ಏರ್‌ಟೆಲ್‌ನಿಂದ ದಿಟ್ಟ ನಿರ್ಧಾರ: ಇತರೆ ಟೆಲಿಕಾಂ ಕಂಪನಿಗಳಿಗಿಂತ ಅತೀ ಕಡಿಮೆ ಬೆಲೆಗೆ ಡೇಟಾ..!

|

ಭಾರತೀಯ ಟೆಲಿಕಾಂ ಲೋಕದಲ್ಲಿ ಅತೀ ಹೆಚ್ಚು ಮಂದಿ ಬಳಕೆದಾರರನ್ನು ಹೊಂದಿರುವ ಭಾರ್ತಿ ಏರ್‌ಟೆಲ್ ದಿಟ್ಟ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಈ ಮೂಲಕ ಟೆಲಿಕಾಂ ಮಾರುಕಟ್ಟೆಯಲ್ಲಿ ತನ್ನ ಡೇಟಾ ಬೆಲೆಯನ್ನು ಅತ್ಯಂತ ಕಡಿಮೆಗೆ ನಿಗಧಿ ಮಾಡಲು ಮುಂದಾಗಿದೆ. ಜಿಯೋ ಗಿಂತಲೂ ತನ್ನ ಒಂದು GB ಡೇಟಾ ಬೆಲೆಯನ್ನು ಕಡಿಮೆ ಮಾಡಿದೆ ಎನ್ನಲಾಗಿದೆ.

ಏರ್‌ಟೆಲ್‌ನಿಂದ ಇತರೆ ಟೆಲಿಕಾಂ ಕಂಪನಿಗಳಿಗಿಂತ ಅತೀ ಕಡಿಮೆ ಬೆಲೆಗೆ ಡೇಟಾ..!

ಓದಿರಿ: ಐಡಿಯಾ ಗ್ರಾಹಕರಿಗೆ ಬಿಟ್ಟರೇ ಬೇರೆಯಾರಿಗೂ ಇಲ್ಲ ಈ ಮಾದರಿಯ ಆಫರ್..!

ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರಿಗೆ ಡೇಟಾ-ವಾಯ್ಸ್ ಕಾಲಿಂಗ್ ಸೇರಿಸಿ ಹೆಚ್ಚಿನ ಮೊತ್ತಕ್ಕೆ ಪ್ಲಾನ್‌ಗಳನ್ನು ಘೋಷಣೆ ಮಾಡುತ್ತಿರುವ ಸಂದರ್ಭದಲ್ಲಿ ಏರ್‌ಟೆಲ್‌ ರೂ. 50ಕ್ಕೂ ಕಡಿಮೆ ಬೆಲೆಗೆ ಡೇಟಾವನ್ನು ಮಾತ್ರವೇ ಬಳಕೆಗೆ ನೀಡಲು ಮುಂದಾಗಿದೆ. ಈ ಮೂಲಕ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಗೆ ಉತ್ತಮ ಸೇವೆಯನ್ನು ನೀಡಲಿದೆ. ಇತರೆ ಟೆಲಿಕಾಂ ಕಂಪನಿಗಳಿಗಿಂತ ಭಿನ್ನವಾಗಿ ನಿಲ್ಲಲಿದೆ.

ರೂ.157ಕ್ಕೆ ಮೂರು GB ಹೈ ಸ್ಪೀಡ್ ಡೇಟಾ:

ರೂ.157ಕ್ಕೆ ಮೂರು GB ಹೈ ಸ್ಪೀಡ್ ಡೇಟಾ:

ಏರ್‌ಟೆಲ್ ಕೇವಲ ರೂ.157ಕ್ಕೆ ಮೂರು GB ಹೈ ಸ್ಪೀಡ್ ಡೇಟಾವನ್ನು ಬಳಕೆಗೆ ನೀಡಲಿದೆ ಎನ್ನಲಾಗಿದೆ. ಇಲ್ಲಿ ಗ್ರಾಹಕರಿಗೆ ಒಂದು GB ಡೇಟಾ ಬೆಲೆಯೂ ಟ್ಯಾಕ್ಸ್ ಕಳೆದು ನೋಡಿದರೆ ರೂ.50ಕ್ಕಿಂತಲೂ ಕಡಿಮೆ ಇರಲಿದೆ.

ಮೈ ಏರ್‌ಟೆಲ್ ಆಪ್‌ನಲ್ಲಿ ಕೊಡುಗೆ:

ಮೈ ಏರ್‌ಟೆಲ್ ಆಪ್‌ನಲ್ಲಿ ಕೊಡುಗೆ:

ಮೈ ಏರ್‌ಟೆಲ್‌ ಆಪ್ ನಲ್ಲಿ ಈ ಹೊಸ ಕೊಡುಗೆಯನ್ನು ತನ್ನ ಗ್ರಾಹಕರಿಗೆ ತಲುಪಿಸುವ ಕಾರ್ಯವನ್ನು ಏರ್‌ಟೆಲ್ ಮಾಡುತ್ತಿದೆ. ಮೈ ಏರ್‌ಟೆಲ್ ಆಪ್‌ನಲ್ಲಿ ಇದಕ್ಕಾಗಿ 'ಸ್ಪೆಷಲ್ ಆಫರ್ ಫಾರ್ ಯೂ' ಎನ್ನುವ ಆಯ್ಕೆಯೊಂದನ್ನು ನೀಡಿದೆ ಎನ್ನಲಾಗಿದೆ.

ಇದಲ್ಲದೇ ಇನ್ನೊಂದು ಪ್ಲಾನ್‌ ಇದೆ:

ಇದಲ್ಲದೇ ಇನ್ನೊಂದು ಪ್ಲಾನ್‌ ಇದೆ:

ಕೇವಲ ಒಂದು ದಿನಕ್ಕೆ ಒಂದು GB ಹೈಸ್ಪೀಡ್ ಡೇಟಾವನ್ನು ಏರ್‌ಟೆಲ್ ರೂ.49ಕ್ಕೆ ನೀಡುತ್ತಿದೆ. ಕೇವಲ ಒಂದೇ ದಿನಕ್ಕೆ ಅಗತ್ಯವಿರುವವರು ಈ ಪ್ಲಾನ್ ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

ಹೆಚ್ಚಿನ ಜನರನ್ನು ಸೆಳೆಯುವ ತಂತ್ರ:

ಹೆಚ್ಚಿನ ಜನರನ್ನು ಸೆಳೆಯುವ ತಂತ್ರ:

ಕಡಿಮೆ ಬೆಲೆಗೆ ಡೇಟಾವನ್ನು ನೀಡುವ ಮೂಲಕ ಅತೀ ಹೆಚ್ಚಿನ ಜನರನ್ನು ಸೆಳೆಯುವ ಪ್ರಯತ್ನವನ್ನು ಏರ್‌ಟೆಲ್ ಮಾಡುತ್ತಿದೆ ಎನ್ನಲಾಗಿದೆ. ಈ ಮೂಲಕ ಬೇರೆ ಕಂಪನಿಗಳಿಗೆ ಸೆಡ್ಡು ಹೊಡೆಯಲು ಮುಂದಾಗಿದೆ ಎನ್ನುವ ಮಾತು ಕೇಳಿ ಬಂದಿದೆ.

Best Mobiles in India

English summary
Bharti Airtel Brings Down the 1GB of 4G Data Cost to Under Rs 50. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X