Subscribe to Gizbot

ವಾಟ್ಸ್‌ಆಪ್‌ನಿಂದ ನೀವು ನಿರೀಕ್ಷಿಸದ ಮತ್ತೊಂದು ಆಚ್ಚರಿಯ ಆಯ್ಕೆ

Written By:

ಫೇಸ್‌ಬುಕ್‌ ಒಡೆತನಕ್ಕೆ ಸೇರಿರುವ ಜನಪ್ರಿಯ ಸೋಶಿಯಲ್ ಮೆಸೆಂಜಿಗ್ ಆಪ್ ವಾಟ್ಸ್‌ಆಪ್ ತನ್ನ ಗ್ರಾಹಕರಿಗೆ ದಿನಕ್ಕೊಂದು ಹೊಸ ಸೇವೆಯನ್ನು ನೀಡಲು ಮುಂದಾಗಿದೆ. ಈಗ ಅದೇ ಮಾದರಿಯಲ್ಲಿ ಗ್ರಾಹಕರು ನೀರಿಕ್ಷಿಸದ ಮಾದರಿಯಲ್ಲಿ ಹೊಸದೊಂದು ಆಯ್ಕೆಯನ್ನು ನೀಡಿದೆ.

ವಾಟ್ಸ್‌ಆಪ್‌ನಿಂದ ನೀವು ನಿರೀಕ್ಷಿಸದ ಮತ್ತೊಂದು ಆಚ್ಚರಿಯ ಆಯ್ಕೆ

ಓದಿರಿ: ಪೋಷಕರೇ ಮಕ್ಕಳ ಕೈಗೆ ಮೊಬೈಲ್ ನೀಡುವ ಮುನ್ನ ಎಚ್ಚರವಹಿಸಿ: ಬ್ಲೂ ವೇಲ್‌ಗೆ ಮತ್ತೊಂದು ಬಲಿ

ಇತ್ತೀಚೆಗೆ ಭಾರತದಲ್ಲಿ ಹೈ ಸ್ಪೀಡ್ ಡೇಟಾವೂ ಅತೀ ಕಡಿಮೆ ಬೆಲೆಗೆ ದೊರೆಯುತ್ತಿದ್ದು, ಈ ಹಿನ್ನಲೆಯಲ್ಲಿ ವಾಟ್ಸ್ಆಪ್ ವಿಡಿಯೋ ಕಾಲಿಂಗ್ ಸೇವೆಯನ್ನು ಬಳಕೆ ಮಾಡಿಕೊಳ್ಳುವವರ ಸಂಖ್ಯೆಯೂ ತೀರಾ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಪಿಚ್ಚರ್ ಇನ್ ಪಿಚ್ಚರ್ ವಿಡಿಯೋ ಕಾಲಿಂಗ್ ಆಯ್ಕೆಯನ್ನು ನೀಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪಿಚ್ಚರ್ ಇನ್ ಪಿಚ್ಚರ್:

ಪಿಚ್ಚರ್ ಇನ್ ಪಿಚ್ಚರ್:

ಈ ಹಿಂದೆ ವಿಡಿಯೋ ಕಾಲ್ ಮಾಡಿದ ಸಂದರ್ಭದಲ್ಲಿ ಕೇವಲ ವಿಡಿಯೋ ಕಾಲಿಂಗ್ ಸೇವೆಯನ್ನು ಮಾತ್ರವೇ ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿತ್ತು. ಆದರೆ ಈಗ ಬದಲಾದ ಸಮಯದಲ್ಲಿ ನೀವು ವಿಡಿಯೋ ಕಾಲಿಂಗ್ ನಲ್ಲಿ ಮಾತನಾಡುತ್ತಲೇ ಮತ್ತೊಬ್ಬರೊಂದಿಗೆ ಚಾಟ್ ಮಾಡಬಹುದಾಗಿದೆ.

ಬೇರೆಯಲ್ಲಿಯೂ ಈ ಸೇವೆ ಇಲ್ಲ:

ಬೇರೆಯಲ್ಲಿಯೂ ಈ ಸೇವೆ ಇಲ್ಲ:

ಈ ಪಿಚ್ಚರ್ ಇನ್ ಪಿಚ್ಚರ್ ಸೇವೆಯೂ ವಾಟ್ಸ್ಆಪ್ ಬಿಟ್ಟರೇ ಬೇರೆ ಯಾವುದೇ ಆಪ್ ನಲ್ಲಿಯೂ ಇಲ್ಲ ಎನ್ನಲಾಗಿದೆ. ಈ ಹಿಂದೆಯೇ ವಿಡಿಯೋ ಕಾಲ್ ಮಾಡಲು ಹಲವು ಆಪ್ ಗಳು ಲಭ್ಯವಿದ್ದರೂ ಸಹ ವಾಟ್ಸ್ ಆಪ್ ವಿಡಿಯೋ ಕಾಲಿಂಗ್ ಹೆಚ್ಚು ಜನಪ್ರಿಯವಾಗಿದ್ದು, ಈ ಹಿನ್ನಲೆಯಲ್ಲಿ ಈ ಸೇವೆಯನ್ನು ನೀಡಲಾಗಿದೆ.

How to save WhatsApp Status other than taking screenshots!! Kannada
ಹೊಸ ಮಾದರಿಯ ಅನುಭವ:

ಹೊಸ ಮಾದರಿಯ ಅನುಭವ:

ನೀವು ವಿಡಿಯೋ ಕಾಲ್ ನಲ್ಲಿ ಇರುವ ಸಮಯದಲ್ಲಿ ನಿಮ್ಮ ಸ್ಕ್ರಿನ ಅನ್ನು ಕಿರಿದು ಮಾಡಿಕೊಂಡು ಮತ್ತೊಂದು ಸ್ಕ್ರಿನ್ ನಲ್ಲಿ ಚಾಟಿಂಗ್ ಮಾಡಲು ಅವಕಾಶವು ಇದೆ. ಇದು ಬಳಕೆದಾರರಿಗೆ ಹೊಸ ಅನುಭವನ್ನು ನೀಡುವುದಲ್ಲದೇ ಮತ್ತೇ ಮತ್ತೇ ಈ ಸೇವೆಯನ್ನು ಪಡೆದುಕೊಳ್ಳಲು ಪ್ರೇರೆಪಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
WhatsApp has rolled out two new features - support for picture-in-pictureVideo Calling. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot