ನಿಮ್ಮ ಕಂಪ್ಯೂಟರ್ ಅನ್ನು ಮಾಲ್‌ವೇರ್‌ನಿಂದ ರಕ್ಷಿಸುವುದು ಹೇಗೆ?

By Shwetha
|

ಇಂಟರ್ನೆಟ್‌ನ ಹೆಚ್ಚು ಬಳಕೆ ನಮಗೆ ತಂತ್ರಜ್ಞಾನದಲ್ಲಿ ಉನ್ನತಿಯನ್ನು ಸಾಧಿಸಲು ನೆರವಾಗಿದ್ದರೂ ಅದು ಉಂಟುಮಾಡುವ ಪರಿಣಾಮಗಳತ್ತ ಕೂಡ ನಾವು ಗಮನ ಹರಿಸುವುದು ಅತ್ಯವಶ್ಯಕವಾಗಿದೆ.

ಇದನ್ನೂ ಓದಿ: ಮಾರುಕಟ್ಟೆಯಲ್ಲಿ ಸದ್ದುಮಾಡಲಿರುವ ಐಫೋನ್ 7 ಅದ್ಭುತಗಳು

ಇನ್ನು ಇಂಟರ್ನೆಟ್‌ನ ಹೆಚ್ಚು ಬಳಕೆಯಿಂದ ಮಾಲ್‌ವೇರ್‌ಗಳು ಸುಲಭವಾಗಿ ನೀವು ಬಳಸುವ ಡಿವೈಸ್ ಅನ್ನು ಪ್ರವೇಶಿಸುತ್ತವೆ. ಮೊಬೈಲ್ ಆಗಿರಬಹುದು ಕಂಪ್ಯೂಟರ್ ಆಗಿರಬಹುದು ಈ ಮಾಲ್‌ವೇರ್‌ಗಳು ತುಂಬಾ ಅಪಾಯಕಾರಿಯಾಗಿದ್ದು ನಿಮ್ಮ ಡಿವೈಸ್‌ಗೆ ಹಾನಿಯನ್ನು ತರುವುದು ನಿಚ್ಚಳವಾಗಿದೆ. ಈ ಮಾಲ್‌ವೇರ್‌ಗಳ ನಿವಾರಣೆಗೆ ಸಹಕಾರಿಯಾಗಿರುವ ಟಾಪ್ ಸಲಹೆಗಳೊಂದಿಗೆ ನಾವು ಬಂದಿದ್ದು ಇದು ನಿಮಗೆ ಸಹಕಾರಿ ಎಂದೆನಿಸಲಿದೆ.

ನಿಮ್ಮ ಕಂಪ್ಯೂಟರ್ ಅನ್ನು ಮಾಲ್‌ವೇರ್‌ನಿಂದ ರಕ್ಷಿಸುವುದು ಹೇಗೆ?

ಆಂಟಿವೈರಸ್ ಸಾಫ್ಟ್‌ವೇರ್
ನೀವು ಅತ್ಯಾಕರ್ಷಕ ಲ್ಯಾಪ್‌ಟಾಪ್ ಅನ್ನು ಖರೀದಿಸಿದ್ದೀರಿ ಎಂದಾದಲ್ಲಿ ಪ್ರಬಲವಾಗಿರುವ ಆಂಟಿವೈರಸ್ ಅನ್ನು ಇನ್‌ಸ್ಟಾಲ್ ಮಾಡುವುದು ಅತ್ಯವಶ್ಯಕವಾಗಿದೆ. ಹೆಚ್ಚು ಪವರ್ ಉಳ್ಳ ಆಂಟಿವೈರಸ್ ಸಾಫ್ಟ್‌ವೇರ್ ನಿಮ್ಮ ಕಂಪ್ಯೂಟರ್ ಅನ್ನು ಮಾಲ್‌ವೇರ್‌ನಿಂದ ರಕ್ಷಿಸುತ್ತದೆ.

ನಿಮ್ಮ ಕಂಪ್ಯೂಟರ್ ಅನ್ನು ಮಾಲ್‌ವೇರ್‌ನಿಂದ ರಕ್ಷಿಸುವುದು ಹೇಗೆ?

ತಾತ್ಕಾಲಿಕ ಫೈಲ್‌ಗಳನ್ನು ಅಳಿಸುವುದು
ತಾತ್ಕಾಲಿಕ ಫೈಲ್‌ಗಳನ್ನು ಅಳಿಸುವುದು ನಿಮ್ಮ ವೈರಸ್ ಸ್ಕ್ಯಾನಿಂಗ್ ಅನ್ನು ವೇಗಗೊಳಿಸುತ್ತದೆ ಮತ್ತು ಮಾಲ್‌ವೇರ್ ಅಳಿಸುತ್ತದೆ. ಇದನ್ನು ನಿರ್ವಹಿಸಲು ನೀವು ಸ್ಟಾರ್ಟ್> ಆಲ್ ಪ್ರೊಗ್ರಾಮ್ಸ್> ಆಕ್ಸಸರೀಸ್> ಸಿಸ್ಟಮ್ ಟೂಲ್ಸ್>ಡಿಸ್ಕ್ ಕ್ಲೀನಪ್> ಚೂಸ್ ಟು ಡಿಲೀಟ್ ತಾತ್ಕಾಲಿಕ ಫೈಲ್‌ಗಳು ಇದಕ್ಕೆ ಹೋಗಿ.

ನಿಮ್ಮ ಕಂಪ್ಯೂಟರ್ ಅನ್ನು ಮಾಲ್‌ವೇರ್‌ನಿಂದ ರಕ್ಷಿಸುವುದು ಹೇಗೆ?

ಫೈರ್‌ವಾಲ್ ಬಳಸಿ
ಮೂಲತಃ ಫೈರ್‌ವಾಲ್ ಬೇಡದೇ ಇರುವ ಒಳಬರುವ ಸಂಪರ್ಕಗಳನ್ನು ಬ್ಲಾಕ್ ಮಾಡುತ್ತದೆ. ಖಾಸಗಿ ನೆಟ್‌ವರ್ಕ್ ಅಥವಾ ಬಳಕೆದಾರರ ಕಂಪ್ಯೂಟರ್‌ನಲ್ಲಿ ಇದು ಟ್ರಾಫಿಕ್ ಅನ್ನು ಬ್ಲಾಕ್ ಮಾಡಲು ಅನುಮತಿಸುತ್ತದೆ.

ನಿಮ್ಮ ಕಂಪ್ಯೂಟರ್ ಅನ್ನು ಮಾಲ್‌ವೇರ್‌ನಿಂದ ರಕ್ಷಿಸುವುದು ಹೇಗೆ?

ಸಂದೇಹಾಸ್ಪದ ಇಮೇಲ್ ಲಗತ್ತುಗಳನ್ನು ನಿರಾಕರಿಸಿ
ಇಮೇಲ್ ಅಟ್ಯಾಚ್‌ಮೆಂಟ್‌ಗಳು ಮತ್ತು ಪರಿಶೀಲಿಸದೇ ಇರುವ ಡಾಕ್ಯುಮೆಂಟ್‌ಗಳ ಮೂಲಕ ಕೆಲವೊಂದು ಮಾರಕ ವೈರಸ್‌ಗಳು ಕಂಪ್ಯೂಟರ್‌ಗೆ ನುಸುಳಬಹುದು. ನಿಮಗೆ ಖಾತ್ರಿ ಇಲ್ಲದಿದ್ದಲ್ಲಿ ಇಮೇಲ್ ಲಗತ್ತುಗಳನ್ನು ತೆರೆಯಬೇಡಿ.

ನಿಮ್ಮ ಕಂಪ್ಯೂಟರ್ ಅನ್ನು ಮಾಲ್‌ವೇರ್‌ನಿಂದ ರಕ್ಷಿಸುವುದು ಹೇಗೆ?

ಖಾಸಗಿ ಮಾಹಿತಿ ಹಂಚುವುದನ್ನು ನಿಲ್ಲಿಸಿ
ಯಾವುದೇ ವೆಬ್‌ಸೈಟ್ ಅಥವಾ ಯಾರಿಗೂ ಕೂಡ ನಿಮ್ಮ ಲಾಗಿನ್ ಪಾಸ್‌ವರ್ಡ್ ಅನ್ನು ಹಂಚಬೇಡಿ. ನೀವು ಯಾರಿಗಾದರೂ ನಿಮ್ಮ ಲಾಗಿನ್ ವಿವರಗಳು ಮತ್ತು ಖಾಸಗಿ ನೀಡಿದಲ್ಲಿ, ನಿಮ್ಮ ರಹಸ್ಯ ಮಾಹಿತಿಗಳು ಹ್ಯಾಕರ್‌ಗಳ ಕೈಯನ್ನು ಸುಲಭವಾಗಿ ಸೇರುತ್ತದೆ.

Best Mobiles in India

English summary
This article tells about How To Protect Your PC From Deadly Malware and Viruses: The Complete Guide.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X