ನೀವು ಈ ಜಿಯೋ ಆಪ್ ಡೌನ್‌ಲೋಡ್ ಮಾಡಿದ್ದರೇ ತಕ್ಷಣ ಡಿಲೀಟ್ ಮಾಡಿ: ಅದು ಫೇಕ್ ಆಪ್..!

|

ಮಾರುಕಟ್ಟೆಯಲ್ಲಿ ಜಿಯೋ ಹೆಸರಿಗೆ ಸಾಕಷ್ಟು ಬೆಲೆ ಬಂದಿದೆ. ಅಂಬಾನಿ ಜಿಯೋ ಹೆಸರಿನಲ್ಲಿ ಬಳಕೆದಾರರ ನಂಬಿಕೆಯನ್ನು ಗಳಿಸಿಕೊಂಡಿದ್ದು, ಇದೇ ಹಿನ್ನಲೆಯಲ್ಲಿ ಜಿಯೋ ಹೆಸರಿನಲ್ಲಿ ಸಾಕಷ್ಟು ಹೊಸ ಪ್ರಯತ್ನಗಳನ್ನು ಮಾಡಲು ಮುಂದಾಗಿದ್ದಾರೆ. ತಮ್ಮ ಹೊಸ ಸೇವೆಗಳನ್ನು ಜಿಯೋ ಹೆಸರಿನಲ್ಲಿಯೇ ಪ್ರಾರಂಭಿಸುತ್ತಿದ್ದಾರೆ. ಆದರೆ ಇದೇ ಅನೇಕ ತೊಂದರೆಗಳಿಗೆ ಕಾರಣವಾಗುತ್ತಿದೆ.

ನೀವು ಈ ಜಿಯೋ ಆಪ್ ಡೌನ್‌ಲೋಡ್ ಮಾಡಿದ್ದರೇ ತಕ್ಷಣ ಡಿಲೀಟ್ ಮಾಡಿ: ಅದು ಫೇಕ್ ಆಪ್..!

ಇದೇ ಕೆಲವು ದಿನಗಳ ಹಿಂದೆ ದೇಶದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಕ್ರಿಪ್ಟೋಕರೆಸ್ಸಿ ವಿಚಾರವಾಗಿ ರಿಲಯನ್ಸ್ ತನ್ನದ ಆದ ಕ್ರಿಪ್ಟೋಕರೆಸ್ಸಿ ಜಿಯೋ ಕಾಯಿನ್ ಬಿಡುಗಡೆ ಮಾಡುವುದಾಗಿ ಘೋಷನೆ ಮಾಡಿತ್ತು. ಅಲ್ಲದೇ ಅಂಬಾನಿ ಈ ಹೊಸ ಜವಬ್ದಾರಿಯನ್ನು ತಮ್ಮ ಮಗ ಆಕಾಶ್‌ಗೆ ವಹಿಸಿದ್ದರು.

ಓದಿರಿ: ತಿಂಗಳ ಸಂಬಳ ಪಡೆಯುತ್ತಿದ್ದ ಪೇಟಿಎಂ ನೌಕರರು ಈಗ ಕೋಟ್ಯಾಧಿಪತಿಗಳು..!

ಅಧಿಕೃತ ಮಾಹಿತಿ ಇಲ್ಲ:

ಅಧಿಕೃತ ಮಾಹಿತಿ ಇಲ್ಲ:

ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಕಿಡಿಗೇಡಿಗಳು ಜಿಯೋ ಕಾಯಿನ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯೂ ಹೊರ ಬರುವ ಮುಂಚೆಯೇ ಜಿಯೋ ಕಾಯಿನ್ ಹೆಸರಿನಲ್ಲಿ ಫೇಕ್ ಆಪ್‌ ವೊಂದನ್ನು ಸೃಷ್ಟಿಸಿ ಪ್ಲೇ ಸ್ಟೋರಿನಲ್ಲಿ ಹರಿ ಬಿಟ್ಟಿದ್ದಾರೆ. ಜಿಯೋ ತನ್ನ ಕಾಯಿನ್ ಬಿಡುಗಡೆ ಮಡುವ ಕುರಿತು ಯಾವುದೇ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ. ಅದಲ್ಲದೇ ಭಾರತದಲ್ಲಿ ಇನ್ನು ಕ್ರಿಪ್ಟೋ ಕರೆಸ್ಸಿಗೆ ಮಾನ್ಯತೆ ಸಿಕ್ಕಿಲ್ಲ ಎನ್ನಲಾಗಿದೆ.

ಜಿಯೋ ಕಾಯಿನ್ ಆಪ್ ಫೇಕ್:

ಜಿಯೋ ಕಾಯಿನ್ ಆಪ್ ಫೇಕ್:

ಈಗಾಗಲೇ ಗೂಗಲ್ ತನ್ನ ಪ್ಲೇ ಸ್ಟೋರಿನಲ್ಲಿ ಇರುವಂತಹ ಫೇಕ್ ಆಪ್‌ಗಳನ್ನು ನಿರ್ಮೂಲನೆ ಮಾಡುವ ಕಾರ್ಯಕ್ಕೆ ಮುಂದಾಗಿದೆ. ಆದರೆ ಇದೇ ಸಂದರ್ಭದಲ್ಲಿ ಪ್ಲೇ ಸ್ಟೋರಿನಲ್ಲ ಜಿಯೋ ಕಾಯಿನ್ ಹೆಸರಿನಲ್ಲಿ ಆಪ್ ವೊಂದು ಕಾಣಿಸಿಕೊಂಡಿದ್ದು, ಗ್ರಾಹಕರನ್ನು ವಂಚಿಸಲು ಶುರು ಮಾಡಿದೆ. ಬಳಕೆದಾರರು ಇದರಿಂದ ಎಚ್ಚರಿಕೆ ವಹಿಸುವುದ ಅಗತ್ಯ.

ಸುಮಾರು 10000 ಡೌನ್‌ಲೋಡ್:

ಸುಮಾರು 10000 ಡೌನ್‌ಲೋಡ್:

ಜಿಯೋ ಕಾಯಿನ್ ಹೆಸರಿನಲ್ಲಿ ಬಿಡುಗಡೆಯಾಗಿರುವ ಫೇಕ್ ಆಪ್ ಅನ್ನು ಸುಮಾರು 10000 ಮಂದಿ ಡೌನ್‌ ಲೋಡ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ನೀವು ಸಹ ತಿಳಿಯದೆ ಡೌನ್‌ ಲೋಡ್ ಮಾಡಿಕೊಂಡಿದ್ದರೇ ಶೀಘ್ರವೇ ಅದನ್ನು ಡಿಲೀಟ್ ಮಾಡಿ ಇಲ್ಲವಾದರೆ ನೀವು ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು.

Jio-Fi ಪಾಸ್‌ವರ್ಡ್ ಬದಲಾಯಿಸುವುದು ಹೇಗೆ,,?
ಎಚ್ಚರ:

ಎಚ್ಚರ:

ಜಿಯೋ ಕಾಯಿನ್ ಹೆಸರಿನಲ್ಲಿ ಮೋಸ ಮಾಡುತ್ತಿರುವ ಹಿನ್ನಲೆಯಲ್ಲಿ ರಿಲಯನ್ಸ್ ಎಚ್ಚರಿಕೆಯ ಸಂದೇಶವನ್ನು ನೀಡಿದ್ದು, ಯಾರು ಜಿಯೋ ಹೆಸರಿನಲ್ಲಿ ಮೋಸ ಮಾಡಲು ಮುಂದಾಗುವರೋ ಅವರಿಗೆ ಕಾನೂನಿನ ಮೂಲಕ ತಕ್ಕ ಪಾಠವನ್ನು ಕಲಿಸುವುದಾಗಿ ತಿಳಿಸಿದೆ.

ಅಧಿಕೃತ ಮಾಹಿತಿ:

ಅಧಿಕೃತ ಮಾಹಿತಿ:

ಜಿಯೋ ತನ್ನ ಸೇವೆಗಳನ್ನು ನೀಡುವ ಮೊದಲು ಅಧಿಕೃತ ಮಾಹಿತಿಯನ್ನು ಮಾಧ್ಯಮಗಳ ಮೂಲಕ ನೀಡಲಿದೆ ಎನ್ನಲಾಗಿದೆ. ಇದನ್ನು ಬಿಟ್ಟರೇ ಯಾವುದೇ ರೀತಿಯಲ್ಲಿಯೂ ಸೈಲೆಂಟಾಗಿ ಕಾರ್ಯವನ್ನು ಮಾಡುವುದಿಲ್ಲ. ಹೀಗೆ ನಕಲಿ ಸೇವೆಗಳಿಂದ ನೀವು ಎಚ್ಚರ ವಹಿಸುವುದು ಅಗತ್ಯ.

Best Mobiles in India

English summary
Reliance Jio Has Not Launched Any JioCoin Application. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X