Subscribe to Gizbot

ಮಾರುಕಟ್ಟೆಯಲ್ಲಿ ಸದ್ದುಮಾಡಲಿರುವ ಐಫೋನ್ 7 ಅದ್ಭುತಗಳು

Written By:

ಐಫೋನ್ 7 ಬಿಸಿಬಿಸಿಯಾಗಿ ಸುದ್ದಿಯಲ್ಲಿರುವ ಟಾಪಿಕ್ ಆಗಿದೆ. ಐಫೋನ್ 6 ಹಾಗೂ ಐಫೋನ್ 6 ಪ್ಲಸ್‌ನ ಹವಾ ಇನ್ನೂ ಮುಗಿದೇ ಇಲ್ಲ ಅದಕ್ಕೂ ಮುಂಚೆ 7 ಸುದ್ದಿ ಮಾಡುತ್ತಿದೆ. ಈಗಾಗಲೇ ಇದರ ವಿಶೇಷತೆ, ಬಿಡುಗಡೆಯಾಗು ದಿನಾಂಕ, ಫೀಚರ್‌ಗಳು, ಮತ್ತು ಹೆಸರೂ ಕೂಡ ವದಂತಿ ಪೂರ್ಣವಾಗಿದ್ದು ಆಪಲ್ ಪ್ರಿಯರಲ್ಲಿ ಹೆಚ್ಚಿನ ಕಾತರವನ್ನುಂಟು ಮಾಡುವುದು ದಿಟವಾಗಿದೆ.

ಇದನ್ನೂ ಓದಿ: ಮೈಕ್ರೋಸಾಫ್ಟ್ ಸಿಇಒ ಸತ್ಯ ನಡೇಲ್ಲಾರ 10 ಜೀವನ ರಹಸ್ಯಗಳು

2015 ರಲ್ಲಿ ನೆಕ್ಸ್ಟ್ ಜನರೇಶನ್ ಐಫೋನ್ ಅನ್ನು ಆಪಲ್ ಬಳಕೆದಾರರು ಪಡೆದುಕೊಳ್ಳುವುದು ಹೌದಾಗಿದ್ದರೂ ಐಫೋನ್ 7 ಈ ಸ್ಥಾನವನ್ನು ತುಂಬಲಿದೆಯೇ ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ. ಇನ್ನು ಇದಕ್ಕೆ ಪುರಾವೆಯನ್ನು ಒದಗಿಸುವಂತೆ ನಾವು ಇಂದಿನ ಲೇಖನದಲ್ಲಿ ಐಫೋನ್ 7 ವಿಶೇಷತೆಗಳನ್ನು ಕುರಿತು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಫೋನ್ 7 ಎಂದರೇನು?

ಮಾರುಕಟ್ಟೆಯಲ್ಲಿ ಸದ್ದುಮಾಡಲಿರುವ ಐಫೋನ್ 7 ಅದ್ಭುತಗಳು

ಆಪಲ್‌ನ ಮುಂದಿನ ದೊಡ್ಡ ಸ್ಕ್ರೀನ್ ಐಫೋನ್ ಲಾಂಚ್ ಆಗಿ ಐಫೋನ್ 7 ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಯಾವಾಗಲೂ ಹೊಸತನ್ನು ಬಿಡುಗಡೆ ಮಾಡುವ ಮುಂಚೂಣಿಯಲ್ಲಿರುವ ಈ ಟೆಕ್ ಹರಿಕಾರ ಐಫೋನ್ 7 ಮೂಲಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲೇ ಹೊಸ ಸಂಚಲವನ್ನುಂಟು ಮಾಡುವುದು ನಿಜವಾಗಿದೆ. ಅಂತೂ ಆಪಲ್‌ನ ಎಲ್ಲಾ ಹಳೆಯ ಇತ್ತೀಚಿನ ಲಾಂಚ್‌ಗಿಂತಲೂ ಹೊಸ ಅಂಶವನ್ನು ಐಫೋನ್ 7 ನಲ್ಲಿ ನಮಗೆ ಕಾಣಬಹುದು.

ಮುಂದಿನ ಐಫೋನ್ ಹೆಸರೇನಾಗಿರಬಹುದು?

ಮಾರುಕಟ್ಟೆಯಲ್ಲಿ ಸದ್ದುಮಾಡಲಿರುವ ಐಫೋನ್ 7 ಅದ್ಭುತಗಳು

ಇನ್ನು ಐಫೋನ್‌ನ ಮುಂದಿನ ಆವೃತ್ತಿಯ ಹೆಸರೇನಾಗಿರಬಹುದು ಎಂಬ ಕುತೂಹಲ ಇದ್ದೇ ಇರುತ್ತದೆ. ಐಫೋನ್ 7 ಎಂದು ಕರೆಯುವ ಬದಲಿಗೆ ಐಫೋನ್ 6ಎಸ್ ಹೆಸರನ್ನೂ ಇದು ಪಡೆದುಕೊಳ್ಳಬಹುದು ಎಂಬ ವದಂತಿ ಕೂಡ ಇದ್ದೇ ಇದೆ. ಅಥವಾ 6 ಸಿ ಎಂಬ ಹೆಸರೂ ಇದು ಪಡೆದುಕೊಳ್ಳಬಹುದು.

ಐಫೋನ್ 7 ಲಾಂಚ್ ದಿನಾಂಕ

ಮಾರುಕಟ್ಟೆಯಲ್ಲಿ ಸದ್ದುಮಾಡಲಿರುವ ಐಫೋನ್ 7 ಅದ್ಭುತಗಳು

ಸಪ್ಟೆಂಬರ್‌ನ ಮಧ್ಯಭಾಗದಲ್ಲಿ ಐಫೋನ್ 7 ಅನ್ನು ನಾವು ನಿರೀಕ್ಷಿಸಬಹುದಾಗಿದ್ದು, ಐಫೋನ್ 6 ಮತ್ತು ಐಫೋನ್ 6 ಪ್ಲಸ್ 2014 ಸಪ್ಟೆಂಬರ್ 9 ರಂದು ಲಾಂಚ್ ಆಗಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಆಪಲ್ ತನ್ನ ಐಫೋನ್‌ಗಳ ಲಾಂಚ್‌ಗೆ ಸಪ್ಟೆಂಬರ್ ಮಧ್ಯಭಾಗವನ್ನೇ ಆಯ್ದುಕೊಳ್ಳುತ್ತಿದ್ದು ಮುಂದಿನ ಐಫೋನ್ 7 ಗೂ ಇದೇ ಮೂಹೂರ್ತವನ್ನೇ ನಿಗದಿಪಡಿಸಬಹುದು.

ಐಫೋನ್ 7 ಸ್ಕ್ರೀನ್ ಗಾತ್ರ

ಮಾರುಕಟ್ಟೆಯಲ್ಲಿ ಸದ್ದುಮಾಡಲಿರುವ ಐಫೋನ್ 7 ಅದ್ಭುತಗಳು

ಆಪಲ್ ಈಗಾಗಲೇ 4.7 ಇಂಚುಗಳ ಐಫೋನ್ 6 ಅನ್ನು ಮಾರಾಟ ಮಾಡುತ್ತಿದ್ದು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಐಫೋನ್ 6 ಪ್ಲಸ್ ತನ್ನ 5.5 ಇಂಚಿನ ಸ್ಕ್ರೀನ್ ಗಾತ್ರದೊಂದಿಗೆ ಬಂದಿದ್ದು ಇದು ಕೂಡ ಆಪಲ್ ಅಭಿಮಾನಿಗಳಲ್ಲಿ ಪುಳಕವನ್ನುಂಟುಮಾಡಿದೆ. ಇದೆಲ್ಲಾ ಅಂಶಗಳನ್ನು ನೋಡಿದಾಗ ಆಪಲ್ ತನ್ನ ಮುಂದಿನ ಐಫೋನ್ 7 ನಲ್ಲೂ ಇದೇ ರೀತಿಯ ಸ್ಕ್ರೀನ್ ಗಾತ್ರವನ್ನು ಕಾಯ್ದುಕೊಂಡು ಹೋಗುವುದು ನಿಜವಾಗಿದೆ.

3ಡಿ ಡಿಸ್‌ಪ್ಲೇ

ಮಾರುಕಟ್ಟೆಯಲ್ಲಿ ಸದ್ದುಮಾಡಲಿರುವ ಐಫೋನ್ 7 ಅದ್ಭುತಗಳು

ಇನ್ನು ಈ ಐಫೋನ್‌ನಲ್ಲಿ 3ಡಿ ಡಿಸ್‌ಪ್ಲೇಯನ್ನು ಕಾಣಬಹುದು ಎಂಬ ಸುದ್ದಿ ಕೂಡ ಇದೆ. ಆಪಲ್ ಟಿಪಿಕೆ ಸಂಸ್ಥೆಯೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದು ನೇಕೆಡ್ ಐ 3ಡಿ ಸ್ಕ್ರೀನ್‌ಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತಿದೆ.

ಐಫೋನ್ 7 ಕ್ಯಾಮೆರಾ

ಮಾರುಕಟ್ಟೆಯಲ್ಲಿ ಸದ್ದುಮಾಡಲಿರುವ ಐಫೋನ್ 7 ಅದ್ಭುತಗಳು

ಇನ್ನು ಕ್ಯಾಮೆರಾದತ್ತ ಗಮನಹರಿಸಿದಾಗ ಆಪಲ್ ಐಫೋನ್ 6 ಹಾಗೂ ಐಫೋನ್ 6 ಪ್ಲಸ್‌ಗಿಂತಲೂ ಉತ್ತಮವಾದ ಕ್ಯಾಮೆರಾವನ್ನು ಐಫೋನ್ 7 ನಲ್ಲಿ ಅಳವಡಿಸಲಿದೆ. ಇದು ಅತ್ಯಂತ ದೊಡ್ಡ ಕ್ಯಾಮೆರಾ ಎಂಬ ಬಿರುದನ್ನು ಪಡೆದುಕೊಳ್ಳಲಿದೆ.

ಪ್ರೊಸೆಸರ್

ಮಾರುಕಟ್ಟೆಯಲ್ಲಿ ಸದ್ದುಮಾಡಲಿರುವ ಐಫೋನ್ 7 ಅದ್ಭುತಗಳು

ಐಫೋನ್ 7 ಪ್ರೊಸೆಸರ್ ಅನ್ನು 14 ನ್ಯಾನೋಮೀಟರ್ ವಿನ್ಯಾಸವನ್ನು ಬಳಸಿಕೊಂಡು ಅಭಿವೃದ್ಧಿಪಡಿಸಲಾಗುತ್ತಿದೆ. ಇದರ ಚಿಪ್‌ಗಳು ಸಣ್ಣದಾಗಿರಬಹುದು ಎಂಬ ವದಂತಿಯೂ ಇದ್ದು ಇದು ಹೆಚ್ಚು ಆಕರ್ಷಕ ಮತ್ತು ಶಕ್ತಿಯುತ ಎಂದೆನಿಸಲಿದೆ.

ಜಾಯ್‌ಸ್ಟಿಕ್

ಮಾರುಕಟ್ಟೆಯಲ್ಲಿ ಸದ್ದುಮಾಡಲಿರುವ ಐಫೋನ್ 7 ಅದ್ಭುತಗಳು

ಐಫೋನ್ 7 ನಲ್ಲಿನ ಹೋಮ್ ಬಟನ್ ಸಣ್ಣ ಸ್ಪ್ರಿಂಗ್‌ನಲ್ಲಿ ಪಾಪ್ ಅಪ್ ಆಗಲಿದ್ದು ಗೇಮ್‌ಗಳನ್ನು ಆಡುವುದಕ್ಕಾಗಿ ಮಿನಿ ಜಾಯ್‌ಸ್ಟಿಕ್‌ನೊಂದಿಗೆ ಇದು ಬಂದಿದೆ. ಅತ್ಯಧಿಕ ಐಓಎಸ್ ಗೇಮ್‌ಗಳಿದ್ದು ಈ ಜಾಯ್‌ಸ್ಟಿಕ್ ಆಟದ ಮಜಾವನ್ನು ಹೆಚ್ಚಿಸಲು ಸಹಕಾರಿಯಾಗುವುದಂತೂ ಖಂಡಿತ.

ವೈರ್‌ಲೆಸ್ ಚಾರ್ಜಿಂಗ್

ಮಾರುಕಟ್ಟೆಯಲ್ಲಿ ಸದ್ದುಮಾಡಲಿರುವ ಐಫೋನ್ 7 ಅದ್ಭುತಗಳು

ವೈರ್‌ಲೆಸ್ ಚಾರ್ಜಿಂಗ್ ನಿಜಕ್ಕೂ ಅದ್ಭುತವಾದ ಆಪಲ್ ಐಫೋನ್ 7 ನಲ್ಲಿ ಕಂಡುಬರುವ ವೈಶಿಷ್ಟ್ಯವಾಗಿದ್ದು ನೀವು ಫೋನ್ ಅನ್ನು ವೈರ್ ಉಳ್ಳ ಮ್ಯಾಟ್‌ನಲ್ಲಿ ಇರಿಸಬೇಕಾಗುತ್ತದೆ.

ಐಓಎಸ್ 9

ಮಾರುಕಟ್ಟೆಯಲ್ಲಿ ಸದ್ದುಮಾಡಲಿರುವ ಐಫೋನ್ 7 ಅದ್ಭುತಗಳು

ಇನ್ನು ಹೊಸ ಫೀಚರ್‌ನಂತೆ ಐಓಎಸ್ 9 ಅನ್ನು ಸಾದರಪಡಿಸಲಾಗುತ್ತಿದ್ದು ಸಾಫ್ಟ್‌ವೇರ್ ಹಂತದಲ್ಲಿ ಈ ಅನ್ವೇಷಣೆ ಅದ್ಭುತ ಎಂದೆನಿಸಲಿದೆ. ಇದು ಸುಧಾರಿತ ಪೇರೆಂಟಲ್ ಕಂಟ್ರೋಲ್ಸ್, ಗ್ರೂಪ್ ಫೇಸ್‌ ಟೈಮ್ ಕಾಲ್ಸ್ ಹಾಗೂ ಸ್ಪಿಲ್ಟ್ - ಸ್ಕ್ರೀನ್ ಅಪ್ಲಿಕೇಶನ್ ಮಲ್ಟಿಟಾಸ್ಕಿಂಗ್ ಮೊದಲಾದ ವಿಶೇಷತೆಗಳೊಂದಿಗೆ ಬಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about iPhone 7 release date rumours, new features and images: Beautiful new concept illustrations of the iPhone 7.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot