ಲ್ಯಾಪ್‌ಟಾಪ್‌ನಿಂದ ಆಂಡ್ರಾಯ್ಡ್ ಫೋನ್‌ಗೆ ಇಂಟರ್ನೆಟ್ ಶೇರ್‌ ಹೇಗೆ?

Written By:

ಕಂಪ್ಯೂಟರ್ ಮತ್ತು ಸ್ಮಾರ್ಟ್‌ಫೋನ್‌ ಬಳಕೆದಾರರ ಒಂದು ಉಪಯೋಗವೆಂದರೆ ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ನಲ್ಲಿನ ಇಂಟರ್ನೆಟ್‌ ಅನ್ನು ಸ್ಮಾರ್ಟ್‌ಫೋನ್‌ನಲ್ಲಿ ಬಳಸಬಹುದು. ಹಾಗೆ ಸ್ಮಾರ್ಟ್‌ಫೋನ್‌ನಲ್ಲಿನ ಇಂಟರ್ನೆಟ್‌ ಅನ್ನು ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್‌ನಲ್ಲಿ ಬಳಸಬಹುದು.

ಲ್ಯಾಪ್‌ಟಾಪ್‌ ಮತ್ತು ಸ್ಮಾರ್ಟ್‌ಫೋನ್‌ಗಳ ನಡುವೆ ಇಂಟರ್ನೆಟ್‌ ಕನೆಕ್ಟ್‌ ಮಾಡಲು ಪ್ರಮುಖವಾಗಿ ಎರಡು ವಿಧಾನಗಳಿವೆ. ಅಂದಹಾಗೆ ಬಹುಸಂಖ್ಯಾತ ಟೆಕ್‌ ಪ್ರಿಯರಿಗೆ ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಮತ್ತು ಸ್ಮಾರ್ಟ್‌ಫೋನ್‌ಗಳ ನಡುವೆ ಇಂಟರ್ನೆಟ್‌ ಸೇವೆ ಶೇರ್‌ ಮಾಡಿಕೊಂಡು ಬಳಸುವುದು ಹೇಗೆ ಎಂದು ತಿಳಿದಿರುವುದಿಲ್ಲ. ಅಂತಹವರು ಇಂದಿನ ಲೇಖನ ಓದಿ ಮಾಹಿತಿ ತಿಳಿಯಿರಿ.

ವೈಫೈ ನೆಟ್‌ವರ್ಕ್‌ ಹ್ಯಾಕ್ ಮಾಡಿ ಉಚಿತ ಇಂಟರ್ನೆಟ್‌ ಬಳಕೆ ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 2 ವಿಧಾನಗಳಲ್ಲಿ ಇಂಟರ್ನೆಟ್ ಶೇರ್‌

2 ವಿಧಾನಗಳಲ್ಲಿ ಇಂಟರ್ನೆಟ್ ಶೇರ್‌

* ಲ್ಯಾಪ್‌ಟಾಪ್ ಮೂಲಕ ಕೇವಲ ಒಂದು ಆಂಡ್ರಾಯ್ಡ್ ಡಿವೈಸ್‌ಗೆ ಇಂಟರ್ನೆಟ್‌ ಸಂಪರ್ಕ ನೀಡುವುದಾದರೆ ಕೇವಲ USB ಟೆದರಿಂಗ್ ಬಳಸಬಹುದು. ಇದು ವೈರ್‌ಲೆಸ್‌ ಟೆದರಿಂಗ್‌ಗಿಂತಲು ಸುರಕ್ಷತಾ ವಿಧಾನ.
* ಹಲವು ಡಿವೈಸ್‌ಗಳ ನಡುವೆ ಕನೆಕ್ಟ್‌ ಮಾಡುವುದಾದರೆ ವೈರ್‌ಲೆಸ್‌ ಹಾಟ್‌ಸ್ಪಾಟ್‌ ಬಳಸಬೇಕು. ಆದರೆ ಇತರರಿಗೆ ನಿಮ್ಮ ವೈರ್‌ಲೆಸ್‌ ಹಾಟ್‌ಸ್ಪಾಟ್‌ ಪಾಸ್‌ವರ್ಡ್‌ ತಿಳಿದಿದ್ದರೆ ಅವರು ನಿಮ್ಮ ಇಂಟರ್ನೆಟ್ ಸೇವೆಯನ್ನು ಬಳಸಲು ಸಾಧ್ಯವಾಗುತ್ತದೆ. ಆದ್ದರಿಂದ ಎಚ್ಚರವಹಿಸಿ.

ಹಂತ 1

ಹಂತ 1

ಲ್ಯಾಪ್‌ಟಾಪ್‌ ಮೂಲಕ ಮೊಬೈಲ್‌ಗೆ ಇಂಟರ್ನೆಟ್‌ ಸಂಪರ್ಕ ಪಡೆಯಲು ಮೊದಲಿಗೆ ನಿಮ್ಮ ಡಿವೈಸ್‌ ಅನ್ನು USB ಮೂಲಕ ಲ್ಯಾಪ್‌ಟಾಪ್‌ಗೆ ಕನೆಕ್ಟ್ ಮಾಡಿ. ಡಿವೈಸ್‌ನಲ್ಲಿ USB ಟೆದರಿಂಗ್ ಎನೇಬಲ್‌ ಆಗಿದೆಯೇ ಎಂದು ಖಚಿತಪಡೆದುಕೊಳ್ಳಿ.

ಹಂತ 2

ಹಂತ 2

Device Manager ಗೆ ಹೋಗಿ ಹಳದಿ ಎಕ್ಸ್‌ಲಾಮೇಶನ್‌ ಮಾರ್ಕ್‌ ಇರುವ ಡಿವೈಸ್‌ ಅನ್ನು ಪತ್ತೆ ಹಚ್ಚಿ.

ಹಂತ 3

ಹಂತ 3

ಪತ್ತೆಯಾದ ಡಿವೈಸ್‌ ಮೇಲೆ ಬಲಭಾಗದ ಬಟನ್‌ ಕ್ಲಿಕ್‌ ಮಾಡಿ, Update Driver ಸೆಲೆಕ್ಟ್‌ ಮಾಡಿ. ನಂತರ 'Browse my Computer for driver software' ಎಂಬಲ್ಲಿ ಕ್ಲಿಕ್ ಮಾಡಿ Next ಎಂಬುದನ್ನು ಕ್ಲಿಕ್‌ ಮಾಡಿ.

ಹಂತ 4

ಹಂತ 4

ಓಪನ್‌ ಆದ ಪೇಜ್‌ನ ಕೆಳಗೆ ಕ್ಲಿಕ್ ಮಾಡಿ ಡಿವೈಸ್ 'my computer' ಸೆಲೆಕ್ಟ್‌ ಮಾಡಿ.

ಹಂತ 5

ಹಂತ 5

ನಂತರದಲ್ಲಿ ಡಿವೈಸ್‌ ಟೈಪ್ ಕೇಳುತ್ತದೆ. ಅಲ್ಲಿ 'Network Adapters' ಅನ್ನು ಸೆಲೆಕ್ಟ್‌ ಮಾಡಿ. ನಂತರ ಮ್ಯಾನುಫ್ಯಾಕ್ಚರರ್‌ ಅನ್ನು 'Microsoft, microsoft corporation' ಯಾವುದು ಲಭ್ಯವಿರುತ್ತದೋ ಅದನ್ನು ಸೆಲೆಕ್ಟ್‌ ಮಾಡಿ.

ಹಂತ 6

ಹಂತ 6

ಈ ಹಂತದಲ್ಲಿ ನೀವು 'Remote NDIS Based Internet Sharing Device' ಅನ್ನು ಸೆಲೆಕ್ಟ್‌ ಮಾಡಿ, ಇನ್‌ಸ್ಟಾಲ್‌ ಮಾಡಲು 'Next' ಅನ್ನು ಕ್ಲಿಕ್‌ ಮಾಡಿ.

ಹಂತ 7

ಹಂತ 7

ಮೇಲೆ ತಿಳಿಸಿದ ವಿಧಾನಗಳ ಮೂಲಕ USB ಇಂದ ಲ್ಯಾಪ್‌ಟಾಪ್‌ನ ಇಂಟರ್ನಟ್ ಅನ್ನು ನಿಮ್ಮ ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ ಪಡೆಯಬಹುದು. ಆದರೆ ವಿವಿಧ ಮೊಬೈಲ್‌ಗಳಲ್ಲಿ ವಿವಿಧ ರೀತಿಯಲ್ಲಿ ಇಂಟರ್ನೆಟ್‌ ಸೇವೆ ಪಡೆಯುವ ಆಯ್ಕೆಗಳು ಇರುತ್ತವೆ. ಆಯ್ಕೆಗಳನ್ನು ಎಚ್ಚರದಿಂದ ಉಪಯೋಗಿಸಿ.

ಗಿಜ್‌ಬಾಟ್‌

ಗಿಜ್‌ಬಾಟ್‌

ಮೊಬೈಲ್‌ಗಳ ಬ್ಯಾಟರಿ ಸ್ಫೋಟಗೊಳ್ಳುವುದನ್ನು ತಡೆಯುವುದು ಹೇಗೆ?

ಮೊಬೈಲ್‌ನಲ್ಲಿನ ಡೂಪ್ಲಿಕೇಟ್‌ ಕಾಂಟ್ಯಾಕ್ಟ್‌ಗಳ ಡಿಲೀಟ್‌ ಒಮ್ಮೆಯೇ ಹೇಗೆ?

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
How To Conect Android phone to the internet through Laptop. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot