಮಾಡಲು ಅಂಗಡಿಗಳಲ್ಲಿ, ತರಕಾರಿ ಅಂಗಡಿಗಳಲ್ಲಿ, ಚಿಲ್ಲರೆ ಅಂಗಡಿಗಳಲ್ಲಿ ಎಲ್ಲೆಡೆ ಆನ್‌ಲೈನ್ ಸೇವೆ ಪರಿಚಯಿಸಿ ಪೇಟಿಎಂ ಜನರ ಮನಗೆದ್ದಿದೆ.!!

Aadhaar Number ವೆರಿಫಿಕೇಷನ್ ಮಾಡುವುದು ಹೇಗೆ..?
 100 ದಶಲಕ್ಷ ಡೌನ್‌ಲೋಡ್ ಕಂಡ ಭಾರತದ ಮೊದಲ ಆಪ್ ಪೇಟಿಎಂ!!

ಆಟೋಗಳಿಗೆ ದರ ಪಾವತಿ ಮಾಡಲು ಪೆಟ್ರೋಲ್ ಪಂಪ್‌ಗಳಲ್ಲಿ, ಮಲ್ಟಿಪ್ಲೆಕ್ಸ್‌ಗಳಲ್ಲಿ, ರೆಸ್ಟೊರೆಂಟ್‌ಗಳಲ್ಲಿ ಹಾಗೂ ಮತ್ತಿತರ ಕಡೆಗಳಲ್ಲಿ ಪಾವತಿ ಮಾಡಲು ಅನುವು ಮಾಡಿಕೊಡುವ ಪೇಟಿಎಂ ಆಪ್ ಮತ್ತಹಷ್ಟು ಸೇವೆಗಳನ್ನು ತರಲಿದೆ ಎಂದು ಪೆಟಿಎಂ ಹಿರಿಯ ಉಪಾಧ್ಯಕ್ಷ ದೀಪಕ್ ಅಬಾಟ್ ತಿಳಿಸಿದ್ದಾರೆ.!!

ಓದಿರಿ: ಫೇಸ್‌ಬುಕ್ ಖಾತೆಗೆ ಆಧಾರ್ ಲಿಂಕ್!!?..ಇದಕ್ಕೆ ಫೇಸ್‌ಬುಕ್ ಹೇಳಿದ್ದೇನು ಗೊತ್ತಾ?

English summary
Paytm app hit new benchmark in the second week of December. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot