ಮೊಬೈಲ್‌ನಲ್ಲಿ ಶಾರ್ಟ್‌ ವಿಡಿಯೋ ಎಡಿಟ್‌ ಮಾಡಲು ಈ ಆಪ್‌ಗಳು ಸೂಕ್ತ!

|

ಜನಪ್ರಿಯ ಶಾರ್ಟ್‌ ವಿಡಿಯೋ ಆಪ್‌ ಟಿಕ್‌ಟಾಕ್‌ ಬಳಕೆದಾರರಲ್ಲಿ ವಿಡಿಯೋ ಕ್ರಿಯೆಟ್ ಮಾಡುವ ಕ್ರೇಜ್‌ ಹುಟ್ಟುಹಾಕಿತ್ತು. ಆದರೆ ಪ್ರಸ್ತುತ ಭಾರತದಲ್ಲಿ ಬ್ಯಾನ್ ಆಗಿದೆ. ಅದಾಗ್ಯೂ ಬಳಕೆದಾರರಲ್ಲಿ ಶಾರ್ಟ್‌ ವಿಡಿಯೋ ಕ್ರಿಯೆಟ್ ಮಾಡುವ ಜೋಶ್‌ ಕಡಿಮೆ ಆಗಿಲ್ಲ. ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಇತರೆ ಕೆಲವು ಶಾರ್ಟ್‌ ವಿಡಿಯೋ ಆಪ್‌ಗಳ ಮೂಲಕ ವಿಡಿಯೋ ಕ್ರಿಯೆಟ್ ಮಾಡಿ ಅಪ್‌ಲೋಡ್ ಮಾಡುತ್ತಾರೆ. ಆದರೆ ವಿಡಿಯೋ ಅಪ್‌ಲೋಡ್ ಮಾಡುವ ಮುನ್ನ ವಿಡಿಯೋ ಎಡಿಟ್ ಮಾಡಲು ಬಳಕೆದಾರರು ಎಡಿಟಿಂಗ್‌ ಆಪ್‌ಗಳ ಮೋರೆ ಹೋಗುತ್ತಾರೆ.

ವಿಡಿಯೋ

ಹೌದು, ಶಾರ್ಟ್‌ ವಿಡಿಯೋ ಆಪ್‌ ಗಳಲ್ಲಿ ವಿಡಿಯೋ ಅಪ್‌ಲೋಡ್ ಮಾಡಿ ಅನೇಕರು ಜನಪ್ರಿಯರಾಗಿದ್ದಾರೆ. ಅವರ ಪ್ರತಿಭೆ ಅನಾವರಣ ಮಾಡುವ ಮೂಲಕ ದೊಡ್ಡ ಸಂಖ್ಯೆಯಲ್ಲಿ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಇನ್ನು ಈ ಶಾರ್ಟ್‌ ವಿಡಿಯೋ ಆಪ್‌ಗಳಲ್ಲಿ ಕೆಲವರು ವಿಡಿಯೋವನ್ನು ನೇರವಾಗಿ ಶೂಟ್ ಮಾಡಿ ಅಪ್‌ಲೋಡ್ ಮಾಡುತ್ತಾರೆ. ಇನ್ನು ಕೆಲವರು ಥರ್ಡ್‌ಪಾರ್ಟಿ ಆಪ್‌ಗಳಲ್ಲಿ ವಿಡಿಯೋ ಎಡಿಟಿಂಗ್ ಮಾಡಿ ಅಪ್‌ಲೋಡ್ ಮಾಡುವರು. ಹಾಗಾದರೇ ಶಾರ್ಟ್‌ ವಿಡಿಯೋ ಎಡಿಟಿಂಗ್ ಮಾಡಲು ಪೂರಕವಾಗಿರುವ ಆಪ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಟಿಂಬ್ರ-TIMBRE

ಟಿಂಬ್ರ-TIMBRE

ಈ ಟಿಂಬ್ರ ವಿಡಿಯೊ ಎಡಿಟಿಂಗ್ ಆಪ್‌ ಸಹ ಹಲವು ಅಗತ್ಯ ಸೌಲಬ್ಯಗಳನ್ನು ಒಳಗೊಂಡಿದ್ದು, ವಿಡಿಯೊ ಮರ್ಜ್, ಕಟ್‌, ಕನವರ್ಟ್‌, ಸ್ಪ್ಲಿಟ್‌, ವಿಡಿಯೊ ಸ್ಪೀಡ್‌, ರಿವರ್ಸ್‌ ಆಯ್ಕೆಗಳು ಇವೆ. ಜೊತೆಗೆ ಬೇಸಿಕ್ ಎಡಿಟಿಂಗ್ ಆಯ್ಕೆಗಳಿದ್ದು, ವಿಡಿಯೊಗೆ ಮ್ಯೂಸಿಕ್ ಸೇರಿಸುವ ಆಯ್ಕೆ ನೀಡಲಾಗಿದೆ. ಹಾಗೆಯೇ ಕಲರ್ ಫೀಲ್ಟರ್ ಆಯ್ಕೆ, ವಿಡಿಯೊ ಟ್ರಿಮ್, ಸ್ಟಿಕ್ಕರ್ಸ್‌, ಜಿಐಎಫ್‌, ಸೇರಿದಂತೆ ಟೆಕ್ಟ್ಸ್‌ ಸೌಲಭ್ಯ ಇದೆ.

ಇನ್‌ಶಾಟ್‌-InShot

ಇನ್‌ಶಾಟ್‌-InShot

ಇನ್‌ಶಾಟ್‌ ಆಪ್‌ ಜನಪ್ರಿಯತೆ ಪಡೆದ ವಿಡಿಯೊ ಅಪ್ಲಿಕೇಶನ್ ಆಗಿದ್ದು, ಹಲವು ಆಯ್ಕೆಗಳ ಸಿಗಲಿವೆ. ಈ ಆಪ್‌ನಲ್ಲಿ ಅಗತ್ಯ ಬೇಸಿಕ್ ಎಡಿಟಿಂಗ್ ಆಯ್ಕೆಗಳೊಂದಿಗೆ ವಿಡಿಯೊ ವೇಗದ ಏರಿಳಿತ ಮಾಡುವ ಆಯ್ಕೆ, ಮ್ಯೂಸಿಕ್ ಸೇರಿಸುವ ಆಯ್ಕೆ ನೀಡಲಾಗಿದೆ. ಹಾಗೆಯೇ ಸಾಫ್ಟ್ ಟ್ಯೂನ್‌, ಕಲರ್ ಫೀಲ್ಟರ್ ಆಯ್ಕೆ, ವಿಡಿಯೊ ಟ್ರಿಮ್, ಸ್ಟಿಕ್ಕರ್ಸ್‌, ಕ್ರೇಜಿ ಮೀರರ್‌, ಸೇರಿದಂತೆ ಟೆಕ್ಟ್ಸ್‌ ಸೇರಿಸಬಹುದಾಗಿದೆ.

ವಿಜ್‌ಮೇಟೊ-VIZMATO

ವಿಜ್‌ಮೇಟೊ-VIZMATO

ವಿಜ್‌ಮೇಟೊ ವಿಡಿಯೊ ಆಪ್‌ ಸಹ ಉತ್ತಮವಾಗಿದ್ದು, ವಿಡಿಯೊಗಳನ್ನು ಟ್ರಿಮ್ ಕಟ್‌ ಮಾಡುವುದರ ಜೊತೆಗೆ ಇನ್ನೊಂದು ವಿಡಿಯೊ ಸೇರಿಸಬಹುದಾದ ಆಯ್ಕೆ ಇದೆ. ವಿಡಿಯೊ ಸೇರಿಸಿದಮೇಲೆ ಮತ್ತೆ ಎಡಿಟ್ ಮಾಡಬಹುದಾಗಿದೆ. ಹಾಗೆಯೇ ಫಿಲ್ಟರ್‌, ಸ್ಲೈಡ್‌ಶೋ, ಸೌಂಡ್‌, ವಿಡಿಯೊ ಸ್ಪೀಡ್‌ ಸೇರಿದಂತೆ ಅಗತ್ಯ ಇರುವ ಬೇಸಿಕ್ ಸೌಲಭ್ಯಗಳು ಲಭ್ಯ ಇವೆ.

ಫ್ಯೂನಿಮೇಟ್‌ -FUNIMATE

ಫ್ಯೂನಿಮೇಟ್‌ -FUNIMATE

ಶಾರ್ಟ್‌ ವಿಡಿಯೋ ಎಡಿಟ್‌ಗೆ ಫ್ಯೂನಿಮೇಟ್‌ ಕೂಲ್ ಆಪ್‌ ಎಂದೆನ್ನಬಹುದಾಗಿದೆ. ಈ ಆಪ್‌ನಲ್ಲಿ ಸಾಕಷ್ಟು ಎಫೆಕ್ಟ್‌ ಮತ್ತು ಮ್ಯೂಸಿಕ್ ಲಭ್ಯವಾಗಲಿವೆ. ಇವುಗಳೊಂದಿಗೆ ಆಕರ್ಷಕ ಸ್ಟಿಕರ್ಸ್‌ಗಳಿವೆ. ಉಳಿದಂತೆ ಬೇಸಿಕ್ ಎಡಿಟಿಂಗ್ ಆಯ್ಕೆಗಳಿದ್ದು, ಕಲರ್ ಫೀಲ್ಟರ್ ಆಯ್ಕೆ, ವಿಡಿಯೊ ಟ್ರಿಮ್, ಜಿಐಎಫ್‌, ಹಲವು ಎಫೆಕ್ಟ್‌ಗಳ ಕಲೆಕ್ಷನ್‌ಗಳಿವೆ.

Most Read Articles
Best Mobiles in India

English summary
These Are Best Video Editing Apps For Short Video Apps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X