ಜಿಯೋಸಾವನ್ಗೆ ಸೆಡ್ಡು ಹೊಡೆಯಲು ಭಾರತಕ್ಕೆ ಕಾಲಿಡುತ್ತಿದೆ 'ಸ್ಪಾಟಿಫೈ' ಆಪ್‌.!!

|

ಬಹುಶಃ ಸಂಗೀತಕ್ಕೆ ಮನಸೊಲದವರೇ ಯಾರು ಇಲ್ಲದ ಈಗೀನ ಯುವ ಪೀಳಿಗೆಗೆ ಇದೀಗ ಯಾವ ಹಾಡು ಬೇಕಾದರೂ ಕೇಳುವುದು ಸುಲಭದ ಮಾತು. ಆದರೂ ಇಂತಹ ಭಾರತೀಯ ಮ್ಯೂಸಿಕ್ ಪ್ರಿಯರಿಗೊಂದು ಸಿಹಿಸುದ್ದಿ ಇದೆ. ಅದೇನೆಪ್ಪಾ ಅಂದರೆ, ವಿಶ್ವದ ಜನಪ್ರಿಯ 'ಸ್ಪಾಟಿಫೈ' ಮ್ಯೂಸಿಕ್ ಅಪ್ಲಿಕೇಶನ್ ಇದೀಗ ಭಾರತದಲ್ಲಿ ತನ್ನ ಗಾನ ಶುರು ಮಾಡಲು ತಯಾರಾಗಿದೆ.

ಜಿಯೋಸಾವನ್ಗೆ ಸೆಡ್ಡು ಹೊಡೆಯಲು ಭಾರತಕ್ಕೆ ಕಾಲಿಡುತ್ತಿದೆ 'ಸ್ಪಾಟಿಫೈ' ಆಪ್‌.!!
ಹೌದು, ಸ್ವೀಡಿಷ್ ಮೂಲದ ಜನಪ್ರಿಯ ಮ್ಯೂಸಿಕ್ ಕಂಪನಿ ಭಾರತದಲ್ಲ 'ಸ್ಪಾಟಿಫೈ' ಆಪ್ ಮೂಲಕ ಮ್ಯೂಸಿಕ್ ಅನ್ನು ಪಸರಿಸಲು ಇದೇ ಜನವರಿ ಅಂತ್ಯದ ವೇಳೆಗೆ ಲಾಂಚ್ ಆಗುವುದಾಗಿ ಸ್ಪಷ್ಟಪಡಿಸಿದೆ. ಈ ಕುರಿತು ಕಂಪನಿ ಈಗಾಗಲೇ ಭಾರತೀಯ ಮೂಲದ ಜನಪ್ರಿಯ ಮ್ಯೂಸಿಕ್ ಸಂಸ್ಥೆ 'ಟಿ-ಸಿರೀಸ್' ಯೊಂದಿಗೆ ಸ್ವೀಡಿಷ್ ಮ್ಯೂಸಿಕ್ ಕಂಪನಿ ಮಾತುಕತೆ ನಡೆಸಿ ಒಪ್ಪಂದ ಮಾಡಿಕೊಂಡಿದೆ.

ಜಿಯೋಸಾವನ್ಗೆ ಸೆಡ್ಡು ಹೊಡೆಯಲು ಭಾರತಕ್ಕೆ ಕಾಲಿಡುತ್ತಿದೆ 'ಸ್ಪಾಟಿಫೈ' ಆಪ್‌.!!
ಟಿ-ಸಿರೀಸ್ ಭಾರತೀಯ ಅತೀ ದೊಡ್ಡ ಮತ್ತು ಜನಪ್ರಿಯ ಮ್ಯೂಸಿಕ್ ಸಂಸ್ಥೆಯಾಗಿದ್ದು, ಲಕ್ಷಾಂತರ ಹಾಡುಗಳಿಗೆ ತನ್ನ ಹಕ್ಕುಸ್ವಾಮ್ಯವನ್ನು ಹೊಂದಿದೆ. ಇದೀಗ ಸ್ವೀಡಿಷ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದರಿಂದ ಟಿ-ಸಿರೀಸ್ ತನ್ನ ಕೆಟಲಾಗ್‌ನಲ್ಲಿಯ 1,60,000 ಸಾಂಗ್ಸ್‌ಗಳನ್ನು ಸ್ಪಾಟಿಫೈನಲ್ಲಿ ಬಳಸಿಕೊಳ್ಳಲು ಅನುಮತಿ ನೀಡಿದ್ದು, ಕೇಳುಗರು ಇದರ ಪ್ರಯೋಜನ ಪಡೆಯಲಿದ್ದಾರೆ.

ಜಿಯೋಸಾವನ್ಗೆ ಸೆಡ್ಡು ಹೊಡೆಯಲು ಭಾರತಕ್ಕೆ ಕಾಲಿಡುತ್ತಿದೆ 'ಸ್ಪಾಟಿಫೈ' ಆಪ್‌.!!
ಸ್ವೀಡಿಷ್ ಮೂಲದ ಈ ಮ್ಯೂಸಿಕ್ ಕಂಪನಿ ಮುಂಬೈನಲ್ಲಿ ಈಗಾಗಲೇ ಕಛೇರಿಯೊಂದನ್ನು ತೆರೆದುಕೊಂಡಿಂದ್ದು, ಈ ಕಛೇರಿಗೆ ಕೆಲಸಕ್ಕೆ ಸುಮಾರು 300 ನೌಕರರನ್ನು ಸಹ ನೇಮಕ ಮಾಡಿಕೊಂಡಿದೆ ಎಂದು ವರದಿಗಳು ಹೇಳುತ್ತಿವೆ. ಇದರೊಂದಿಗೆ ಮುಂದಿನ ದಿನಗಳಲ್ಲಿ ಸೋನಿ, ಯುನಿವರ್ಸಲ್ ಮತ್ತು ವಾರ್ನರ್, ಜನಪ್ರಿಯ ಮ್ಯೂಸಿಕ್ ಸಂಸ್ಥೆಗಳೊಂದಿಗೆಯೂ ಸಹಭಾಗಿತ್ವ ಹೊಂದುವದು ಎಂದು ಹೇಳಲಾಗುತ್ತಿದೆ.

ಜಿಯೋಸಾವನ್ಗೆ ಸೆಡ್ಡು ಹೊಡೆಯಲು ಭಾರತಕ್ಕೆ ಕಾಲಿಡುತ್ತಿದೆ 'ಸ್ಪಾಟಿಫೈ' ಆಪ್‌.!!
ಸ್ಪಾಟಿಫೈ ಮ್ಯೂಸಿಕ್ ಆಪ್ ನಲ್ಲಿ ಹಿಂದಿಯ ಬಾಲಿವುಡ್ ಹಾಡುಗಳೊಂದಿಗೆ ಐದು ಸ್ಥಳೀಯ ಪ್ರಾದೇಶಿಕ ಭಾಷೆಗಳಾದ ಪಂಜಾಬಿ, ತಮಿಳ,ತೆಲಗು, ಮಲಯಾಳಂ ಮತ್ತು ಬಂಗಾಲಿ ಭಾಷೆಗಳನ್ನು ಸಹ ಕೇಳುಗರಿಗೆ ನೀಡಲಾಗುವುದು ಎನ್ನಲಾಗುತ್ತಿದೆ. ಸ್ಪಾಟಿಫೈ ಮ್ಯೂಸಿಕ್ ಆಪ್ ಭಾರತದಲ್ಲಿ ನೆಲೆನಿಲ್ಲಲು ಭಾರತೀಯ ಜನಪ್ರಿಯ ಮ್ಯೂಸಿಕ್ ಆಪ್‌ಗಳಾದ ಗಾನಾ, ಸಾವನ್ ಮತ್ತು ಆಪಲ್ ಮ್ಯೂಸಿಕ್‌ಗಳೊಂದಿಗೆ ಸ್ಪರ್ಧಿಸಬೇಕಾಗಿದೆ ಎನ್ನಲಾಗುತ್ತಿದೆ.
Best Mobiles in India

English summary
If this turns out to be true, you’ll no longer need VPN to access Spotify.To know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X