Subscribe to Gizbot

ರೂ.6000ಕ್ಕೆ ದೊರೆಯುತ್ತಿದೆ ನೋಕಿಯಾ 2 ಸ್ಮಾರ್ಟ್‌ಫೋನ್..!

Posted By:

ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಮತ್ತೆ ಎಂಟ್ರಿಕೊಟ್ಟಿರುವ ನೋಕಿಯಾ ಈಗಾಗಲೇ ಬಜೆಟ್ ಸ್ಮಾರ್ಟ್‌ಫೋನ್ ವೊಂದನ್ನು ಮಾರುಕಟ್ಟೆಗೆ ಬಿಡಲಿದೆ ಎನ್ನುವ ಮಾತು ಕೇಳಿಬಂದಿತ್ತು. ಇದೇ ಮಾದರಿಯಲ್ಲಿ ನೋಕಿಯಾ 2 ಸದ್ಯ ಅಮೆರಿಕಾದ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದೆ ಎನ್ನಲಾಗಿದೆ.

ರೂ.6000ಕ್ಕೆ ದೊರೆಯುತ್ತಿದೆ ನೋಕಿಯಾ 2 ಸ್ಮಾರ್ಟ್‌ಫೋನ್..!

ಓದಿರಿ: ವೊಡಾಫೋನ್ ನಿಂದ ಎರಡು ಆಫರ್: ಅನ್‌ಲಿಮಿಟೆಡ್ ಡೇಟಾ ಮತ್ತು ಕರೆ..!

HMD ಗ್ಲೊಬಲ್ ಸಂಸ್ಥೆಯೂ ಈ ಹಿಂದಯೇ ನೋಕಿಯಾ 2 ಬಿಡುಗಡೆ ಮಾಡುವುದಾಗಿ ತಿಳಿಸಿತ್ತು, ಅದರಂತೆ ನೋಕಿಯಾ 2 ಅಮೆರಿಕಾ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದು, ರೂ. 6000ಕ್ಕೆ ಮಾರಾಟವಾಗುತ್ತಿದೆ. ಈ ಫೋನ್ ಭಾರತೀಯ ಮಾರುಕಟ್ಟೆಗೆ ಕಾಲಿಟ್ಟರೇ ಬೇರೆಲ್ಲಾ ಕಂಪನಿಗಳ ಕಥೆ ಮುಗಿದ ಹಾಗೇ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ 2 ಬೆಲೆ ರೂ.6000:

ನೋಕಿಯಾ 2 ಬೆಲೆ ರೂ.6000:

ಈ ಹಿಂದೆಯೇ ನೋಕಿಯಾ 2 ಬೆಲೆ ರೂ.5000ದ ಅಸುಪಾಸಿನಲ್ಲಿರಲಿದೆ ಎನ್ನಲಾಗಿತ್ತು. ಸದ್ಯ ಅಮೆರಿಕಾದ ಮಾರುಕಟ್ಟೆಯಲ್ಲಿ ರೂ. 6000ಕ್ಕೆ ಈ ಫೋನ್ ಮಾರಾಟವಾಗುತ್ತಿದ್ದು, ಭಾರತೀಯ ಮಾರುಕಟ್ಟೆಗೆ ಕಾಲಿಡುವ ಮುನ್ನ ಈ ಫೋನ್ ಬೆಲೆಯಲ್ಲಿ ವ್ಯತ್ಯಾಸವಾಗಲಿದೆ ಎನ್ನಲಾಗಿದೆ.

4.5 ಇಂಚಿನ ಡಿಸ್‌ಪ್ಲೇ ಇದರಲಿದೆ:

4.5 ಇಂಚಿನ ಡಿಸ್‌ಪ್ಲೇ ಇದರಲಿದೆ:

ನೋಕಿಯಾ 2 ಸ್ಮಾರ್ಟ್‌ಫೋನಿನಲ್ಲಿ ನಾವು 4.5 ಇಂಚಿನ LCD IPS ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದು HD ಗುಣಮಟ್ಟವನ್ನು ಹೊಂದಿದ ಎನ್ನಲಾಗಿದೆ.

ಸ್ನಾಪ್‌ಡ್ರಾಗನ ಪ್ರೋಸೆಸರ್:

ಸ್ನಾಪ್‌ಡ್ರಾಗನ ಪ್ರೋಸೆಸರ್:

ನೋಕಿಯಾ 2 ಸ್ಮಾರ್ಟ್‌ಫೋನಿನಲ್ಲಿ 1.3GHz ವೇಗದ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 212 ಕ್ವಾಡ್ ಕೋರ್ ಪ್ರೋಸೆಸರ್ ಅನ್ನು ಕಾಣಬಹುದಾಗಿದೆ.

ಆಂಡ್ರಾಯ್ಡ್ ಒರಿಯೋ:

ಆಂಡ್ರಾಯ್ಡ್ ಒರಿಯೋ:

ಸದ್ಯ ನೋಕಿಯಾ 2 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 7.1.1ನಲ್ಲಿ ಕಾರ್ಯನಿರ್ವಹಿಸಲಿದ್ದು, ಶೀಘ್ರವೇ ಆಂಡ್ರಾಯ್ಡ್ ಒರಿಯೋ ಆಪ್‌ಡೇಟ್ ಸಹ ಪಡೆದುಕೊಳ್ಳಲಿದೆ ಎನ್ನಲಾಗಿದೆ.

ಡ್ಯುಯಲ್ ಸಿಮ್‌ಕಾರ್ಡ್:

ಡ್ಯುಯಲ್ ಸಿಮ್‌ಕಾರ್ಡ್:

ನೋಕಿಯಾ 2 ಸ್ಮಾರ್ಟ್‌ಫೋನ್ 4G VoLTE ಸಪೋರ್ಟ್ ಮಾಡಲಿದ್ದು, ಡ್ಯುಯಲ್ ಸಿಮ್‌ ಕಾರ್ಡ್ ಹಾಕಿಕೊಳ್ಳುವ ಅವಕಾಶವನ್ನು ಬಳಕೆದಾದರಿಗೆ ಮಾಡಿಕೊಟ್ಟಿದೆ.

1GB RAM/16GB ROM:

1GB RAM/16GB ROM:

ನೋಕಿಯಾ 2 ಸ್ಮಾರ್ಟ್‌ಫೋನಿನಲ್ಲಿ 1GB RAM ಮತ್ತು 16GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಘಾಇದ್ದು, ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಅವಕಾಶ ಸಹ ಲಭ್ಯವಿದೆ.

Nokia 6 - ಚೀನಾ ಕಂಪೆನಿಗಳಿಗೆ ಸೆಡ್ಡು ಹೊಡೆಯುವ ಏಕೈಕ ಫೋನ್ "ನೋಕಿಯಾ 6"!!
8MP/5MP ಕ್ಯಾಮೆರಾ:

8MP/5MP ಕ್ಯಾಮೆರಾ:

ನೋಕಿಯಾ 2 ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ LED ಫ್ಲಾಷ್ ಲೈನಿನೊಂದಿಗೆ 8MP ಕ್ಯಾಮೆರಾವನ್ನು ನೀಡಲಾಗಿದ್ದು, ಮುಂಭಾಗದಲ್ಲಿ 5MP ಕ್ಯಾಮೆರಾ ಅಳವಡಿಸಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Nokia 2 gets listed on B&H e-commerce site in US. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot