ಜಿಯೋ 4Gಗೆ ಮಾತ್ರವೇ ನೀಡಿದ್ದ ಆಫರ್: ಏರ್‌ಟೆಲ್‌ನಿಂದ ಕಡಿಮೆ ಬೆಲೆಗೆ 2G/3G/4G ಗ್ರಾಹಕರಿಗೆ..!

|

ಈಗಾಗಲೇ ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಸಾಕಷ್ಟು ಸ್ಪರ್ಧೆಯನ್ನು ಕಾಣಬಹುದಾಗಿದ್ದು, ಜಿಯೋ - ಏರ್‌ಟೆಲ್ ನಡುವೆ ಭಾರೀ ದರಸಮರ ನಡೆಯುತ್ತಿರುವುದು ತಿಳಿದಿರುವ ವಿಚಾರ. ಜಿಯೋ ಬಿಡುಗಡೆ ಮಾಡಿರುವ ರೂ.98ರ ಪ್ಲಾನ್‌ಗೆ ಎದುರಾಗಿ ಏರ್‌ಟೆಲ್ ರೂ.93ರ ಪ್ಲಾನ್‌ ಲಾಂಚ್ ಮಾಡಿದ್ದು, ಜಿಯೋಗೆ ಈ ವಿಭಾಗದಲ್ಲಿಯೂ ಸ್ಪರ್ಧೆಯನ್ನು ನೀಡಲು ಮುಂದಾಗಿದೆ.

ಆಫರ್: ಏರ್‌ಟೆಲ್‌ನಿಂದ ಕಡಿಮೆ ಬೆಲೆಗೆ 2G/3G/4G ಗ್ರಾಹಕರಿಗೆ..!

ಓದಿರಿ: ಫುಲ್‌ಸ್ಕ್ರಿನ್‌ ಡಿಸ್‌ಪ್ಲೇ ಮೆರೆತು ಬಿಡಿ: ಡ್ಯುಯಲ್-ಫೋಲ್ಡಿಂಗ್‌ ಡಿಸ್‌ಪ್ಲೇಯೊಂದಿಗೆ ಬರಲಿದೆ ವಿಂಡೋಸ್ ಫೋನ್..!

ಈ ಪ್ಲಾನ್‌ನಲ್ಲಿ ಏರ್‌ಟೆಲ್ ತನ್ನ ಬಳಕೆದಾರರಿಗೆ ಡೇಟಾ ಸೇವೆಯನ್ನು ನೀಡುತ್ತಿದೆ. ಜೊತೆಗೆ SMS ಕಳುಹಿಸುವ ಅವಕಾಶದೊಂದಿಗೆ ಉಚಿತ ಕರೆ ಮಾಡುವ ಸೇವೆಯನ್ನು ಈ ಆಫರ್ ನಲ್ಲಿ ನೀಡುತ್ತಿದೆ. ಇದರಿಂದಾಗಿ ಜಿಯೋಗೆ ಈ ಆಫರ್ ನುಂಗಲಾರದ ತುಪ್ಪವಾಗಿ ಪರಿಣಮಿಸಲಿದೆ ಎನ್ನಲಾಗಿದೆ.

ರೂ.93ರ ಪ್ಲಾನ್:

ರೂ.93ರ ಪ್ಲಾನ್:

ಜಿಯೋ ತನ್ನ ಬಳಕೆದಾರರಿಗೆ ನೀಡರುವ ರೂ.98 ಪ್ಲಾನ್‌ ಮಾದರಿಯಲ್ಲಿಯೇ ಏರ್‌ಟೆಲ್‌ ರೂ.93ರ ಪ್ಲಾನ್‌ ಘೋಷಣೆ ಮಾಡಿದೆ. ಈ ಪ್ಲಾನ್‌ನಲ್ಲಿ ಗ್ರಾಹಕರು 1GB ಡೇಟಾವನ್ನು ಬಳಕೆಗೆ ಪಡೆದುಕೊಳ್ಳಲಿದ್ದು, ಇದು 10 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ ಎನ್ನಲಾಗಿದೆ.

ಹೊಸ ವರ್ಷಕ್ಕೆ ಮತ್ತೊಂದು Jio Surprise Cashback ಆಫರ್!!
ಉಚಿತ ಕರೆ-ರೋಮಿಂಗ್:

ಉಚಿತ ಕರೆ-ರೋಮಿಂಗ್:

ಏರ್‌ಟೆಲ್‌ ರೂ.93ರ ಪ್ಲಾನ್‌ನಲ್ಲಿ ಉಚಿತ ಕರೆಗಳನ್ನು ಮಾಡಬಹುದಾಗಿದೆ. ಅಲ್ಲದೇ ರೋಮಿಂಗ್‌ನಲ್ಲಿಯೂ ಉಚಿತ ಕರೆಗಳನ್ನು ಮಾಡವ ಅವಕಾಶವನ್ನು ನೀಡಿದೆ. ಅಲ್ಲದೇ ಉಚಿತವಾಗಿ 100 SMSಗಳನ್ನು ಸಹ ಬಳಕೆದಾರರು ಕಳುಹಿಸಬಹುದಾಗಿದೆ.

ಎಲ್ಲಾ ಹಾಂಡ್ ಸೆಟ್:

ಎಲ್ಲಾ ಹಾಂಡ್ ಸೆಟ್:

ಜಿಯೋ ಮಾತ್ರ 4G ಸಫೋರ್ಟ್ ಮಾಡುವ ಫೋನ್‌ಗಳಿಗೆ ಸಿಮೀತವಾಗಿದ್ದರೇ, ಏರ್‌ಟೆಲ್‌ ಎಲ್ಲಾ ಮಾದರಿಯ ಅಂದರೆ 2G/3G/4G ಬಳಕೆದಾರರಿಗೆ ಈ ಪ್ಲಾನ್‌ ಅನ್ನು ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ ಎನ್ನಲಾಗಿದೆ. ಹಾಗಾಗಿ ಹೆಚ್ಚಿನ ಜನರಿಗೆ ತಲುಪಲಿದೆ.

ಆಪ್‌ಗಳ ಉಚಿತ:

ಆಪ್‌ಗಳ ಉಚಿತ:

ಇದಲ್ಲದೇ ಈ ಸಂದರ್ಭದಲ್ಲಿ ಏರ್‌ಟೆಲ್ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಎಲ್ಲಾ ಆಪ್‌ಗಳನ್ನು ಬಳಕೆದಾರರು ಉಚಿತವಾಗಿ ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದ್ದು, ಇದು ಬೇರೆಲ್ಲದಕ್ಕಿಂತ ಹೆಚ್ಚಿನ ಮೌಲ್ಯವನ್ನು ಹೊಂದಿದೆ ಎನ್ನಲಾಗಿದೆ.

Best Mobiles in India

English summary
Bharti Airtel Unlimited Voice Calls, 100 SMS Per Day, 1GB Data for 10 Days at Rs 93. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X