ಹೊಸ ಸ್ಮಾರ್ಟ್‌ಬ್ಯಾಂಡ್‌ ಖರೀದಿಸಬೇಕೆ?..ಹಾಗಿದ್ರೆ ಕಡಿಮೆ ಬೆಲೆಗೆ ಇವೇ ಬೆಸ್ಟ್‌ ಆಯ್ಕೆ!

|

ಇತ್ತೀಚಿಗೆ ಸ್ಮಾರ್ಟ್‌ಫೋನ್‌ಗಳಂತೆ ಮಾರುಕಟ್ಟೆಯಲ್ಲಿ ಫಿಟ್ನೆಸ್‌ ಬ್ಯಾಂಡ್‌ಗಳು/ ಸ್ಮಾರ್ಟ್‌ಬ್ಯಾಂಡ್‌ಗಳಿಗೂ ಡಿಮ್ಯಾಂಡ್‌ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರಮುಖ ಮೊಬೈಲ್ ತಯಾರಿಕಾ ಸಂಸ್ಥೆಗಳು ಸೇರಿದಂತೆ ಇತರೆ ಕಂಪನಿಗಳು ಭಿನ್ನ ಪ್ರೈಸ್‌ಟ್ಯಾಗ್‌ನಲ್ಲಿ ಸ್ಮಾರ್ಟ್‌ ಬ್ಯಾಂಡ್‌ಗಳನ್ನು ಪರಿಚಯಿಸುತ್ತ ಸಾಗಿವೆ. ಆ ಪೈಕಿ ಶಿಯೋಮಿ, ರಿಯಲ್‌ಮಿ, ಹಾನರ್, ಒಪ್ಪೋ, ಒನ್‌ಪ್ಲಸ್‌ ಸೇರಿದಂತೆ ಇತರೆ ಕೆಲವು ಕಂಪನಿಗಳ ಸ್ಮಾರ್ಟ್‌ಬ್ಯಾಂಡ್‌ಗಳು ಗ್ರಾಹಕರನ್ನು ಸೆಳೆದಿವೆ.

ಖರೀದಿಸಲು

ಹೌದು, ಮಾರುಕಟ್ಟೆಯಲ್ಲಿ ತರಹೇವಾರಿ ಸ್ಮಾರ್ಟ್‌ ಬ್ಯಾಂಡ್‌ಗಳಿದ್ದರೂ, ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡು ಬಜೆಟ್‌ ಬೆಲೆಯಲ್ಲಿ ಲಭ್ಯವಿರುವ ಸ್ಮಾರ್ಟ್‌ ಬ್ಯಾಂಡ್‌ಗಳನ್ನು ಗ್ರಾಹಕರು ಖರೀದಿಸಲು ಇಚ್ಚಿಸುತ್ತಾರೆ. ಇಂದಿನ ಬಹುತೇಕ ಸ್ಮಾರ್ಟ್‌ ಬ್ಯಾಂಡ್‌ ಸಾಧನಗಳು ಬಳಕೆದಾರರ ದೈನಂದಿನ ಚಟುವಟಿಕೆಗಳನ್ನು ಟ್ರಾಕ್‌ ಮಾಡುವ, ಹೃದಯ ಬಡಿತ ಮಾನಿಟರ್ ಮಾಡುವ ಆಯ್ಕೆಗಳನ್ನು ಒಳಗೊಂಡಿವೆ.

ಸ್ಮಾರ್ಟ್‌

ಹಾರ್ಟ್‌ ರೇಟ್‌ ಮಾನಿಟರ್‌, ಸ್ಲಿಪ್‌ ಮಾನಿಟರ್ ನಂತಹ ಫೀಚರ್ಸ್‌ಗಳಲ್ಲದೇ, ಮತ್ತಷ್ಟು ನೂತನ ಫೀಚರ್ಸ್‌ಗಳನ್ನು ಒಳಗೊಂಡಿರುವ ಸಾಧನಗಳು ಹೆಚ್ಚು ಆಕರ್ಷಕ ಎನಿಸುತ್ತವೆ. ಹಾಗಾದರೇ ಭಾರತದಲ್ಲಿ 5,000ರೂ. ಪ್ರೈಸ್‌ ಟ್ಯಾಗ್‌ನೊಳಗೆ ಖರೀದಿಗೆ ಲಭ್ಯವಿರುವ 5 ಅತ್ಯುತ್ತಮ ಸ್ಮಾರ್ಟ್‌ ಬ್ಯಾಂಡ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಶಿಯೋಮಿ ಸ್ಮಾರ್ಟ್ ಬ್ಯಾಂಡ್ 6

ಶಿಯೋಮಿ ಸ್ಮಾರ್ಟ್ ಬ್ಯಾಂಡ್ 6

ಶಿಯೋಮಿ ಸ್ಮಾರ್ಟ್ ಬ್ಯಾಂಡ್ 6 ಡಿವೈಸ್‌ 1.56 ಇಂಚಿನ (152 x 486 ಪಿಕ್ಸೆಲ್‌ಗಳು) ಪೂರ್ಣ ಪರದೆಯ AMOLED ಟಚ್ ಡಿಸ್‌ಪ್ಲೇಯನ್ನು ಹೊಂದಿದ್ದು 450 ನಿಟ್‌ಗಳ ಗರಿಷ್ಠ ಹೊಳಪನ್ನು ಮತ್ತು 326 ಪಿಪಿಐ ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಮಿ ಸ್ಮಾರ್ಟ್ ಬ್ಯಾಂಡ್‌ನ 1.1 ಇಂಚಿನ AMOLED ಡಿಸ್‌ಪ್ಲೇಗೆ ಹೋಲಿಸಿದರೆ ಪರದೆಯು ಗಾತ್ರದಲ್ಲಿ ದೊಡ್ಡದಾಗಿದೆ.

ಮಾರ್ಗದರ್ಶನ

ಇದು ಆರೋಗ್ಯ ಟ್ರ್ಯಾಕಿಂಗ್ ಜೊತೆಗೆ, ಮಿ ಸ್ಮಾರ್ಟ್ ಬ್ಯಾಂಡ್ 6 ಒತ್ತಡದ ಮೇಲ್ವಿಚಾರಣೆ, ಆಳವಾದ ಉಸಿರಾಟದ ಮಾರ್ಗದರ್ಶನ ಕಾರ್ಯ ಮತ್ತು ಸ್ತ್ರೀ ಆರೋಗ್ಯ ಟ್ರ್ಯಾಕಿಂಗ್ ಅನ್ನು ಒಳಗೊಂಡಿದೆ. ಹಾಗೆಯೇ ಮಿ ಸ್ಮಾರ್ಟ್ ಬ್ಯಾಂಡ್ 6 ಬ್ಲೂಟೂತ್ v5.0 (BLE) ಸಂಪರ್ಕದೊಂದಿಗೆ ಬರುತ್ತದೆ ಮತ್ತು ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳನ್ನು ಬೆಂಬಲಿಸುತ್ತದೆ. ಇದರ ಜೊತೆಯಲ್ಲಿ, ಬ್ಯಾಂಡ್ 47.4x18.6x12.7mm ಅಳತೆ ಮತ್ತು 12.8 ಗ್ರಾಂ ತೂಗುತ್ತದೆ. ಇದರ ಬೆಲೆ 3,299 ರೂ. ಆಗಿದೆ.

ಹುವಾವೇ ಬ್ಯಾಂಡ್ 6

ಹುವಾವೇ ಬ್ಯಾಂಡ್ 6

ಹುವಾವೇ ಬ್ಯಾಂಡ್ 6 ಡಿವೈಸ್ 194 x 368 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 1.47 ಇಂಚಿನ ಅಮೋಲೆಡ್ ಫುಲ್-ವ್ಯೂ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 64 % ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಒಳಗೊಂಡಿದೆ. ಈ ಹುವಾವೇ ಬ್ಯಾಂಡ್ 6 ರ ಡಿಸ್‌ಪ್ಲೇ ಹಿಂದಿನ ಹುವಾವೇ ಬ್ಯಾಂಡ್ 4 ಗಿಂತ 148% ದೊಡ್ಡದಾಗಿದೆ ಎಂದು ಹೇಳಲಾಗಿದೆ. ಇದು ಸ್ಕಿನ್‌-ಫ್ರೆಂಡ್ಲಿ ಯುವಿ-ಟ್ರಿಟೆಡ್‌ ಸಿಲಿಕೋನ್ ಸ್ಟ್ರಾಪ್‌ ಅನ್ನು ಒಳಗೊಂಡಿದೆ.

ಫಿಟ್ನೆಸ್‌

ಇನ್ನು ಈ ಫಿಟ್ನೆಸ್‌ ಬ್ಯಾಂಡ್‌ ಋತುಚಕ್ರ ಸೈಕಲ್ ಟ್ರ್ಯಾಕಿಂಗ್ ಫೀಚರ್ಸ್‌ ಅನ್ನು ಸಹ ನೀಡಲಾಗಿದೆ ಅಲ್ಲದೆ ಫೋನ್ ಮೂಲಕ ಮ್ಯೂಸಿಕ್‌ ಅನ್ನು ಕಂಟ್ರೋಲ್‌ ಮಾಡುವ ಸಾಮರ್ಥ್ಯವಿದೆ. ಆದರೆ ಈ ಎರಡೂ ವೈಶಿಷ್ಟ್ಯಗಳು ಆಂಡ್ರಾಯ್ಡ್‌ನಲ್ಲಿ ಮಾತ್ರ ಬೆಂಬಲಿತವಾಗಿದೆ. ಇದ್ಯ ಈ ಫಿಟ್ನೆಸ್‌ ಬ್ಯಾಂಡ್‌ನಲ್ಲಿ 96 ಕ್ಕೂ ಹೆಚ್ಚು ವರ್ಕೌಟ್‌ ಮೋಡ್‌ಗಳನ್ನು ನೀಡಲಾಗಿದೆ. ಇದರಲ್ಲಿ ರನ್ನಿಂಗ್‌, ಸ್ವಿಮ್ಮಿಂಗ್‌, ಎಲಿಪ್ಟಿಕಲ್, ರೋಯಿಂಗ್, ಟ್ರೆಡ್‌ಮಿಲ್ ಮುಂತಾದ ಮೋಡ್‌ಗಳನ್ನು ನೀಡಲಾಗಿದೆ. ಈ ಡಿವೈಸ್‌ ಬೆಲೆ 2,999 ರೂ. ಆಗಿದೆ.

ಒನ್‌ಪ್ಲಸ್ ಬ್ಯಾಂಡ್

ಒನ್‌ಪ್ಲಸ್ ಬ್ಯಾಂಡ್

ಒನ್‌ಪ್ಲಸ್ ಬ್ಯಾಂಡ್ ಡಿವಯಸ್ 126 x 294 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 1.6 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ಐಪಿ 68 ಪ್ರಮಾಣೀಕರಣ ಮತ್ತು 5 ಎಟಿಎಂ ವಾಟರ್-ರೆಸಿಸ್ಟೆಂಟ್ ರೇಟಿಂಗ್‌ ಅನ್ನು ಒಳಗೊಂಡಿದೆ. ಅದೇ ರೀತಿ ಶಿಯೋಮಿ ಮಿ ಬ್ಯಾಂಡ್ 5 ಡಿವೈಸ್‌ 1.1 ಇಂಚಿನ ಕಲರ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮಿ ಬ್ಯಾಂಡ್ 4 ನಲ್ಲಿನ 0.95 ಇಂಚಿನ ಪರದೆಗಿಂತ ದೊಡ್ಡದಾಗಿದೆ. ಇನ್ನು ಈ ಸ್ಮಾರ್ಟ್‌ಬ್ಯಾಂಡ್‌ 100 ಕ್ಕೂ ಹೆಚ್ಚು ಹೊಸ ಆನಿಮೇಟೆಡ್ ವಾಚ್ ಫೇಸ್‌ಗಳನ್ನ ಹೊಂದಿದೆ.

ಔಟ್‌ಡೋರ್‌

ಒನ್‌ಪ್ಲಸ್‌ ಬ್ಲಡ್‌ ಆಕ್ಸಿಜನ್‌ ಸೆನ್ಸಾರ್‌, ತ್ರೀ-ಆಕ್ಸಿಸ್‌ ಅಕ್ಸಿಲೆರೊಮೀಟರ್‌ ಮತ್ತು ಗೈರೊಸ್ಕೋಪ್ ಮತ್ತು ಆಪ್ಟಿಕಲ್ ಹಾರ್ಟ್‌ ಬಿಟ್‌ ಸೆನ್ಸಾರ್‌ ಅನ್ನು ಒಳಗೊಂಡಿರುವ ಸೆನ್ಸಾರ್‌ಗಳ ಒಂದು ಶ್ರೇಣಿಯೊಂದಿಗೆ ಬರಲಿದೆ. ಔಟ್‌ಡೋರ್‌ ರನ್, ಇನ್‌ಡೋರ್‌ ರನ್, ಫ್ಯಾಟ್ ಬರ್ನ್ ರನ್, ಔಟ್‌ಡೋರ್‌ ವಾಕ್, ಔಟ್‌ಡೋರ್‌ ಸೈಕ್ಲಿಂಗ್, ಇನ್‌ಡೋರ್‌ ಸೈಕ್ಲಿಂಗ್, ಎಲಿಪ್ಟಿಕಲ್ ಟ್ರೈನರ್, ರೋಯಿಂಗ್ ಮೆಷಿನ್, ಕ್ರಿಕೆಟ್, ಬ್ಯಾಡ್ಮಿಂಟನ್, ಪೂಲ್ ಸ್ವಿಮ್ಮಿಂಗ್‌, ಯೋಗ ಮತ್ತು ಉಚಿತ ತರಬೇತಿ ಸೇರಿದಂತೆ 13 ವ್ಯಾಯಾಮ ವಿಧಾನಗಳನ್ನು ಒನ್‌ಪ್ಲಸ್ ಇದರಲ್ಲಿ ಮೊದಲೇ ಲೋಡ್ ಮಾಡಿದೆ. ಇದರ ಬೆಲೆ 1,499 ರೂ. ಆಗಿದೆ.

ಒಪ್ಪೊ ಸ್ಮಾರ್ಟ್‌ಬ್ಯಾಂಡ್

ಒಪ್ಪೊ ಸ್ಮಾರ್ಟ್‌ಬ್ಯಾಂಡ್

ಒಪ್ಪೊ ಸ್ಮಾರ್ಟ್‌ಬ್ಯಾಂಡ್ ಡಿವೈಸ್ 1.1 ಇಂಚಿನ ಅಮೋಲೆಡ್ ಟಚ್‌ಸ್ಕ್ರೀನ್ ಡಿಸ್‌ಪ್ಲೇಯನ್ನು ಹೊಂದಿದ್ದು, ಇದು 100% P3 ವೈಡ್ ಕಲರ್ ಗ್ಯಾಮಟ್ ಮತ್ತು 2.5 ಡಿ ಬಾಗಿದ ಸ್ಕ್ರಾಚ್‌ ರೆಸಿಸ್ಟೆನ್ಸ್ ಮೇಲ್ಮೈಯನ್ನು ಹೊಂದಿದೆ. ಇದು ಇನ್‌ಸೈಡ್‌ ರನ್ನಿಂಗ್‌, ಔಟ್‌ಸೈಡ್‌ ರನ್ನಿಂಗ್‌, ಔಟ್‌ಸೈಡ್‌ ಸೈಕ್ಲಿಂಗ್, ಇನ್‌ಸೈಡ್‌ ವಾಕಿಂಗ್, ಇನ್‌ಸೈಡ್‌ ಸೈಕ್ಲಿಂಗ್, ಇನ್‌ಸೈಡ್‌ ರನ್‌, ಕ್ಯಾಲೊರಿ ವೆಸ್ಟ್‌, ಬ್ಯಾಡ್ಮಿಂಟನ್, ಸ್ವಿಮ್ಮಿಂಗ್‌, ರೋಯಿಂಗ್ ಮೆಷಿನ್‌, ಎಲಿಪ್ಟಿಕಲ್ ಮೆಷಿನ್, ಸೇರಿದಂತೆ ಇತರೆ ತರಬೇತಿಯನ್ನು ಒಳಗೊಂಡಿರುವ 12 ಸಮಾದರಿಯ ಕ್ರೀಡಾ ವಿಧಾನಗಳನ್ನು ಹೊಂದಿದೆ.

ನಿರ್ವಹಿಸಲಿದೆ

ಇನ್ನು ಒಪ್ಪೋ ಸರಣಿಯ ಈ ವೆರಿಯೆಬಲ್ಸ್‌ ಸ್ಮಾರ್ಟ್‌ ಬ್ಯಾಂಡ್‌ಗಳು 5ATM ವಾಟರ್‌ ಪ್ರೂಪ್‌ ವ್ಯವಸ್ಥೆಯನ್ನ ಹೊಂದಿದೆ ಅಂದರೆ ಇದು 50 ಮೀಟರ್ ನೀರಿನಲ್ಲಿಯು ತನ್ನ ಕಾರ್ಯವನ್ನು ನಿರ್ವಹಿಸಲಿದೆ. ಇನ್ನು ಈ ಸ್ಮಾರ್ಟ್‌ಬ್ಯಾಂಡ್‌ ಬಳಕೆದಾರರ ರಕ್ತದ ಶುದ್ದತೆಯನ್ನ ಸಹ ಅಳೆಯಲಿದೆ. ಜೊತೆಗೆ ಮ್ಯೂಸಿಕ್‌ ಕಂಟ್ರೋಲ್‌, ವೆದರ್‌, ಆಲರ್ಟ್‌, ಇತರೆ ಫೀಚರ್ಸ್‌ಗಳನ್ನ ಸಹ ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಬ್ಯಾಂಡ್‌ಗಳನ್ನ ಸಂಪೂರ್ಣವಾಗಿ ಚಾರ್ಜ್ ಮಾಡಲು ಸುಮಾರು 1.5 ಗಂಟೆ ಸಮಯ ತೆಗೆದುಕೊಳ್ಳುತ್ತದೆ, ಮತ್ತು ಇದು 14 ದಿನಗಳ ಬಳಕೆಯವರೆಗೆ ಇರುತ್ತದೆ ಎಂದು ಹೇಳಲಾಗ್ತಿದೆ. ಅಲ್ಲದೆ ಇದು ಬ್ಲೂಟೂತ್ V5 ಅನ್ನು ಬೆಂಬಲಿಸುತ್ತದೆ ಮತ್ತು ಇದು ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳೊಂದಿಗೆ ಹೊಂದಿಕೊಳ್ಳುತ್ತದೆ. ಇದರ ಬೆಲೆ 2,499 ರೂ. ಆಗಿದೆ.

ರಿಯಲ್ ಮಿ 2

ರಿಯಲ್ ಮಿ 2

ರಿಯಲ್ ಮಿ 2 (Realme Band 2) ಒಂದು ವಿಶಿಷ್ಟವಾದ ಆಯತಾಕಾರದ 1.4 ಇಂಚಿನ HD ಬಣ್ಣದ ಪ್ರದರ್ಶನದೊಂದಿಗೆ ಪ್ರಕಾಶಮಾನವಾದ, ವರ್ಣರಂಜಿತ ಮತ್ತು ಸ್ಪಂದಿಸುವ ಸ್ಪರ್ಶ ಅನುಭವವನ್ನು ನೀಡುತ್ತದೆ. ಫಿಟ್ನೆಸ್ ಟ್ರ್ಯಾಕರ್ ಅಂತರ್ನಿರ್ಮಿತ SpO2 ಸಂವೇದಕದೊಂದಿಗೆ ನಿರಂತರ ಹೃದಯ ಬಡಿತ ಮೇಲ್ವಿಚಾರಣೆ ಮತ್ತು ರಕ್ತದ ಶುದ್ಧತ್ವ ಮಟ್ಟವನ್ನು ಒದಗಿಸುತ್ತದೆ. 90 ಕ್ರೀಡಾ ವಿಧಾನಗಳಿವೆ. ಇದು 12 ದಿನಗಳವರೆಗೆ ಕ್ಲೈಮ್ ಮಾಡಲಾದ ಬ್ಯಾಟರಿ ಬ್ಯಾಕಪ್‌ನೊಂದಿಗೆ ಲಿಥಿಯಂ ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ವಿಭಿನ್ನ ಬಟ್ಟೆಗಳು ಮತ್ತು ಸಂದರ್ಭಗಳಿಗೆ ಹೊಂದಿಕೊಳ್ಳಲು 50 ಕ್ಕೂ ಹೆಚ್ಚು ವಾಚ್ ಫೇಸ್‌ಗಳಿವೆ. ಹಾಗೆಯೇ ಇದು 50-ಮೀಟರ್ ನೀರಿನ ಪ್ರತಿರೋಧವನ್ನು ಬೆಂಬಲಿಸುತ್ತದೆ. ಭಾರತದಲ್ಲಿ ಈ ಡಿವೈಸ್‌ ಬೆಲೆ 2,699 ರೂ. ಆಗಿದೆ.

Best Mobiles in India

English summary
5 Best Fitness Bands under Rs. 5,000 in India: Details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X