ಸೆಂಡ್ ಆದ ಮೆಸೇಜ್‌ ಡಿಲೀಟ್ ಮಾಡುವ ಫೀಚರ್ ಹೊಂದಿದ "ಟೆಲಿಗ್ರಾಮ್‌" ಆಪ್!!

Written By:

ವಾಟ್ಸ್‌ಆಪ್‌ಗೆ ಪೈಪೋಟಿ ನೀಡುತ್ತಿರುವ ಮತ್ತೊಂದು ಮೆಸೆಂಜರ್ ಆಪ್‌ ಎಂದರೆ ಅದು ಟೆಲಿಗ್ರಾಮ್ ಮೆಸೆಂಜರ್ ಆಪ್. ಹೇಗಾದರೂ ಮಾಡಿ ತನ್ನ ಬಳಕೆದಾರರನ್ನು ಹೆಚ್ಚಿಸಿಕೊಳ್ಳಬೇಕು ಎಂದು ಪಣತೊಟ್ಟಿರುವ ಟೆಲಿಗ್ರಾಮ್ ಆಪ್‌ ಸಂಸ್ಥೆ ವಾಟ್ಸ್‌ಆಪ್‌ಗಿಂತ ಹೆಚ್ಚಿನ ಫೀಚರ್‌ಗಳನ್ನು ಟೆಲಿಗ್ರಾಮ್‌ನಲ್ಲಿ ಅಳವಡಿಸಿಕೊಳ್ಳುತ್ತಿದೆ.

ವಾಟ್ಸ್‌ಅಪ್‌ನಲ್ಲಿ ಗ್ರಾಹಕರು ಕೇಳುತ್ತಿರುವ ಹಲವು ಫೀಚರ್‌ಗಳನ್ನು ಟೆಲಿಗ್ರಾಮ್ ಆಪ್ ಅಳವಡಿಸಿಕೊಂಡಿದ್ದು, ಮುಖ್ಯವಾಗಿ ಸೆಂಡ್ ಆದ ಮೆಸೇಜ್‌ಗಳನ್ನು ಡಿಲೀಟ್ ಮಾಡುವ ಫೀಚರ್‌ ಅನ್ನು ನೀಡಿದೆ.!! ಹೌದು. ನೀವು ಸೇಂಡ್ ಮಾಡಿದ ಮೆಸೇಜ್‌ಗಳನ್ನು ಬೇರೆಯವರ ಡಿವೈಸ್‌ನಲ್ಲಿಯೂ ಕಾಣದ ಹಾಗೆ ಡಿಲೀಟ್ ಮಾಡಬಹುದು.!!

ಸೆಂಡ್ ಆದ ಮೆಸೇಜ್‌ ಡಿಲೀಟ್ ಮಾಡುವ ಫೀಚರ್ ಹೊಂದಿದ

"ನೋಕಿಯಾ 6" ಫ್ಲಾಶ್‌ಸೇಲ್‌ಗೆ 1 ಮಿಲಿಯನ್‌ಗೂ ಹೆಚ್ಚು ಬುಕ್!! ಇನ್ನು ನೋಕಿಯಾ ಆಟ?

ಕೆಲವೊಮ್ಮೆ ವಾಟ್ಸ್‌ಆಪ್‌ನಲ್ಲಿ ಅಚಾನಕ್ ಆಗಿ ಸೆಂಡ್ ಆದ ಮೆಸೇಜ್‌ಗಳಿಂದ ಬಹಳಷ್ಟು ಸಾರಿ ಕಿರಿಕಿರಿಯಾಗುತ್ತದೆ. ಇನ್ನು ಮೆಸೇಜ್ ಸೆಂಡ್‌ ಆದ ನಂತರ ಅದನ್ನು ಡಿಲೀಟ್ ಮಾಡುವ ಆಯ್ಕೆ ಇಲ್ಲದೇ ಮುಜುಗರವನ್ನು ಅನುಭವಿಸುವ ಪ್ರಸಂಗ ಬಂದಿರುತ್ತದೆ. ಹಾಗಾಗಿ, ಗ್ರಾಹಕರು ಸೆಂಡ್ ಆದ ಮೆಸೇಜ್‌ಗಳನ್ನು ಡಿಲೀಟ್ ಮಾಡುವ ಆಯ್ಕೆ ಇರಲು ಇಚ್ಚಿಸಿದ್ದರು.

ಸೆಂಡ್ ಆದ ಮೆಸೇಜ್‌ ಡಿಲೀಟ್ ಮಾಡುವ ಫೀಚರ್ ಹೊಂದಿದ

ಇನ್ನು ಇತ್ತೀಚಿಗಷ್ಟೆ ವಾಟ್ಸ್‌ಆಪ್‌ ಸಹ ಸೆಂಡ್ ಆದ ಮೆಸೇಜ್‌ಗಳನ್ನು ಡಿಲೀಟ್ ಮಾಡುವ ಅವಕಾಶವನ್ನು ನೀಡುತ್ತಿದೆ ಎನ್ನುವ ಮಾಹಿತಿ ಎಲ್ಲೆಡೇ ಹರಿದಾಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಈ ಫೀಚರ್‌ ಮಾರುಕಟ್ಟೆಗೆ ಬರುತ್ತದೆ ಎನ್ನಲಾಗಿದೆ. ಅದಕ್ಕೂ ಮುನ್ನವೇ ಅತ್ಯುತ್ತಮ ಮೆಸೆಂಜರ್ ಆಪ್ "ಟೆಲಿಗ್ರಾಮ್" ನೂತನ ಫೀಚರ್‌ ಹೊಂದಿ ಬರುತ್ತಿದ್ದು, ಗ್ರಾಹಕರನ್ನು ಹೆಚ್ಚು ಸೆಳೆಯಬಹುದು.

English summary
You can now delete any messages you have sent using Telegram. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot