Subscribe to Gizbot

ಉಬರ್ ಕ್ಯಾಬ್ ಬುಕ್ ಮಾಡಲು ಇನ್ನು ಮುಂದೆ ಆಪ್‌ ಬೇಕಾಗಿಲ್ಲ...!

Written By:

ಇಷ್ಟು ದಿನ ಕ್ಯಾಬ್ ಆಧಾರಿತ ಟ್ಯಾಕ್ಸಿ ಸೇವೆಯನ್ನು ನೀಡುತ್ತಿದ್ದ ಉಬರ್ ತನ್ನ ಜಾಲವನ್ನು ವಿಸ್ತರಿಸಿಕೊಳ್ಳಲು ಮುಂದಾಗಿದೆ. ಕೇವಲ ಆಂಡ್ರಾಯ್ಡ್-ಐಫೋನ್ ಗ್ರಾಹಕರನ್ನು ಬಿಟ್ಟು ಹೊಸ ಗ್ರಾಹಕರಿಗೆ ಗಾಳ ಹಾಕಲು ಮುಂದಾಗಿದೆ. ಇದಕ್ಕಾಗಿಯೇ ವೆಬ್‌ಸೈಟ್‌ ಮೂಲಕ ಕ್ಯಾಬ್ ಬುಕ್ ಮಾಡಿಕೊಳ್ಳುವ ಸಲುವಾಗಿ m.uber.com ವೆಬ್‌ ಸೈಟ್‌ ಅನ್ನು ಆರಂಭಿಸಿದೆ. ಇದರಿಂದಾಗಿ ಗ್ರಾಹಕರು ಇನ್ನು ಮುಂದೆ ಉಬರ್ ಕ್ಯಾಬ್ ಬುಕ್ ಮಾಡಲು ಆಪ್‌ ಬಳಕೆ ಮಾಡಲೇಬೇಕಾಗಿಲ್ಲ.

ಉಬರ್ ಕ್ಯಾಬ್ ಬುಕ್ ಮಾಡಲು ಇನ್ನು ಮುಂದೆ ಆಪ್‌ ಬೇಕಾಗಿಲ್ಲ...!

ಓದಿರಿ: ಅಪರಿಚಿತರಿಗೆ ಲಕ್ಷ ಬೆಲೆಯ ಐಫೋನ್ X ಹಂಚಿದ: ರಿಯಾಕ್ಷನ್ ಹೇಗಿತ್ತು ಗೊತ್ತಾ..?

ಕೇವಲ ಆಪ್ ಆಧಾರಿತ ಕ್ಯಾಬ್ ಸೇವೆಯನ್ನು ನೀಡುತ್ತಿರುವ ಉಬರ್ ತನ್ನ ಸೇವೆಯನ್ನು ಮತ್ತಷ್ಟು ಜನರಿಗೆ ತಲುಪಿಸುವ ಸಲುವಾಗಿ ಮತ್ತು ಆಂಡ್ರಾಯ್ಡ್-ಐಫೋನ್ ಇಲ್ಲದವರು ಸಹ ಉಬರ್ ಸೇವೆಯನ್ನು ಬಳಸಿಕೊಳ್ಳಲು ಮುಂದಾಗಲಿ ಎನ್ನುವ ಕಾರಣಕ್ಕೆ ಈ ಹೊಸ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಂಡ್ರಾಯ್ಡ್- ಐಫೋನ್ ಬಿಟ್ಟು ಇತರರು ಉಬರ್ ಬಳಸಲಿ ಎಂದು:

ಆಂಡ್ರಾಯ್ಡ್- ಐಫೋನ್ ಬಿಟ್ಟು ಇತರರು ಉಬರ್ ಬಳಸಲಿ ಎಂದು:

ಸದ್ಯ ಉಬರ್ ಆಪ್ ಕೇವಲ ಆಂಡ್ರಾಯ್ಡ್- ಐಫೋನ್ ಬಳಕೆದಾರರಿಗೆ ಮಾತ್ರವೇ ಲಭ್ಯವಿತ್ತು, ಈ ಹಿನ್ನಲೆಯಲ್ಲಿ ಬ್ಲಾಕ್ ಬೇರಿ ಮತ್ತು ವಿಂಡೋಸ್ ಬಳಕೆದಾರರು ಕ್ಯಾಬ್ ಬುಕ್ ಮಾಡುವ ಅವಕಾಶದಿಂದ ವಂಚಿತರಾಗಿದ್ದರು ಅವರನ್ನು ಸೆಳೆಯುವ ಸಲುವಾಗಿ ಮೊಬೈಲ್ ವೆಬ್ ಸೇವೆಯನ್ನು ನೀಡಲು ಮುಂದಾಗಿದೆ.

ಅಮೆರಿಕಾದಲ್ಲಿದ್ದ ಸೇವೆ ಭಾರತಕ್ಕೆ:

ಅಮೆರಿಕಾದಲ್ಲಿದ್ದ ಸೇವೆ ಭಾರತಕ್ಕೆ:

ಈಗಾಗಲೇ ಉಬರ್ ಅಮೆರಿಕಾದಲ್ಲಿ ವೆಬ್ ಸೇವೆಯನ್ನು ನೀಡಲು ಮುಂದಾಗಿದೆ. ಇದೆ ಮಾದರಿಯಲ್ಲಿ ಭಾರತದಲ್ಲಿಯೂ ವೆಬ್‌ ತಾಣದ ಸೇವೆಯನ್ನು ಆರಂಭಿಸಲು ಮುಂದಾಗಿದೆ. ಭಾರತೀಯರು ಆಪ್ ಇಲ್ಲದೇ ಕ್ಯಾಬ್ ಬುಕ್ ಮಾಡಬಹುದಾಗಿದೆ.

ಒಲಾಗೆ ಸೆಡ್ಡು:

ಒಲಾಗೆ ಸೆಡ್ಡು:

ಉಬರ್‌ಗೆ ಹೆಚ್ಚಿನ ಸ್ಪರ್ಧೆಯನ್ನು ನೀಡುತ್ತಿರುವುದು ಭಾರತೀಯ ಮೂಲದ ಒಲಾ, ಒಲಾ ಕಂಪನಿಗೆ ಸೆಡ್ಡು ಹೊಡೆಯುವ ಸಲುವಾಗಿ ಉಬರ್ ಈ ಹೊಸ ಸೇವೆಯನ್ನು ನೀಡಲು ಮುಂದಾಗಿದ್ದು, ಇದು ಉಬರ್‌ಗೆ ಹೆಚ್ಚಿನ ಲಾಭವನ್ನು ತಂದು ಕೊಡಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Uber launched m.uber.com. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot