"ನೋಕಿಯಾ 6" ಫ್ಲಾಶ್‌ಸೇಲ್‌ಗೆ 1 ಮಿಲಿಯನ್‌ಗೂ ಹೆಚ್ಚು ಬುಕ್!! ಇನ್ನು ನೋಕಿಯಾ ಆಟ?

Written By:

ಬಿಡುಗಡೆಯಾದ 24 ಗಂಟೆಗಳಲ್ಲಿಯೇ 2,50,000 ರಿಜಿಸ್ಟರ್ ಆದ ನೋಕಿಯಾದ ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ "ನೋಕಿಯಾ 6" ಚೀನಾದಲ್ಲಿ ಜನವರಿ 19ರಂದು ಫ್ಲಾಶ್‌ಸೇಲ್‌ಗೆ ಬಿಡುಗಡೆಯಾಗಿದೆ. ಇಲ್ಲಿಯೂ ದಾಖಲೆ ನಿರ್ಮಿಸಿರುವ "ನೋಕಿಯಾ 6" ಫ್ಲಾಶ್‌ಸೇಲ್‌ಗೆ 1 ಮಿಲಿಯನ್‌ಗಿಂತಲೂ ಹೆಚ್ಚು ಬುಕ್ ಆಗಿದೆ.

ಸ್ಮಾರ್ಟ್‌ಪೋನ್‌ ಮಾರುಕಟ್ಟೆಯ ದಿಗ್ಗಜನಾಗಿ ಮೆರೆದಿದ್ದ ನೋಕಿಯಾ ಕಂಪೆನಿಯ ಮೊಬೈಲ್‌ಗಳೆಂದರೆ ಮೊಬೈಲ್‌ ಪ್ರಿಯರಿಗೆ ಏನೂ ಒಂದು ರೀತಿಯ ಭಾವನಾತ್ಮಕ ಸಂಭಂದವಾಗಿ ಉಳಿದಿದೆ. ಗುಣಮಟ್ಟದ ಮೊಬೈಲ್‌ ಎಂದರೆ ನೋಕಿಯಾ ಎಂಬ ಹೆಸರು ಇನ್ನು ಕೂಡ ಹಾಗೆ ಉಳಿದಿದ್ದು, ನೂತನ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಾಗಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ.

ಡ್ರೈವಿಂಗ್ ಲೈಸೆನ್ಸ್ ರಿನಿವಲ್ ಯಾಕೆ ಮಾಡಿಸಬೇಕು? ಹೇಗೆ ಮತ್ತು ಎಷ್ಟು ಖರ್ಚು?

ಇನ್ನು ಬಿಡುಗಡೆಗೆ ಮೊದಲೇ ಕುತೋಹಲ ಮೂಡಿಸಿದ್ದ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಿಡುಗಡೆಯನಂತರ ಬಳಕೆದಾರರಿಂದ ಉತ್ತಮ ಪ್ರಶಂಸೆಯನ್ನು ಪಡೆಯಿತು.ಪ್ರಸ್ತುತ ಬೆಲೆಯಲ್ಲಿ ಇರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ ಎಂದು ಹಲವರು ಹೇಳಿದ್ದರು. ಇದರಿಂದ ನೋಕಿಯಾ ಸ್ಮಾರ್ಟ್‌ಫೋನ್ ಖರೀದಿಗೆ ಹೆಚ್ಚು ಜನರು ಒಲವು ತೋರಿದ್ದಾರೆ.

ಎಷ್ಟೇ ಒಳ್ಳೆಯ ಹೆಸರಿದ್ದರೂ ಸುಲಭವಾದ ಆಂಡ್ರಾಯ್ಡ್ ಅಪ್ಲಿಕೇಶನ್‌ ಇಲ್ಲದೇ ಮೊಬೈಲ್ ಸಾಮ್ರಾಜ್ಯದಲ್ಲಿ ತನ್ನ ಮೊದಲ ಸ್ಥಾನವನ್ನು ಕಳೆದುಕೊಂಡಿದ್ದ ನೋಕಿಯಾ ಕಂಪೆನಿ ಇದೀಗ ಅತ್ಯಾಧುನಿಕ ಕ್ವಾಲ್ಕಮ್ ಚಿಪ್‌ಸೆಟ್‌ ಮತ್ತು ನೂತನ ಆಂಡ್ರಾಯ್ಡ್ ನ್ಯೂಗಾ ಅಪ್‌ಡೇಟ್ ಒಳಗೊಂಡು ಮಾರುಕಟ್ಟೆಗೆ ಕಾಲಿಟ್ಟಿದ್ದು, ಮತ್ತೆ ನೋಕಿಯಾದ ಸಾಮ್ರಾಜ್ಯ ಉದಯಿಸಬಹುದು.! ಆದರೆ, ನೋಕಿಯಾ ಭಾರತಕ್ಕೆ ಕಾಲಿಟ್ಟಾಗ ಮಾತ್ರ.!! ಏನಂತಿರಾ?

Read more about:
English summary
As anticipated, the Nokia 6 smartphone has received plenty of interest in China ahead of its January 19 flash sale. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot