ಸ್ಮಾರ್ಟ್‌ಫೋನ್‌ಗಳ ಬಾಳ್ವಿಕೆಗಾಗಿ ಸರಳ ಸಲಹೆಗಳು

By Shwetha
|

ತಾಂತ್ರಿಕ ಪರಿಕರಗಳು ದೀರ್ಘ ಕಾಲ ಬಾಳಿಕೆ ಬರಬೇಕು ಎಂದಾದಲ್ಲಿ ಅವುಗಳ ಜಾಗರೂಕತೆಯನ್ನು ನಾವು ಚೆನ್ನಾಗಿ ನಿರ್ವಹಿಸಬೇಕು. ಈ ನಿರ್ವಹಣೆಯಲ್ಲಿ ಅತಿ ಮುಖ್ಯವಾಗಿ ಇರುವಂಥದ್ದು ಅವುಗಳ ಸ್ವಚ್ಛಗೊಳಿಸುವಿಕೆ ಆಗಿದೆ. ನಿಮ್ಮ ಫೋನ್, ಎಮ್‌ಪಿ 3 ಪ್ಲೇಯರ್, ಕಂಪ್ಯೂಟರ್ ಪರದೆಯನ್ನು ಧೂಳು ಮತ್ತು ಕೊಳೆಯಿಂದ ಸ್ವಚ್ಛಗೊಳಿಸುವುದರಿಂದ ಅವುಗಳು ಹೆಚ್ಚು ಸಮಯ ನಿಮಗೆ ಪ್ರಯೋಜನಕಾರಿಯಾಗಿರುತ್ತವೆ.

ಇದನ್ನೂ ಓದಿ: ಫ್ಲಿಪ್‌ಕಾರ್ಟ್‌ ವಿಶೇಷ ರಿಯಾಯಿತಿ ಸ್ಮಾರ್ಟ್‌ಫೋನ್‌ಗಳು

ಇನ್ನು ಸ್ಮಾರ್ಟ್‌ಫೋನ್‌ಗಳನ್ನು ನೀವು ಹೊಂದಿರುವವರಾಗಿದ್ದಲ್ಲಿ ಇದರ ಪರದೆಯ ರಕ್ಷಣೆಯನ್ನು ನೀವು ಜಾಗರೂಕತೆಯಿಂದ ಮಾಡಲೇಬೇಕು. ಇದರ ದೀರ್ಘ ಬಾಳಿಕೆ ನೀವು ಪರದೆಯನ್ನು ಸ್ವಚ್ಛಗೊಳಿಸುವುದರ ಮೇಲೆ ಅವಲಂಬಿತವಾಗಿದೆ. ಹಾಗಿದ್ದರೆ ನಿಮ್ಮ ಫೋನ್‌ನ ಪರದೆಯ ಸರಕ್ಷತೆಯನ್ನು ಅತಿ ಸರಳವಾಗಿ ಮಾಡುವುದು ಹೇಗೆ ಎಂಬುದನ್ನು ಕೆಳಗಿನ ಅಂಶಗಳ ಮೂಲಕ ತಿಳಿದುಕೊಳ್ಳಿ.

ಇದನ್ನೂ ಓದಿ: ದಸರಾ ಸಂಭ್ರಮಕ್ಕಾಗಿ ಹೊಚ್ಚ ಹೊಸ ಸ್ಮಾರ್ಟ್‌ಫೋನ್‌ಗಳು

#1

#1

ನಿಮ್ಮ ಟಚ್‌ಸ್ಕ್ರೀನ್ ಅನ್ನು ಶುಚಿಗೊಳಿಸಲು ಇದು ಅತ್ಯುತ್ತಮ ವಿಧಾನವಾಗಿದೆ. ನಿಮ್ಮ ಸನ್‌ಗ್ಲಾಸ್ ಅನ್ನು ಶುಚಿಗೊಳಿಸುವುದಕ್ಕಾಗಿ ಕೂಡ ಇಂತಹ ಬಟ್ಟೆಯನ್ನು ನೀವು ಖರೀದಿಸಬಹುದಾಗಿದೆ. ಈ ಬಟ್ಟೆ ಉತ್ತಮ ಗುಣಮಟ್ಟದ್ದಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

#2

#2

ನೀವು ಸ್ಮಾರ್ಟ್‌ಫೋನ್‌ನ ಪರದೆಯನ್ನು ಶುಚಿಗೊಳಿಸುವಾಗ ಫೋನ್ ಅನ್ನು ಆಫ್ ಮಾಡುವುದು ಅತಿ ಮುಖ್ಯವಾಗಿದೆ. ಸ್ವಿಚ್ ಆಫ್ ಆಗಿರುವಾಗ ಫೋನ್‌ನ ಶುಚಿತ್ವ ಅತಿ ಸರಳವಾಗಿರುತ್ತದೆ.

#3

#3

ಬಟ್ಟೆಯಿಂದ ಶುಚಿಗೊಳಿಸುವ ಮೊದಲು ಪುಟ್ಟ ಬ್ರಶ್ ಅನ್ನು ಬಳಸಿ ಫೋನ್‌ನ ಮೂಲೆಯನ್ನು ಸ್ವಚ್ಛಮಾಡಿಕೊಳ್ಳಿ. ಇದರ ನಂತರ ಬಟ್ಟೆಯನ್ನು ಬಳಸಿ ಪರದೆಯನ್ನು ಸ್ವಚ್ಛ ಮಾಡುವುದು ನಿಮಗೆ ಪರಿಣಾಮಕಾರಿಯಾಗಿರುತ್ತದೆ.

#4

#4

ಇನ್ನು ಫೋನ್ ಪರದೆಯನ್ನು ಸ್ವಚ್ಛ ಮಾಡುವಾಗ ಸ್ವಲ್ಪ ತೇವಾಂಶ ಬೇಕು ಎಂದಾದಲ್ಲಿ ಬಾಯಿಯ ಬಳಿ ನಿಮ್ಮ ಫೋನ್ ಅನ್ನು ತೆಗೆದುಕೊಂಡು ಹೋಗಿ ನಂತರ ಮೈಕ್ರೋಫೈಬರ್ ಬಟ್ಟೆಯಿಂದ ಫೋನ್ ಅನ್ನು ಸ್ವಚ್ಛಮಾಡಿ.

#5

#5

ಸಂಪೂರ್ಣವಾಗಿ ಒರೆಸಿದ ನಂತರ ಒಣಗಿದ ಮೈಕ್ರೋಫೈಬರ್ ಬಟ್ಟೆಯಿಂದ ಪರದೆಯನ್ನು ಶುಚಿಗೊಳಿಸಿ. ಪರದೆಯ ಮೇಲೆ ಹೆಚ್ಚಿನ ಬಲಪ್ರಯೋಗವನ್ನು ಮಾಡಬೇಡಿ.

#6

#6

ಮೈಕ್ರೋಫೈಬರ್ ಬಟ್ಟೆಯನ್ನು ತೊಳೆಯಲು ಉಗುರು ಬೆಚ್ಚಗಿನ ಸೋಪು ನೀರನ್ನು ಬಳಸಿ. ಬೆಚ್ಚಗಿನ ನೀರು ಬಟ್ಟೆಯಲ್ಲಿ ಹಿಡಿದುಕೊಂಡಿರುವ ಕೊಳೆಯನ್ನು ಬಿಡುಗಡೆ ಮಾಡಿ ಸ್ವಚ್ಛ ಮಾಡುತ್ತದೆ. ನಂತರ ಬಟ್ಟೆಯನ್ನು ಗಾಳಿಗೆ ಒಣಗಿಸಿ. ಇದು ಪೂರ್ತಿಯಾಗಿ ಒಣಗದ ಹೊರತು ಪರದೆಯನ್ನು ಒರೆಸದಿರಿ.

#7

#7

ಈ ವಿಧಾನ ಹೆಚ್ಚು ಸೂಕ್ತವಾಗಿದ್ದು ಇದು ಫೋನ್‌ ಅನ್ನು ಹೊಳೆಯುವಂತೆ ಮಾಡುತ್ತದೆ.

#8

#8

ಪೇಪರ್ ಟವೆಲ್ ಅನ್ನು ತೆಗೆದುಕೊಂಡು ಅದಕ್ಕೆ ಒಂದು ಹನಿಯಷ್ಟು ಆಲ್ಕೋಹಾಲ್ ಜೆಲ್ ಅನ್ನು ಹಾಕಿ.

#9

#9

ನಂತರ ಪರದೆಯನ್ನು ಇದನ್ನು ಬಳಸಿ ಮೃದುವಾಗಿ ಒರೆಸಿ.

#10

#10

ಕೊನೆಗೆ ಮೈಕ್ರೋಫೈಬರ್ ಬಟ್ಟೆಯನ್ನು ಬಳಸಿ ಪರದೆಯನ್ನು ಸ್ವಚ್ಛಗೊಳಿಸಿ.

Best Mobiles in India

English summary
This article tells about How to Clean a Touch Screen in a simple way.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X