ಮತ್ತೆ ಬದಲಾಯಿತು ವಾಟ್ಸ್‌ಆಪ್..!! ಏನೇನು..?

Written By:

ದಿನೇ ದಿನೇ ಸೋಸಿಯಲ್ ಮೆಸೆಂಜಿಗ್ ಆಪ್, ಫೇಸ್‌ಬುಕ್ ಒಡೆತನದ ವಾಟ್ಸ್‌ಆಪ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಸಾಗಿದೆ. ಬಹುತೇಕ ಸ್ಮಾರ್ಟ್‌ಫೋನ್ ಬಳಕೆದಾರರು ವಾಟ್ಸ್‌ಆಪ್ ಅನ್ನು ಬಳಸುತ್ತಿದ್ದಾರೆ ಎನ್ನುವ ಮಾಹಿತಿಯೊಂದು ಸದ್ಯ ಬಹಿರಂಗವಾಗಿದ್ದು, ಇದೇ ಸಂದರ್ಭದಲ್ಲಿ ವಾಟ್ಸ್‌ಆಪ್ ತನ್ನ ಬಳಕೆದಾರಿಗೆ ಮತ್ತೆ ಹಲವು ಹೊಸ ಆಯ್ಕೆಗಳನ್ನು ನೀಡಲು ಮುಂದಾಗಿದೆ.

ಮತ್ತೆ ಬದಲಾಯಿತು ವಾಟ್ಸ್‌ಆಪ್..!! ಏನೇನು..?

ಓದಿರಿ: ರಿಲಯನ್ಸ್ ಆಫರ್‌ಗೆ ಬೆಚ್ಚಿ ಬಿದ್ದ ಟೆಲಿಕಾಂ ಲೋಕ: 70 GB 4G ಡೇಟಾ ನಿಗಧಿ ಮಾಡಿದ ಬೆಲೆ ಎಷ್ಟು ಗೊತ್ತಾ..?

ವಾಟ್ಸ್‌ಆಪ್ ತನ್ನ ಸೇವೆಯನ್ನು ಮತ್ತಷ್ಟು ಆಕರ್ಷಕ ಗೊಳಿಸಿದ್ದು, ಕಾಲಿಂಗ್ ಇಂಟರ್ ಫೇಸ್ ಸೇರಿದಂತೆ ಹತ್ತು ಹಲವು ಬದಲಾವಣೆಗಳನ್ನು ಮಾಡುವ ಮೂಲಕ ಮತ್ತಷ್ಟು ಗ್ರಾಹಕರನ್ನು ಸೆಳೆಯುವ ಪ್ರಯತ್ನವನ್ನು ಮಾಡುತ್ತಿದೆ ಎನ್ನಲಾಗಿದೆ.

ಓದಿರಿ: ಆಧಾರ್ ಕಾರ್ಡ್ ಕಳೆದ ಹೋದರೆ ಮಾಡಬೇಕಾದ್ದೇನು..?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಾಲಿಂಗ್ ಇಂಟರ್‌ಫೇಸ್ ಬದಲಾವಣೆ:

ಕಾಲಿಂಗ್ ಇಂಟರ್‌ಫೇಸ್ ಬದಲಾವಣೆ:

ಈ ಹಿಂದೆ ಇದ್ದಂತಹ ಕಾಲಿಂಗ್ ಇಂಟರ್‌ಫೇಸ್‌ಅನ್ನು ವಾಟ್ಸ್‌ಆಪ್ ಬದಾಲವಣೆ ಮಾಡಿದ್ದು, ಸಾಮಾನ್ಯ ಕಾಲಿಂಗ್ ನಂತೆ ಕಾಣಿಸುವಂತೆ ಮಾಡಿದೆ. ಅಲ್ಲದೇ ವಿನ್ಯಾಸವನ್ನು ಕೊಂಚ ಬದಾಲವಣೆ ಮಾಡಿದೆ. ಕಾಲ್ ರೀಸಿವ್ ಮಾಡದೆ ಮೇಸೆಜ್ ಕಳುಹಿಸುವ ಅವಕಾಶವನ್ನು ಮಾಡಿಕೊಟ್ಟಿದೆ.

ಗ್ರೂಪ್ ಚಾಟ್ ಪಿನ್:

ಗ್ರೂಪ್ ಚಾಟ್ ಪಿನ್:

ಇಂದಿನ ದಿನದಲ್ಲಿ ವಾಟ್ಸ್‌ಆಪ್ ಬಳಕೆದಾರು ಹಲವರು ಗ್ರೂಪ್‌ಗಳಲ್ಲಿ ಸದಸ್ಯರಾಗಿರುವುದರಿಂದ ಅವರ ಸಹಾಯಕ್ಕೆ ತಮಗೆ ಬೇಕಾದ ಗ್ರೂಪ್ ಚಾಟಿಂಗ್‌ ಅನ್ನು ಪಿನ್ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಈ ಮೂಲಕ ನಿಮ್ಮ ನೆಚ್ಚಿನ ಗ್ರೂಪ್ ಮೊದಲ ಸ್ಥಾನದಲ್ಲಿರಲಿದೆ.

ಆಲ್ಬಮ್ ಆಯ್ಕೆ:

ಆಲ್ಬಮ್ ಆಯ್ಕೆ:

ಗ್ರೂಪ್‌ಗಳಲ್ಲಿ ಒದೊಂದೇ ಫೋಟೋಗಳನ್ನು ಕಳುಹಿಸುವ ಮಾದರಿಯಲ್ಲೇ ಫೋಟೋ ಆಲ್ಬಮ್‌ಗಳನ್ನು ತಯಾರಿಸಿ ಆಪ್‌ಲೋಡ್ ಮಾಡಬಹುದಾದ ಆಯ್ಕೆಯನ್ನು ನೀಡಲು ವಾಟ್ಸ್ಆಪ್ ತಯಾರಿ ನಡೆಸಿದೆ ಎಂದು ತಿಳಿದುಬಂದಿದೆ.

 ಬರಲಿದೆ ವಾಟ್ಸ್‌ಆಪ್ ಬಿಸನೆಸ್ ಆಪ್:

ಬರಲಿದೆ ವಾಟ್ಸ್‌ಆಪ್ ಬಿಸನೆಸ್ ಆಪ್:

ಸೋಶಿಯಲ್ ಮೆಸೆಂಗ್ ಆಪ್ ಆಗಿರುವ ವಾಟ್ಸ್‌ಆಪ್ ಶೀಗ್ರವೇ ವಾಟ್ಸ್‌ಆಪ್ ಬಿಸನೆಸ್ ಆಪ್ ಅನ್ನು ಶುರು ಮಾಡಲಿದೆ ಎನ್ನಲಾಗಿದೆ. ಈಗಾಗಲೇ ನೀಲ ನಕ್ಷೆ ರೆಡಿಯಾಗಿದ್ದು, ಕೆಲವೇ ದಿನಗಲ್ಲಿ ಲಾಂಚ್ ಆಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
company has revamped the calling interface for both video calls as well as audio calls in the app. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot