ಟಾಪ್ 3 ಸೂಪರ್ ಕಂಪ್ಯೂಟರ್‌ಗಳಲ್ಲಿ ಅಮೆರಿಕಗೆ ಸ್ಥಾನವಿಲ್ಲ: ಪ್ರಥಮ ಸ್ಥಾನ ಏಪ್ಯಾಗೆ, ಯಾವ ದೇಶ ಗೊತ್ತಾ..?

Written By:

ಇಂದು ಕಂಪ್ಯೂಟರ್ ಎನ್ನುವುದು ನಮ್ಮ ದಿನ ನಿತ್ಯ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದರೆ ತಪ್ಪಾಗುವುದಿಲ್ಲ. ದಿನೇ ದಿನೇ ಮಾರುಕಟ್ಟೆಯಲ್ಲಿ ನಾವು ಬಳಕೆ ಮಾಡಿಕೊಳ್ಳುತ್ತಿರುವ PC ಗಳು ಆಪ್‌ಡೇಟ್ ಆಗುತ್ತಿವೆ ಮತ್ತು ವೇಗವನ್ನು ಪಡೆದುಕೊಳ್ಳುತ್ತಿವೆ, ಆದರೆ ನಾವಿಂದು PC ಗಳನ್ನು ಬಿಟ್ಟು ಸೂಪರ್ ಕಂಪ್ಯೂಟರ್ ಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ.

ಟಾಪ್ 3 ಸೂಪರ್ ಕಂಪ್ಯೂಟರ್‌ಗಳಲ್ಲಿ ಅಮೆರಿಕಗೆ ಸ್ಥಾನವಿಲ್ಲ: ಪ್ರಥಮ ಸ್ಥಾನ ಏಪ್ಯಾಗೆ

ಓದಿರಿ: ಜಿಯೋ-ಏರ್‌ಟೆಲ್ ಮುಳುಗಿಸಲು ಬಂದಿದೆ ವೋಡಾಫೋನ್‌ನ ಎರಡು ಬೊಂಬಾಟ್ ಆಫರ್‌ಗಳು...!

ನೀವು ಊಹಿಸಲು ಸಾಧ್ಯವಿಲ್ಲದಷ್ಟು ಡೇಟಾವನ್ನು ಸಂಗ್ರಹಿಸುವ ಮತ್ತು ಲೆಕ್ಕಹಾಕಲಾಗದ ವೇಗವನ್ನು ಹೊಂದಿರುವ ಸೂಪರ್ ಕಂಪ್ಯೂಟರ್ ಗಳ ಬೆಲೆಯನ್ನು ಕೇಳಿದರೆ ತಲೆ ತಿರುಗುವುದು ಖಂಡಿತ. ಈ ಸೂಪರ್ ಕಂಪ್ಯೂಟರ್‌ಗಳು ನಾವು ನೀವು ಮನೆಯಲ್ಲಿ ಇಟ್ಟುಕೊಂಡಿರುವ PCಗಳ ಗಾತ್ರದಲ್ಲಿ ಇರುವುದಿಲ್ಲ ಬದಲಿಗೆ ಊಹಿಸಲು ಅಸಾಧ್ಯವಾದ ಗಾತ್ರದಲ್ಲಿ ಕಟ್ಟಡಗಳಲ್ಲಿ ಇರಲಿದೆ. ಸದ್ಯ ವಿಶ್ವದ ಟಾಪ್ ಮೂರು ಕಂಪ್ಯೂಟರ್‌ಗಳ ಮಾಹಿತಿ ಬಹಿರಂಗವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿಶ್ವದ ಅತೀ ವೇಗದ ಕಂಪ್ಯೂಟರ್:

ವಿಶ್ವದ ಅತೀ ವೇಗದ ಕಂಪ್ಯೂಟರ್:

ಟಾಪ್ 500 ಎಂಬ ಹೆಸರಿನಲ್ಲಿ ಸೂಪರ್ ಕಂಪ್ಯೂಟರ್‌ಗಳ ಪಟ್ಟಿಯೊಂದು ಬಿಡುಗಡೆಯಾಗಲಿದೆ. ಇದರಲ್ಲಿ ಸೂಪರ್ ಕಂಪ್ಯೂಟರ್‌ಗಳಲ್ಲಿ ವಿಶ್ವದ ಅತೀ ವೇಗದ ಕಂಪ್ಯೂಟರ್ ಯಾವುದು ಎಂಬುದನ್ನು ನಿರ್ಧರಿಸಲಾಗುವುದು. ಲಾರೆನ್ಸ್ ಬರ್ಕ್ಲಿ ನ್ಯಾಷನಲ್ ಲ್ಯಾಬೊರೇಟರಿ ಈ ಸೂಪರ್ ಕಂಪ್ಯೂಟರ್ ರ್ಯಾಂಕಿಗ್ ನೀಡಲಿದೆ.

ಮೊದಲ ಸ್ಥಾನ: ಸನ್‌ವೇ ಟೈಹುಲೈಟ್

ಮೊದಲ ಸ್ಥಾನ: ಸನ್‌ವೇ ಟೈಹುಲೈಟ್

ಚೀನಾದ ನ್ಯಾಷಿನಲ್ ರಿಸರ್ಚ್ ಸೆಂಟರ್ ಆಫ್ ಪ್ಯಾರೆಲಲ್ ಕಂಪ್ಯೂಟರ್ ಎಂಜಿನಿಯರಿಂಗ್ & ಟೆಕ್ನಾಲಜಿ ಈ ಸೂಪರ್ ಕಂಪ್ಯೂಟರ್ ಅನ್ನು ನಿರ್ಮಿಸಿದೆ. ಇದು 93.01 ಪೆಟಾಫ್ಲಾಪ್ಸ್ (petaflops) ವೇಗದಲ್ಲಿ ಕಾರ್ಯನಿರ್ವಹಿಸಲಿದೆ.

ಎರಡನೇ ಸ್ಥಾನ; ಮಿಲ್ಕಿ ವೇ 2

ಎರಡನೇ ಸ್ಥಾನ; ಮಿಲ್ಕಿ ವೇ 2

ಇದು ಸಹ ಚೀನಾಕ್ಕೆ ಸೇರಿದಾಗಿದ್ದು, ನ್ಯಾಷನಲ್ ಯೂನಿವರ್ಸಿಟಿ ಆಫ್ ಡಿಫೆನ್ಸ್ ಟೆಕ್ನಾಲಜಿ ಸಂಸ್ಥೆಯೂ ಇದನ್ನು ಅಭಿವೃದ್ಧಿ ಪಡಿಸಿದೆ. ಇದು 33.86 ಪೆಟಾಫ್ಲಾಪ್ಸ್ (petaflops) ವೇಗದಲ್ಲಿ ಕಾರ್ಯನಿರ್ವಹಿಸಲಿದ ಎನ್ನಲಾಗಿದೆ

ಮೂರನೇ ಸ್ಥಾನ: ಕ್ರೇ XC50

ಮೂರನೇ ಸ್ಥಾನ: ಕ್ರೇ XC50

ಸ್ವಿಡ್ಜರ್ಲ್ಯಾಂಡಿನ ಸ್ವಿಸ್ ನ್ಯಾಷನಲ್ ಸೂಪರ್ಕಂಪ್ಯೂಟಿಂಗ್ ಸೆಂಟರ್ ಸಂಸ್ಥೆಯೂ ಈ ಸೂಪರ್ ಕಂಪ್ಯೂಟರ್ ನಿರ್ಮಿಸಿದ್ದು, 19.59 ಪೆಟಾಫ್ಲಾಪ್ಸ್ (petaflops) ವೇಗದಲ್ಲಿ ಕಾರ್ಯನಿರ್ವಹಿಸಲಿ ಎಂದು ತಿಳಿಸಲಾಗಿದೆ.

ಪೆಟಾಫ್ಲಾಪ್ಸ್ ಎಂದರೇನು?

ಪೆಟಾಫ್ಲಾಪ್ಸ್ ಎಂದರೇನು?

ಪೆಟಾಫ್ಲಾಪ್ ಒಂದು ಕಂಪ್ಯೂಟರ್‌ನ ಸಂಸ್ಕರಣಾ ವೇಗದ ಅಳತೆಗೋಲಾಗಿದ್ದು, ಮತ್ತು ಪ್ರತಿ ಸೆಕೆಂಡ್‌ಗೆ ಸಾವಿರ ಟ್ರಿಲಿಯನ್ ಫ್ಲೋಟಿಂಗ್ ಪಾಯಿಂಟ್ ಕಾರ್ಯಾಚರಣೆಗಳನ್ನು ತಿಳಿಸುತ್ತದೆ. (ಟೆಟಾ ಬೈಟ್ ಎಂದರೆ 1024 ಟೆರಾಬೈಟ್)

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
world's most-powerful computers. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot