Subscribe to Gizbot

ಆಂಡ್ರಾಯ್ಡ್ ಡಿವೈಸ್‌ಗಳ ಭದ್ರತೆಗೆ ಟಾಪ್ 5 ಅಪ್ಲಿಕೇಶನ್‌ಗಳು

Written By:

ಹಿಂದೆಂದಿಗಿಂತೂ ಮೊಬೈಲ್ ಭದ್ರತೆ ಇದೀಗ ಮುಖ್ಯ ಅಂಶವಾಗಿದೆ. ಆಂಡ್ರಾಯ್ಡ್ ಕೂಡ ಸಾಕಷ್ಟು ಬಾರಿ ಭದ್ರತಾ ಸಮಸ್ಯೆಗಳು ಮತ್ತು ಮಾಲ್‌ವೇರ್ ಅನ್ನು ಎದುರಿಸುತ್ತಿದೆ. ಇನ್ನು ಆಂಡ್ರಾಯ್ಡ್ ಎಲ್‌ನೊಂದಿಗೆ, ಫೋನ್ ಅತ್ಯುತ್ತಮವಾದ ಭದ್ರತೆಯನ್ನು ಪಡೆದುಕೊಳ್ಳಲಿದೆ ಎಂದು ಕಂಪೆನಿ ತಿಳಿಸಿದೆ. ಆಗಾಗ್ಗೆ ಫೋನ್‌ನ ಅಪ್‌ಡೇಟ್ ಅನ್ನು ಮಾಡುತ್ತಿರುವುದು ಫೋನ್‌ಗೆ ಉತ್ತಮ ಭದ್ರತೆಯನ್ನು ಒದಗಿಸುತ್ತದೆ. ಇನ್ನು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದುಬಾರಿ ಭದ್ರತಾ ಅಪ್ಲಿಕೇಶನ್‌ಗಳು ದೊರೆಯುತ್ತಿದ್ದು ಇದು ಆಂಟಿವೈರಸ್ ಸುರಕ್ಷತೆಯನ್ನು ನೀಡುವುದರ ಜೊತೆಗೆ ಪಾಸ್‌ವರ್ಡ್‌ಗಳ ನಿರ್ವಹಣೆ, ರಿಮೋಟ್ ಲಾಕಿಂಗ್, ರಿಮೋಟ್ ವೈಪಿಂಗ್, ಲೊಕೇಶನ್ ಟ್ರ್ಯಾಕಿಂಗ್ ಮೊದಲಾದ ವಿಶೇಷತೆಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ: ಸೋನಿ ಎಕ್ಸ್‌ಪೀರಿಯಾ ಝೆಡ್ 3 ಯ 10 ಆಕರ್ಷಕ ಫೀಚರ್‌ಗಳು

ನಿಮ್ಮ ಆಂಡ್ರಾಯ್ಡ್ ಡಿವೈಸ್‌ನ ಸುರಕ್ಷತೆಯನ್ನು ಭದ್ರಪಡಿಸುವ ಟಾಪ್ ಅಪ್ಲಿಕೇಶನ್ ಇಲ್ಲಿದ್ದು ಇವುಗಳ ಪ್ರಯೋಜನವನ್ನು ನಿಮಗೆ ಪಡೆದುಕೊಳ್ಳಬಹುದು.

ಇದನ್ನೂ ಓದಿ: ನಿತ್ಯಜೀವನಕೆ ಪ್ರಯೋಜನಕಾರಿ ಈ ಟಾಪ್ ಆಪ್ಲಿಕೇಶನ್ಸ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲುಕ್ ಔಟ್ ಮೊಬೈಲ್ ಸೆಕ್ಯೂರಿಟಿ

#1

ಲುಕ್ ಔಟ್ ಮೊಬೈಲ್ ಸೆಕ್ಯೂರಿಟಿ

ಭದ್ರತಾ ವಿಶೇಷತೆಗಳನ್ನು ಒಳಗೊಂಡಿರುವ ಸಂಪೂರ್ಣ ಪ್ಯಾಕೇಜನ್ನು ಲುಕ್ ಔಟ್ ಹೊಂದಿದೆ. ಆಂಟಿವೈರಸ್ ಮತ್ತು ಆಂಟಿ ಮಾಲ್‌ವೇರ್ ಫಂಕ್ಷನ್‌ಗಳ ಉಚಿತ ಆವೃತ್ತಿಯೊಂದಿಗೆ ಇದು ಬಂದಿದ್ದು ಬ್ಯಾಕಪ್‌ಗಳನ್ನು ರಚಿಸುವ ಕೆಲವೊಂದು ಅಂಶಗಳನ್ನು ಈ ಅಪ್ಲಿಕೇಶನ್ ಹೊಂದಿದೆ. ಇದು ಸುರಕ್ಷಿತ ಬ್ರೌಸಿಂಗ್ ವಿಶೇಷತೆಗಳನ್ನು ಒಳಗೊಂಡಿದೆ.

ಎವಿಜಿ

#2

ಎವಿಜಿ
ಮೊಬೈಲ್ ಭದ್ರತೆಗೆ ಬಂದಾಗ ಈ ಅಪ್ಲಿಕೇಶನ್ ಹೆಚ್ಚು ಜನಪ್ರಿಯವಾಗಿದೆ. ಪ್ರೊಟೆಕ್ಷನ್, ಪರ್‌ಫಾಮೆನ್ಸ್, ಆಂಟಿ ಥೆಪ್ಟ್ ಮತ್ತು ಪ್ರೈವಸಿ ಹೀಗೆ ನಾಲ್ಕು ವರ್ಗಗಳ ಸುರಕ್ಷತೆಯನ್ನು ಇದು ಒದಗಿಸುತ್ತದೆ, ಎವಿಜಿಯೊಂದಿಗೆ ನಿಮ್ಮ ಖಾತೆಯನ್ನು ರಚಿಸಿಕೊಂಡ ನಂತರ ಇದರಲ್ಲಿ ಆಂಟಿ ಥೆಪ್ಟ್ ವಿಶೇಷತೆಯನ್ನು ಸಕ್ರಿಯಗೊಳಿಸಿ. ನಿಮ್ಮ ಡಿವೈಸ್ ಅನ್ನು ಟ್ರ್ಯಾಕ್ ಮಾಡಲು ನಿಮಗೆ ಇದು ವಿವರವಾದ ಮಾಹಿತಿಗಳಿರುವ ಇಮೇಲ್ ಅನ್ನು ಕಳುಹಿಸುತ್ತದೆ.

ಅವಾಸ್ತ್

#3

ಅವಾಸ್ತ್
ನಿಮ್ಮ ಫೋನ್ ಅನ್ನು ಭದ್ರಪಡಿಸು ಜೊತೆಗೆ ನಿಮ್ಮ ಬೆಲೆಗೆ ಉತ್ತಮ ಮೌಲ್ಯವನ್ನು ಇದು ಒದಗಿಸಿಕೊಡುತ್ತದೆ. ಇದು ನಿಮ್ಮ ಎಲ್ಲಾ ಅಪ್ಲಿಕೇಶನ್‌ಗಳು ಯುಆರ್‌ಎಲ್‌ಗಳನ್ನು ಸ್ಕ್ಯಾನ್ ಮಾಡುತ್ತದೆ ಮತ್ತು ಮಾಲ್‌ವೇರ್‌ನಿಂದ ರಕ್ಷಣೆಯನ್ನು ಒದಗಿಸುತ್ತದೆ. ರೂಟ್ ಮಾಡಿರುವ ಡಿವೈಸ್‌ಗಳಿಗಾಗಿ ಇದು ಕಾರ್ಯನಿರ್ವಹಿಸುತ್ತಿದ್ದು ನಿಮ್ಮ ನೆಟ್‌ವರ್ಕ್ ಟ್ರಾಫಿಕ್ ಅನ್ನು ನಿಯಂತ್ರಿಸುವುದಕ್ಕಾಗಿ ಫೈರ್‌ವಾಲ್ ಅನುಮತಿಯನ್ನು ನೀಡುತ್ತದೆ.

ಸಿಎಮ್ ಭದ್ರತೆ

#4

ಸಿಎಮ್ ಭದ್ರತೆ
ಸಂಪೂರ್ಣ ಆಂಡ್ರಾಯ್ಡ್ ಭದ್ರತಾ ವಲಯಕ್ಕೆ ಸಂಪೂರ್ಣ ಸುರಕ್ಷೆಯನ್ನೊದಗಿಸುವ ಈ ಅಪ್ಲಿಕೇಶನ್ ಆಂಟಿವೈರಸ್, ಆಂಟಿ ಮಾಲ್‌ವೇರ್ ಮತ್ತು ಫೈಂಡ್ ಮೈ ಫೋನ್ ಅಂಶಗಳಿಂದ ಮನವನ್ನು ಸೆಳೆಯುವಂತಿದೆ. ಇದು ಯಾವುದೇ ದರವನ್ನು ವಿಧಿಸುವುದಿಲ್ಲ. ಹೌದು ಇದು ಸಂಪೂರ್ಣ ಉಚಿತವಾಗಿದ್ದು, ಇದು ನಿಮಗೆ ಮಾಲ್‌ವೇರ್ ಬಗ್ಗೆ ಮಾಹಿತಿಯನ್ನು ನೀಡುತ್ತದೆ.

360 ಭದ್ರತೆ

#5

360 ಭದ್ರತೆ
ಆಂಡ್ರಾಯ್ಡ್ ಡಿವೈಸ್‌ಗಳಿಗೆ ಭದ್ರತೆಯನ್ನು ಒದಗಿಸುವ ಇನ್ನೊಂದು ಉಚಿತ ಅಪ್ಲಿಕೇಶನ್ 360 ಭದ್ರತೆ ಯಾಗಿದೆ. ಇದು ಅಪ್ಲಿಕೇಶನ್‌ಗಳು, ಯುಆರ್‌ಎಲ್‌ಗಳು ಮತ್ತು ಫೋನ್‌ಗೆ ಸಂಭವಿಸುವ ಅಪಾಯಗಳ ಮೇಲೆ ಕಣ್ಣಿಡುತ್ತದೆ. ಇದು ಆಂಟಿ ಥೆಪ್ಟ್ ಫಂಕ್ಷನ್‌ನೊಂದಿಗೆ ಬಂದಿದ್ದು, ಇದರಲ್ಲಿ ಗೂಗಲ್ ಪ್ಲಸ್ ಖಾತೆಯನ್ನು ಸೇರಿಸಲು ನಿಮಗೆ ಯೂಸರ್ ಲಾಗಿನ್ ಅಗತ್ಯವಿದೆ. ಇದು ಜಂಕ್ ಫೈಲ್‌ಗಳನ್ನು ಸ್ವಚ್ಛಗೊಳಿಸುವ ಮೂಲಕ ಅಪ್ಲಿಕೇಶನ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಲು ಶಾರ್ಟ್‌ಕಟ್ ಅನ್ನು ಒದಗಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Protect your smartphone: 5 security apps to safeguard your Android smartphone.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot