Subscribe to Gizbot

ಜಿಮೇಲ್ ಟ್ರಿಕ್ಸ್: ಹೆಚ್ಚು ಸರಳ ಹೆಚ್ಚು ಉಪಯೋಗಕಾರಿ

Written By:

ಹೆಚ್ಚಿನ ಆಂಡ್ರಾಯ್ಡ್ ಬಳಕೆದಾರರಿಗೆ ಜಿಮೇಲ್ ಒಂದು ಉತ್ತಮ ಇಮೇಲ್ ವ್ಯವಸ್ಥೆ ಎಂದೆನಿಸಿದೆ. ಪ್ರತಿಯೊಂದು ಆಂಡ್ರಾಯ್ಡ್ ಡಿವೈಸ್‌ನಲ್ಲೂ ಈ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಿರುತ್ತಾರೆ. ಇದು ಹೆಚ್ಚು ಸರಳವಾಗಿದ್ದು, ವೇಗವಾಗಿದೆ ಅಂತೆಯೇ ಇಮೇಲ್ ವ್ಯವಸ್ಥೆಯನ್ನು ಇದು ಹೆಚ್ಚು ಸುಲಭ ಮಾಡಿದೆ.

ಓದಿರಿ: ಫೋನ್ ಸ್ಕ್ರೀನ್ ಒಡೆದಿದೆಯೇ? ಖರ್ಚಿಲ್ಲದ ಉಪಾಯವೊಂದು ಇಲ್ಲಿದೆ

ಇಂದಿನ ಲೇಖನದಲ್ಲಿ ಜಿಮೇಲ್‌ನ ಅತಿಮುಖ್ಯ ಫೀಚರ್‌ಗಳನ್ನು ನಾವು ತಿಳಿಸಿಕೊಡುತ್ತಿದ್ದು ಅಪ್ಲಿಕೇಶನ್ ಕುರಿತು ಇನ್ನಷ್ಟು ನೀವು ತಿಳಿದುಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಓದದೇ ಇರುವ ಸಂದೇಶಗಳ ವೀಕ್ಷಣೆ

ಓದದೇ ಇರುವ ಸಂದೇಶಗಳ ವೀಕ್ಷಣೆ

ಆಂಡ್ರಾಯ್ಡ್ ಜಿಮೇಲ್ ಅಪ್ಲಿಕೇಶನ್‌ ಓದದೇ ಇರುವ ಸಂದೇಶಗಳನ್ನು ಉತ್ತಮವಾಗಿ ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಸರ್ಚ್ ಐಕಾನ್ ಅನ್ನು ಸ್ಪರ್ಶಿಸಿ ಮತ್ತು ಅನ್‌ರೀಡ್ ಎಂಬುದಾಗಿ ಟೈಪ್ ಮಾಡಿ. ನೀವು ತೆರೆಯದೇ ಇರುವ ಇಮೇಲ್‌ಗಳನ್ನು ಮಾತ್ರವೇ ನೀವಿಲ್ಲಿ ಕಾಣುತ್ತೀರಿ.

ಸ್ಮಾರ್ಟ್ ಸರ್ಚಿಂಗ್

ಸ್ಮಾರ್ಟ್ ಸರ್ಚಿಂಗ್

ಜಿಮೇಲ್ ಹೆಚ್ಚಿನ ಸಂಖ್ಯೆಯ ಆಪರೇಟರ್‌ಗಳನ್ನು ಬಳಸುತ್ತಿದ್ದು ಇದು ನಿರ್ದಿಷ್ಟ ಸ್ಮಾರ್ಟ್ ಹುಡುಕಾಟಗಳಿಗೆ ಅನುವು ಮಾಡಿಕೊಡುತ್ತದೆ. ತನ್ನ ವೆಬ್‌ಸೈಟ್‌ನಲ್ಲಿ ಅವುಗಳು ಪೂರ್ಣ ಪಟ್ಟಿಯನ್ನೇ ಜಿಮೇಲ್ ನಿರ್ವಹಿಸಿದೆ.

ಸನ್ನೆಗಳ ಮೂಲಕ ನಿಯಂತ್ರಣ

ಸನ್ನೆಗಳ ಮೂಲಕ ನಿಯಂತ್ರಣ

ಜಿಮೇಲ್ ಹೆಚ್ಚಿನ ಸನ್ನೆಗಳನ್ನು ಬಳಸಿಕೊಳ್ಳುವುದಿಲ್ಲ, ಅದರಲ್ಲಿ ಹೆಚ್ಚು ಪ್ರಯೋಜನಕಾರಿಯಾಗಿರುವುದನ್ನು ಮಾತ್ರವೇ ಇರಿಸಿಕೊಳ್ಳುತ್ತದೆ. ನೀವು ನಿಮ್ಮೆಲ್ಲಾ ಇಮೇಲ್‌ಗಳನ್ನು ಒಂದನ್ನು ತೆರೆದು ಎಡಕ್ಕೆ ಸ್ವೈಪ್ ಮಾಡಿ ಅಂದರೆ ಪುಸ್ತಕದ ಪುಟ ತಿರುವಿದಂತೆ, ಪ್ರತಿಯೊಂದನ್ನು ವೀಕ್ಷಿಸಬಹುದಾಗಿದೆ.

ಬಹು ಸಂದೇಶಗಳನ್ನು ಆಯ್ಕೆಮಾಡುವುದು

ಬಹು ಸಂದೇಶಗಳನ್ನು ಆಯ್ಕೆಮಾಡುವುದು

ದೀರ್ಘವಾಗಿ ಒತ್ತುವುದರ ಮೂಲಕ ನೀವು ಬಹು ಸಂದೇಶಗಳನ್ನು ಆಯ್ಕೆಮಾಡಬಹುದಾಗಿದೆ. ಇಮೇಲ್‌ಗಳ ಸನಿಹವಿರುವ ಬಣ್ಣದ ವರ್ತುಲವನ್ನು ಸ್ಪರ್ಶಿಸುವುದರ ಮೂಲಕ ನೀವು ಇಮೇಲ್‌ಗಳನ್ನು ಆಯ್ಕೆಮಾಡಬಹುದಾಗಿದೆ. ಇದು ತ್ವರಿತ ಮಲ್ಟಿ ಆಯ್ಕೆಗೆ ನಿಮ್ಮನ್ನು ಅನುಮತಿಸುತ್ತದೆ.

ನಿಮ್ಮ ಮೇಲ್ ಫಾರ್ಮ್ಯಾಟ್ ಮಾಡಿ

ನಿಮ್ಮ ಮೇಲ್ ಫಾರ್ಮ್ಯಾಟ್ ಮಾಡಿ

ನಿಮ್ಮ ಫೋನ್‌ನಿಂದ ನೀವು ಇಮೇಲ್ ಮಾಡುತ್ತಿರುವಾಗ, ಪ್ರಸ್ತುತಿಯ ಕುರಿತು ನೀವು ಯೋಚಿಸದೇ ತ್ವರಿತ ಸಂದೇಶವನ್ನು ನೀವು ತಟ್ಟಬಹುದಾಗಿದೆ. ಜಿಮೇಲ್ ಅಪ್ಲಿಕೇಶನ್‌ನಲ್ಲಿ ಮುಖ್ಯ ಫಾರ್ಮ್ಯಾಟಿಂಗ್ ಆಯ್ಕೆ ಇದ್ದು, ಇವುಗಳನ್ನು ಪ್ರವೇಶಿಸಲು, ಕಂಪೋಸ್ ವಿಂಡೋದ್ಲಿ ದೀರ್ಘವಾಗಿ ಒತ್ತಿರಿ ಇದು ನೀವು ಇಮೇಲ್ ಟೈಪ್ ಮಾಡುತ್ತಿರುವಾಗ ಮತ್ತು ಫಾರ್ಮ್ಯಾಟ್ ಆಯ್ಕೆಮಾಡುವಾಗ ಇದನ್ನು ನಿರ್ವಹಿಸಬಹುದಾಗಿದೆ.

ಸಂವಾದಗಳನ್ನು ಮ್ಯೂಟ್ ಮಾಡಿ

ಸಂವಾದಗಳನ್ನು ಮ್ಯೂಟ್ ಮಾಡಿ

ಯಾವುದೇ ಕೆಲಸ ಅಥವಾ ಗುಂಪು ಪರಿಸ್ಥಿತಿಗಳಿಗೆ ನೀವು ಜಿಮೇಲ್ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದಲ್ಲಿ, ನೀವು ಸಿಸಿ ಮಾಡಬೇಕಾದ ಅಗತ್ಯವಿರುತ್ತದೆ ಇನ್ನು ಪ್ರತಿ ರಿಪ್ಲೈಗೂ ಇದನ್ನು ಕಾಪಿ ಮಾಡಬೇಕು ನೀವು ಈ ಸಂವಾದದ ಭಾಗವಾಗದೇ ಇದ್ದಲ್ಲಿ ಕೂಡ ಇದನ್ನು ಹೀಗೆ ಮಾಡಬೇಕಾಗುತ್ತದೆ. ಇದಕ್ಕಾಗಿ ಒಂದು ಸಲಹೆ ಇದ್ದು ಸಂವಾದದಲ್ಲಿ ಸಂದೇಶಗಳಲ್ಲಿ ಒಂದನ್ನು ತೆರೆಯಿರಿ ಮೂರು ಡಾಟ್ ಮೆನು ಸ್ಪರ್ಶಿಸಿ ಮತ್ತು ಮ್ಯೂಟ್ ಆಯ್ಕೆಮಾಡಿ.

ಕಲಿತುಕೊಳ್ಳಿ

ಕಲಿತುಕೊಳ್ಳಿ

ಜಿಮೇಲ್ ಮೆಶೀನ್ ಲರ್ನಿಂಗ್ ಅನ್ನು ಬಳಸಿಕೊಳ್ಳುತ್ತಿದ್ದು ನಿಮ್ಮ ಇಮೇಲ್ ಆರ್ಗನೈಸ್ ಮಾಡಲು ಇದರ ಸ್ಥಿತಿಯನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ. ಇದಕ್ಕಾಗಿ ಸೆಟ್ಟಿಂಗ್ಸ್‌ಗೆ ಹೋಗಿ > ನಿಮ್ಮ ಖಾತೆ > ಇನ್‌ಬಾಕ್ಸ್ ಟೈಪ್ ಮಾಡಿ ನಂತರ ಮುಖ್ಯ ಫೋಲ್ಡರ್‌ಗೆ ಹೋಗಿ.

ಜಿಮೇಲ್ ಖಾತೆಗಳು

ಜಿಮೇಲ್ ಖಾತೆಗಳು

ಅಪ್ಲಿಕೇಶನ್ ತೆರೆಯಿರಿ, ಸೈಡ್ ಬಾರ್ ಅನ್ನು ಸ್ಲೈಡ್ ಆಗಿ ಓಪನ್ ಮಾಡಿ ಡ್ರಾಪ್‌ಡೌನ್ ಬಾಣದ ಗುರುತನ್ನು ಸ್ಪರ್ಶಿಸಿ ಇದು ನಿಮ್ಮ ಖಾತೆಯ ಸಮೀಪದಲ್ಲಿ ಇರುತ್ತದೆ. ಖಾತೆ ಸೇರಿಸಿ ಆಯ್ಕೆಮಾಡಿ. ಎಕ್ಸ್‌ಚೇಂಜ್ ಖಾತೆಗಳಿಗೆ ಇಲ್ಲಿ ಬೆಂಬಲ ಇರುತ್ತದೆ.

ಇತರ ಅಪ್ಲಿಕೇಶನ್‌ಗಳೊಂದಿಗೆ ಇಮೇಲ್ ಹಂಚಿಕೊಳ್ಳಿ

ಇತರ ಅಪ್ಲಿಕೇಶನ್‌ಗಳೊಂದಿಗೆ ಇಮೇಲ್ ಹಂಚಿಕೊಳ್ಳಿ

ಸ್ಟಾರ್ ಐಕಾನ್ ಅನ್ನು ಸ್ಪರ್ಶಿಸುವುದರ ಮೂಲಕ ಮುಖ್ಯ ಇಮೇಲ್‌ಗಳನ್ನು ಉಳಿಸಿಕೊಳ್ಳುವುದು ಈಗ ತುಂಬಾ ಸುಲಭವಾಗಿದೆ. ಸ್ಟಾರ್ಡ್ ಫೋಲ್ಡರ್ ಅನ್ನು ತೆರೆಯುವ ಮೂಲಕ ನೀವದನ್ನು ನಂತರ ಕಂಡುಕೊಳ್ಳಬಹುದಾಗಿದೆ. ನೀವು ಪಠ್ಯವನ್ನು ಎವರ್ ನೋಟ್‌ನಲ್ಲಿ ಕೂಡ ಉಳಿಸಿಕೊಳ್ಳಬಹುದಾಗಿದೆ, ಸ್ಲಾಕ್‌ನಲ್ಲಿ ಪೋಸ್ಟ್ ಮಾಡಿ, ಇಲ್ಲವೇ ಇತರ ಸಹಯೋಗ ಅಪ್ಲಿಕೇಶನ್‌ನಲ್ಲಿ ಇದನ್ನು ಬಳಸಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Here are nine features in Gmail for Android that you may not have known about but should definitely be using.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot