2020ರಲ್ಲಿ ಭಾರೀ ಸದ್ದು ಮಾಡಿರುವ ವಿಡಿಯೊ ಕಾನ್ಫರೆನ್ಸ್‌ ಆಪ್ಸ್‌ಗಳಿವು!

|

ದೇಶದಲ್ಲಿ ಲಾಕ್‌ಡೌನ್‌ ಕಾರಣದಿಂದಾಗಿ ವಿಡಿಯೊ ಕಾನ್ಫರೆನ್ಸಿಂಗ್ ಆಪ್‌ಗಳು ಈ ವರ್ಷ ಸದ್ದು ಮಾಡಿವೆ. ಅವುಗಳಲ್ಲಿ ವಿದ್ಯಾರ್ಥಿಗಳ, ನೌಕರರ ವಲಯದಲ್ಲಿ ಮುಖ್ಯವಾಗಿ ಜೂಮ್‌ ಅಪ್ಲಿಕೇಶನ್ ಹೆಚ್ಚು ಜನಪ್ರಿಯವಾಗಿದೆ. ಅದರ ಬೆನ್ನಲ್ಲೇ ಇತರೆ ವಿಡಿಯೊ ಕಾನ್ಫರೆನ್ಸಿಂಗ್ ಅಪ್ಲಿಕೇಶನ್‌ಗಳು ಚುರುಕು ಪಡೆದುಕೊಂಡಿವೆ.

ಕೊರೊನಾ

ಹೌದು, ಕೊರೊನಾ ವೈರಸ್‌ನ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್‌ಡೌನ್ ಜಾರಿ ಮಾಡಿತು. ಈ ವೇಳೆ ವಿಡಿಯೊ ಕಾನ್ಫರೆನ್ಸ್ ಅಪ್ಲಿಕೇಶನ್‌ಗಳು ಸಂವಹನಕ್ಕೆ ಪ್ರಮುಖ ವೇದಿಕೆಗಳಾಗಿಕಾಣಿಸಿಕೊಂಡವು. ಕೆಲವು ಅಪ್ಲಿಕೇಶನ್‌ಗಳು ಅನಕೂಲಕರ ಫೀಚರ್ಸ್‌ಗಳಿಂದ ಬಳಕೆದಾರರಿಗೆ ಹೆಚ್ಚು ಹತ್ತಿರವಾದವು. ಇನ್ನು ಕೆಲವು ಅಪ್ಲಿಕೇಶನ್‌ಗಳು ಅಷ್ಟಾಗಿ ಬಳಕೆಗೆ ಬರಲಿಲ್ಲ. ಹಾಗಾದರೆ ಈ ವರ್ಷದಲ್ಲಿ ಹೆಚ್ಚು ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿರುವ ವಿಡಿಯೊ ಕಾನ್ಫರೆನ್ಸ್‌ ಆಪ್ಸ್‌ಗಳು ಯಾವುವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಗೂಗಲ್ ಹ್ಯಾಂಗ್‌ಔಟ್ಸ್‌-Google Hangouts ಆಪ್‌

ಗೂಗಲ್ ಹ್ಯಾಂಗ್‌ಔಟ್ಸ್‌-Google Hangouts ಆಪ್‌

ಗೂಗಲ್ ಒಡೆತನಕ್ಕೆ ಸೇರಿರುವ ಈ ಆಪ್‌ ವಿಡಿಯೋ ಚಾಟ್‌ಗೆ ಹೆಚ್ಚಾಗಿ ಬಳಕೆ ಮಾಡುವ ಅಪ್ಲಿಕೇಶನ್ ಆಗಿದೆ. ಇಮೇಲ್ ಸೇವೆಯಾದ ಜಿಮೇಲ್ ಮೂಲಕ ಸಂಪರ್ಕ ಸಾಧಿಸಬಹುದಾಗಿದೆ. ಅಂದಹಾಗೆ ಒಂದೇ ಬಾರಿಗೆ ಸುಮಾರು ಹತ್ತು ಬಳಕೆದಾರರೊಂದಿಗೆ ವಿಡಿಯೊ ಕಾನ್ಫರೆನ್ಸ್‌ ಮಾಡಬಹುದಾಗಿದೆ.

ಜೂಮ್-Zoom ಆಪ್‌

ಜೂಮ್-Zoom ಆಪ್‌

ಜೂಮ್ ಆಪ್‌ ವೀಡಿಯೊ ಕಾನ್ಫರೆನ್ಸಿಂಗ್ ಅಪ್ಲಿಕೇಶನ್ ಆಗಿದೆ. ಈ ಆಪ್‌ನಲ್ಲಿ ಪರದೆ/ಸ್ಕ್ರೀನ್‌ ಹಂಚಿಕೆ ಮತ್ತು ವೇಗದ ಸಂದೇಶ ಕಳುಹಿಸುವಿಕೆಯನ್ನು ಬೆಂಬಲಿಸುತ್ತದೆ. ಮೆನೆಯಿಂದ ಕೆಲಸ ಮಾಡಲು ಉತ್ತಮ ಸಪೋರ್ಟ್‌ ನೀಡಲಿದೆ. ಇನ್ನು ಈ ಆಪ್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಆಂಡ್ರಾಯ್ಡ್, ಐಓಎಸ್‌, ಮ್ಯಾಕ್ ಓಎಸ್‌ ಗಳಲ್ಲಿಯೂ ಲಭ್ಯ.

ವೆಬ್‌ಎಕ್ಸ್‌-WebEx ಆಪ್‌

ವೆಬ್‌ಎಕ್ಸ್‌-WebEx ಆಪ್‌

ವೆಬ್‌ಎಕ್ಸ್‌ ಆಪ್‌ ವಿಡಿಯೊ ಕಾನ್ಫರೆನ್ಸ್‌ಗೆ ಪೂರಕ ಪ್ಲಾಟ್‌ಫಾರ್ಮ್ ಒದಗಿಸಲಿದೆ. ಇತರ ವೀಡಿಯೊ ಕಾನ್ಫರೆನ್ಸಿಂಗ್ ಅಪ್ಲಿಕೇಶನ್‌ಗಳಿಗೆ ಹೋಲಿಸಿದರೆ ಈ ಆಪ್‌ನಲ್ಲಿ ಮೆನು ಬಾರ್ ಮತ್ತು ಕಮಾಂಡ್‌ಗಳ ಮೂಲಕ ನ್ಯಾವಿಗೇಟ್ ಮಾಡುವುದು ಸುಲಭವಾಗಿದೆ. ಹಾಗೆಯೇ ವೆಬ್‌ಎಕ್ಸ್ ಮೀಟಿಂಗ್ ಮತ್ತು ವೆಬ್‌ಎಕ್ಸ್ ಟೀಮ್‌ ಈ ಸಂಸ್ಥೆ ಇತರೆ ಆಪ್ಸ್‌ಗಳಾಗಿವೆ.

ಸ್ಕೈಪ್‌-Skype ಆಪ್‌

ಸ್ಕೈಪ್‌-Skype ಆಪ್‌

ಜನಪ್ರಿಯ ವಿಡಿಯೊ ಕರೆಗಳ ಅಪ್ಲಿಕೇಶನ್‌ಗಳಲ್ಲಿ ಸ್ಕೈಪ್‌ ಅಪ್ಲಿಕೇಶನ್ ಸಹ ಒಂದಾಗಿದೆ. ಈ ಆಪ್‌ ಅನ್ನು ವೈಯಕ್ತಿ ಹಾಗೂ ವ್ಯವಹಾರಿಕ ಸಂವಹನಗಳಲ್ಲಿ ಬಳಕೆ ಮಾಡುತ್ತಾರೆ. ಉಚಿತ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದ್ದು, ಹತ್ತು ಕರೆಗಳ ಕಾನ್ಫರೆನ್ಸ್ ಸೌಲಭ್ಯವನ್ನು ಪಡೆದಿದೆ.

Best Mobiles in India

Read more about:
English summary
Top 5 free video conferencing apps of 2020: Details, specifications, price, subscription, limit and more.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X