ಇಲ್ಲಿವೆ ನೋಡಿ ಅತ್ಯುತ್ತಮ ಆಫ್‌ಲೈನ್‌ ನ್ಯಾವಿಗೇಶನ್ ಆಪ್ಸ್‌!

|

ಸದ್ಯ ಸ್ಮಾರ್ಟ್‌ಫೋನ್‌ ಪ್ರತಿಯೊಬ್ಬರ ಅಗತ್ಯ ಸಾಧನ ಎನ್ನುವುದರಲ್ಲಿ ಎರಡು ಮಾತಿಲ್ಲ. ಯಾವುದು ಹೊಸ ಸ್ಥಳಕ್ಕೆ ಭೇಟಿ ನೀಡಬೇಕಿದ್ದರೂ ಫೋನಿನಲ್ಲಿನ ಜಿಪಿಎಸ್‌/ ನ್ಯಾವಿಗೇಶನ್‌ ಮ್ಯಾಪ್‌ ಆಪ್‌ಗಳೂ ಬಳಕೆದಾರರಿಗೆ ನೆರವಾಗುತ್ತವೆ. ಈ ನಿಟ್ಟಿನಲ್ಲಿ ಆಂಡ್ರಾಯ್ಡ್‌ ಬಳಕೆದಾರರು ಗೂಗಲ್ ಮ್ಯಾಪ್‌ ಅಪ್ಲಿಕೇಶನ್ ಬಳಕೆ ಮಾಡುತ್ತಾರೆ. ಇನ್ನು ಐಫೋನ್‌ ಮಂದಿ ಆಪಲ್ ಮ್ಯಾಪ್‌ ಬಳಕೆ ಮಾಡುತ್ತಾರೆ. ಆದರೆ ಈ ಆಪ್‌ ಬಳಕೆಗೆ ಫೋನಿನಲ್ಲಿ ಇಂಟರ್ನೆಟ್ ಬೇಕೆ ಬೇಕು. ಆದರೆ ಇಂಟರ್ನೆಟ್ ಇಲ್ಲದೆಯೋ ನ್ಯಾವಿಗೇಶನ್ ಮ್ಯಾಪ್ ಲಭ್ಯ.

ಇಲ್ಲಿವೆ ನೋಡಿ ಅತ್ಯುತ್ತಮ ಆಫ್‌ಲೈನ್‌ ನ್ಯಾವಿಗೇಶನ್ ಆಪ್ಸ್‌!

ಹೌದು, ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬ ಸ್ಮಾರ್ಟ್‌ಫೋನ್‌ ಬಳಕೆದಾರರು ಅನೇಕ ಸಂದರ್ಭದಲ್ಲಿ ನ್ಯಾವಿಗೇಶನ್/ಜಿಪಿಎಸ್ ಆಪ್ ಅನ್ನು ಬಳಕೆ ಮಾಡಿರುತ್ತಾರೆ. ಇನ್ನು ಕೆಲವು ನೆಟ್‌ವರ್ಕ್ ಇರದ ಪ್ರದೇಶಗಳಲ್ಲಿ ಸಮಸ್ಯೆ ಎದುರಿಸಿರುತ್ತಾರೆ. ಆದರೆ ಇಂಟರ್ನೆಟ್ ಇರದ ಪ್ರದೇಶಗಳಲ್ಲಿ ಆಫ್‌ಲೈನ್ ನ್ಯಾವಿಗೇಶನ್ ಸೌಲಭ್ಯ ಬಳಕೆ ಮಾಡುವುದು ಉತ್ತಮ. ಈ ನಿಟ್ಟಿನಲ್ಲಿ ಹಲವು ಆಪ್‌ಗಳು ಆಫ್‌ಲೈನ್ ನ್ಯಾವಿಗೇಶನ್ ಸೌಲಭ್ಯ ಒದಗಿಸಿವೆ. ಈ ಆಪ್‌ಗಳ ಮೂಲಕ ಸುಲಭವಾಗಿ ನ್ಯಾವಿಗೇಶನ್ ಕಂಡುಕೊಳ್ಳಬಹುದಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಹಾಗೂ ಆಫ್‌ಲೈನ್‌ ನ್ಯಾವಿಗೇಶನ ಆಪ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಇಲ್ಲಿವೆ ನೋಡಿ ಅತ್ಯುತ್ತಮ ಆಫ್‌ಲೈನ್‌ ನ್ಯಾವಿಗೇಶನ್ ಆಪ್ಸ್‌!

ಗೂಗಲ್ ಮ್ಯಾಪ್ ಆಫ್‌ಲೈನ್
ಬಹುತೇಕ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ ಬಳಕೆದಾರರು ಗೂಗಲ್ ಮ್ಯಾಪ್‌ ಆಪ್‌ ಅನ್ನೇ ಹೆಚ್ಚಾಗಿ ಬಳಸುತ್ತಿದ್ದು, ಆಂಡ್ರಾಯ್ಡ್‌ ಸಹ ಅತ್ಯುತ್ತಮ ನಾವಿಗೇಶನ್ ಪ್ಲಾಟ್‌ಫಾರ್ಮ್‌ ಸೇವೆ ನೀಡುತ್ತಿದೆ. ಇಂಟರ್ನೆಟ್‌ ಇಲ್ಲದೇ ಇದ್ದಾಗಲೂ ಗೂಗಲ್ ಮ್ಯಾಪ್‌ ನಾವಿಗೇಶನ್ ಬಳಸಬಹುದಾಗಿದೆ. ಅದಕ್ಕಾಗಿ ಗೂಗಲ್‌ ಮ್ಯಾಪ್‌ನಲ್ಲಿ ಆಫ್‌ಲೈನ್‌ ಆಯ್ಕೆ ನೀಡಲಾಗಿದೆ. ಬಳಕೆದಾರರು ಮೆನು ಆಯ್ಕೆ ಸೆಲೆಕ್ಟ್ ಮಾಡಿ, ನಂತರ ಆಫ್‌ಲೈನ್ ಆಯ್ಕೆ ಕ್ಲಿಕ್ಕ್ ಮಾಡಿ, ಸೆಲೆಕ್ಟ್‌ ಯೂವರ್ ಓನ್ ಮ್ಯಾಪ್‌ ಆಯ್ಕೆ ಬಳಸಬಹುದು.

Sygic GPS ನ್ಯಾವಿಗೇಶನ್ ಆಪ್
Sygic GPS ನ್ಯಾವಿಗೇಶನ್ ಆಫ್‌ಲೈನ್ ಆಪ್‌ನ ಸೇವೆಯು ಎಲ್ಲ ರಾಷ್ಟ್ರಗಳಲ್ಲಿಯೂ ಲಭ್ಯವಿದೆ. ಈಗಾಗಲೇ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಹೆಚ್ಚಾಗಿ ಡೌನ್‌ಲೋಡ್‌ ಆಗಿರುವ ಆಪ್ ಆಗಿದೆ. ಆಫ್‌ಲೈನ್‌ ಸೇವೆಯನ್ನು ನೀಡುವ ಈ ಆಪ್ ವಾಯಿಸ್‌ ಗೈಡ್‌ ಆಯ್ಕೆಯನ್ನು ಮತ್ತು ಪಾದಚಾರಿ(pedestrian GPS) ಜಿಪಿಎಸ್‌ ಮಾರ್ಗದ ಆಯ್ಕೆಯನ್ನು ಸಹ ಒಳಗೊಂಡಿದೆ. ಇಂಟರ್ನೆಟ್‌ ಕನೆಕ್ಷನ್ ಇದ್ದರೇ ಹಲವು ಮಾಹಿತಿಗಳ ಬಗ್ಗೆ ವಾಯಿಸ್‌ ಇನ್ಫೋ ನೀಡುತ್ತದೆ.

ಇಲ್ಲಿವೆ ನೋಡಿ ಅತ್ಯುತ್ತಮ ಆಫ್‌ಲೈನ್‌ ನ್ಯಾವಿಗೇಶನ್ ಆಪ್ಸ್‌!

ಓಸ್ಮಾಂಡ್ (OsmAnd) ಆಪ್
ಪ್ರಮುಖ ಆಫ್‌ಲೈನ್ ಮಾದರಿಯ ನ್ಯಾವಿಗೇಶನ್ ಆಪ್‌ಗಳಿಲ್ಲಿ 'ಓಸ್ಮಾಂಡ್ ನಾವಿಗೇಶನ್ ಆಪ್‌' ಸಹ ಒಂದಾಗಿದೆ. ಈ ಆಪ್‌ ವಾಯಿಸ್‌ ಗೈಡ್‌, ಲೈನ್ ಗೈಡ್‌, ಲೈವ್ ಎಸ್ಟಿಮೆಟೆಡ್ ಟೈಮ್, ಡೇ/ನೈಟ್ ಮೋಡ್ ಆಯ್ಕೆಗಳೊಂದಿಗೆ ಜಿಪಿಎಸ್‌ನ ಹಲವು ಸೌಲಭ್ಯಗಳನ್ನು ಒಳಗೊಂಡಿದೆ. ಸೈಕ್ಲಿಂಗ್ ರೋಟ್‌ಗೆ ಬೆಸ್ಟ್‌ ಎನಿಸಿಕೊಂಡಿದ್ದು, ಕೆಲವು ದೇಶಗಳಲ್ಲಿ ಈ ಆಪ್‌ ಆಫ್‌ಲೈನ್ ಸೇವೆ ಹೆಚ್ಚು ಪರಿಣಾಮಕಾರಿಯಾಗಿದೆ.

MAPS.ME ಆಪ್
MAPS.ME ಮ್ಯಾಪ್ ಇದೊಂದು ಸಂಪೂರ್ಣ ಉಚಿತ ಜಿಪಿಎಸ್‌ ಆಪ್‌ ಆಗಿದ್ದು, ಆಫ್‌ಲೈನ್ ಮೋಡ್‌ನಲ್ಲಿ ನಾವಿಗೇಶನ್ ಮಾಹಿತಿ ನೀಡುವ ಸೌಲಭ್ಯವನ್ನು ಒಳಗೊಂಡಿದೆ. ಬಳಕೆದಾರರಿಗೆ ಆಫ್‌ಲೈನ್ ಮೋಡ್‌ನಲ್ಲಿಯೂ ಸರ್ಚ್ ಆಯ್ಕೆಗಳು, ವಾಯಿಸ್‌ ನ್ಯಾವಿಗೇಶನ್, ರೀ-ರೋಟಿಂಗ್ ಕ್ಯಾಲ್ಕುಲೇಶನ್ ಮತ್ತು ಪಬ್ಲಿಕ್ ಟ್ರಾನ್ಸ್‌ಫೋಟೆಶನ್ ಮಾಹಿತಿಗಳು ದೊರೆಯಲಿದೆ. ಹಾಗೆಯೇ ಎಟಿಎಮ್, ಶಾಪ್, ಅಗತ್ಯ ಸೇವೆಗಳ ಸೂಚನೆ ಸಿಗಲಿದೆ. ನೆಟ್‌ ಸೌಲಭ್ಯ ಇದ್ದರೇ ಲೊಕೇಶನ್ ಶೇರ್ ಮಾಡಬಹುದಾಗಿದೆ.

HERE WeGo ಮ್ಯಾಪ್ ಆಪ್
HERE WeGo ನಾವಿಗೇಶನ್ ಮ್ಯಾಪ್‌ ಆಫ್‌ಲೈನ್ ನಾವಿಗೇಶನ್‌ಗೆ ಬೆಸ್ಟ್‌ ಎನಿಸಿದ್ದು, ಸುಮಾರು 100 ದೇಶಗಳಲ್ಲಿ ಲಭ್ಯವಿದೆ. ಆಫ್‌ಲೈನ್‌ ಮೋಡ್‌ನಲ್ಲಿಯೂ ಪಬ್ಲಿಕ್ ಟ್ರಾನ್ಸ್‌ಪೋಟೆಶನ್, ಟಿಕೆಟ್‌ ಬಿಲ್ಲಿಂಗ್, ಕಾರ್ ಶೇರಿಂಗ್ ಪ್ರೈಸ್, ಟ್ರಾನ್ಸ್‌ಪೋಟೆಶನ್ ರೋಟ್ಸ್‌, ಸೇರಿದಂತೆ ವೇಗದ ಮಾರ್ಗ ಮತ್ತು ಕಾಸ್ಟ್‌ ಎಫೆಕ್ಟಿವ್ ಮಾರ್ಗಗಳ ಬಗ್ಗೆ ಮಾಹಿತಿ ನೀಡಲಿದೆ. ಹಾಗೆಯೇ ಅಪ್‌ಹಿಲ್ ಮತ್ತು ಡೌನ್‌ಹಿಲ್ ರಸ್ತೆಗಳ ಸೂಚನೆ ನೀಡಲಿದೆ. ಅಮೆರಿಕಾ ಮತ್ತು ಯುರೋಪ್ ಸೇರಿದಂತೆ 1,300ರಾಷ್ಟ್ರಗಳಲ್ಲಿ ಬಳಕೆಗೆ ಲಭ್ಯ.

Best Mobiles in India

English summary
These Few Best GPS Apps Work Without Internet.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X