Subscribe to Gizbot

ಏರ್‌ಟೆಲ್, ಜಿಯೋದಲ್ಲೂ ಇಲ್ಲ: BSNL ನಿಂದ 8 ಪಟ್ಟು ಅಧಿಕ ಡೇಟಾ ಆಫರ್..!!

Written By:

ದಿನೇ ದಿನೇ ಸರಕಾರಿ ಸ್ವಾಮ್ಯದ BSNL ಟೆಲಿಕಾಂ ವಲಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಖಾಸಗಿ ಕಂಪನಿಗಳು ನೀಡಲು ಹೆದರುವಂತಹ ಆಫರ್ ಗಳನ್ನು ಘೋಷಣೆ ಮಾಡುತ್ತಿದ್ದು, ಯುವ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ತನ್ನ ಪ್ಲಾನ್ ಗಳನ್ನು ರಚನೆ ಮಾಡುತ್ತಿದೆ. ಈ ಮೂಲಕ ಖಾಸಗಿ ಕಂಪನಿಗಳು ನಾಚುವಂತಾಗಿದೆ. 

ಏರ್‌ಟೆಲ್, ಜಿಯೋದಲ್ಲೂ ಇಲ್ಲ: BSNL ನಿಂದ 8 ಪಟ್ಟು ಅಧಿಕ ಡೇಟಾ ಆಫರ್..!!

ಓದಿರಿ: ಆಂಡ್ರಾಯ್ಡ್ ಬಳಕೆದಾರರೇ ಎಚ್ಚರ: ನೀವು ಬಳಸುವ ಆಪ್‌ಗಳಲ್ಲಿ ಆಡ್ವೇರ್ ಗಳಿರಬಹುದು..!

ಇಷ್ಟು ದಿನ ಪ್ರಿಪೇಯ್ಡ್ ಗ್ರಾಹಕರನ್ನು ಗುರಿಯಾಗಿಟ್ಟುಕೊಂಡು ಆಫರ್ ಗಳನ್ನು ಘೋಷಣೆ ಮಾಡಿದ್ದ BSNL, ಇದೇ ಮೊದಲ ಭಾರಿಗೆ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಕಾಳು ಹಾಕಿದೆ. ಈ ಮೂಲಕ ಟೆಲಿಕಾಂ ವಲಯದಲ್ಲಿ ಹೊಸ ಸಂಚಲನಕ್ಕೆ ಮುಂದಾಗಿದೆ. ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲು ಹೊಸ ಆಫರ್ ನೀಡಿದೆ ಆ ಕುರಿತ ಮಾಹಿತಿ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೆಚ್ಚಿನ ಡೇಟಾ ಲಾಭ:

ಹೆಚ್ಚಿನ ಡೇಟಾ ಲಾಭ:

BSNL ಪೋಸ್ಟ್ ಪೇಯ್ಡ್ ಗ್ರಾಹಕರು ರೂ.99 ಪ್ಲಾನ್ ಪಡೆದುಕೊಂಡರೆ 250 MB ಡೇಟಾವನ್ನು ಪಡೆಯಲಿದ್ದಾರೆ. ಇದೇ ಮಾದರಿಯಲ್ಲಿ ರೂ.225 ಪ್ಲಾನ್ ನಲ್ಲಿ ಇರುವವರಿಗೆ 1GB ಡೇಟಾವು ದೊರೆಯಲಿದೆ. ಹಾಗೆ ರೂ.325 ಪ್ಲಾನ್‌ಗೆ 2GB ಡೇಟಾ ಬಳಕೆಗೆ ಸಿಗಲಿದೆ. ಇದಲ್ಲದೇ ರೂ.525 ಮತ್ತು ರೂ.725 ಪ್ಲಾನ್ ನಲ್ಲಿ ಇರುವವರಿಗೆ ಕ್ರಮವಾಗಿ 3GB ಮತ್ತು 5GB ಡೇಟಾವು ದೊರೆಯಲಿದೆ.

ಇದಲ್ಲದೇ ಇನ್ನು ಇದೆ:

ಇದಲ್ಲದೇ ಇನ್ನು ಇದೆ:

ಇದಲ್ಲದೇ BSNL ರೂ. 799. ರೂ. 1125 ಮತ್ತು ರೂ. 1525 ಪ್ಲಾನ್ ಹಾಕಿಸಿಕೊಂಡಿರುವ ಗ್ರಾಹಕರಿಗೆ ಕ್ರಮವಾಗಿ 10GB, 20GB, ಮತ್ತು 30GB ಡೇಟಾವನ್ನು ಮಾಸಿಕವಾಗಿ ನೀಡಲಿದೆ ಎನ್ನಲಾಗಿದೆ. ಇದರಿಂದಾಗಿ ಇಷ್ಟು ದಿನ ಪ್ರೀಪೇಯ್ಡ್ ನಲ್ಲಿದ್ದ ಗ್ರಾಹಕರಿಗೆ ಪೋಸ್ಟ್ ಪೇಯ್ಡ್ ಕಡೆಗೆ ವಾಲುವ ಮನಸಾಗಿದೆ.

ಯಾವುದೇ ಆಕ್ಟೀವೆಷನ್ ಬೇಡ:

ಯಾವುದೇ ಆಕ್ಟೀವೆಷನ್ ಬೇಡ:

ಇದಲ್ಲದೇ BSNL ನೀಡಿರುವ ಈ ಹೊಸ ಡೇಟಾ ಲಾಭವನ್ನು ಪಡೆದುಕೊಳ್ಳಲು ಯಾವುದೇ ಆಕ್ಟೀವೆಷನ್ ಮಾಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ತಾನಾಗಿಯೇ ಈ ಪ್ಲಾನ್ ಗಳಲ್ಲಿ ಗ್ರಾಹಕರಿಗೆ ಹೆಚ್ಚಿನ ಲಾಭವು ದೊರೆಯಲಿದೆ ಎನ್ನಲಾಗಿದೆ. ಆಟೋ ಆಪ್ಡೇಟ್ ಆಗಲಿದೆ. ಇದು ಜುಲೈ ಒಂದರಿಂದಲೇ ಆಕ್ಟಿವ್ ಆಗಿದೆ.

ಪೋಸ್ಟ್ ಪೇಯ್ಡ್ ಗ್ರಾಹಕರ ಮೇಲೆ ಕಣ್ಣು...

ಪೋಸ್ಟ್ ಪೇಯ್ಡ್ ಗ್ರಾಹಕರ ಮೇಲೆ ಕಣ್ಣು...

ಸದ್ಯ ಟೆಲಿಕಾಂ ಕಂಪನಿಗಳು ಪೋಸ್ಟ್ ಪೇಯ್ಡ್ ಗ್ರಾಹಕ ಮೇಲ ಕಣ್ಣು ಹಾಕಿವೆ, ಕಾರಣ ಪ್ರೀ ಪೇಯ್ಡ್ ಗ್ರಾಹಕರು ಬೇರೆ ಕಡೆ ಉತ್ತಮ ಆಫರ್ ಕಂಡರೆ ಹಾರಿ ಹೋಗಬಹುದು. ಆದರೆ ಪೋಸ್ಟ್ ಪೇಯ್ಡ್ ಗ್ರಾಹಕರು ಅಷ್ಟಾಗಿ ಬೇಗ ಬೇರೆ ಕಂಪನಿಗಳಿಗೆ ವಲಸೆ ಹೋಗುವುದಿಲ್ಲ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
state-owned telco BSNL has announced yet another data-focused plan for its postpaid subscribers in an attempt to counter Reliance Jio. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot