ದೇಶಿ ಮಾರುಕಟ್ಟೆ ಪ್ರವೇಶಿಸಲಿವೆ 'ಪ್ಯಾನಾಸಾನಿಕ್‌ನ' ಎರಡು ಕ್ಯಾಮೆರಾಗಳು!

|

ಎಲೆಕ್ಟ್ರಾನಿಕ್ ಉತ್ಪನ್ನಗಳು ಸೇರಿದಂತೆ ಹಲವು ಗೃಹ ಉಪಯೋಗಿ ಉತ್ಪನ್ನಗಳಿಂದ ಪ್ಯಾನಾಸಾನಿಕ್ ಕಂಪನಿ ಹೆಸರು ಗ್ರಾಹಕರಿಗೆ ಚಿರಪರಿಚಿತವಾಗಿದೆ. ಹಾಗೇ ಕಂಪನಿಯ ಕ್ಯಾಮೆರಾಗಳು ಅತ್ಯುತ್ತಮವೆಂದು ಗುರುತಿಸಿಕೊಂಡಿದ್ದು, ಫೋಟೋಗ್ರಾಫರ್‌ಗಳ ಆಯ್ಕೆ ಲಿಸ್ಟ್‌ನಲ್ಲಿ ಇದ್ದೆ ಇರುತ್ತದೆ. ಇದೀಗ ಕಂಪನಿಯು ತನ್ನ ಎರಡು ಮಿರರ್‌ಲೆಸ್ಸ್‌ ಕ್ಯಾಮೆರಾಗಳನ್ನು ದೇಶಿ ಮಾರುಕಟ್ಟೆಗೆ ಲಾಂಚ್‌ ಮಾಡಲಿದ್ದು, ಫೋಟೋಗ್ರಫಿ ಪ್ರಿಯರ ಖುಷಿ ಹೆಚ್ಚಿಸಿದೆ.

ದೇಶಿ ಮಾರುಕಟ್ಟೆ ಪ್ರವೇಶಿಸಲಿವೆ 'ಪ್ಯಾನಾಸಾನಿಕ್‌ನ' ಎರಡು ಕ್ಯಾಮೆರಾಗಳು!

ಹೌದು, ಪ್ಯಾನಾಸಾನಿಕ್ ಕಂಪನಿಯು ಲುಮಿಕ್ಸ್ ಎಸ್‌1 ಮತ್ತು ಲುಮಿಕ್ಸ್‌ ಎಸ್‌1 ಆರ್‌ ಕ್ಯಾಮೆರಾಗಳನ್ನು ರಿಲೀಸ್‌ ಮಾಡಲು ಮುಂದಾಗಿದ್ದು, ಇದೇ ಏಪ್ರಿಲ್ 15 ರಂದು ಭಾರತೀಯ ಮಾರುಕಟ್ಟೆಗೆ ಲಾಂಚ್‌ ಮಾಡಲು ಮೂಹೂರ್ತ ಫಿಕ್ಸ್‌ ಮಾಡಲಾಗಿದೆ. ಲುಮಿಕ್ಸ್ ಎಸ್‌1 ಕ್ಯಾಮೆರಾವು 24.2 ಎಂಪಿ ಸೆನ್ಸಾರ್‌ ಹೊಂದಿದ್ದು, ಮತ್ತು ಲುಮಿಕ್ಸ್‌ ಎಸ್‌1 ಆರ್‌ ಕ್ಯಾಮೆರಾವು 47.3MP ಎಂಪಿ ಸೆನ್ಸಾರ್‌ನಲ್ಲಿರಲಿದೆ. ಹಾಗಾದರೇ ಈ ಕ್ಯಾಮೆರಾಗಳ ಇತರೆ ಫೀಚರ್ಸ್‌ಗಳೆನು ನೋಡೋಣ ಬನ್ನಿರಿ.

ಲುಮಿಕ್ಸ್ ಎಸ್‌1 ಕ್ಯಾಮೆರಾ

ಲುಮಿಕ್ಸ್ ಎಸ್‌1 ಕ್ಯಾಮೆರಾ

ಲುಮಿಕ್ಸ್ ಎಸ್‌1 ಕ್ಯಾಮೆರಾವು 3.2 ಇಂಚಿನ LCD ಡಿಸ್‌ಪ್ಲೇಯನ್ನು ಹೊಂದಿದ್ದು, 24.2 ಎಂಪಿ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದರಲ್ಲಿ Sigma ಮತ್ತು Leica L ಮೌಂಟ್‌ ಲೆನ್ಸ್‌ಗಳನ್ನು ಬಳಸಲಾಗಿದ್ದು, 60fps/50fps ವೇಗದಲ್ಲಿ 4K ವಿಡಿಯೊ ರೆಕಾರ್ಡ್‌ ಮಾಡಬಹುದಾಗಿದೆ. HLG ಫೋಟೋ ಮೋಡ್‌ ಆಯ್ಕೆ ನೀಡಲಾಗಿದೆ.

ಲುಮಿಕ್ಸ್‌ ಎಸ್‌1 ಆರ್‌ ಕ್ಯಾಮೆರಾ

ಲುಮಿಕ್ಸ್‌ ಎಸ್‌1 ಆರ್‌ ಕ್ಯಾಮೆರಾ

ಲುಮಿಕ್ಸ್ ಎಸ್‌1 ಕ್ಯಾಮೆರಾವು 3.2 ಇಂಚಿನ LCD ಡಿಸ್‌ಪ್ಲೇಯನ್ನು ಹೊಂದಿದ್ದು, 47.3 ಎಂಪಿ ಸೆನ್ಸಾರ್‌ ಅನ್ನು ಒದಗಿಸಲಾಗಿದ್ದು, ಫೋಟೋಗಳು ಹೈ ರೇಂಜ್ ಪಿಕ್ಸಲ್‌ ರೆಸಲ್ಯೂಶನ್‌ನಲ್ಲಿ ಮೂಡಿಬರಲಿವೆ. ಈ ಕ್ಯಾಮೆರಾದಲ್ಲಿಯೂ ಸಹ 60fps/50fps ವೇಗದಲ್ಲಿ 4K ವಿಡಿಯೊ ರೆಕಾರ್ಡ್‌ ಮಾಡಬಹುದಾಗಿದೆ. HLG ಫೋಟೋ ಮೋಡ್‌ ಆಯ್ಕೆ ನೀಡಲಾಗಿದೆ.

ಇತರೆ ಫೀಚರ್ಸ್

ಇತರೆ ಫೀಚರ್ಸ್

ಎಲೆಕ್ಟ್ರಾನಿಕ್ ವಿವ್ಯೂ ಫೈಂಡರ್‌ 5.76 ಮಿಲಿಯನ್ ಬಿಂದುಗಳನ್ನು ಹೊಂದಿರುವ OLED ಇದ್ದು, ಅತ್ಯುತ್ತಮ ರೆಸಲ್ಯೂಶನ್ ಸಾಮರ್ಥ್ಯದ ವಿವ್ಯೂ ಫೈಂಡರ್‌ ಆಗಿದೆ. ಬ್ರಸ್ಟ್‌ ಶೂಟ್‌ (9 ಫ್ರೆಮ್‌ ಪರ್‌ ಸೆಕೆಂಡ್) ಮತ್ತು ಕಂಟಿನ್ಯೂವ್ ಶೂಟಿಂಗ್‌ನಂಥ ಭಿನ್ನ ಆಯ್ಕೆಗಳನ್ನು ನೀಡಲಾಗಿದೆ. ಕ್ಯಾಮೆರಾವು ಮ್ಯಾಗ್ನೆಶಿಯಮ್ ಬಾಹ್ಯ ರಚನೆಯನ್ನು ಹೊಂದಿದ್ದು, ದೂಳು ಮತ್ತು ಸ್ಪ್ಲಾಶ್ ರೆಸಿಸ್ಟೆನ್ಸ್‌ ಅನ್ನು ಹೊಂದಿದೆ.

ಬೆಲೆ

ಬೆಲೆ

ಇದೇ ಏಪ್ರಿಲ್ 15ರಂದು ದೇಶಿಯ ಮಾರುಕಟ್ಟೆಯನ್ನು ಅಧಿಕೃತವಾಗಿ ಪ್ರವೇಶಿಸಲಿರುವ ಪ್ಯಾನಾಸಾನಿಕ್ ಲುಮಿಕ್ಸ್ ಎಸ್‌1 ಮತ್ತು ಲುಮಿಕ್ಸ್‌ ಎಸ್‌1 ಆರ್‌ ಕ್ಯಾಮೆರಾಗಳು ಬೆಲೆಯು ಸುಮಾರು 2,50,000ರೂ.ಗಳಿಂದ 4,00,000ರೂ.ಗಳ ನಡುವೆ ಇರಲಿದೆ ಎಂದು ಅಂದಾಜಿಸಲಾಗಿದೆ.

Best Mobiles in India

English summary
Panasonic to launch Lumix S1 and S1R full-frame mirrorless cameras in India on April 15.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X