ಅಪ್‌ಡೇಟ್‌ ಆಗಿದೆ 'ಸ್ಯಾಮ್‌ಸಂಗ್‌ ವಿಡಿಯೊ ಲೈಬ್ರರಿ' ಆಪ್‌!.ಬೆಸ್ಟ್‌ ಫೀಚರ್ಸ್‌!

|

ಸ್ಮಾರ್ಟ್‌ಫೋನ್‌ಗಳಲ್ಲಿ ಸಾಮಾಜಿಕ ಜಾಲಾತಾಣಗಳನ್ನು ಬಿಟ್ಟರೇ ನೆಕ್ಸ್ಟ್‌ ಬೆಸ್ಟ್‌ ಎಂಟರ್‌ಟೈನಮೆಂಟ್ ಅಂದರೇ ಅದು ವಿಡಿಯೊಗಳು. ಆದರೆ ಸ್ಮಾರ್ಟ್‌ಫೋನ್‌ಗಳಲ್ಲಿ ವಿಡಿಯೊಗಳನ್ನು ಒಂದೇ ಆಪ್‌ನಲ್ಲಿ ವೀಕ್ಷಿಸುವುದನ್ನು ಬಳಕೆದಾರರು ಇಚ್ಚಿಸುತ್ತಾರೆ. ಈ ನಿಟ್ಟಿನಲ್ಲಿ 'ಸ್ಯಾಮ್‌ಸಂಗ್' ಸಂಸ್ಥೆ ಪರಿಚಯಿಸಿದ್ದ 'ವಿಡಿಯೊ ಲೈಬ್ರರಿ' ಆಪ್‌ ಇದೀಗ ಅಪ್‌ಡೇಟ್ ಆಗಿದೆ. ಆದರೆ ಬಹುತೇಕ ಗ್ಯಾಲ್ಯಾಕ್ಸಿ ಅಭಿಮಾನಿ ಬಳಕೆದಾರರಿಗೆ ಕಂಪನಿಯ ಈ ಆಪ್‌ ಬಗ್ಗೆ ಬಹುಶಃ ಗೊತ್ತಿರಲಿಲ್ಲವೇನೊ.

ಅಪ್‌ಡೇಟ್‌ ಆಗಿದೆ 'ಸ್ಯಾಮ್‌ಸಂಗ್‌ ವಿಡಿಯೊ ಲೈಬ್ರರಿ' ಆಪ್‌!.ಬೆಸ್ಟ್‌  ಫೀಚರ್ಸ್‌!

ಹೌದು, ಸ್ಯಾಮ್‌ಸಂಗ್‌ ಕಂಪನಿಯ 'ಸ್ಯಾಮ್‌ಸಂಗ್‌ ವಿಡಿಯೊ ಲೈಬ್ರರಿ' ಆಪ್‌ ಅನ್ನು ಅಪ್‌ಡೇಟ್ ಮಾಡಿದ್ದು, ಒನ್‌ UI ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಬಳಕೆದಾರರು ಸ್ಮಾರ್ಟ್‌ಫೋನ್‌ಗಳಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳುತ್ತಾರೆ ಮತ್ತು ವಿವಿಧ ಮೂಲಗಳಿಂದ ವಿಡಿಯೊಗಳ ಬಂದಿರುತ್ತವೆ. ಆದರೆ ಅವು ಸಂಬಂಧಿಸಿದ ಆಪ್‌ಗಳಲ್ಲಿ ಸ್ಟೋರ್‌ ಆಗಿರುತ್ತವೆ. ಸ್ಯಾಮ್‌ಸಂಗ್‌ ವಿಡಿಯೊ ಲೈಬ್ರರಿ ಆಪ್‌ನಲ್ಲಿ ಎಲ್ಲ ವಿಡಿಯೊಗಳನ್ನು ಒಂದೆಡೇ ಸೇರಿಸಲಿದೆ.

ಅಪ್‌ಡೇಟ್‌ ಆಗಿದೆ 'ಸ್ಯಾಮ್‌ಸಂಗ್‌ ವಿಡಿಯೊ ಲೈಬ್ರರಿ' ಆಪ್‌!.ಬೆಸ್ಟ್‌  ಫೀಚರ್ಸ್‌!

ಸ್ಮಾರ್ಟ್‌ಫೋನ್‌ನಲ್ಲಿರುವ ಎಲ್ಲ ವಿಡಿಯೊಗಳು ಒಂದೇ ಆಪ್‌ನಲ್ಲಿ ಲಭ್ಯವಾಗಲಿದ್ದು, ಇದು ಬಳಕೆದಾರರು ವಿಡಿಯೊ ವೀಕ್ಷಿಸಲು ಅನುಕೂಲ ಎನಿಸಲಿದೆ. ಇದರೊಂದಿಗೆ ಈ ಆಪ್‌ ಮತ್ತಷ್ಟು ಹೊಸತನದ ಫೀಚರ್ಸ್‌ಗಳನ್ನು ಸೇರಿಸಿಕೊಂಡಿದ್ದು, ಇವು ಬಳಕೆದಾರಿರಗೆ ಅತ್ಯುತ್ತಮ ಸೇವೆ ನೀಡಲಿವೆ. ಹಾಗಾದರೇ ಸ್ಯಾಮ್‌ಸಂಗ್‌ ವಿಡಿಯೊ ಲೈಬ್ರರಿ ಆಪ್‌ ಒಳಗೊಂಡಿರುವ ವಿಶೇಷ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ಗೂಗಲ್‌ ಸರ್ಚ್‌ ಹಿಸ್ಟರಿ ಆಫ್‌ ಮಾಡಬೇಕೆ?..ಹೀಗೆ ಮಾಡಿ! ಓದಿರಿ : ಗೂಗಲ್‌ ಸರ್ಚ್‌ ಹಿಸ್ಟರಿ ಆಫ್‌ ಮಾಡಬೇಕೆ?..ಹೀಗೆ ಮಾಡಿ!

ಅಪ್‌ಡೇಟ್ ವರ್ಷನ್

ಅಪ್‌ಡೇಟ್ ವರ್ಷನ್

ಸ್ಯಾಮ್‌ಸಂಗ್ ವಿಡಿಯೊ ಲೈಬ್ರರಿ ಆಪ್‌ ಹೊಸದಾಗಿ ಅಪ್‌ಡೇಟ್ ಆಗಿದ್ದು, ಒನ್‌ UI ಇಂಟರ್‌ಫೇಸ್‌ ತಂತ್ರಜ್ಞಾನ ಸೇರಿಕೊಂಡಿದೆ. ಸ್ಮಾರ್ಟ್‌ಫೋನ್‌ನಲ್ಲಿ ಇರುವ ಎಲ್ಲ ಮಾದರಿಯ ವಿಡಿಯೊಗಳು ಒಂದೇಕಡೆ ಸೀಗುವಂತೆ ಈ ಆಪ್‌ ರಚಿತವಾಗಿದ್ದು, ಪ್ರತ್ಯೇಕ ಪೋಲ್ಡರ್‌ಗಳಿಗೂ ಅವಕಾಶ ಇರಲಿದೆ.

ನೈಟ್‌ಮೋಡ್‌ ಲಭ್ಯ

ನೈಟ್‌ಮೋಡ್‌ ಲಭ್ಯ

ಸದ್ಯ ಬಳಕೆದಾರರನ್ನು ಸೆಳೆಯುತ್ತಿರುವ ಹಲವು ಆಕರ್ಷಕ ಹೊಸ ಫೀಚರ್ಸ್‌ಗಳಲ್ಲಿ ಒಂದಾಗಿರುವ 'ನೈಟ್‌ಮೋಡ್‌' ಆಯ್ಕೆಯು 'ಸ್ಯಾಮ್‌ಸಂಗ್ ವಿಡಿಯೊ ಲೈಬ್ರರಿ' ಆಪ್‌ನಲ್ಲಿ ಲಭ್ಯವಿದೆ. ಈ ಆಯ್ಕೆಯು ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇಯ ಬೆಳಕಿನ ಪ್ರಖರತೆಯನ್ನು ಕಡಿಮೆ ಮಾಡಲಿದ್ದು, ಬಳಕೆದಾರರಿಗೆ ಕಣ್ಣಿಗೆ ಹಿತವೆನಿಸುವ ಅನುಭವ ನೀಡಲಿದೆ.

ಓದಿರಿ : 'ಗ್ಯಾಲ್ಯಾಕ್ಸಿ ಎ' ಸರಣಿ ಸೇರಲಿದೆ ಮತ್ತೊಂದು ಸ್ಮಾರ್ಟ್‌ಫೋನ್‌!..64ಎಂಪಿ ಕ್ಯಾಮೆರಾ! ಓದಿರಿ : 'ಗ್ಯಾಲ್ಯಾಕ್ಸಿ ಎ' ಸರಣಿ ಸೇರಲಿದೆ ಮತ್ತೊಂದು ಸ್ಮಾರ್ಟ್‌ಫೋನ್‌!..64ಎಂಪಿ ಕ್ಯಾಮೆರಾ!

ಇನ್‌ಸ್ಟಂಟ್ ಪ್ಲೇಯರ್‌

ಇನ್‌ಸ್ಟಂಟ್ ಪ್ಲೇಯರ್‌

ಸ್ಯಾಮ್‌ಸಂಗ್‌ ವಿಡಿಯೊ ಲೈಬ್ರರಿ ಆಪ್‌ ಇನ್‌ಸ್ಟಂಟ್ ಪ್ಲೇಯರ್‌ ಫೀಚರ್‌ ಅನ್ನು ಒಳಗೊಂಡಿದ್ದು, ಈ ಆಯ್ಕೆಯಲ್ಲಿ ವಿಡಿಯೊ ಚಿಕ್ಕ ವಿಂಡೊ ಫ್ರೇಮ್‌ನಲ್ಲಿ ಪ್ಲೇ ಆಗುತ್ತಿರುತ್ತದೆ. ಬಳಕೆದಾರರು ಫುಲ್‌ಸ್ಕ್ರೀನ್‌ ಮೋಡ್‌ ಆಯ್ಕೆಯನ್ನು ಟ್ಯಾಪ್‌ ಮಾಡುವ ಮೂಲಕ ಪೂರ್ಣ ಡಿಸ್‌ಪ್ಲೇಯಲ್ಲಿ ವೀಕ್ಷಿಸಬಹುದು.

ಆಪ್‌ ಲಭ್ಯತೆ

ಆಪ್‌ ಲಭ್ಯತೆ

ಆಂಡ್ರಾಯ್ಡ್‌ ಓಎಸ್‌ ಮಾದರಿಯ ಡಿವೈಸ್‌ಗಳಲ್ಲಿ ಈ ಆಪ್‌ ಬಳಸಬಹುದಾಗಿದೆ. ಬಳಕೆದಾರರು ಸ್ಯಾಮ್‌ಸಂಗ್‌ ವಿಡಿಯೊ ಲೈಬ್ರರಿ ಆಪ್‌ ಅನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಹಾಗೆಯೇ ಕಂಪನಿಯ ಗ್ಯಾಲ್ಯಾಕ್ಸಿ ಸ್ಟೋರ್‌ನಿಂದಲೂ ಸಹ ಡೌನ್‌ಲೋಡ್ ಮಾಡಿಕೊಳ್ಳಲು ಲಭ್ಯವಿದೆ.

ಓದಿರಿ : ಭಾರತೀಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಿಂದ ದೂರ ಸರಿದ ಸೋನಿ!.ಯಾಕೆ ಗೊತ್ತಾ?ಓದಿರಿ : ಭಾರತೀಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಿಂದ ದೂರ ಸರಿದ ಸೋನಿ!.ಯಾಕೆ ಗೊತ್ತಾ?

Best Mobiles in India

English summary
Samsung Video Library app updated with Instant Player, One UI interface.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X