ಸದ್ಯ ಹೆಚ್ಚು ಬಳಕೆಯಲ್ಲಿರುವ 5 ವಿಡಿಯೊ ಕಾಲಿಂಗ್ ಆಪ್‌ಗಳು!

|

ಪ್ರಸ್ತುತ ಆನ್‌ಲೈನ್‌ ತರಗತಿ, ಆನ್‌ಲೈನ್‌ ಮೀಟಿಂಗ್ ಬಳಕೆ ಹೆಚ್ಚಾಗಿ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ವಿಡಿಯೊ ಕಾಲಿಂಗ್ ಅಪ್ಲಿಕೇಶನ್‌ಗಳು ಹೆಚ್ಚು ಟ್ರೆಂಡಿಂಗ್‌ನಲ್ಲಿಕಾಣಿಸಿಕೊಂಡಿವೆ. ಗೂಗಲ್ ಪ್ಲೇ ನಲ್ಲಿ ಅನೇಕ ವಿಡಿಯೊ ಕಾಲಿಂಗ್ ಆಪ್ಸ್‌ಗಳು ಲಭ್ಯ ಇವೆ. ಆದರೆ ಕೆಲವು ವಿಡಿಯೊ ಕಾಲಿಂಗ್ ಅಪ್ಲಿಕೇಶನ್‌ಗಳು ಅತ್ಯುತ್ತಮ ಫೀಚರ್ಸ್‌ಗಳಿಂದಾಗಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿವೆ.

ಕಾಲಿಂಗ್

ಹೌದು, ಸದ್ಯ ವಿಡಿಯೊ ಕಾಲಿಂಗ್ ಆಪ್‌ಗಳ ಬಳಕೆ ಸಾಮಾನ್ಯ ಅನಿಸಿದ್ದು, ಕೆಲವು ಮೆಸೆಜ್‌ ಆಪ್‌ಗಳು ವಿಡಿಯೊ ಕಾಲಿಂಗ್ ಆಯ್ಕೆಯನ್ನು ಹೊಸದಾಗಿ ಸೇರ್ಪಡೆ ಮಾಡಿವೆ. ಇನ್ನು ಕೆಲವು ವಿಡಿಯೊ ಕಾಲಿಂಗ್‌ ಆಪ್‌ಗಳು ಕರೆಯಲ್ಲಿ ಹೆಚ್ಚು ಸದಸ್ಯರನ್ನು ಕನೆಕ್ಟ್ ಮಾಡುವ ಆಯ್ಕೆಗಳನ್ನು ಒಳಗೊಂಡಿವೆ. ಹಾಗೆಯೇ ಗುಣಮಟ್ಟಕ್ಕೂ ಆದ್ಯತೆ ನೀಡುತಿವೆ. ಹಾಗಾದರೇ ಸದ್ಯ ಹೆಚ್ಚು ಟ್ರೆಂಡಿಂಗ್‌ನಲ್ಲಿರುವ ಟಾಪ್ 5 ವಿಡಿಯೊ ಕಾಲಿಂಗ್ ಆಪ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಗೂಗಲ್ ಡ್ಯೂಯೊ ಆಪ್

ಗೂಗಲ್ ಡ್ಯೂಯೊ ಆಪ್

ಗೂಗಲ್ ಒಡೆತನದ ಗೂಗಲ್ ಡ್ಯುಯೊ ಆಪ್‌ ಸಂಪೂರ್ಣ ಉಚಿತ ಆಪ್‌ ಆಗಿದೆ. ಈ ಆಪ್‌ 32 ಜನರೊಂದಿಗೆ ಗುಂಪು ಚಾಟ್ ಮಾಡಲು ಅನುಮತಿಸುತ್ತದೆ ಮತ್ತು ಎಲ್ಲವನ್ನೂ ಎನ್‌ಕ್ರಿಪ್ಟ್ ಮಾಡಲಾಗಿದೆ. ಈ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಬಳಕೆದಾರರು ಅವರ ಸ್ನೇಹಿತರೊಂದಿಗೆ ವೀಡಿಯೊ ಸಂದೇಶಗಳನ್ನು ಹಂಚಿಕೊಳ್ಳಬಹುದು. ಆಂಡ್ರಾಯ್ಡ್ ಮತ್ತು ಐಒಎಸ್ ಎರಡರಲ್ಲೂ ಗೂಗಲ್ ಡ್ಯುಯೊ ಲಭ್ಯವಿದೆ.

ಜೂಮ್‌ ವಿಡಿಯೊ ಕಾಲಿಂಗ್ ಆಪ್

ಜೂಮ್‌ ವಿಡಿಯೊ ಕಾಲಿಂಗ್ ಆಪ್

ಹೆಚ್ಚು ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿರುವ ವಿಡಿಯೊ ಕಾಲಿಂಗ್‌ ಆಪ್‌ಗಳಲ್ಲಿ ಜೂಮ್‌ ಆಪ್‌ ಸಹ ಒಂದಾಗಿದೆ. ಈ ಆಪ್‌ನಲ್ಲಿ ಬಳಕೆದಾರರು ಹೆಚ್ಚು ಸದಸ್ಯರನ್ನು ಕನೆಕ್ಟ್ ಮಾಡುವ ಆಯ್ಕೆ ಇದೆ. ಕರೆಗಳಿಗೆ ಎನ್‌ಕ್ರಿಪ್ಟ್ ಸೌಲಭ್ಯ ಒದಗಿಸಿದೆ. ಬಹುತೇಕ ಬಳಕೆದಾರರು ಮೀಟಿಂಗ್‌ಗಾಗಿ ಈ ಆಪ್‌ ಬಳಕೆ ಮಾಡುತ್ತಾರೆ ಹಾಗೂ ಮೆಸೆಜ್‌ ಸಹ ಸೆಂಡ್ ಮಾಡಬಹುದಾಗಿದೆ.

ಸ್ಕೈಪ್ ಆಪ್

ಸ್ಕೈಪ್ ಆಪ್

ಸ್ಕೈಪ್ ಆಪ್‌ ಸಹ ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿದ್ದು, ಬಹಳಷ್ಟು ಜನರು ವಿಡಿಯೊ ಕರೆಗಳಿಗೆ ಹಾಗೂ ಚಾಟಿಂಗ್‌ಗೆ ಈ ಆಪ್ ಬಳಕೆ ಮಾಡುತ್ತಾರೆ. ಸ್ಕೈಪ್ ಮೂಲಕ ಬಳಕೆದಾರರು ಒಂದೇ ಸಮಯದಲ್ಲಿ 24 ಜನರೊಂದಿಗೆ ವೀಡಿಯೊ ಕರೆಗಳನ್ನು ಮಾಡಬಹುದು. ಹಾಗೆಯೇ ಸಂದೇಶಗಳನ್ನು ಸಹ ಕಳುಹಿಸಬಹುದಾಗಿದ್ದು, 'SMS Connect' ವೈಶಿಷ್ಟ್ಯವೂ ಲಭ್ಯವಿದೆ. ವಿವಿಧ ಎಮೋಟಿಕಾನ್‌ಗಳೊಂದಿಗೆ ನಿಮ್ಮನ್ನು ವ್ಯಕ್ತಪಡಿಸುವಂತೆ ಅಥವಾ ಜಿಫಿಯನ್ನು ಬಳಸಿಕೊಂಡು GIF ಗಳನ್ನು ಕಳುಹಿಸುವಂತೆಯೇ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುವುದು ಒಂದು ಸಾಧ್ಯತೆಯಾಗಿದೆ.

ವಾಟ್ಸಾಪ್‌

ವಾಟ್ಸಾಪ್‌

ಫೇಸ್‌ಬುಕ್ ಮಾಲೀಕತ್ವದ ವಾಟ್ಸಾಪ್ ಸಹ ಜನಪ್ರಿಯ ವಿಡಿಯೊ ಕಾಲಿಂಗ್ ಆಪ್‌ ಆಗಿ ಗುರುತಿಸಿಕೊಂಡಿದೆ. ಈ ಆಪ್‌ನಲ್ಲಿ ಬಳಕೆದಾರರು ಚಾಟಿಂಗ್ ಜೊತೆಗೆ ವಿಡಿಯೊ ಕರೆ ಸಹ ಮಾಡುವ ಆಯ್ಕೆ ಇದೆ. ಬಳಕೆದಾರರು ಈ ಅಪ್ಲಿಕೇಶನ್‌ ಮೂಲಕ ಫೋಟೋಗಳನ್ನು ಸಹ ಕಳುಹಿಸಬಹುದು. ಹಾಗೆಯೇ ವೀಡಿಯೊಗಳು, ಡಾಕ್ಯುಮೆಂಟ್‌ಗಳು ಮತ್ತು ವಾಯಿಸ್‌ ಸಂದೇಶಗಳನ್ನು ಸಹ ಶೇರ್ ಮಾಡಬಹುದು.

ವೈಬರ್

ವೈಬರ್

ಹೆಚ್ಚು ಬಳಕೆಯಲ್ಲಿರುವ ವಿಡಿಯೊ ಕಾಲಿಂಗ್ ಆಪ್‌ಗಳ ಪೈಕಿ ವೈಬರ್ ಸಹ ಒಂದಾಗಿದೆ. ವೈಬರ್‌ ಆಪ್‌ 20 ಜನರಿಗೆ ಗುಂಪು ಕರೆ ಮಾಡಲು ಅನುಮತಿಸುತ್ತದೆ. ವಾಟ್ಸಾಪ್ನಂತೆಯೇ, ಈ ಅಪ್ಲಿಕೇಶನ್ ಗುಂಪು ಕರೆಗಳಿಗೆ, ವಿಶೇಷವಾಗಿ ಧ್ವನಿ ಕರೆಗಳಿಗೆ ಉತ್ತಮ ಆಯ್ಕೆಯಾಗಿದೆ. ಧ್ವನಿ ಕರೆಗಳಿಗಾಗಿ ವೈಬರ್ ಅತ್ಯುತ್ತಮ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ, ಆದರೂ ವೀಡಿಯೊ ಕರೆಗಳು ಉತ್ತಮವಾಗಿವೆ. ವೈಬರ್ ವಾಸ್ತವವಾಗಿ ಯಾರನ್ನಾದರೂ ಕರೆಯಲು ಬಂದಾಗ ಅಲ್ಲಿನ ಅತ್ಯಂತ ಜನಪ್ರಿಯ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ.

Most Read Articles
Best Mobiles in India

English summary
here is the list of best video calling apps for Android, so that we may help you with choosing which one to use.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X