ಕೆಲವೇ ನಿಮಿಷಗಳ ಕಾಲ ವಾಟ್ಸ್‌ಆಪ್ ಸ್ಥಗಿತ: ಪರದಾಡಿದ ಬಳಕೆದಾರರು..!

Written By:

ಸೋಶಿಯಲ್ ಮಿಡಿಯಾ ದೈತ್ಯ ಫೇಸ್‌ಬುಕ್ ಒಡೆತನಕ್ಕೆ ಸೇರಿದ ಸೋಶಿಯಲ್ ಮೇಸೆಂಜಿಗ್ ತಾಣ ವಾಟ್ಸ್ಆಪ್ ಭಾರತ ಸೇರಿದಂತೆ ವಿಶ್ವದ ನಾನಾ ಭಾಗಗಳಲ್ಲಿ ಕ್ರ್ಯಾಶ್ ಆಗಿದ್ದು, ಸುಮಾರು ಒಂದು ತಾಸು ಕಾರ್ಯಚರಣೆಯನ್ನು ಸ್ಥಗಿತಗೊಂಡಿತ್ತು ಎನ್ನಲಾಗಿದೆ.

ಕೆಲವೇ ನಿಮಿಷಗಳ ಕಾಲ ವಾಟ್ಸ್‌ಆಪ್ ಸ್ಥಗಿತ: ಪರದಾಡಿದ ಬಳಕೆದಾರರು..!

ಓದಿರಿ: ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಣೆಗೆ ಡೆಡ್‌ಲೈನ್ ಫಿಕ್ಸ್: ಯಾವಾಗ.?

ವಾಟ್ಸ್ಆಪ್ ಸರ್ವರ್ ಕ್ರ್ಯಾಶ್ ಆಗಿರುವ ಹಿನ್ನಲೆಯಲ್ಲಿ ವಾಟ್ಸ್ಆಪ್ ಮೆಸೆಂಜರ್ ಸೇವೆ ಸ್ಥಗಿತಗೊಂಡಿದೆ. ಜಗತ್ತಿನ ಶೇ.60% ಮಂದಿ ವಾಟ್ಸ್ ಅಪ್'ನಲ್ಲಿ ಮೆಸೇಜ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಭಾರತ, ಸಿಂಗಾಪುರ್, ಲಂಡನ್, ಜರ್ಮನಿ ಸೇರಿದಂತೆ ಬಹುತೇಕ ದೇಶದಲ್ಲಿ ವಾಟ್ಸ್ಆಪ್ ಕೈಕೊಟ್ಟಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸರಿಪಡಿಸಲು ಮುಂದಾದ ವಾಟ್ಸ್‌ಆಪ್:

ಸರಿಪಡಿಸಲು ಮುಂದಾದ ವಾಟ್ಸ್‌ಆಪ್:

ವಾಟ್ಸ್ಆಪ್ ಸರ್ವರ್ ಕ್ರ್ಯಾಶ್ ಆಗಿರುವ ಹಿನ್ನಲೆಯಲ್ಲಿ ಬಳಕೆದಾರರು ಕ್ಷಮೆ ಕೋರಿರುವ ವಾಟ್ಸ್ಆಪ್, ಈ ಸಮಸ್ಯೆಯನ್ನು ಪರಿಹರಿಸಲು ಟೆಕ್ನಿಕಲ್ ಟೀಮ್ ಕೆಲಸ ಮಾಡುತ್ತಿರವುದಾಗಿ ತಿಳಿಸಿದೆ.

ಶುಕ್ರವಾರ ಮಧ್ಯಾಹ್ನ ಸ್ಟಾಪ್:

ಶುಕ್ರವಾರ ಮಧ್ಯಾಹ್ನ ಸ್ಟಾಪ್:

ವಾಟ್ಸ್‌ಆಪ್ ಶುಕ್ರವಾರ ಮಧ್ಯಾಹ್ನ ಸ್ಟಾಪ್ ಆಗಿದೆ ಎನ್ನಲಾಗಿದೆ. ಇಂದು ಮಧ್ಯಾಹ್ನ ವಾಟ್ಸ್‌ಆಪ್ ಮೂಲಕ ಸಂದೇಶ ಕಳುಹಿಸಲು ಸಾಧ್ಯವಾಗದೆ ಪರದಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಜಗತ್ತಿನ ವಿವಿಧ ಮಾಧ್ಯಮಗಳು ವರದಿ ಮಾಡಿದೆ.

ಸುಮಾರು 40 ನಿಮಿಷಗಳ ಸೇವೆ ಸ್ಥಗಿತ:

ಸುಮಾರು 40 ನಿಮಿಷಗಳ ಸೇವೆ ಸ್ಥಗಿತ:

ಸುಮಾರು 40 ನಿಮಿಷಗಳ ಕಾಲ ವಾಟ್ಸ್‌ಆಪ್ ಕ್ರ್ಯಾಶ್ ಆಗಿದ್ದು, ಬಳಿಕ ವಾಟ್ಸ್‌ಆಪ್ ಟೀಮ್ ಸಮಸ್ಯೆಯನ್ನು ಸರಿಪಡಿಸಿ, ತನ್ನ ಸೇವೆಯನ್ನು ಮತ್ತೆ ಕಾರ್ಯಾರಂಭಿಸಿದೆ ಎಂದು ವರದಿ ಮಾಡಲಾಗಿದೆ.

ಈ ದೇಶಗಳಲ್ಲೇ ಹೆಚ್ಚು ಸಮಸ್ಯೆ:

ಈ ದೇಶಗಳಲ್ಲೇ ಹೆಚ್ಚು ಸಮಸ್ಯೆ:

ಭಾರತ, ಸಿಂಗಾಪುರ್, ಮೋಝಾಂಬಿಕ್, ರಷ್ಯಾ, ವಿಯೆಟ್ನಾಮ್, ಇರಾಕ್ ಸೇರಿದಂತೆ ಜಗತ್ತಿನಾದ್ಯಂತ ವಾಟ್ಸಆಪ್ ಸೇವೆ ಸ್ಥಗಿತಗೊಂಡಿದೆ. ಇದರಿಂದಾಗಿ ಮೊಬೈಲ್ ಗ್ರಾಹಕರು ಸಂದೇಶಕ್ಕಾಗಿ ಬೇರೆ ಬೇರೆ ಆಪ್‌ಗಳ ಮೊರೆ ಹೋಗಿದ್ದಾರೆ.

ವಾಟ್ಸ್‌ಆಪ್‌ಗೆ ಹೊಡೆತ ಎನ್ನಲಾಗಿದೆ:

ವಾಟ್ಸ್‌ಆಪ್‌ಗೆ ಹೊಡೆತ ಎನ್ನಲಾಗಿದೆ:

ಇದು ವಾಟ್ಸ್‌ಆಪ್ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿದೆ ಎನ್ನಲಾಗಿದ್ದು, ಈಗಾಗಲೇ ವಾಟ್ಸ್‌ಆಪ್ ಬಳಕೆದಾರರು ಬೇರೆ-ಬೇರೆ ಆಪ್‌ ಕಡೆಗೆ ತಕ್ಷಣ ಮುಖ ಮಾಡಿದ್ದು, ಇದರಿಂದ ಮುಂದೆ ದೊಡ್ಡ ಹೊಡೆತ ಸಾಧ್ಯತೆ ಇದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
WhatsApp Is Down for Some Users in India and Other Regions, to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot