ಆರ್ಕುಟ್‌ಗೆ ಇಂದು ಅಂತಿಮ ವಿದಾಯ

Written By:

ಗೂಗಲ್ ಪ್ಲಸ್, ಅಥವಾ ಗೂಗಲ್ ಬಜ್‌ಗಿಂತ ಮುನ್ನ ಗೂಗಲ್‌ನ ಪ್ರಥಮ ಸಾಮಾಜಿಕ ನೆಟ್‌ವರ್ಕ್ ಆರ್ಕುಟ್ ಇತ್ತು ಎಂಬುದು ನಿಮಗೆ ಗೊತ್ತೇ? ಗೂಗಲ್ ಆರ್ಕುಟ್ ಅನ್ನು ಜನವರಿ 2004 ರಲ್ಲಿ ಆರಂಭಿಸಿತು. ಆ ಸಮಯದಲ್ಲೇ ಇದು ಹೆಚ್ಚಿನ ಪ್ರಚಾರವನ್ನೂ ಜನಮನ್ನಣೆಯನ್ನು ಗಳಿಸಿತ್ತು. ಇದು ಹುಟ್ಟಿದ ನಂತರ, ಫೇಸ್‌ಬುಕ್ ಆನ್‌ಲೈನ್‌ನಲ್ಲಿ ಹೆಸರನ್ನು ಗಳಿಸಿಕೊಂಡಿತ್ತು ಮತ್ತು ಇತರ ಸಾಮಾಜಿಕ ತಾಣಗಳನ್ನು ಆಳಲು ಪ್ರಾರಂಭಿಸಿತು.

ಇದನ್ನೂ ಕೂಡ ಓದಿ: ಸಾಮಾಜಿಕ ತಾಣದಲ್ಲಿ ಪ್ರಸಿದ್ಧರಾಗಿರುವ ಖ್ಯಾತ ಮುಖಂಡರುಗಳು

ಸೋಮವಾರದಂದು, ಸಪ್ಟೆಂಬರ್ 30 ರಂದು ಆರ್ಕುಟ್ ಅನ್ನು ಗೂಗಲ್ ಮುಚ್ಚುವ ತೀರ್ಮಾನವನ್ನು ತೆಗೆದುಕೊಂಡಿತು. ಇದು ಹತ್ತು ವರ್ಷಗಳ ಸೇವೆಯನ್ನು ನೀಡಿದೆ. ಆರ್ಕುಟ್‌ನಲ್ಲಿ ತಮ್ಮ ಖಾತೆಯನ್ನು ಹೊಂದಿರುವ ಬಳಕೆದಾರರು ಗೂಗಲ್ ಟೇಕ್‌ಔಟ್ ಅನ್ನು ಬಳಸಿಕೊಂಡು, ತಮ್ಮ ಮಾಹಿತಿಯನ್ನು ತೆಗೆದುಕೊಳ್ಳಬಹುದು. ಆದರೆ ಹೊಸ ಬಳಕೆದಾರರಿಗೆ ಯಾವುದೇ ಖಾತೆಗಳನ್ನು ರಚಿಸಲು ಸಾಧ್ಯವಾಗುವುದಿಲ್ಲ. ಅದೇ ರೀತಿ ಆರ್ಕುಟ್‌ನ ಆಲ್ಬಮ್ ಎಕ್ಸ್‌ಪೋರ್ಟ್ ಪೇಜ್ ಅನ್ನು ಬಳಸಿಕೊಂಡು ಆಲ್ಬಮ್‌ಗಳನ್ನು ತೆಗೆದುಕೊಳ್ಳಬಹುದಾಗಿದೆ.

ಆರ್ಕುಟ್‌ಗೆ ಅಂತಿಮ ವಿದಾಯ

ಈಗ ಯೂಟ್ಯೂಬ್, ಬ್ಲಾಗರ್, ಗೂಗಲ್ ಪ್ಲಸ್ ತಮ್ಮ ಅಧಿಪತ್ಯವನ್ನು ಜಾರಿಗೆ ತಂದಿದ್ದು, ಸಾಮಾಜಿಕ ತಾಣದ ಮೂಲೆಯನ್ನೂ ಜಾಲಾಡುತ್ತಿದೆ. ಈ ತಾಣಗಳ ಬೆಳವಣಿಗೆಯು ಆರ್ಕುಟ್‌ನ ಬೆಳವಣಿಗೆಯನ್ನು ತಡೆಹಿಡಿದಿದ್ದು, ಆದ್ದರಿಂದ ನಾವು ಆರ್ಕುಟ್‌ ಅನ್ನು ಮುಚ್ಚುವ ತೀರ್ಮಾನವನ್ನು ತೆಗೆದುಕೊಂಡೆವು ಎಂದು ಗೂಗಲ್ ತಿಳಿಸಿದೆ.

ಇದನ್ನೂ ಕೂಡ ಓದಿ: ನಿಟ್ರೋ ಖರೀದಿಯ ಟಾಪ್ ಹತ್ತು ಆನ್‌ಲೈನ್ ಡೀಲ್‌ಗಳು

ಇನ್ನಷ್ಟು ವಿಶದವಾಗಿ ಹೇಳಬೇಕೆಂದರೆ, ಸಾಮಾಜಿಕ ನೆಟ್‌ವರ್ಕ್ ಅನ್ನು ಆಕರ್ಷಿಸುವ ಮಾಧ್ಯಮವಾಗಿ ಆರ್ಕುಟ್ ಅನ್ನು ಬಳಸಿಕೊಂಡ ಗೂಗಲ್‌ನ ಸೋಲಿನ ಮಜಲು ಇದಾಗಿತ್ತು ಎಂದೇ ಹೇಳಬಹುದು. ಇದೀಗ ಗೂಗಲ್ ಎಂಬ ದಿಗ್ಗಜ ತನ್ನ ಹೆಚ್ಚುವರಿ ಕೇಂದ್ರೀಕರಣವನ್ನು ಗೂಗಲ್ ಪ್ಲಸ್ ಮೇಲೆ ಇರಿಸಿದ್ದು, ತನ್ನ ಮೂರನೇ ಜನ್ಮದಿನವನ್ನು ಈ ತಾಣ ಆಚರಿಸಿಕೊಂಡಿದೆ.

English summary
This article tells about RIP Orkut: Google to Shut Down Its First Social Network.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot