ಪೇಟಿಎಂನಿಂದ ಮತ್ತೊಂದು ಹೊಸ ಆಯ್ಕೆ: 'ಪೇಟಿಎಂ BHIM UPI'

|

ಮೊನ್ನೇ ತಾನೇ ಇನ್‌ಬಾಕ್ಸ್ ಸೇವೆಯನ್ನು ನೀಡುವ ಮೂಲಕ ವಾಟ್ಸ್‌ಆಪ್ ಎದುರು ನಿಲ್ಲುವ ಲಕ್ಷಣವನ್ನು ತೋರಿಸಿದ ಪೇಟಿಎಂ ಸದ್ಯ ಮತ್ತೊಂದು ಹೊಸ ಸೇವೆಯನ್ನು ತನ್ನ ಬಳಕೆದಾರರಿಗೆ ನೀಡಲು ಮುಂದಾಗಿದೆ. ಇದರಿಂದಾಗಿ ತನ್ನ ಪೇಮೆಂಟ್ ಸೇವೆಯನ್ನು ಮತ್ತಷ್ಟು ಉತ್ತಮ ಪಡಿಸಿಕೊಳ್ಳಲು ಮುಂದಾಗಿದೆ.

ಪೇಟಿಎಂನಿಂದ ಮತ್ತೊಂದು ಹೊಸ ಆಯ್ಕೆ: 'ಪೇಟಿಎಂ BHIM UPI'

ಓದಿರಿ: ಇನ್ನು ಮುಂದೆ ಟ್ರೈನ್ ಟಿಕೇಟ್‌ಗಾಗಿ ವೆಯ್ಟಿಂಗ್ ಲಿಸ್ಟ್‌ನಲ್ಲಿ ಕಾಯುವ ಅಗತ್ಯವಿಲ್ಲ: ಅದಕ್ಕಾಗಿಯೇ ಈ ಆಪ್..!

ಪೇಟಿಎಂ ತನ್ನ ಆಪ್ ನಲ್ಲಿಯೇ BHIM UPI ಅನ್ನು ಇನ್‌ಟಿಗ್ರೇಟ್ ಮಾಡಿಕೊಂಡಿದೆ. ಈ ಮೂಲಕ ವ್ಯಾಲೆಟ್ ಸೇವೆಯೊಂದಿಗೆ UPI ಗ್ರಾಹಕರನ್ನು ಸೆಳೆಯುವ ಪ್ರಯತ್ನವನ್ನು ಮಾಡುತ್ತಿದೆ. ಒಂದೇ ವೇದಿಕೆಯಲ್ಲಿ ಎಲ್ಲಾ ಸೇವೆಯನ್ನು ನೀಡು ಕ್ರಮಕ್ಕೆ ಸಜ್ಜಾಗಿದೆ.

BHIM UPI:

BHIM UPI:

ಕೇಂದ್ರ ಸರಕಾರವು ಲಾಂಚ್ ಮಾಡಿದ ಸೇವೆ ಇದಾಗಿದ್ದು, ಗ್ರಾಹಕರು ಈ ಆಪ್ ನೊಂದಿಗೆ ತಮ್ಮ ಬ್ಯಾಂಕ್ ಆಕೌಂಟ್ ಅನ್ನು ಲಿಂಕ್ ಮಾಡಿ UPI ಐಡಿಯನ್ನು ಕ್ರಿಯೇಟ್ ಮಾಡಿಕೊಳ್ಳಬಹುದಾಗಿದೆ. ಇದರಿಂದ ಹಣವನ್ನು ಪಾವತಿ ಮಾಡಬಹುದಾಗಿದೆ.

ಈಗ ಪೇಟಿಎಂ:

ಈಗ ಪೇಟಿಎಂ:

ಮೊಬೈಲ್ ವ್ಯಾಲೆಟ್ ಮಾದರಿಯಲ್ಲಿದ್ದ ಪೇಟಿಎಂ ಸದ್ಯ UPI ಪೇಮೆಂಟ್ ಆಪ್ ಮಾದರಿಯಲ್ಲಿಯೂ ಕಾರ್ಯನಿರ್ವಹಿಸಲು ಮುಂದಾಗಿದೆ. ಇದರಿಂದಾಗಿ ಸದ್ಯ ಪೇಟಿಎಂ BHIM UPI IDಯನ್ನು ಕ್ರಿಯೇಟ್ ಮಾಡಿಕೊಳ್ಳಬಹುದಾಗಿದೆ.

ತ್ವರಿತ ಮತ್ತು ಸುಲಭ ವಿಧಾನ:

ತ್ವರಿತ ಮತ್ತು ಸುಲಭ ವಿಧಾನ:

BHIM UPI ಮೂಲಕ ಹಣವನ್ನು ಪಾವತಿ ಮಾಡುವುದು ಮತ್ತು ಸ್ವೀಕರಿಸುವುದು ಅತ್ಯಂತ ಸರಳ ಮತ್ತು ತ್ವರಿತಯ ವಿಧಾನವಾಗಿದೆ. ಇದರಿಂದಾಗಿ ಹಣ ವರ್ಗವಣೆ ಹಿಂದಿಗಿ0ತ ಸುಲಭವಾಗಿದೆ ಎನ್ನಲಾಗಿದೆ.

ಆಂಡ್ರಾಯ್ಡ್‌ನಲ್ಲಿ Facebook Instagram ವಿಡಿಯೋ ಡೌನ್‌ಲೋಡ್ ಮಾಡುವುದು ಹೇಗೆ..?
ಬೇರೆ ಆಪ್‌ಗಳಿಗೆ ಸೆಡ್ಡು:

ಬೇರೆ ಆಪ್‌ಗಳಿಗೆ ಸೆಡ್ಡು:

ಈಗಾಗಲೇ ಮಾರುಕಟ್ಟೆಯಲ್ಲಿ ಅನೇಕ ಆಪ್ ಗಳು ಪೇಮೆಂಟ್ ಸೇವೆಯನ್ನು ನೀಡುತ್ತಿದೆ. ಅಲ್ಲದೇ ವಾಟ್ಸ್‌ಆಪ್ ಸಹ ಇದೇ ಹಾದಿಯಲ್ಲಿ ಸಾಗಲು ಮುಂದಾಗಿದೆ. ಇದರಿಂದಾಗಿ ಬೇರೆ ಆಪ್‌ಗಳಿಗೆ ಸೆಡ್ಡು ಹೊಡೆಯಲು ಪೇಟಿಎಂ ಈ ಹೊಸ ಸೇವೆಯನ್ನು ನೀಡಲು ಮುಂದಾಗಿದೆ.

Best Mobiles in India

English summary
Paytm Integrates BHIM UPI to the Paytm Android Application. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X