Subscribe to Gizbot

ಫೇಸ್‌ಬುಕ್‌ನೊಂದಿಗೆ ವಾಟ್ಸಾಪ್‌ನ ಭರ್ಜರಿ ಸಮ್ಮಿಲನ

Written By:

ಫೆಬ್ರವರಿಯ ಮುನ್ನವೇ ಈ ವರ್ಷಾಂತ್ಯದಲ್ಲಿ ವಾಟ್ಸಾಪ್‌ ಅನ್ನು ಸ್ವಾಧೀನಪಡಿಸಿಕೊಳ್ಳುವ ಫೇಸ್‌ಬುಕ್ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಇಂದೇ ಈ ಸಾಮಾಜಿಕ ದೈತ್ಯ ತನ್ನ ಡೀಲ್ ಅನ್ನು ಮುಕ್ತಾಯಗೊಳಿಸಲಿದೆ.

ಇನ್ನು ವಿಷದವಾಗಿ ಹೇಳಬೇಕೆಂದರೆ, $22 ಬಿಲಿಯನ್‌ಗಳಲ್ಲಿ ಈ ಮೊಬೈಲ್ ಮೆಸೇಜಿಂಗ್ ಅಪ್ಲಿಕೇಶನ್ ಆದ ವಾಟ್ಸಾಪ್ ಅನ್ನು ಫೇಸ್‌ಬುಕ್ ಖರೀದಿಸಲಿದೆ. ಮೊದಲು ಫೇಸ್‌ಬುಕ್ $19 ಬಿಲಿಯನ್‌ಗೆ ಇದನ್ನು ಕೊಳ್ಳುವ ಅಂದಾಜನ್ನು ಮಾಡಿತ್ತು. ಆದರೀಗ $3 ಬಿಲಿಯನ್ ಹೆಚ್ಚಿಸಿದೆ. ಕೆಲವು ತಿಂಗಳಿಂದೀಚೆಗೆ ಫೇಸ್‌ಬುಕ್‌ನ ಸ್ಟಾಕ್ ಮೌಲ್ಯ ಹೆಚ್ಚಾಗಿರುವುದೇ ಇದಕ್ಕೆ ಕಾರಣವಾಗಿದೆ.

ಸಾಮಾಜಿಕ ಜಾಲ ದೈತ್ಯನಿಂದ ವಾಟ್ಸಾಪ್ ಖರೀದಿ

ಇದನ್ನೂ ಓದಿ: ಸ್ಮಾರ್ಟ್‌ಫೋನ್‌ಗಳ ಬಾಳ್ವಿಕೆಗಾಗಿ ಸರಳ ಸಲಹೆಗಳು

SEC ಫಿಲ್ಲಿಂಗ್ ಪ್ರಕಾರ, $4.59 ಬಿಲಿಯನ್ ಅನ್ನು ಕ್ಯಾಶ್ ರೂಪದಲ್ಲಿ ನೀಡಿ, ಫೇಸ್‌ಬುಕ್‌ನ ಕ್ಲಾಸ್ ಎ ಶೇರ್‌ ಆದ 177.7 ಮಿಲಿಯನ್‌ಗಳನ್ನು ಜೊತೆಗೆ ನಿರ್ಬಂಧಿಸಲಾದ 45.9 ಮಿಲಿಯನ್ ಸ್ಟಾಕ್ ಅನ್ನು ವಾಟ್ಸಾಪ್ ಸಿಬ್ಬಂದಿಗಳಿಗೆ ಒದಗಿಸಲಾಗುವುದು, $22 ಬಿಲಿಯನ್ ಅಡಿಯಲ್ಲಿ ಈ ಎಲ್ಲಾ ಲೆಕ್ಕಾಚಾರವನ್ನು ತೀರ್ಮಾನಿಸಲಾಗಿದೆ.

ವಾಟ್ಸಾಪ್ ಸಹ ಸಂಸ್ಥಾಪಕ ಜಾನ್ ಕೋಮ್ ಕೂಡ ಡೀಲ್ ಪ್ರಕಾರ ಸಾಮಾಜಿಕ ನೆಟ್‌ವರ್ಕ್‌ ಬೋರ್ಡ್‌ಗೆ ಸೇರಿದ್ದು ಫೇಸ್‌ಬುಕ್‌ನ ಬೋರ್ಡ್ ಆಫ್ ಡೈರೆಕ್ಟರ್ಸ್ ಅನ್ನು ಸೇರುವ ಜೊತೆಗೆ ಜಾನ್ ಕೋಮ್ ವಾಟ್ಸಾಪ್ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ. ಕೋಮ್ ಸಂಬಳ ವರ್ಷಕ್ಕೆ ಡಾಲರ್‌ ಆಗಲಿದೆ.

ಇದನ್ನೂ ಓದಿ: ಫ್ಲಿಪ್‌ಕಾರ್ಟ್‌ ವಿಶೇಷ ರಿಯಾಯಿತಿ ಸ್ಮಾರ್ಟ್‌ಫೋನ್‌ಗಳು

ಇನ್ನು ವಾಟ್ಸಾಪ್ ಸಹ ಸಂಸ್ಥಾಪಕರಾದ ಬ್ರಿಯಾನ್ ಆಕ್ಟನ್ ಕಂಪೆನಿಯ ನಿಯಮಗಳಿಗನುಸಾರವಾಗಿ ತಮ್ಮ ಹುದ್ದೆಯನ್ನು ನಿಭಾಯಿಸಬೇಕಾಗಿದೆ. ಇನ್ನು ಕೋಮ್ ಮತ್ತು ಆಕ್ಟನ್ ಕಂಪೆನಿಯೊಂದಿಗೆ ಸಹಮತದಲ್ಲಿದ್ದರೆ, ಮುಂದಿನ ನಾಲ್ಕು ವರ್ಷಗಳಲ್ಲಿ ಮಿಲಿಯನ್ ಸ್ಟಾಕ್ ಶೇರುಗಳನ್ನು ಮನವೊಲಿಕೆ ಅನುದಾನವಾಗಿ (ಇನ್‌ಡ್ಯೂಸ್‌ಮೆಂಟ್ ಗ್ರ್ಯಾಂಟ್ಸ್) ನೀಡಲಾಗುವುದು ಎಂದು ಫೇಸ್‌ಬುಕ್ ತಿಳಿಸಿದೆ. ಫೇಸ್‌ಬುಕ್‌ ತನ್ನ ಷೇರುಗಳಲ್ಲಿ ಸ್ವಲ್ಪ ಭಾಗವನ್ನು ಈ ಇಬ್ಬರೂ ಸಹ ಸಂಸ್ಥಾಪಕರರಿಗೆ ನೀಡುತ್ತದೆ.

ಇನ್ನು ವಾಟ್ಸಾಪ್ ಮತ್ತು ಫೇಸ್‌ಬುಕ್‌ನ ಒಗ್ಗೂಡುವಿಕೆಯು ನಿಜಕ್ಕೂ ಬಳಕೆದಾರರಲ್ಲಿ ಆಯ್ಕೆಗಳ ಭರಾಟೆಯನ್ನೇ ಒದಗಿಸಲಿದೆ ಎಂಬುದು ಇದರಿಂದ ದೃಢಪಡುತ್ತದೆ.

English summary
Facebook Inc (FB.O) closed its acquisition of mobile messaging service WhatsApp on Monday, with the final price tag rising an additional $3 billion to roughly $22 billion because of the increased value of Facebook's stock in recent months.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot