ಯುಟ್ಯೂಬ್ ಕಿಡ್ಸ್: ಮಕ್ಕಳ ದಿನಾಚರಣೆಯ ಅಂಗವಾಗಿ ಗೂಗಲ್ ನಿಂದ ಭಾರತೀಯ ಮಕ್ಕಳಿಗೆ ಕೊಡುಗೆ

By Prateeksha
|

ಈಗ ಭಾರತೀಯ ಪಾಲಕರು ತಮ್ಮ ಮಕ್ಕಳ ಯುಟ್ಯೂಬ್ ಚಟುವಟಿಕೆಗಳ ಮೇಲೆ ನಿಯಂತ್ರಣವನ್ನು ಹೊಂದಬಹುದು. ಇಲ್ಲಿದೆ ಮಕ್ಕಳ ಸ್ನೇಹಮಯಿ ಯುಟ್ಯೂಬ್ ಅನುಭವ ಹೇಗೆ ನೀಡುವುದೆಂದು.

ಮಕ್ಕಳ ದಿನಾಚರಣೆಯ ಅಂಗವಾಗಿ ಗೂಗಲ್ ನಿಂದ ಭಾರತೀಯ ಮಕ್ಕಳಿಗೆ ಕೊಡುಗೆ

ಹೌದು, ಈಗ ಗೂಗಲ್ ಹೊಸ ಆಪ್ ಬಿಡುಗಡೆ ಮಾಡಿದೆ ಯುಟ್ಯೂಬ್ ಕಿಡ್ಸ್ ಎನ್ನುವ ಹೆಸರಲ್ಲಿ. ಇದು ಮಕ್ಕಳಿಗೆ ಅವರಿಗೆ ಸಂಬಂಧಪಟ್ಟ ವೀಡಿಯೊಗಳನ್ನು ಮಾತ್ರ ನೋಡಲು ಅವಕಾಶ ನೀಡಿ ವಯಸ್ಸಿಗೆ ಮೀರಿದ ವೀಡಿಯೊ ಗಳನ್ನು ನೋಡಲು ಪ್ರತಿಬಂಧಿಸುತ್ತದೆ.

ಓದಿರಿ: ಜಿಯೋ ಸಿಮ್ ನಿಮ್ಮ ಮನೆಬಾಗಿಲಿಗೆ!! ರಿಜಿಸ್ಟರ್ ಮಾಡುವುದು ಹೇಗೆ?

ಐಒಎಸ್ ಮತ್ತು ಆಂಡ್ರೊಯಿಡ್ ಬಳಕೆದಾರರಿಬ್ಬರಿಗೂ ಇದು ಲಭ್ಯವಿದೆ. ಮಕ್ಕಳಿಗೆ ಸಂಬಂಧಿಸಿದ ಯಾವುದೇ ಕಾರ್ಟುನ್ ಮತ್ತು ಇನ್ನಿತರೆ ವೀಡಿಯೊಗಳನ್ನು ನೋಡಬಹುದು. ಪಾಲಕರು ಇದಕ್ಕಾಗಿ ಏನು ಮಾಡಬೇಕೆಂದು ಇಲ್ಲಿದೆ.

ಸರ್ಚ್ ಇಂಜಿನ್ ಸೆಟ್ಟಿಂಗ್ಸ್ ಅನ್ನು ಮಿತಿಗಳೊಸಿ

ಸರ್ಚ್ ಇಂಜಿನ್ ಸೆಟ್ಟಿಂಗ್ಸ್ ಅನ್ನು ಮಿತಿಗಳೊಸಿ

ಈ ಆಪ್ ಪಾಲಕರಿಗೆ ಆಟೊಮೆಟೆಡ್ ಪ್ರೊಪ್ಟ್ ಆಯ್ಕೆ ಉಪಯೋಗಿಸಲು ನೀಡುತ್ತದೆ, ಇದರಿಂದ ಮಕ್ಕಳು ಯಾವ ಯುಟ್ಯುಬ್ ವೀಡಿಯೊಗಳನ್ನೆಲ್ಲಾ ನೋಡಬಹುದೆಂದು ಪಾಲಕರು ನಿರ್ಧರಿಸಿ ನಿರ್ವಹಿಸಬಹುದು. ಬಳಕೆದಾರ ಕೇವಲ ಒನ್ ಮಾಡಿ ಮಾಡಿ ಬೇಕಾದಷ್ಟು ವೀಡಿಯೊಸ್ ನೋಡಬಹುದು ಅಥವಾ ಆಫ್ ಮಾಡಿ ಮಕ್ಕಳಿಗೆ ಪ್ರತಿಬಂಧಿತ ವೀಡಿಯೊಸ್ ಮಾತ್ರ ನೋಡುವಂತೆ ಮಾಡಬಹುದು.

ಮಕ್ಕಳ ವೀಡಿಯೊ ನೋಡುವ ಸಮಯ ಮಿತಿಗೊಳಿಸಿ

ಮಕ್ಕಳ ವೀಡಿಯೊ ನೋಡುವ ಸಮಯ ಮಿತಿಗೊಳಿಸಿ

ಸಮಯದ ಆಯ್ಕೆ ಯನ್ನು ಆನ್ ಮಾಡಿ ಮತ್ತು ಮಕ್ಕಳು ಅಷ್ಟು ಸಮಯದ ತನಕ ಮಾತ್ರ ವೀಡಿಯೊ ನೋಡುವಂತೆ ಮಾಡಬಹುದು. ಇದರಿಂದ ಇಡೀ ದಿನ ವೀಡಿಯೊ ನೋಡುತ್ತಾ ಕೂಡುವ ಅಭ್ಯಾಸ ತಪ್ಪಿಸಬಹುದು.

ಸೌಂಡ್ ಸೆಟ್ಟಿಂಗ್ ಬದಲಿಸಿ

ಸೌಂಡ್ ಸೆಟ್ಟಿಂಗ್ ಬದಲಿಸಿ

ಬಹಳಷ್ಟು ಸಮಯ ಮಕ್ಕಳಿಗೆ ಸಂಬಂಧಿಸಿದ ವೀಡಿಯೊಗಳು ಕಿರಿಕಿರಿ ತರಿಸುತ್ತವೆ ವಿಶೇಷವಾಗಿ ವಿಚಿತ್ರ ಶಬ್ದ ತರುವಂತಹುದು. ಆದರೆ ಈ ಆಪ್ ಮೂಲಕ ಪಾಲಕರು ಬ್ಯಾಕ್‍ಗ್ರೌಂಡ್ ಮ್ಯೂಜಿಕ್ ಅಥವಾ ಸೌಂಡ್ ಎಫೆಕ್ಟ್ ಆಫ್ ಮಾಡಬಹುದು. ಇದರಿಂದ ಮಕ್ಕಳು ಕೂಡ ತಮ್ಮ ಚಟುವಟಿಕೆಯಲ್ಲಿ ಮಗ್ನರಾಗುತ್ತಾರೆ ಮತ್ತು ದೊಡ್ಡವರು ಕೆಲಸದಲ್ಲಿ ಏಕಾಗ್ರತೆವಹಿಸಬಹುದು.

ನಿಮ್ಮದೆ ಆದ ಪಾಸ್ ಕೋಡ್ ಹಾಕಬಹುದು

ನಿಮ್ಮದೆ ಆದ ಪಾಸ್ ಕೋಡ್ ಹಾಕಬಹುದು

ಕೆಲ ವೀಡಿಯೊಸ್ ಗಳನ್ನು ಪ್ರತಿಬಂಧಿಸಲು ಪಾಲಕರು ತಮ್ಮದೆ ಆದ ಪಾಸ್‍ಕೋಡ್ ಹಾಕಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Here's how you can control your child's activities on YouTube, and build a kid-friendly video platform. Check it out.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X