ಪ್ರಖ್ಯಾತ 'ಪ್ರಿಸ್ಮ' ಆಪ್‌ ಡೌನ್‌ಲೋಡ್‌ ಆಂಡ್ರಾಯ್ಡ್‌ಗಳಿಗೂ ಲಭ್ಯ

Written By:

ರೆಗ್ಯೂಲರ್ ಮತ್ತು ಬೋರಿಂಗ್ ಫೋಟೋಗಳನ್ನು ಡ್ರಾಮಾಟಿಕ್ ಫೋಟೋಗಳ ಹಾಗೆ ಕಾಣುವಂತೆ ಮಾಡುವ ವೈರಲ್‌ ಆಪ್‌ 'ಪ್ರಿಸ್ಮ (Prisma)' ಬಗ್ಗೆ ಈ ಹಿಂದೆ ಈಗಾಗಲೇ ಗಿಜ್‌ಬಾಟ್‌ ಓದುಗರು ತಿಳಿದಿರಬಹುದು. ಪ್ರಿಸ್ಮ ಅಪ್ಲಿಕೇಶನ್‌ ಬಿಡುಗಡೆ ಆದ ಕೇವಲ ಒಂದು ವಾರದಲ್ಲಿ ಜಗತ್ತಿನಾದ್ಯಂತರ ಪ್ರಖ್ಯಾತಗೊಂಡಿತ್ತು. ಈ ಹಿಂದೆ ಕೇವಲ ಆಪಲ್‌ನ ಐಫೋನ್‌ಗಳಿಗೆ ಮಾತ್ರ ಲಭ್ಯವಿತ್ತು. ಆದರೆ ಇಂದಿನಿಂದ ಆಂಡ್ರಾಯ್ಡ್‌ ಬಳಕೆದಾರರು ಸಹ ಪ್ರಿಸ್ಮ ಆಪ್‌ ಅನ್ನು ಡೌನ್‌ಲೋಡ್‌ ಮಾಡಿ ಬಳಸಬಹುದಾಗಿದೆ.

ಬೋರಿಂಗ್‌ ಫೋಟೋಗಳನ್ನು ಕಣ್ಸೆಳೆಯುವಂತೆ ಮಾಡುವ 'ವೈರಲ್ ಆಪ್‌'

ಶೇಕಡ 70 ಕ್ಕಿಂತ ಹೆಚ್ಚಿನವರು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಕೆದಾರರಿದ್ದು, ಈ ಹಿಂದೆ 'ಪ್ರಿಸ್ಮ' ಆಪ್‌ ಕೇವಲ ಐಫೋನ್‌ ಬಳಕೆದಾರರಿಗೆ ಡೌನ್‌ಲೋಡ್‌ ಮಾಡಿ ಬಳಸುವ ಅವಕಾಶ ಇದ್ದದ್ದು ಆಂಡ್ರಾಯ್ಡ್‌ ಬಳಕೆದಾರರಿಗೆ ನಿರಾಸೆ ಉಂಟು ಮಾಡಿತ್ತು. ಆದರೆ ಇಂದಿನಿಂದ ಸ್ಮಾರ್ಟ್‌ಫೋನ್‌ ಬಳಕೆದಾರರು ಸಹ ಪ್ರಿಸ್ಮ ಆಪ್‌ ಅನ್ನು ಡೌನ್‌ಲೋಡ್‌ ಮಾಡಿ ಬಳಸಬಹುದಾಗಿದೆ. ಪ್ರಿಸ್ಮ ಆಪ್‌ ಡೌನ್‌ಲೋಡ್‌ಗಾಗಿ ಮತ್ತು ವಿಶೇಷ ಮಾಹಿತಿಗಾಗಿ ಲೇಖನದ ಸ್ಲೈಡರ್‌ ಕ್ಲಿಕ್ಕಿಸಿ ಓದಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೂಗಲ್‌ ಮೊಬೈಲ್‌ ಮತ್ತು ಆಂಡ್ರಾಯ್ಡ್‌ ಬಳಕೆದಾರರು

ಗೂಗಲ್‌ ಮೊಬೈಲ್‌ ಮತ್ತು ಆಂಡ್ರಾಯ್ಡ್‌ ಬಳಕೆದಾರರು

'ಪ್ರಿಸ್ಮ' ಆಪ್‌ ಅಭಿವೃದ್ದಿಗಾರರು ಆಂಡ್ರಾಯ್ಡ್‌ ಮತ್ತು ಗೂಗಲ್‌ ಮೊಬೈಲ್‌ ವೇದಿಕೆಗಳಿಗೂ ಸಹ ಯಶಸ್ವಿಯಾಗಿ ಪ್ರಿಸ್ಮ ಆಪ್‌ ಅನ್ನು ಅಭಿವೃದ್ದಿಪಡಿಸಿ ಬಿಡುಗಡೆ ಮಾಡಿದ್ದಾರೆ. ಇಂದಿನಿಂದ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಪ್ರಿಸ್ಮ ಆಪ್‌ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿದೆ.

ಪ್ರಿಸ್ಮ ವೆಬ್‌ಸೈಟ್‌

ಪ್ರಿಸ್ಮ ವೆಬ್‌ಸೈಟ್‌

ಕಳೆದವಾರ ಪ್ರಿಸ್ಮ ಆಪ್‌ ಆಂಡ್ರಾಯ್ಡ್‌ ವೇದಿಕೆಗಳಿಗೆ ಲಭ್ಯವಿತ್ತು, ಆದರೆ ಪ್ರಿಸ್ಮ ಆಪ್‌ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡವರಿಗಾಗಿ ಮಾತ್ರ ಆಪ್‌ನ ಲಿಂಕ್‌ ಲಭ್ಯವಿತ್ತು.

ಪೇಯಿಂಟಿಂಗ್ ಆಪ್‌

ಪೇಯಿಂಟಿಂಗ್ ಆಪ್‌

ಆಂಡ್ರಾಯ್ಡ್ ಬಳಕೆದಾರರಿಗೆ ಪ್ರಿಸ್ಮ ಆಪ್‌ ಹೊಸದೆನಿಸಬಹುದು. ಪ್ರಿಸ್ಮ ಅಪ್ಲಿಕೇಶನ್‌ ರೆಗ್ಯುಲರ್‌ ಮತ್ತು ಬಳಕೆದಾರರ ಯಾವುದೇ ಫೋಟೋಗಳನ್ನು ಚಿತ್ರ ಬಿಡಿಸಿದ ಹಾಗೆ ಕಾಣುವಂತೆ ಮಾಡುತ್ತದೆ. ಪ್ರಖ್ಯಾತ ಚಿತ್ರಕಲಾಕಾರರು ಚಿತ್ರ ಬಿಡಿಸಿದಂತೆ ಕಾಣುವ ಹಾಗೆ ಪ್ರಿಸ್ಮ ಆಪ್‌ ಫೋಟೋಗಳನ್ನು ಬದಲಿಸುತ್ತದೆ.

ಆಪ್‌ ಡೌನ್‌ಲೋಡ್‌

ಆಪ್‌ ಡೌನ್‌ಲೋಡ್‌

ಪ್ರಿಸ್ಮ ಆಪ್‌ ಕೇವಲ ಐಫೋನ್‌ಗಳಿಗೆ 10.6 ದಶಲಕ್ಷ ಡೌನ್‌ಲೋಡ್‌ ಆಗಿದ್ದು, 1.55 ದಶಲಕ್ಷ ದಿನನಿತ್ಯ ಬಳಕೆದಾರರನ್ನು ಆಪ್‌ ಹೊಂದಿದೆ.

ಆಪ್‌ ಬಗೆಗಿನ ದೂರು

ಆಪ್‌ ಬಗೆಗಿನ ದೂರು

ಆಪ್‌ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಉತ್ತಮವಾಗಿ ಡೌನ್‌ಲೋಡ್‌ ಪ್ರಕ್ರಿಯೆ ಆರಂಭಿಸಿದ್ದು, ಐಓಎಸ್‌ನಲ್ಲಿರುವ 'S ave' ಫೀಚರ್‌ ಸಮಸ್ಯೆ ಇದ್ದು, 'Save artwork automatically' ಫೀಚರ್‌ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರು ಬಂದಿತ್ತು. ಆದರೆ ಪ್ರಸ್ತುತದಲ್ಲಿ ಅಂತಹ ಯಾವುದೇ ಸಮಸ್ಯೆಗಳು ಪ್ರಿಸ್ಮ ಆಪ್‌ನಲ್ಲಿ ಇಲ್ಲ.

 ಫೋಟೋ ಫಿಲ್ಟರ್‌ ಆಪ್‌

ಫೋಟೋ ಫಿಲ್ಟರ್‌ ಆಪ್‌

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಉತ್ತಮ ರೇಟಿಂಗ್‌ ಪಡೆದಿರುವ ಪ್ರಿಸ್ಮ ಇತರೆ ಫೋಟೋ ಫಿಲ್ಟರ್‌ ಆಪ್‌ಗಳಿಗಿಂತ ಗಂಭೀರವಾಗಿ ಹೆಚ್ಚು ಬಳಕೆಯಾಗುತ್ತಿದೆ.

 ಡೌನ್‌ಲೋಡ್‌ ಪ್ರಿಸ್ಮ

ಡೌನ್‌ಲೋಡ್‌ ಪ್ರಿಸ್ಮ

ಪ್ರಿಸ್ಮ ಆಪ್‌ ಅನ್ನು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗೆ ಡೌನ್‌ಲೋಡ್‌ ಮಾಡಲು ಕ್ಲಿಕ್‌ ಮಾಡಿ "Prisma".
ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್‌ ಆದ ನಂತರ ಬಳಕೆದಾರರು ಫೋಟೋಗಳನ್ನು ಅಪ್‌ಲೋಡ್‌ ಮಾಡಿ ಅದೇ ಫೋಟೋಗಳನ್ನು ಪ್ರಖ್ಯಾತ ಚಿತ್ರಕಲಾಕಾರರು ಬಿಡಿಸಿರುವಂತೆ ಪಡೆಯಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Prisma for Android Now Available to Download. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot